This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಟಿಬಿ ಮುಕ್ತ ಭಾರತ ಅಭಿಯಾನ : ಎಂ.ಎಲ್.ಸಿ. ವೈ.ಎಂ. ಸತೀಶ್‌ರಿಂದ ೧೦ ರೋಗಿಗಳ ದತ್ತು ಸ್ವೀಕಾರ


ಬಳ್ಳಾರಿ, ಅ. ೦೧: ಪ್ರಧಾನಿ ನರೇಂದ್ರ ಮೋದಿ ಅವರ ೨೦೩೦ರ ವೇಳೆಗೆ `ಟಿಬಿ ಮುಕ್ತ ಭಾರತ ಅಭಿಯಾನ’ಕ್ಕೆ ಸ್ಪಂದಿಸಿರುವ ಬಳ್ಳಾರಿ – ವಿಜಯನಗರ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ೧೦ ಜನ ಕ್ಷಯ ರೋಗಿಗಳನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು `ಟಿಬಿ ಮುಕ್ತ ಭಾರತ ಅಭಿಯಾನ’ದ ಅಂಗವಾಗಿ `ಮನ್ ಕಿ ಬಾತ್’ನಲ್ಲಿ ವಿಷಯ ಪ್ರಸ್ತಾಪ ಮಾಡಿ, ದಾನಿಗಳು, ಕಾರ್ಪೊರೇಟ್ ಕಚೇರಿಗಳು, ಎನ್‌ಜಿಓಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಕ್ಷಯ ರೋಗಿಗಳನ್ನು ದತ್ತು ಪಡೆದು ಅವರಿಗೆ ಆರೋಗ್ಯ ಸುಧಾರಣೆಗೆ ಸ್ಪಂದಿಸಬೇಕು ಎಂದು ಕರೆ ನೀಡಿದ್ದರು.
ಈ ಹಿನ್ನಲೆಯಲ್ಲಿ ತ್ವರಿತವಾಗಿ ಸ್ಪಂದಿಸಿದ ವೈ.ಎಂ. ಸತೀಶ್ ಅವರು, ತಾವು ದತ್ತು ಪಡೆದ ೧೦ ಜನ ಕ್ಷಯ ರೋಗಿಗಳನ್ನು ಬಳ್ಳಾರಿ ನಗರದ ರಾಣಿತೋಟದಲ್ಲಿ ಇರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಭೇಟಿ ಮಾಡಿ, ಕ್ಷಯ ಸಮಸ್ಯೆಯಿಂದ ನರಳುತ್ತಿರುವವರು ಸಕಾಲದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆದಲ್ಲಿ ವ್ಯಾಧಿಯು ಸಂಪೂರ್ಣ ಗುಣಮುಖವಾಗಲಿದೆ. ರೋಗಿಗಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು ಎಂದು ಹೇಳಿದರು.
ಕ್ಷಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದು, ದತ್ತು ಸ್ವೀಕೃತವಾದ ರೋಗಿಗಳು, `ಸರ್ಕಾರ ನೀಡುತ್ತಿರುವ ಔಷಧಿಯನ್ನು ಸರಿಯಾಗಿ ಪಡೆಯುತ್ತಿದ್ದೇವೆ. ಉತ್ತಮ ಚಿಕಿತ್ಸೆ ಸಿಗುತ್ತಿದೆ. ದೇಶವನ್ನು ಕ್ಷಯಮುಕ್ತಗೊಳಿಸಲು ನಾವೆಲ್ಲರೂ ಬದ್ಧವಾಗಿದ್ದು, ದಾನಿಗಳು ನೀಡುವ ಪೌಷ್ಠಿಕ ಆಹಾರವನ್ನು ಸೇವೆಸಿ ಶೀಘ್ರವೇ ಗುಣಮುಖರಾಗುತ್ತೇವೆ’ ಎಂದು ಭರವಸೆ ನೀಡಿದರು.
ಜಿಲ್ಲಾ ಕ್ಷಯ ನಿರ್ಮೂಲನಾ ಅಧಿಕಾರಿ ಡಾ. ಇಂದ್ರಾಣಿ, ದತ್ತು ಸ್ವೀಕೃತವಾದ ಕ್ಷಯ ರೋಗಿಗಳು ದಾನಿಗಳು ನಿಸ್ವಾರ್ಥವಾಗಿ ಸಲ್ಲಿಸಿರುವ ಸೇವೆಯನ್ನು ಸಮರ್ಪಕವಾಗಿ ಬಳಕೆ ಮಾಡಿ, ಗುಣಮುಖರಾಗಿ ದಾನಿಗಳ ಸೇವೆಗೆ ಸಾರ್ಥಕತೆ ತರಬೇಕು. ರೋಗಿಗಳ ಆರೋಗ್ಯ ಸುಧಾರಣೆಯಿಂದ ದಾನಿಗಳ ಸಂಖ್ಯೆ ಹೆಚ್ಚಲಿದೆ  ಎಂದರು.
ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply