ಹಿಂದೂ ಸಂಪ್ರದಾಯದಂತೆ ನಡೆಯದ ಮದುವೆ ಅಸಿಂಧು: ಸುಪ್ರೀಂ ಕೋರ್ಟ್​​

Ravi Talawar
WhatsApp Group Join Now
Telegram Group Join Now

ನವದೆಹಲಿ,02: ಹಿಂದೂ ಧರ್ಮದಲ್ಲಿ ನಡೆಯುವ ವಿವಾಹವು  ಅದೊಂದು ಪವಿತ್ರವಾದ ಪ್ರಕ್ರಿಯೇ ಹೊರತು ಹಾಡು ಮತ್ತು ನೃತ್ಯ ಭೋಜನಕ್ಕೆ ಮಾತ್ರ ಸೀಮಿತವಲ್ಲ ಎಂದು ಸುಪ್ರೀ ಕೋರ್ಟ್​​ ಹೇಳಿದೆ. ಹಿಂದೂ ವಿವಾಹ ಕಾಯ್ದೆಯಡಿ ಸೂಚಿಸಲಾದ ಸಾಂಪ್ರದಾಯಿಕ ಆಚರಣೆಗಳು ಮತ್ತು ಸಮಾರಂಭಗಳು ಶ್ರದ್ಧೆಯಿಂದ, ಕಟ್ಟುನಿಟ್ಟಾಗಿ ಮತ್ತು ಧಾರ್ಮಿಕವಾಗಿರಬೇಕು ಎಂದು ಹೇಳಿದೆ. ಒಂದು ವೇಳೆ ಇವುಗಳನ್ನು ಅನುಸರಿಸಲು ವಿಫಲವಾದರೆ ಆ ಮದುವೆಯನ್ನು ನೋಂದಾಯಿಸಿದ ನಂತರವೂ ಅಮಾನ್ಯವೆಂದು ಘೋಷಿಸಲಾಗುತ್ತದೆ ಎಂದು ಕಟ್ಟುನಿಟ್ಟಾಗಿ ಹೇಳಿದೆ.

ಈ ಬಗ್ಗೆ ಕಾಯಿದೆಯ ಸೆಕ್ಷನ್ 7 ‘ಹಿಂದೂ ವಿವಾಹದ ಆಚರಣೆಗಳ ಬಗ್ಗೆ ಹೇಳುತ್ತದೆ. ಮದುವೆಯ ಸಿಂಧುತ್ವಕ್ಕಾಗಿ ಅದನ್ನು ಅನುಸರಿಸಬೇಕು. ಒಂದು ವೇಳೆ ಇದನ್ನು ಪಾಲಿಸದಿದ್ದಾರೆ, ಕಾನೂನಿನ ದೃಷ್ಟಿಯಲ್ಲಿ ಮದುವೆಯನ್ನು ಮಾನ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಹೇಳಿದೆ. ಸೆಕ್ಷನ್ 7 ಹೇಳುವಂತೆ ಹಿಂದೂ ವಿವಾಹವನ್ನು ಯಾವುದೇ ಸಾಂಪ್ರದಾಯಿಕ ವಿಧಿಗಳು ಮತ್ತು ಸಮಾರಂಭಗಳಿಗೆ ಅನುಗುಣವಾಗಿ ನಡೆಸಬಹುದು ಎಂದು ಹೇಳಿದೆ.

ಈ ಆದೇಶವನ್ನು ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ನೀಡಿದೆ. ಹಿಂದೂ ವಿವಾಹವು ‘ಸಂಸ್ಕಾರ’ ಮತ್ತು ಭಾರತೀಯ ಸಮಾಜಕ್ಕೆ ಒಂದು ಶೋಭೆಯನ್ನು ತರುವ ಮೌಲ್ಯಯುತವಾದ ಸಂಸ್ಕಾರವಾಗಿದೆ ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್​​​ ಈ ಆದೇಶವನ್ನು ನೀಡಲು ಈ ಪ್ರಕರಣ ಕಾರಣವಾಗಿದೆ. ಇಬ್ಬರು ದಂಪತಿಗಳ ವಿವಾಹ ಮಾನ್ಯವಾಗಿದ್ದರು. ಅವರು ಹಿಂದೂ ಧರ್ಮದ ಸಂಪ್ರದಾಯದಂತೆ ಮದುವೆಯಾಗಿಲ್ಲ. ಅದಕ್ಕಾಗಿ ಅವರ ವಿಚ್ಛೇದನ ಪ್ರಕರಣದ ವಿಚಾರಣೆಯನ್ನು ತಡೆಹಿಡಿದಿದೆ. ಈ ವಿಚಾರಣೆ ವೇಳೆ ಕೋರ್ಟ್​​​ ವಿವಾಹ ಕಾಯ್ದೆ ಹಾಗೂ ಕಾನೂನಿ ಪ್ರಕಾರ ಹಿಂದೂ ವಿವಾಹ ಹೇಗಿರಬೇಕು ಎಂದು ಹೇಳಿದೆ. ಯುವಕರು ಮತ್ತು ಯುವತಿಯರು ಮದುವೆ ಮಾಡಿಕೊಳ್ಳುವ ಮೊದಲು ವಿವಾಹದ ಸಂಪ್ರಾದಾಯಗಳನ್ನು ಹಾಗೂ ಅದರ ಕಟ್ಟುಪಡುಗಳನ್ನು ತಿಳಿದುಕೊಳ್ಳಬೇಕು ಹಾಗೂ ಅದರ ಬಗ್ಗೆ ಯೋಚನೆ ಮಾಡಬೇಕು ಎಂದು ಪೀಠವು ಹೇಳಿದೆ.

WhatsApp Group Join Now
Telegram Group Join Now
Share This Article