Wednesday, October 20, 2021

ವರ್ಕ್ ಪ್ರಾಮ್ ಹೋಮ್ ಎಂಬ ಮಾಯಾ ಜಾಲದ ಬಗ್ಗೆ ಎಚ್ಚರ

Must Read
- Advertisement -

ದುಡ್ಡು ಯಾರಿಗೆ ಬೇಡ? ಅಲ್ವ ಹುಟ್ಟು ಉಚಿತ ಸಾವು ಖಚಿತ ಅನ್ನೋ ಹಳೆಯ ಉಕ್ತಿಯೊಂದು ಇದೀಗ ತುಂಬ ಹಳೆಯದಾಗಿದೆ ಹುಟ್ಟು ಸಾವು ಯಾವುದು ಉಚೆತವಲ್ಲ. ನಿರುದ್ಯೋಗ ಅನ್ನೋ ಭೂತ ರಾಜ್ಯದೆಲ್ಲೆಡೆ ಹುಚ್ಚೆದ್ದು ಕುಣಿಯುತ್ತಿರುವ ಈ ಸಂದರ್ಭದಲ್ಲಿ ಮನೆಯಿಂದಲೇ ಕೆಲಸ ಮಾಡಿ ಲಕ್ಷ ಲಕ್ಷ ಗಳಿಸಿ ಅನ್ನೋ ಜಾಹೀರಾತುಗಳು ನಮ್ಮೆಲ್ಲರ ಕಣ್ಣಿಗೆ ಬೀಳುತ್ತವೆ. ವರ್ಕ್ ಫ್ರಮ್ ಹೋಮ್ ಈ ಹೆಸರೇ ತುಂಬ ಆಕರ್ಷಕವಾಗಿದೆ ಇದೀಗ ಇಂತಹ ನೂರಾರು ಏಜೆನ್ಸಿಗಳು ಹುಟ್ಟಿಕೊಂಡಿವೆ. ವಿದ್ಯಾವಂತ ನಿರುದ್ಯೋಗಿಗಳು ಲಾಕ್ ಡೌನ್ ನಿಂದಾಗಿ ಕೆಲಸ ಕಳೆದುಕೊಂಡಿರೋ ನಿರುದ್ಯೋಗಿಗಳು ಇಂತಹ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು ಇಂತಹ ಮೋಸದ ಜಾಲಗಳಲ್ಲಿ ಸಿಕ್ಕಿ ಇದ್ದ ಅಲ್ಪ ಸ್ವಲ್ಪ ಹಣವನ್ನೂ ಕಳೆದುಕೊಂಡಿದ್ದ ಅನೇಕ ಉದಾಹರಣೆಗಳು ನಮ್ಮೆದುರಿಗಿವೆ. ಹಾಗಾದರೆ ಏನಿದು ಮೋಸದ ಜಾಲ ಅಂತೀರಾ ಒಂದು ಕ್ಷಣ ಇದನ್ನು ಓದಿ ನೋಡಿ.

ಏನಿದರ ಒಳ ಮರ್ಮ
ದೇಶದೆಲ್ಲೆಡೆ ಹೊತ್ತಿ ಉರಿಯುತ್ತಿರುವ ಕೋವಿಡ್ ಬೆಂಕಿಯಿಂದ ಸತ್ತವರೆಷ್ಟೋ ಆಸ್ಪತ್ರೆಗಳಿಗೆ ಹಣ ಸುರಿದು ಕೈ ಸುಟ್ಟುಕೊಂಡವರೆಷ್ಟೋ ಈ ಎಲ್ಲದರಿಂದ ಕೆಲಸ ಕಳೆದುಕೊಂಡವರೆಷ್ಟೋ ಇಂತವರೇ ಈ ಜಾಲಕ್ಕೆ ಸಿಕ್ಕಿ ಬೀಳುತ್ತಾರೆ. ಜಾಹೀರಾತಿನಲ್ಲಿ ಇರುವ ಮೊಬೈಲ್ ಗೆ ಫೆÇೀನ್ ಮಾಡಿದಾಗ ಅವರು ಹೇಳೋದಿಷ್ಟು ನೋಂದಣಿ ಶುಲ್ಕ ಅಥವಾ ತರಬೇತಿ ಶುಲ್ಕ ಎಂದು ಮೊದಲು ಹಣವನ್ನು ಪಡೆಯುತ್ತಾರೆ. ನಂತರ ಅವರು ನಿಮಗೆ ನೀಡುವ ಕೆಲಸಕ್ಕೆ ಅರ್ಥವಿರುವುದಿಲ್ಲ ಮತ್ತು ಅದನ್ನು ಅವರು ನಿಗದಿ ಪಡಿಸಿದ ಸಮಯ ಮತ್ತು ನಿಯಮಗಳೊಂದಿಗ ಪೂರ್ಣಗೊಳಿಸುವುದು ಅಸಾಧ್ಯವಾದ ಕೆಲಸ ನೀಡುತ್ತಾರೆ. ಈ ಕೆಲಸ ವಾರದೊಳಗೆ ಮುಗಿಸಿಕೊಟ್ಟರೆ 3ಸಾವಿರ ಅಥವಾ 5 ಸಾವಿರ ನೀಡುವುದಾಗಿ ಹೇಳುತ್ತಾರೆ. ಆದರೆ ಆ ಅಸಾಧ್ಯ ಟಾಸ್ಕ ಮುಗಿಸಲಾಗದೆ ತಾವು ನೀಡಿದ್ದ ನೋಂದಣಿ ಶುಲ್ಕ, ತರಬೇತಿ ಶುಲ್ಕ ಕಳೆದುಕೊಂಡು ನಿರಾಶೆಗೊಳ್ಳುತ್ತಿದ್ದಾರೆ.

- Advertisement -

ಇದೊಂದು ಉದಾಹರಣೆ ಸಂಸ್ಥೆಯೊಂದು ನೀಡಿರುವ ಫಾರ್ಮ ಫಿಲ್ಲಿಂಗ ಆಫರ ವಿವರ ಗಮನಿಸಿ ಮೊದಲು ನೋಂದಣಿ ಶುಲ್ಕ ಅಂತ 1500 ರೂ ಚಾರ್ಜ ಮಾಡುವ ಈ ಸಂಸ್ಥೆ, ಆಕಾಂಕ್ಷಿಗಳಿಗೆ ವಾರವೊಂದಕ್ಕೆ 120 ಪುಟಗಳ ಫಾರ್ಮ ತುಂಬಲು ಹೇಳ್ತಾರೆ ತಲಾ ಫಾರ್ಮ್ ವೊಂದಕ್ಕೆ 25 ರೂ. ಅಂದರೆ ಒಟ್ಟು ರೂ.3000 ನೀಡುವುದಾಗಿ ಸಂಸ್ಥೆ ಹೇಳುತ್ತದೆ. ಅಬ್ಬಾ! ದಿನಕ್ಕೆ 20 ಫಾರ್ಮ ತುಂಬಿದರೆ ಸಾಕು ವಾರಕ್ಕೆ 3 ಸಾವಿರ ರೂ. ಗಳಿಸಬಹುದು. ನಿಜಕ್ಕೂ ಇದರ ಒಳಗಿನ ಕುತಂತ್ರ ತಿಳಿಯೋದು ಆ ಟಾಸ್ನನ ಫಾರ್ಮ ಆಕಾಂಕ್ಷಿಗಳ ಕೈಗೆ ಸೇರಿದಾಗಲೇ ವಾಸ್ತವದಲ್ಲಿ ಇದು ಅಸಾದ್ಯವೆನಿಸಿದರೇ ಅಚ್ಚರಿಯಿಲ್ಲ.

- Advertisement -

ಸಂಸ್ಥೆಯ ನಿಯಮಗಳನ್ವಯ ಒಂದು ಪುಟದಲ್ಲಿ 5 ಕ್ಕಿಂತ ಹೆಚ್ಚು ತಪ್ಪುಗಳು ಕಂಡು ಬಂದರೆ ಆ ಫಾರ್ಮ ತಿರಸ್ಕೃತವಾಗುತ್ತದೆ. ಒಟ್ಟು 120 ಫಾರ್ಮಗಳಲ್ಲಿ 10ಕ್ಕಿಂತ ಹೆಚ್ಚು ತಪ್ಪುಗಳಾಗಿದ್ದರೆ ಮತ್ತು ತಿರಸ್ಕೃತ ಪಾರ್ಮಗಳನ್ನು ಸಂಸ್ಥೆ ಪರಿಗಣಿಸಲಾಗುವುದಿಲ್ಲ. ಇಂತಹ ನಿಯಮಗಳೇ ಸಂಸ್ಥೆಯ ಶ್ರೀರಕ್ಷೆ. ಇಷ್ಟಿದ್ದೂ ಬರೆಯುವುದು ಎನು? ಒಂದು ಪುಟ ಅಥವಾ ಫಾರ್ಮವೊಂದರಲ್ಲಿ 1 ರಿಂದ 500 ರಂತೆ ಪ್ರತಿ ಪುಟದಲ್ಲೂ 1000 ವರೆಗೆ ಬರೆಯುವುದು. ಇದನ್ನೇ ತಿರುವು ಮುರುವಾಗಿ ಪುನಃ 1000 ದಿಂದ 1 ರ ವರೆಗೆ ಬರೆಯುವುದು ಹೀಗೆ ಅರ್ಥವಿಲ್ಲದ ಒಂದು ಟಾಸ್ಕ ನೀಡಲಾಗುತ್ತದೆ. ಒಂದು ಪುಟ ಬರೆಯಲು ಸುಮಾರು ಅರ್ಧ ಗಂಟೆ ಸಮಯ ತೆಗೆದುಕೊಂಡರೂ ದಿನಕ್ಕೆ 20 ಪುಟ ಮುಗಿಸಲು ಅಂದಾಜು 10 ಗಂಟೆ ಸಮಯವಾದರೂ ಬೇಕು. ಹೀಗೆ ಆಕಾಂಕ್ಷಿಗಳು 5 ಕ್ಕಿಂತ ಹೆಚ್ಚು ತಪ್ಪುಗಳನ್ನು ಮಾಡದೇ ತಿದ್ದುಪಡಿ ಮಾಡದೇ ಸತತ 7 ದಿನಗಳ ಕಾಲ ಬರೆಯಬೇಕು.

ಇದರಲ್ಲಿ ಎಷ್ಟೋ ಜನ ಒಂದೆರಡು ದಿನ ಬರೆದು ಮುಂದೆ ಬರೆಯಲಾಗದೇ ಬಿಟ್ಟವರೆ ಹೆಚ್ಚು, ಎಲ್ಲೋ ಸಾವಿರಕ್ಕೆ ಒಂದಿಬ್ಬರು ತಮ್ಮ ಅಣ್ನ ತಮ್ಮಂದಿರ ಅಥವಾ ಗೆಳೆಯರ ಸಹಾಯ ಪಡೆದು ಬರೆದರೂ ಅಲ್ಲಲ್ಲಿ ಆಗಿರುವ ಅಲ್ಪ ತಪ್ಪುಗಳಿಂದ ಸಂಸ್ಥೆಯ ನಿಯಮಗಳನ್ವಯ ಫಾರ್ಮ್ ತಿರಸ್ಕೃತ ಗೊಳ್ಳುತ್ತವೆ.

ಎರಡನೇ ಉದಾಹರಣೆ ನೋಡಿ, ಕೆಲವೊಂದು ಸಂಸ್ಥೆಗಳು ಮನೆಯಲ್ಲಿಯೇ ಕುಳಿತು ದುಡಿದು ದಿನಕ್ಕೆ ಸಾವಿರ-ಎರಡು ಸಾವಿರ ಗಳಿಸಬಹುದು ಅನ್ನೋ ಆಮಿಷದ ಜಾಹೀರಾತುಗಳ ಮೂಲಕ, 500 ರಿಂದ ಸಾವಿರ ರೂಪಾಯಿಗಳನ್ನು ಕೇವಲ ನೋಂದಣಿ ಶುಲ್ಕವಾಗಿ ಪಡೆದು ಆಕಾಂಕ್ಷಿಗಳಿಗೆ ಕೇವಲ 20 ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳ ತಯಾರಿಕೆಯ ಕೌಶಲ್ಯ ಸಂಬಂಧಿ (ಮನೆಯಲ್ಲಿ ಅಗರಬತ್ತಿ, ಮೇಣದಬತ್ತಿ, ಸಾಬೂನು, ಹೆಣಿಕೆ ಸಂಬಂಧಿತ ಮಾಹಿತಿ) ಪುಸ್ತಕಗಳನ್ನು ನೀಡಿ ಕೈ ತೊಳೆದುಕೊಳ್ಳುತ್ತವೆ. ಹೀಗೆ ಕೇವಲ 20 ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳ ತಯಾರಿಕೆಯ ಕೌಶಲ್ಯ ಸಂಬಂಧಿ ಪುಸ್ತಕಗಳನ್ನು 500 ರಿಂದ ಸಾವಿರ ರೂಪಾಯಿಗೆ ಮಾರುವ ಅವರನ್ನು ಮಾರ್ಕೇಟಿಂಗ್ ಟೆಕ್ನಿಕ್ ಗೆ ನಿಜಕ್ಕೂ ಮೆಚ್ಚಲೇ ಬೇಕು ಆದರೆ ಒಂದರ್ಥದಲ್ಲಿ ಮುಗ್ಧ ವಿದ್ಯಾವಂತ ನಿರುದ್ಯೋಗಿಗಳನ್ನು ಸುಲಿಗೆ ಮಾಡುವ ಇಂತಹ ಖದೀಮರಿಗೆ ಏನೆನ್ನಬೇಕು ನೀವೇ ಯೋಚಿಸಿ.

ಮೂರನೇ ಉದಾಹರಣೆ ನೋಡಿ, ಕೆಲ ಸಂಸ್ಥೆಗಳು ಕಂಪ್ಯೂಟರ ಟೈಪಿಂಗ ಕೆಲಸ ಎಂದು ಹೇಳಿ ಮೇಲೆ ಹೇಳಿದಂತೆಯೇ ಕೆಲವು ಕಠಿಣ ನಿಯಮಗಳನ್ನು ಹಾಕಿ, 130 ರಿಂದ 150 ಪುಟಗಳನ್ನು ವಾರದಲ್ಲಿ ಮುಗಿಸಿಕೊಡುವ ಕೆಲಸ ನೀಡಿ ಸಾವಿರಾರು ರೂಪಾಯಿ ನೋಂದಣಿ ಶುಲ್ಕವಾಗಿ ಪಡೆಯುವ ಹಗಲು ದರೋಡೆಗೆ ಮುಂದಾಗಿವೆ.

ಇಂತಹ ಅನೇಕ ಮೋಸದ ಜಾಲಗಳು ಇಡೀ ರಾಜ್ಯಾದ್ಯಂತ ಮುಗ್ದ ವಿದ್ಯಾವಂತ ನಿರುದ್ಯೋಗಿಗಳನ್ನು ಬಲೆಗೆ ಕೆಡವಿ ಅಕ್ರಮವಾಗಿ ನಿರುದ್ಯೋಗಿಗಳನ್ನು ಸುಲಿಗೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.

ವರ್ಕ ಪ್ರಾಮ್ ಹೋಮ್ ಹೆಸರಿನಲ್ಲಿ ಸುಲಿಗೆ ಮಾಡುವ ಅಧೀಕೃತ ಅನೇಕ ಸಂಸ್ಥೆಗಳು ರಾಜಾರೋಷವಾಗಿ ಸುಲಿಗೆಯಲ್ಲಿ ತೊಡಗಿವೆ. ಆದರೆ ಇಂತಹ ಸುಲಿಗೆ ಮಾಡುವ ಸಂಸ್ಥೆಗಳ ಅಬ್ಬರಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಬೇಕಿದೆ. ಇದಕ್ಕೆ ಸಂಬಂಧಿತ ಇಲಾಖೆ ಅಧಿಕಾರಿಗಳು ಕೂಡ ಕೂಡಲೇ ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಮೋಸದ ಜಾಲಗಳನ್ನು ಬೇಧಿಸಿ ಸುಲಿಗೆ ಮಾಡುವ ದುಷ್ಟರಿಗೆ ಬುದ್ದಿ ಕಲಿಸಬೇಕಿದೆ.

ಸರಕಾರ ಕ್ರಮ ಕೈಗೊಳ್ಳುತ್ತದೋ ಬಿಡುತ್ತದೋ, ಸಾರ್ವಜನಿಕರೇ ನೀವಾದರೂ ಎಚ್ಚೆತ್ತುಕೊಂಡು ಇಂತಹ ಹಗಲು ದರೋಡೆ ಮಾಡುವ ಸಂಸ್ಥೆಗಳ ಬಗ್ಗೆ ಎಚ್ಚರದಿಂದಿದ್ದು ಅವರು ನೀಡುವ ಕೆಲಸಗಳ ಬಗ್ಗೆ ಕುಲಂಕುಷವಾಗಿ ಪರಿಶೀಲಿಸಿ ಮುಂದಿನ ಹೆಜ್ಜೆ ಇಡಬೇಕಿದೆ.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -