ಅದ್ವಿಕ್ ವಿವಿಧೋದ್ದೇಶಗಳ ಅಭಿವೃದ್ಧಿ ಸಂಘ (ರಿ) ಮುಂಡರಗಿರವರ ಪ್ರಥಮ ವಾರ್ಷಿಕೋತ್ಸವ: ಕುಸ್ತಿ ಪಂದ್ಯಾಟದ ಪ್ರಶಸ್ತಿಗಳ ಬಿಡುಗಡೆ

Ravi Talawar
WhatsApp Group Join Now
Telegram Group Join Now

ಮುಂಡರಗಿ ೧೦: ಅದ್ವಿಕ್ ವಿವಿಧೋದ್ದೇಶಗಳ ಅಭಿವೃದ್ಧಿ ಸಂಘ (ರಿ) ಮುಂಡರಗಿ ರವರ ಆಶ್ರಯದಲ್ಲಿ ದಿನಾಂಕ ೦೯/೦೪/೨೦೨೪ ರಂದು ಮಂಗಳವಾರ ದಿವಸ ಶಾಲಾ ಮಕ್ಕಳ ರಾಜ್ಯ ಮಟ್ಟದ ಮಣ್ಣಿನ ಕುಸ್ತಿ ಪಂದ್ಯಾಟದ ಪ್ರಶಸ್ತಿಗಳನ್ನು ಸಂಘದ ಕಾರ್ಯಾಲಯದಲ್ಲಿ ಬಿಡುಗಡೆಗೊಳಿಸಲಾಯಿತು.

ಶ್ರೀ ಬಸವರಾಜ ಯಲ್ಲಪ್ಪ ನವಲಗುಂದ ಅಧ್ಯಕ್ಷರು ಅದ್ವಿಕ್ ವಿವಿಧೋದ್ದೇಶಗಳ ಅಭಿವೃದ್ಧಿ ಸಂಘ (ರಿ) ಮುಂಡರಗಿ ರವರು ಪಂದ್ಯಾಟದ ಬಹುಮಾನಗಳನ್ನು
ಬಿಡುಗಡೆಗೊಳಿಸಿ ಪ್ರತಿ ವರ್ಷದಂತೆ ಈ ವರ್ಷವೂ ದಿನಾಂಕ: ೧೩/೦೪/೨೦೨೪ ರಂದು ಶನಿವಾರ ದಿವಸ ಬೆಳಿಗ್ಗೆ ೧೧:೦೦ ಗಂಟೆಗೆ ಮುಂಡರಗಿ ಪಟ್ಟಣದ ಪೊಲೀಸ್ ಕವಾಯತ್ ಮೈದಾನದಲ್ಲಿ ಶಾಲಾ ಮಕ್ಕಳಿಗಾಗಿ ರಾಜ್ಯ ಮಟ್ಟದ ಮಣ್ಣಿನ ಕುಸ್ತಿ ಪಂದ್ಯಾಟವನ್ನು ಏರ್ಪಡಿಸಲಾಗಿದೆ ಈ ಪಂದ್ಯಾಟದಲ್ಲಿ ಪಾಲ್ಗೊಂಡು
ವಿಜೇತರಾದವರಿಗೆ ಸೂಕ್ತ ಬಹುಮಾನಗಳನ್ನು ನೀಡಲಾಗುವುದು. ಆ ಬಹುಮಾನಗಳನ್ನು ಇಂದು ಬಿಡುಗಡೆಗೊಳಿಸಲು ಬಹಳ ಸಂತೋಷವಾಗುತ್ತಿದೆ. ೧೬
ವರ್ಷ ಈ ಪಂದ್ಯಾಟವನ್ನು ಆಡಿ ಪ್ರತಿ ವರ್ಷ ಪ್ರಶಸ್ತಿ ಪಡೆದುಕೊಂಡ ವಿದ್ಯಾರ್ಥಿಗಳು ಸರ್ಕಾರಿ ನೌಕರಿ ಗಳಲ್ಲಿ ಸ್ಥಾನ ಪಡೆದಿರುವುದು ಬಹಳ ಸಂತೋಷದ ಸಂಗತಿ ಆಗಿದೆ ಈ ಪಂದ್ಯಾಟವು ಶಾಲಾ ಮಕ್ಕಳಿಗೆ ಮುಕ್ತವಾಗಿ ಭಾಗವಹಿಸಲು ಅವಕಾಶ ಇದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ರೇಣುಕಾ ಬಸವರಾಜ ನವಲಗುಂದ, ಸಂಘದ ಕಾರ್ಯದರ್ಶಿಗಳಾದ ಶ್ರೀಮತಿ ಶೋಭಾ ಚಂದ್ರಗೌಡ
ಪೊಲೀಸ್ ಪಾಟೀಲ, ಸಂಘದ ಖಜಾಂಚಿ ಶ್ರೀ ಮಂಜುನಾಥ ಬಸವರಾಜ ನವಲಗುಂದ, ಶ್ರೀ ಪರಶುರಾಮ ಬಸವರಾಜ ನವಲಗುಂದ,  ಶ್ರೀ ಶಿವಕುಮಾರ ಮಹಾಬಳೇಶ್ವರಪ್ಪ ಅಳವಂಡಿ, ಶ್ರೀ ಕುಮಾರಸ್ವಾಮಿ ಮಹಾಬಳೇಶ್ವರಪ್ಪ ಅಳವಂಡಿ, ಶ್ರೀಮತಿ ವೀಣಾ ಶಿವಕುಮಾರ ಅಳವಂಡಿ, ಶ್ರೀಮತಿ ಮಂಜುಳಾ
ಕುಮಾರಸ್ವಾಮಿ ಅಳವಂಡಿ ಮುಂತಾದವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article