This is the title of the web page
Left Banner (Left Skyscraper)
Right Banner (Right Skyscraper)

ಲಕ್ಷ್ಮಣ ಬಬಲಿಯವರದು ಒಂದು ಮಾದರಿ ಕೆಲಸ-  ಸಂಗಪ್ಪಗೋಳ

0 6

 

ಮಜಲಟ್ಟಿ — ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲುಗಳು ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳ ಅಕ್ಷರ ವಂಚಿತ ಮಕ್ಕಳಿಗೆ ವರದಾನವಾಗಿವೆ

ಸಾಮಾಜಿಕ ನ್ಯಾಯದ ಹರಿಕಾರ ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ದಿವಂಗತ ಡಿ ದೇವರಾಜ ಅರಸುರವರ ಕನಸು ನನಸಾಗುತ್ತಿರುವುದು ನಮಗೆಲ್ಲ ಕಂಡುಬರುತ್ತಿದೆ ಹಾಸ್ಟೆಲುಗಳಲ್ಲಿ ಇದ್ದು ವ್ಯಾಸಂಗ ಮಾಡಿದ ನಿಲಯಾರ್ಥಿಗಳು ಇಂದು ಸರಕಾರದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸಮಾಜ ಸೇವಕರಾದ  ರುದ್ರಪ್ಪ ಸಂಗಪ್ಪಗೋಳ ನುಡಿದರು.

ಅವರು ಹಿಂದುಳಿದ ವರ್ಗಗಳ ಹಾಸ್ಟೆಲುಳಲ್ಲಿದ್ದು ಎಸ್ ಎಸ್ ಎಲ್ ಸಿ 2022 ವ್ಯಾಸಂಗ ಮಾಡಿ ಪಬ್ಲಿಕ್ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ನಿಲಯಾರ್ಥಿಗಳಿಗಾಗಿ ಹಮ್ಮಿಕೊಂಡ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು

ಬೆಳಗಾವಿ ಜಿಲ್ಲೆಯಲ್ಲಿಯ ಎಲ್ಲ ಹಾಸ್ಟೆಲುಗಳ ಫಲಿತಾಂಶ ಚನ್ನಾಗಿದ್ದು ಈಗ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ಬಂದಿರುವ ಶ್ರೀ ಲಕ್ಷ್ಮಣ ಬಬಲಿಯವರ ಈ ಸಮಾಜಮುಖಿ ಕೆಲಸ ಇಲಾಖೆಗೆ ಮಾದರಿಯಾಗಿದೆ ಇದರಿಂದಾಗಿ ಅವರಲ್ಲಿರುವ ಶಿಕ್ಷಣದ ಕಾಳಜಿ ಮತ್ತು ಮಕ್ಕಳ ಭವಿಷ್ಯದ ಚಿಂತನೆ ಎದ್ದು ಕಾಣುತ್ತದೆ ಇಲ್ಲಿ ಸೇರಿರುವ ಎಲ್ಲ ನಿಲಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಎಲ್ಲರೂ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆಂದರು.

ಸ್ಥಳೀಯ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಜೀವಪ್ಪ ತಂಗಡಗಿ ಮಾತನಾಡಿ ಯುವ ಅಧಿಕಾರಿಗಳಾದ ಶ್ರೀ ಬಬಲಿಯವರು ಇಲಾಖೆಯಲ್ಲಿ ಒಂದು ಹೊಸ ಹೆಜ್ಜೆಯನ್ನಿಟ್ಟಿದ್ದಾರೆ ಸಾಕಷ್ಟು ಸಮಯ ಒಳ್ಳೆಯ ಓದುವ ವಾತಾವರಣ ಇದ್ದರೂ ಕೆಲವು ನಿಲಯಾರ್ಥಿಗಳು ಅನುತ್ತೀರ್ಣರಾಗಿರುವುದು ಬೇಸರದ ಸಂಗತಿ ಈ ಕಾರ್ಯಾಗಾರ ಯಶಸ್ವಿಯಾಗಲು ನಮ್ಮ ಪ್ರೌಢಶಾಲಾ ಶಿಕ್ಷಕರೂ ಸಹಕರಿಸುತ್ತಾರೆ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬೆಳಗಾವಿ ಜಿಲ್ಲಾ ಅಧಿಕಾರಿ ಶ್ರೀ ಲಕ್ಷ್ಮಣ ಬಬಲಿ ಮಾತನಾಡಿ ಎಸ್ ಎಸ್ ಎಲ್ ಸಿ

2022 ರ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಿಲಯಾರ್ಥಿಗಳಿಗಾಗಿರುವ ಈ ಪುನಶ್ಚೇತನ ಕಾರ್ಯಾಗಾರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಪಾಸಾಗಿ ಮತ್ತೆ ತಮ್ಮ ಶಿಕ್ಷಣವನ್ನು ಮುಂದುವರೆಸಬೇಕು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಶ್ರೀ ಎ ಎಸ್ ಕೋಳಿ ಯವರು ಇದೊಂದು ಹೊಸ ಪ್ರಯತ್ನ ಪ್ರಯತ್ನ ಫಲಪ್ರದವಾಗಿ ಇಲಾಖೆಗೆ ಮಾದರಿಯಾಗಬಲ್ಲದೆಂದರು ವಿಶ್ರಾಂತ ಅಧಿಕಾರಿ ಸಾಹಿತಿ ಶ್ರೀ ಬಿ ಜಿ ಗಾರ್ಗಿ ಕಾರ್ಯಾಗಾರದಸಂಚಾಲಕರಾಗಿದ್ದ ಈ ಸಂದರ್ಭದಲ್ಲಿ ತಾಲ್ಲೂಕು ಕಲ್ಯಾಣಾಧಿಕಾರಿ ಶ್ರೀ ಸದಾಶಿವ ಸೌದಾಗರ್, ಸಂಗಪ್ಪಗೋಳ ಪ್ರೌಢಶಾಲೆಯ ಶ್ರೀಕಾಂತ ಭೆಂಡವಾಡೆ ಮತ್ತು ತಾಲ್ಲೂಕಿನ ವಸತಿ ನಿಲಯಗಳ ಮೇಲ್ವಿಚಾರಕ ಸಿಬ್ಬಂದಿ ಉಪಸ್ಥಿತರಿದ್ದರು ಬಿ ಆರ್ ಹೊನಗೌಡರ ಸ್ವಾಗತಿಸಿದರೆ ಶ್ರೀ ಎಂ ಎ ಖಡಕಬಾವಿ ವಂದಿಸಿದರು ಶ್ರೀ ಗಂಗಾರಾಮ ಕುಂಬಾರ ಮತ್ತು ನೀಲಕಂಠ ಕಾಂಬಳೆ ನಿರ್ವಹಿಸಿದರು..

You might also like
Leave a comment