ಏರ್ ಇಂಡಿಯಾ ಬೋಯಿಂಗ್ 747 ಯುಗಾಂತ್ಯ: 5 ದಶಕಗಳ ‘ಕ್ವೀನ್ ಆಫ್ ಸ್ಕೈಸ್’ ಹಾರಾಟ ಸ್ಥಗಿತ!

Ravi Talawar
WhatsApp Group Join Now
Telegram Group Join Now

ಮುಂಬೈ24: ಆಕಾಶದಲ್ಲಿ ಬರೊಬ್ಬರಿ 5 ದಶಕಗಳ ಕಾಲ ಮಹಾರಾಣಿಯಂತೆ ಮೆರೆದ ವಿಮಾನವೊಂದು ತನ್ನ ಹಾರಾಟವನ್ನು ನಿಲ್ಲಿಸಿದ್ದು, ಬೋಯಿಂಗ್ ಸಂಸ್ಥೆಯ B 747 ವಿಮಾನ ತನ್ನ ಹಾರಾಟವನ್ನು ಅಧಿಕೃತವಾಗಿ ನಿಲ್ಲಿಸಿದೆ.

ಒಂದು ಕಾಲದಲ್ಲಿ ಪ್ರಧಾನ ಮಂತ್ರಿಗಳು ಮತ್ತು ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಯಂತಹ ವಿವಿಐಪಿಗಳನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾದ ವಿಮಾನ ಮುಂಬೈನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇತ್ತೀಚೆಗೆ ತನ್ನ ಕೊನೆಯ ಹಾರಾಟ ನಡೆಸಿದೆ.

ಮುಂಬೈ ವಿಮಾನ ನಿಲ್ದಾಣದಿಂದ ತೆರಳಿದ ‘ಕ್ವೀನ್ ಆಫ್ ಸ್ಕೈಸ್’ ಎಂದೂ ಕರೆಯಲ್ಪಡುವ ಬೋಯಿಂಗ್ 747 ವಿಮಾನ ಅಮೆರಿಕದ ಪೇನ್‌ಫೀಲ್ಡ್‌ಗೆ ತನ್ನ ಕೊನೆಯ ಅಂತಾರಾಷ್ಟ್ರೀಯ ಪ್ರಯಾಣ ಬೆಳೆಸಿದೆ.

ಅಲ್ಲಿ ಈ ವಿಮಾನವನ್ನು ಡಿಸ್‌ಮ್ಯಾಂಟಲ್ ಮಾಡಬಹುದು ಎಂದು ಹೇಳಲಾಗಿದೆ. ಉಳಿದ ವಿಮಾನಗಳನ್ನು ಈ ಕಂಪನಿಗಳು ಈ ವಿಮಾನವನ್ನು ಕಾರ್ಗೊ ಸರ್ವಿಸ್‌ಗಾಗಿ ಬಳಸುವ ಸಂಭವವಿದೆ. ಉಳಿದ ಎರಡು ಏರ್‌ ಇಂಡಿಯಾ ಬೋಯಿಂಗ್ 747 ವಿಮಾನಗಳನ್ನು ಮುಂಬೈನಲ್ಲಿ ಬಿಡಿಭಾಗಗಳನ್ನಾಗಿ  ಮಾಡಲಾಗುವುದು. ಈ ವಿಮಾನದಲ್ಲಿನ ಬಿಡಿಭಾಗಗಳಲ್ಲಿ ಮರು ಬಳಕೆ ಮಾಡುವ ಪ್ರಕ್ರಿಯೆ ನಡೆಸಲಾಗುವುದು. ವಿಮಾನಗಳಲ್ಲಿ ಸುಮಾರು 800 ರಿಂದ ಸಾವಿರ ಮರುಬಳಕೆ ಮಾಡಬಹುದಾದ ಭಾಗಗಳು ಇರುತ್ತವೆ.

ಏರ್ ಇಂಡಿಯಾ ಬಳಿ 4 ಬೋಯಿಂಗ್ 747 ವಿಮಾನಗಳಿದ್ದು, ನಾಲ್ಕು ವರ್ಷಗಳ ಹಿಂದೆಯೇ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು. ಈ ವಿಮಾನಗಳ ಯುಗಾಂತ್ಯವಾಗಿದ್ದು, ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕದ ಪೇನ್‌ಫೀಲ್ಡ್‌ಗೆ ಅಂತಿಮ ಪ್ರಯಾಣ ಬೆಳೆಸಿದೆ. ಈ ವಿಮಾನಗಳ ಅಂತಿಮ ವಿದಾಯಕ್ಕಾಗಿ, ಪೈಲಟ್‌ಗಳು ‘ವಿಂಗ್ ವೇವ್’ ಅನ್ನು ಪ್ರದರ್ಶಿಸಿದ್ದು, ಇದು ವಿಮಾನದ ನಿವೃತ್ತಿ ಅಥವಾ ಅಂತಿಮ ಪ್ರಯಾಣದ ಸಂಕೇತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article