ಸಮಾನತೆ ಮತ್ತು ತಾರತಮ್ಯರಹಿತ ಸಮಾಜ ನಿರ್ಮಾಣಕ್ಕೆ ಅಂಬೇಡಕರ ಕೊಡುಗೆ ಅಪಾರ: ಶಾಸಕ ಲಕ್ಷ್ಮಣ ಸವದಿ

Ravi Talawar
WhatsApp Group Join Now
Telegram Group Join Now
ಅಥಣಿ,ಏಪ್ರಿಲ್ 15:  : ಡಾ. ಬಾಬಾಸಾಬ್ ಅಂಬೇಡ್ಕರ್ ಅವರ ದೂರದೃಷ್ಟಿಯಂತೆ ಸಮಾನ ಮತ್ತು ತಾರತಮ್ಯರಹಿತ ಸಮಾಜ ನಿರ್ಮಾಣ ಮಾಡಲು ಸಮಾಜದ ಎಲ್ಲ ವರ್ಗದ ಜನರ ಸಹಭಾಗಿತ್ವದಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಿದಾಗ ಮಾತ್ರ ಅವರ ಜಯಂತಿಗೆ ಅರ್ಥ ಸಿಕ್ಕಂತಾಗುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಅಂಬೇಡಕರ್ ವೃತ್ತದಲ್ಲಿ ಡಾ. ಬಾಬಾಸಾಬ ಅಂಬೇಡಕರ್ ಅವರ ಪುತ್ತಳಿಗೆ ಮಾಲಾರ್ಪಣೆ ನಂತರ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಅವರು ಅಂಬೇಡ್ಕರ್ ಜಯಂತಿ ಅಥವಾ ಭೀಮ್ ಜಯಂತಿಯನ್ನು ಏಪ್ರಿಲ್ 14 ರಂದು ಭಾರತೀಯ ರಾಜಕಾರಣಿ ಮತ್ತು ಸಮಾಜ ಸುಧಾರಕ ಡಾ. ಬಿ. ಆರ್ ಅಂಬೇಡ್ಕರ್ ಅವರ ಸ್ಮರಣೆಗಾಗಿ ಆಚರಿಸಲಾಗುತ್ತದೆ. ಇದು 1891ರ ಏಪ್ರಿಲ್‌ 14 ರಂದು ಜನಿಸಿದ ಅಂಬೇಡ್ಕರ್ ಅವರ ಜನ್ಮದಿನವನ್ನು ಸೂಚಿಸುತ್ತದೆ ಅಲ್ಲದೆ ಬಾಬಾಸಾಹೇಬ ಅಂಬೇಡಕರ್ ಅವರ ಸಂವಿಧಾನ ಜಗತ್ತಿಗೆ ಮಹಾ ಗ್ರಂಥವಾಗಿ ಅನುಕರಿಸಲ್ಪಡುತ್ತಿದೆ ಎಂದು ಹೇಳಿದರು.
ಈ ವೇಳೆ ಜಮಖಂಡಿ ಉದಮ್ಯಿದಾರರು ಪಾರ್ಥನಹಳ್ಳಿ, ಸಮಾಜದ ಮುಖಂಡರಾದ ಮಹಾಂತೇಶ ಬಾಡಗಿ, ಸಿದ್ದಲಿಂಗ ಮಡ್ಡಿ, ಪ್ರಕಾಶ ಪಟ್ಟಣ, ಮಂಜು ಹೊಳಿಕಟ್ಟಿ, ಸುಂದರ ಸೌದಾಗರ, ಮಂಜು ನೂಲಿ, ಇನೂ ಹಲವರು ಸಮಾಜದ ಮುಖಂಡರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article