ಬೆಳಗಾವಿ ಜು.೦೫: ಜೂನ್ ೨೯ರಂದು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ ಜಿಲ್ಲೆಯ ಎಸಿ ಕಚೇರಿಯ ಗ್ರೇಡ್- ೨ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಶೋಕ್ ಮಣ್ಣಿಕೇರಿ ಪ್ರಕರಣಕ್ಕೆ ಹೊಸ್ ಟ್ವಿಸ್ಟ ಸಿಕ್ಕಿದೆ.
ಅಶೋಕ್ ಮಣ್ಣಿಕೇರಿ ಸಾವಿಗೂ ಮುನ್ನ ಬರೆದಿಟ್ಟಿದ್ದ ಡೆತ್ಬೀಟ್ ಪತ್ತೆಯಾಗಿದೆ. ನಗರದ ಎಸಿ ಕಚೇರಿಯ ಲಾಕರ್ ಪರಿಶೀಲನೆ ವೇಳೆ ಅಶೋಕ್ ಮಣ್ಣಿಕೇರಿಯ ವೈಯಕ್ತಿಕ ದಾಖಲೆಗಳು ಪತ್ತೆಯಾಗಿವೆ. ಇದರಲ್ಲಿ ಜೂನ್ ೨೩ ರಂದು ಬರೆದಿಟ್ಟಿದ್ದ ಪತ್ರವೊಂದು ಪೋಲೀಸರ ಕೈಗೆ ಸಿಕ್ಕಿದ್ದು, ಇದರಲ್ಲಿ ತನ್ನ ಪತ್ನಿ ಭೂಮಿ ನಿರಂತರ ಕಿರುಗಳ ನೀಡುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಡೆತ್ನೋಟನಲ್ಲಿ ತನ್ನ ಪತ್ನಿ ಭೂಮಿ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಮತ್ತು ಕಿರುಕುಳ ನೀಡುತ್ತದ್ದಾರೆ ಎಂಬ ಉಲ್ಲೇಖ ಮಾಡಲಾಗಿದೆ ಇದರ ಜೊತೆಗೆ ತಹಶೀಲ್ದಾರ ಹುದ್ದೆಗೆ ಸ್ವಯಂ ನಿವೃತ್ತಿ ಪಡೆಯಲು ಸಿದ್ದಪಡಿಸಿದ್ದ ಪತ್ರ ಕೂಡ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಎಸಿ ಕಚೇರಿಯ ಗ್ರೇಡ್- ೨ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಶೋಕ್ ಮಣ್ಣಿಕೇರಿ ಈ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್ ಮೊದಲ ಬಾರಿಗೆ ಶಾಸಕರಾಗಿದ್ದಾಗ ವೇಳೆ ಅವರ ಆಪ್ತ ಸಹಾಯಕರಾಗಿ ಕೂಡ ಕಾರ್ಯನಿರ್ವಹಿಸಿದ್ದರು.
ಇನ್ನು ಜೂನ್ ೨೯ರಂದು ಮನೆಯಲ್ಲಿ ಹೃದಯಾಘಾತದಿಂದ ಸಾವು ಎಂದು ಪ್ರಕರಣ ಬೆಳಕಿಗೆ ಬಂದಿತ್ತು. ಅಶೋಕ್ ಮಣ್ಣಿಕೇರಿ ಕುಟುಂಬಸ್ಥರಿಂದ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪತ್ನಿ ಭೂಮಿ ಹಾಗೂ ಪತ್ನಿಯ ಸಹೋದರ ಸ್ಯಾಮುವಲ್ ವಿರುದ್ಧ ಕೇಸ್ ದಾಖಲಿಸಿದ್ದರು. ಇನ್ನು ಮರಣೋತ್ತರ ಹಾಗೂ ಎಫ್ಎಸ್ಎಲ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಅಶೋಕ್ ಮಣ್ಣಿಕೇರಿ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಡೆತ್ನೋಟ್ ಪತ್ತೆ!

Leave a comment
Leave a comment