Saturday, October 23, 2021

ದಾನವು ಯಾವಾಗಲೂ ಯಾವುದೇ ನಿರೀಕ್ಷೇಗಳನ್ನು ಒಳಗೊಂಡಿರಬಾರದು : ಶ್ರೀಮತಿ ಸುಧಾ ಮೂರ್ತಿ

Must Read
- Advertisement -

ಬೆಳಗಾವಿ ಜು., 06- ದಾನವು ಯಾವಾಗಲೂ ಯಾವುದೇ ನಿರೀಕ್ಷೇಗಳನ್ನು ಒಳಗೊಂಡಿರಬಾರದು ಎಂದು ಇನಫೋಸಿಸ್‍ನ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಸುಧಾ ಮೂರ್ತಿ ಹೇಳಿದರು.
ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ (ಭಾರತ) ಬೆಳಗಾವಿ ಅವರು ”ಅಗತ್ಯವಿರುವವರಿಗೆ ಸಹಾಯ ಮಾಡುವುದು ಲೋಕೋಪಕಾರ” ಎಂಬ ವಿಷಯದ ಮೇಲೆ ಹಮ್ಮಿಕೊಂಡಿದ್ದ ವೆಬ್ನಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ಸುಧಾ ಮೂರ್ತಿ ಅವರು ‘ಲೋಕೋಪಕಾರ'(Philanthropy) ಎಂಬ ಪದವು ಗ್ರೀಕ್ ನಾಗರಿಕತೆಯಿಂದ ಬಂದಿದ್ದು ಇದು ವಿಶಾಲ ಅರ್ಥವನ್ನು ಹೊಂದಿದ್ದು, ಇದರ ಅರ್ಥ ನಮ್ಮ ಜೋತೆಗೆ ಇರುವ ಮನುಷ್ಯರನ್ನು ಪ್ರೀತಿಸುವುದು (“ಲವಿಂಗ್ ಫೆಲೋ ಹ್ಯೂಮನ್ಸ್”). ಸಹಾಯ ಕೇವಲ ಹಣದ ರೂಪದಲ್ಲಿ ಮಾತ್ರವಲ್ಲ, ಅದು ದು:ಖವನ್ನು ಹಂಚಿಕೊಳ್ಳುವುದಿರಬಹುದು, ಅಂಗವಿಕಲರಿಗೆ ದೈಹಿಕವಾಗಿ ಸಹಾಯ ಮಾಡುವುದು ಇರಬಹುದು ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಎಷ್ಟು ಸಹಾಯ ಮಾಡಬೇಕು ಎಂಬುದು ಸಾಪೇಕ್ಷ ಪರಿಕಲ್ಪನೆ ಮತ್ತು ವ್ಯಕ್ತಿನಿಷ್ಠವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಆದ್ದರಿಂದ ಪ್ರತಿಯೊಬ್ಬರೂ ತಮಗೆ ಆ ಪರಿಸ್ಥಿತಿಯಲ್ಲಿದ್ದರೆ ಎಷ್ಟು ಬೇಕಾಗಬಹುದು ಎಂಬುದನ್ನು ಗಮದಲ್ಲಿಟ್ಟುಕೊಂಡು ಎಷ್ಟು ಸಹಾಯ ಮಾಡಬೇಕು ಎಂಬುವ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ದಾನವು ನಮಗೆ ಸಹಜ ಸಂತೋóಷ, ಸಂತೃಪ್ತಿಯನ್ನು ನೀಡುತ್ತದೆ ಮತ್ತು ವಿನಮ್ರ ಮನುಷ್ಯರನ್ನಾಗಿ ಮಾಡುತ್ತದೆ ಎಂದರು. ಇದು ನಾವು ಸಂತೃಪ್ತ ಮತ್ತು ಪರಿಪೂರ್ಣ ವ್ಯಕ್ತಿಗಳಾಗಲು ಅವಶ್ಯವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ (ಭಾರತ) ಬೆಳಗಾವಿಯ ಅಧ್ಯಕ್ಷರಾದ ರಮೇಶ್ ಜಂಗಲ್ ಅವರು ಸ್ವಾಗತಭಾಷಣ ಮಾಡಿದರು. ಹಿರಿಯ ಇಂಜನಿಯರ ವ್ಹಿ.ಬಿ.ಜಾವೂರ, ವಿಟಿಯು ರಜಿಸ್ಟ್ರಾರರಾದ ಪ್ರೋ. ಎ.ಎಸ್.ದೇಶಪಾಂಡೆ, ಪ್ರೋ. ಪ್ರಕಾಶ ಪಟ್ಟನಶೆಟ್ಟಿ, ಡಾ. ಹೆಚ್.ಬಿ. ರಾಜಶೇಖರ, ಡಾ. ಸುರೇಶ ನಾಡಗೌಡಾ, ಪ್ರೋ. ಅರವಿಂದ ಗಲಗಲಿ ಮತ್ತು ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದು. ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ದೇಶದಿಂದಲೂ ಪಾಲ್ಗೊಂಡಿದ್ದರು.
ಬಿ.ಜಿ.ಧರೆನ್ನಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮ ಸುಗಮವಾಗಿ ನಡೆಯಲು ಪ್ರೋ. ಮಂಜುನಾಥ ಶರಣಪ್ಪನವರ ಮತ್ತು ಪ್ರಮೋದ ಅಲ್ಪನ್ನವರ ಅವರು ತಾಂತ್ರಿಕ ಸಹಾಯ ಮಾಡಿದರು.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -