Thursday, October 21, 2021

ಅಪಘಾತವಾದ ಕಾರಿನಲ್ಲಿ ನಾನು ಇರಲಿಲ್ಲ : ಚಿದಾನಂದ ಸವದಿ

Must Read
- Advertisement -

ಅಥಣಿ: ಬಾಗಲಕೋಟೆ ಜಿಲ್ಲೆಯ ಹುನಗುಂದ ಕ್ರಾಸ್ ಬಳಿ ನಿನ್ನೆಯಷ್ಟೇ ಡಿಸಿಎಂ ಸವದಿ ಪುತ್ರನ ಕಾರು ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಅಥಣಿಯಲ್ಲಿ ಡಿಸಿಎಂ ಪುತ್ರ ಚಿದಾನಂದ ಸವದಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ

ಅಂಜನಾದ್ರಿ ಬೆಟ್ಟಕ್ಕೆ ಹೋಗಿ ಮರಳಿ ಬರುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು ಅಪಘಾತವಾದ ಕಾರಿನಲ್ಲಿ ನಾನಿರಲಿಲ್ಲ ಸ್ನೇಹಿತನ ಕಾರಿನಲ್ಲಿ ಮೂವತ್ತು ಕಿಲೋಮೀಟರ್ ಮುಂದೆ ಇದ್ದೆ ಘಟನೆಯ ಬಗ್ಗೆ ನಮ್ಮ ಚಾಲಕ ಹನುಮಂತ ಸಿಂಗ್ ಕರೆಮಾಡಿ ತಿಳಿಸಿದಾಗ ಮರಳಿ ಆ ಜಾಗಕ್ಕೆ ಹೋಗಿದ್ದೆ ಅಷ್ಟರಲ್ಲೇ ಆಸ್ಪತ್ರೆಗೆ ಗಾಯಾಳುವನ್ನು ಸಾಗಿಸಲಾಗಿತ್ತು. ನಾವು ಆಸ್ಪತ್ರೆಗೆ ತೆರಳುವ ವೇಳೆಗೆ ಬೈಕ್ ಸವಾರ ಸಾವನ್ನಪ್ಪಿದ ಸುದ್ದಿ ತಿಳಿಯಿತು.ಮುಂದೆ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಪೋಲಿಸರಿಗೆ ಹೇಳಿ ಬೇರೆ ವಾಹನದಲ್ಲಿ ಸ್ನೇಹಿತರನ್ನು ಕರೆತಂದೆವು ಎಂದಿದ್ದಾರೆ.

- Advertisement -

ಇನ್ನೂ ಘಟನೆಯಾದ ನಂತರ ಸ್ಥಳಿಯರ ಮೇಲೆ ದರ್ಪ ತೋರಿದ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಯಾವುದೆ ರೀತಿಯ ವರ್ತನೆ ಮಾಡಿಲ್ಲಾ ಅಪಘಾತವಾದ ನಂತರ

- Advertisement -

ನಾನು ನನ್ನ ಸ್ನೇಹಿತರು ಅಂಬ್ಯೂಲೆನ್ಸ ಕರೆಯಿಸಿ ಗಾಯಾಳುವನ್ನ ಆಸ್ಪತ್ರೆಗೆ ಕಳಿಸಿದ್ದು ನಾನು ಆಸ್ಪತ್ರೆಗೆ ತೇರಳಬೆಕೆನ್ನುವಷ್ಟರಲ್ಲಿ ಆತ ಮೃತಪಟ್ಟಿರುವ ಮಾಹಿತಿ ದೊರೆತ ಬಳಿಕ ಅಲ್ಲಿನ ಎಸ್. ಪಿ ಅವರಿಗೆ ಮಾಹಿತಿ ನೀಡಿದ್ದೆನೆ.

ಇನ್ನೂ ಅಪಘಾತದಲ್ಲಿ ಮೃತಪಟ್ಟ ಕೋಡಲೆಪ್ಪ ಬೋಳಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೆಳುವುದರೊಂದಿಗೆ ಸಾಹಾಯ ಹಸ್ತ ನೀಡುವ ಭರವಸೆ ನೀಡಿದ್ದಾರೆ.

 

”ನಾನು ನನ್ನ ಸ್ನೇಹಿತರು ಅಪಘಾತವಾದ ಕಾರಿನಲ್ಲಿ ಇದ್ದೆವು. ಚಹಾ ಕುಡಿಯುವದಕ್ಕಾಗಿ ನಾವು ಒಂದು ಕಡೆ ನಿಂತಿದ್ದೆವು. ಚಿದಾನಂದ ಸವದಿ ಅವರ ಕಾರು ನಾವಿದ್ದ ಸ್ಥಳದಿಂದ ಸುಮಾರು ಮೂವತ್ತು ಕಿಲೋಮೀಟರ್ ದೂರ ಇತ್ತು.ಅಪಘಾತ ಆದ ತಕ್ಷಣ ಅವರಿಗೆ ಸುದ್ದಿ ಮುಟ್ಟಿಸಿದೆವು. ನನ್ನ ಪೋನ್ ಮೂಲಕ ಅಂಬ್ಯುಲೆನ್ಸ ಕರೆ ಮಾಡಿ ಗಾಯಾಳುವನ್ನು ಕರೆದೊಯ್ಯಲು ಸಹಾಯ ಮಾಡಿದೆವು.ಮೃತನ ಸಂಭಂದಿಕರು ಆರೋಪಿಸುತ್ತಿರುವ ಪ್ರಕಾರ ಚಿದಾನಂದ ಸವದಿ ಆ ಕಾರಿನಲ್ಲಿ ಇರಲಿಲ್ಲ. ಇದು ಸತ್ಯಕ್ಕೆ ದೂರವಾದ ಆರೋಪ.”

-ಸುಶೀಲ ಪತ್ತಾರ

ಚಿದಾನಂದ ಸವದಿ ಜೊತೆಗೆ ಪ್ರವಾಸಕ್ಕೆ ಹೋದವರ

 

 

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -