ನಟ ಸಲ್ಮಾನ್​ ಮನೆ ಗುಂಡಿನ ದಾಳಿಯ ಆರೋಪಿ ಅನುಜ್ ​ ಪೊಲೀಸ್​ ಕಸ್ಟಡಿಯಲ್ಲೇ ಆತ್ಮಹತ್ಯೆ

Ravi Talawar
WhatsApp Group Join Now
Telegram Group Join Now

ದೆಹಲಿ01: ನಟ ಸಲ್ಮಾನ್​ ಖಾನ್ಮನೆ ಎದುರು ನಡೆದಿದ್ದ ಗುಂಡಿನ ದಾಳಿಯ ಆರೋಪಿ ಅನುಜ್ ​ ಪೊಲೀಸ್​ ಕಸ್ಟಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆರೋಪಿಯ ಹೆಸರು ಅನುಜ್ ಥಾಪನ್, ಸಲ್ಮಾನ್ ಮನೆ ಮೇಲೆ ಗುಂಡು ಹಾರಿಸಿದ ಶೂಟರ್‌ಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ ಆರೋಪ ಅನುಜ್​ಮೇಲಿದೆ.

ಸಲ್ಮಾನ್ ಖಾನ್ ಮನೆಯಲ್ಲಿ ಫೈರಿಂಗ್ ಪ್ರಕರಣ ದಿನಕ್ಕೊಂದು ಹೊಸ ರೂಪ ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಆರೋಪಿಗಳಾದ ವಿಕ್ಕಿ ಗುಪ್ತಾ (24), ಸಾಗರ್ ಪಾಲ್ (21) ಮತ್ತು ಅನುಜ್ ಥಾಪನ್ (32) ಪೊಲೀಸರ ವಶದಲ್ಲಿದ್ದರು.

ಇದೀಗ ಸಲ್ಮಾನ್ ಖಾನ್ ಮನೆಗೆ ಗುಂಡು ಹಾರಿಸಿದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿ ಹೊರಬಿದ್ದಿದೆ. ಏಪ್ರಿಲ್ 14 ರ ಭಾನುವಾರ ಬೆಳಗ್ಗೆ, ಸಲ್ಮಾನ್ ಖಾನ್ ಅವರ ಮನೆಯ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಹೊರಗೆ ಗುಂಡಿನ ದಾಳಿ ನಡೆದಿದೆ.

ಈ ಸುದ್ದಿ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಸಲ್ಮಾನ್ ಮನೆ ಹೊರಗೆ 5 ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

ಇದಾದ ಬಳಿಕ ಆರೋಪಿಗಳಿಬ್ಬರೂ ಗುರುತು ಸಿಗದಂತೆ ಮೂರು ಬಾರಿ ಬಟ್ಟೆ ಬದಲಾಯಿಸಿದ್ದರು. ಅವರ ಬಳಿ 40 ಗುಂಡುಗಳಿವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು. ಸಲ್ಮಾನ್ ಖಾನ್ ಮನೆಯ ಹೊರಗೆ ನಡೆದ ಗುಂಡಿನ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಹೊತ್ತಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಗಳಾದ ವಿಕ್ಕಿ ಗುಪ್ತಾ, ಸಾಗರ್ ಪಾಲ್ ಮತ್ತು ಅನುಜ್ ಥಾಪನ್ ಅವರನ್ನು ಮೇ 8 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿತ್ತು.

WhatsApp Group Join Now
Telegram Group Join Now
Share This Article