Live Stream

September 2022
T F S S M T W
1234567
891011121314
15161718192021
22232425262728
2930  

| Latest Version 8.0.1 |

Local News

ಪ್ರಧಾನಿ ಮೋದಿಯವರ ಸಾಧನೆ ಕುರಿತು ವಿಚಾರ ಸಂಕೀರ್ಣ ಹಾಗೂ ಬೌದ್ಧಿಕ ಸಮಾವೇಶ ಬಿಜೆಪಿ ಅರಬಾವಿ ಮಂಡಲದಿಂದ ಸೇವಾ ಪಾಕ್ಷಿಕ ಅಭಿಯಾನ...


ಮೂಡಲಗಿ ಸೆ.21 : ಇತರೆ ದೇಶಗಳು ಭಾರತವನ್ನು ಕಡೆಗಾನುಸುತ್ತಿದ್ದ ಸಮಯದಲ್ಲಿ, ಜಗತ್ತೇ ನಿಬ್ಬೆರಗಾಗುವಂತೆ ಪ್ರಗತಿ ಸಾಧಿಸಿ, ಭಾರತದತ್ತ ಮುಖ ಮಾಡಿ ನೋಡುವಂಥ ಕಾಲ ಬಂದಿದೆ ಎಂದರೆ ಅದರ ಶ್ರೇಯಸ್ಸು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲಬೇಕು ಎಂದು ವಿಷಯ ವಕ್ತಾರರಾದ ರಾಮಚಂದ್ರ ಕಾಕಡೆ ಅಭಿಮತ ವ್ಯಕ್ತ ಪಡಿಸಿದರು.

ಮಂಗಳವಾರದಂದು ಕೌಜಲಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ಸೇವಾ ಪಾಕ್ಷಿಕ ಅಭಿಯಾನ ಅಂಗವಾಗಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನಿರ್ದೇಶನದಂತೆ, ಭಾರತೀಯ ಜನತಾ ಪಾರ್ಟಿ ಅರಬಾವಿ ಮಂಡಲದಿಂದ ಹಮ್ಮಿಕೊಳ್ಳಲಾಗಿದ್ದ, ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ಕುರಿತು ವಿಚಾರ ಸಂಕೀರ್ಣ ಹಾಗೂ ಬೌದ್ಧಿಕ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತ ಮೋದಿಯವರು ನಡೆದು ಬಂದ ದಾರಿ ಹಾಗೂ ಸಾಧನೆಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೇಕ್ಕಿ, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಈರಣ್ಣ ಅಂಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ್, ಶಾಸಕರ ಆಪ್ತ ಸಹಾಯಕರಾದ ಅಬ್ದುಲ್ ಮಿರ್ಜಾನಾಯಕ್, ಬಿಜೆಪಿ ಪದಾಧಿಕಾರಿಗಳಾದ ಗುರು ಹಿರೇಮಠ, ತಮ್ಮಣ್ಣ ದೇವರ, ಪ್ರಮೋದ ನುಗ್ಗಾನಟ್ಟಿ, ಕೇದಾರಿ ಬಸ್ಮೆ, ರವಿ ಪರುಶೆಟ್ಟಿ , ಅಶೋಕ್ ಶಿವಾಪುರ್, ಮಂಗಳ ಕೌಜಲಗಿ ಸೇರಿದಂತೆ ಸ್ಥಳೀಯರು, ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು ಮತ್ತು ವಿದ್ಯಾಥಿಗಳು ಉಪಸ್ಥಿತರಿದ್ದರು.


Chandrashekar Pattar

Leave a Reply