ಬೆಳಗಾವಿ ಡಿ., ೨೨- ಅಂತರಾಷ್ಟ್ರೀಯ ಲಿಂಗಾಯತ್ ಯುವ ವೇದಿಕೆಯು ಲಿಂಗಾಯತ ವೀರಶೈವ ನವೋದ್ಯಮಿಗಳ ನಡುವೆ ಸಂಪರ್ಕ ಏರ್ಪಡಿಸುವ ಒಂದು ವ್ಯವಹಾರ ಮಹಾಮೇಳ ಮತ್ತು ಶೃಂಗಸಭೆಯನ್ನು ಜನವರಿ ೨೦ ರಿಂದ ೨೨ ರವರೆಗೆ ಮೂರು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ವಾಣಿಜ್ಯ ಸಮ್ಮೇಳನದ ಪ್ರಧಾನ ಸಂಯೋಜಕರಾದ ಸಂತೋಷ ಕೆಂಚಾಂಬ ತಿಳಿಸಿದರು.
ನಗರದಲ್ಲಿಂದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನ ಅರಮನೆ ಮೈದಾನದ ವ್ಹೈಟ್ ಪೆಟಲ್ಸ್ ನಲ್ಲಿ ೨೦ ಜರುಗುವ ವೀರಶೈವ ಲಿಂಗಾಯತ ಜಾಗತಿಕ ವ್ಯವಹಾರ ಶೃಂಗಸಭೆಯಲ್ಲಿ ನೀತಿ ರೂಪಿಸುವವರು, ಆಡಳಿತಗಾರರು, ಕೈಗಾರಿಕಾ ಮುಂದಾಳುಗಳು ಮತ್ತು ಬ್ಯಾಂಕಿಂಗ್ ತಜ್ಞರನ್ನು ಒಂದು ವೇದಿಕೆಯ ಮೇಲೆ ಸೇರಿಸಿ, ವ್ಯವಹಾರ ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸಿ, ಯುವ ನವೋದ್ಯಮಿಗಳಿಗೆ ಮಾರ್ಗದರ್ಶನ ಮಾಡುವುದು, ವಿಶ್ವಾದ್ಯಂತ ಈ ವ್ಯವಹಾರದ ಸಮುದಾಯಕ್ಕೆ ಪರಸ್ಪರ ಅಂತರ್ ಸಂಪರ್ಕ ಏರ್ಪಡಿವು ಉಧ್ದೇಶವಿದೆ ಎಂದು ಹೇಳಿದರು.
ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸುವರು ಮತ್ತು ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದರು.
ಈ ಶೃಂಗಸಭೆಯಲ್ಲಿ ರೈತರಿಗೆ, ಬ್ಯಾಂಕಿಂಗ್, ಸ್ಟಾರ್ಟಪ್, ಶಿಕ್ಷಣ ಕ್ಷೇತ್ರ ಮತ್ತು ಮಹಿಳಾ ಉದ್ಯಮಗಳ ಬಗ್ಗೆ ಶಿಬಿರಗಳನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಒಂದು ಬೃಹತ್ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ. ೨೫೦ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲು ವ್ಯವಸ್ಥೆಮಾಡಲಾಗಿದೆ. ೫ ರಾಜ್ಯಗಳ, ೯ ರಿಂದ ೧೦ ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಂತರಾಷ್ಟ್ರೀಯ ಲಿಂಗಾಯತ್ ಯುವ ವೇದಿಕೆಯ ಸಂಸ್ಥಾಪಕರಾದ ಸಿದ್ದರಾಮ ಜತ್ತಿ, ವಿಕ್ರಮ ಕರಾಚೂರ, ಅವಿನಾಶ ಪಳೇಗಾರ, ಶಿವಪ್ರಸಾದ ತಲ್ಲೂರ, ನೇತ್ರಾವತಿ ಚೆನ್ನಪ್ಪ ಮತ್ತು ಇತರರು ಉಪಸ್ಥಿತರಿದ್ದರು.
Hasiru Kranti > Local News > ಜನವರಿ ೨೦ ರಿಂದ ಮೂರು ದಿನ ವೀರಶೈವ ಲಿಂಗಾಯತ ಜಾಗತಿಕ ವ್ಯವಹಾರ ಶೃಂಗಸಭೆ
Leave a reply