ಬೆಂಗಳೂರು ಜು., ೫ :- ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳ ದಂಡ ಪಾವತಿಗೆ ಸರಕಾರ ಮತ್ತೆ ಶೇ. ೫೦ ರಿಯಾಯಿತಿ ನೀಡಿ ಆದೇಶಿಸಿದ್ದು, ಇದು ಸೆಪ್ಟೆಂಬರ್ ೯ ವರೆಗೆ ಜಾರಿಯಲ್ಲಿರಲಿದೆ.
ಕಳೆದ ಬಾರಿ ಚುನಾವಣೆಗೂ ಮುನ್ನ ಸಂಚಾರ ನಿಯಮ ಉಲ್ಲಂಘನೆಗಾಗಿ ವಾಹನ ಸವಾರರಿಗೆ ವಿಧಿಸಲಾಗಿದ್ದ ದಂಡ ಮೊತ್ತದಲ್ಲಿ ಶೇ.೫೦ ರಿಯಾಯಿತಿ ಘೋಷಣೆ ಮಾಡಲಾಗಿತ್ತು. ಚುನಾವಣೆ ಸಂದರ್ಭ ಈ ರಿಯಾಯಿತಿಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಶೇ.೫೦ ರಿಯಾಯಿತಿ ಘೋಷಿಸಿ, ವಾಹನ ಮಾಲೀಕರಿಗೆ/ಸವಾರರಿಗೆ ದಂಡ ಪಾವತಿಸಲು ಅವಕಾಶ ನೀಡಿದೆ. ಕಳೆದ ಬಾರಿ ಇದೇ ರೀತಿಯ ರಿಯಾಯತಿ ಘೋಷಿಸಿದ್ದಾಗ ಕೋಟಿಗಟ್ಟಲೆ ಹಣ ಪಾವತಿಯಾಗಿತ್ತು.
ಸಂಚಾರಿ ಪೊಲೀಸ್ ಇಲಾಖೆಯ ಇ-ಚಲನನಲ್ಲಿ ಫೆಬ್ರವರಿ ೧೧, ೨೦೨೩ರ ಒಳಗೆ ದಾಖಲಾದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಮಾತ್ರ ಈ ರಿಯಾಯಿತಿ ನೀಡಲಾಗಿದೆ.
ಸಂಚಾರ ನಿಯಮ ಉಲ್ಲಂಘನೆ : ದಂಡ ಕಟ್ಟಲು ಮತ್ತೆ ಶೇ.೫೦ ರಿಯಾಯಿತಿ

Leave a comment
Leave a comment