ಮದುವೆ ಪ್ರಸ್ತಾಪ ನಿರಾಕರಿಸಿದ ಯುವತಿ ಮನೆಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ!

Ravi Talawar
WhatsApp Group Join Now
Telegram Group Join Now

ಬೆಂಗಳೂರು,25: ತನ್ನ ಪ್ರಿಯತಮೆ ತನಗೆ ಎಂದಿಗೂ ದೊರಕಲಾರಳು ಎಂದು ಹತಾಶೆಗೊಳಗಾದ ಪ್ರಿಯಕರ, ಆಕೆಯ ಮನೆಗೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ನಗರದ ಸಂಪಿಗೆಹಳ್ಳಿ ಪೊಲೀಸ್‌ ವ್ಯಾಪ್ತಿಯಲ್ಲಿ ನಡೆದಿದೆ.

ಏಪ್ರಿಲ್ 11 ರಂದು ಘಟನೆ ನಡೆದಿದ್ದು, ಯುವತಿ ಅರ್ಬಿನಾ ತಾಜ್ ನೀಡಿದ ದೂರಿನ ಆಧಾರದ ಮೇಲೆ ಮಂಗಳವಾರ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಅರ್ಬಾಜ್ (26) ಎಂದು ಗುರುತಿಸಲಾಗಿದೆ.

ಅರ್ಬಿನಾ ತಾಜ್ ಪತಿ ಸೈಯದ್ ಅಜಂ ಮತ್ತು ಅವರ ನಾಲ್ವರು ಮಕ್ಕಳೊಂದಿಗೆ ಸಾರಾಯಿಪಾಳ್ಯದ ಮಸೀದಿ ಫಾತಿಮಾ ಲೇಔಟ್‌ನಲ್ಲಿ ವಾಸವಿದ್ದು, ಆರೋಪಿ ತಾಜ್ ಅರ್ಬಿನಾ ಹಿಂದೆ ಬಿದ್ದು, ಪತಿಯನ್ನು ತೊರೆದ ತನನ್ನು ವಿವಾಹವಾಗುವಂತೆ ಪೀಡಿಸಲು ಆರಂಭಿಸಿದ್ದಾರೆ. ಈ ಸಂಬಂಧ ಅರ್ಬಿನಾ ಪತಿ ಹಾಗೂ ಅರ್ಬಾಜ್ ನಡುವೆ ಜಗಳವೂ ಆಗಿದೆ.

ಏಪ್ರಿಲ್ 10 ರಂದು ಅರ್ಬಿನಾಗೆ ಬೇರೆ ನಂಬರ್ ನಿಂದ ಕರೆ ಮಾಡಿರುವ ಆರೋಪಿ ಜಗಳವಾಡಿದ್ದಾನೆ. ಅದೇ ರಾತ್ರಿ ಅರ್ಬಿನಾ ಪತಿಯೊದಿಗೆ ರಂಜಾನ್ ಶಾಂಪಿಂಗ್’ಗೆ ತರಳಿದ್ದಾರೆ. ಏಪ್ರಿಲ್ 11 ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮತ್ತೆ ಕರೆ ಮಾಡಿರುವ ಆರೋಪಿ, ಮನೆಗೆ ಬೆಂಕಿ ಹಚ್ಚಿರುವುದಾಗಿ ತಿಳಿಸಿದ್ದಾನೆ. ದಂಪತಿ ಮನೆ ಬಳಿ ಧಾವಿಸಿದಾಗ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುತ್ತಿರುವುದು ಕಂಡು ಬಂದಿದೆ.

ಅಗ್ನಿ ಅವಘಡದಲ್ಲಿ ಇಡೀ ಮನೆ ನಾಶವಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಆರಂಭದಲ್ಲಿ ಶಂಕಿಸಲಾಗಿತ್ತು. ಎಫ್‌ಎಸ್‌ಎಲ್, ಎಸ್‌ಒಸಿಒ ಮತ್ತು ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರೇಟ್‌ನ ಅಧಿಕಾರಿಗಳು ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತನಿಖೆ ಪ್ರಗತಿಯಲ್ಲಿರುವ ಸಂದರ್ಭದಲ್ಲಿ ತಾಜ್ ಅವರು ಸೋಮವಾರ ಅರ್ಬಾಜ್ ವಿರುದ್ಧ ದೂರು ದಾಖಲಿಸಿದ್ದಾರೆ, ಅರ್ಬಾಜ್ ಮನೆಗೆ ಬೆಂಕಿ ಹಚ್ಚಿದ್ದಾರೆಂದು ಆರೋಪಿಸಿದ್ದಾರೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article