Saturday, October 23, 2021

ಶಿಕ್ಷಣ ಇಲಾಖೆಯ ನಿವೃತ್ತ ನಿದೇ೯ಶಕ ಎಸ್. ಜಯಕುಮಾರ ಅಗಲಿಕೆ

Must Read
- Advertisement -

ಕಲ್ಲು-ಮುಳ್ಳು, ಏರು-ಇಳುವಿನ ದಾರಿಯಲ್ಲಿ ಪರಿಶ್ರಮ ವನ್ನೇ ನಂಬಿ ‘ವಸುದೈವ ಕುಟುಂಬಕಂ’ ತತ್ವ ವನ್ನು ಹಿಡಿದು ಹೊಸ ಹೊಸ ಎತ್ತರಗಳನ್ನು ಏರುತ್ತಾ ಎಲ್ಲರೋಳಗೋಂದಾಗಿ ಬೆಳೆದು ನಿಂತವರು ಎಸ್ ಜಯಕುಮಾರ ರವರು.
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಎಲ್ಲಾ ರೀತಿಯ ಹುದ್ದೆ ಗಳಲ್ಲಿ, ಹತ್ತು ಹಲವು ಜಿಲ್ಲೆಗಳಲ್ಲಿ ಅಪರೂಪದ ಸೇವೆ ಸಲ್ಲಿಸಿ ಕೊನೆಗೆ ನಿರ್ದೇಶಕ ರಾಗಿ ವಯೋಮಾನ ರೀತ್ಯಾ ನಿವೃತ್ತರಾದವರು ಎಸ್.ಜಯಕುಮಾರ ರವರು,ತಮ್ಮ ಕೆಲಸ ಕಾರ್ಯಗಳಿಂದ ಅವರು ಶಿಕ್ಷಕರಾದಿಯಾಗಿ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರ ರಾದವರು, ಸಮಸ್ಯೆ ಗಳಿಗೆ ಸ್ಪಂದಿಸುವ ಗುಣ ಹಾಗೂ ಇತರರಲ್ಲಿಯ ಪ್ರತಿಭೆ ಗುರುತಿಸಿ ಗೌರವಿಸುವ ರೀತಿ ಅವರನ್ನು ಇತರರಿಗಿಂತ ಭಿನ್ನವಾಗಿಸಿತ್ತು, ಇಂದು ಅವರು ನೆನಪು ಮಾತ್ರ.

- Advertisement -

ಸದ್ಯದ ವಿಷಮಯ ಪರಿಸ್ಥಿತಿಯಲ್ಲಿ ಕೊರೋನಾದಿಂದಾಗಿ ಅವರು ಸೇವೆ ಯಿಂದ ನಿವೃತ್ತಿ ಯಾದ ಮೂರನೇ ವರುಷದಲ್ಲಿ ಬದುಕಿಗೆ ವಿದಾಯ ಹೇಳಿರುವರು ,ಅವರಿಗೆ ಅರವತ್ತ್ಮೂರು ವರ್ಷ ವಯಸ್ಸಾಗಿತ್ತು. ಸದೃಢ ಆರೋಗ್ಯವಂತ ರಾಗಿದ್ದ ಅವರಿಗೆ ಸಾಯುವ ವಯಸ್ಸಲ್ಲ, ಆದರೂ ವಿಧಿಯಾಟದ ಮುಂದೆ ಯಾರ ಆಟವೂ ನಡೆಯಲಾರದು.
ಶಿಕ್ಷಣ ಇಲಾಖೆಯ ಬಗ್ಗೆ ಅಪಾರ ನಿಷ್ಠೆ ಗೌರವ ಹೊಂದಿದ್ದ ಅವರು ಸಿಕ್ಕ ಹುದ್ದೆಗೆ ನ್ಯಾಯ ಒದಗಿಸುವ ಮೂಲಕ ತಾನು ಇತರರಿಗಿಂತ ಭಿನ್ನ ಎಂದು ತೋರಿಸಿ ಕೊಟ್ಟಿದ್ದರು. ತಾವು ನಿವೃತ್ತಿ ಯಾಗುವ ಸಮಯದಲ್ಲಿ ರಾಜ್ಯದ ಎಲ್ಲಾ ಅಭಿಮಾನಿಗಳು ಆತ್ಮೀಯವಾಗಿಸಮಪಿ೯ಸಿದ ” ಜಯಗಾಥೇ” ಎಂಬ ಅಭಿನಂದನಾ ಗ್ರಂಥ ದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ ಅವರ ಯಶಸ್ಸಿಗೆ ಕಾರಣ ಹೇಳುತ್ತದೆ.

- Advertisement -

ಅವರ ಅನಿಸಿಕೆ ಹೀಗಿದೆ “” ನನಗೆ ಅತ್ಯಂತ ಅಪ್ಯಾಯಮಾನವಾದ ಸಾವ೯ಜನಿಕ ಶಿಕ್ಷಣ ಇಲಾಖೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಲು ಸಿಕ್ಕ ಅವಕಾಶ ನನ್ನ ಪುಣ್ಯ ಎಂದೇ ಭಾವಿಸಿದ್ದೇನೇ, ಈ ಸುಧೀರ್ಘ ಸೇವೆಯಲ್ಲಿ ಮಕ್ಕಳು. ಅಧಿಕಾರಿಗಳು. ಪೋಷಕರು. ಸಾವ೯ಜನಿಕರು. ಹೀಗೆ ಸಾವಿರಾರು ಜನರ ಸಂಪರ್ಕ ಸಾಧ್ಯವಾಯಿತು ಹೀಗಾಗಿ ಸೇವೆಯಲ್ಲಿ ಇತರರು ಗುರುತಿಸಿ ಗೌರವಿಸುವ ಹಾಗೆ ಕೆಲಸ ಮಾಡಲು ಸಹಾಯಕ ವಾಯಿತು.

ಜಯಕುಮಾರ ರವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಸುಗ್ಗನಪಾಳ್ಯ ಗ್ರಾಮದ ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸಾವ೯ಜನಿಕ ಶಿಕ್ಷಣ ಇಲಾಖೆಯ ನಿದೇ೯ಶಕ ಹುದ್ದೆಗೆ ಏರಿದ ಪ್ರತಿಭಾವಂತರು. ಇವರ ತಂದೆಯವರು ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು, ತಂದೆಯ ಆದಶ೯, ಗ್ರಾಮೀಣ ಪರಿಸರ ಇವರ ವ್ಯಕ್ತಿತ್ವ ರೂಪಿಸುವಲ್ಲಿ ಸಹಕಾರಿ ಯಾಗಿರಬಹುದು.

ನೇರ ನುಡಿ ದಿಟ್ಟ ನಿರ್ಧಾರ.ಶಿಸ್ತು ಸಂಯಮ.ಪಾರದರ್ಶಕತೆ ಆಡಳಿತ ಅವರನ್ನು ಶೈಕ್ಷಣಿಕ ರಂಗದ ಆಚೆಗೂ ಅವರನ್ನು ಜನಪ್ರಿಯರನ್ನಾಗಿರಿಸಿರಬಹುದು
ಬಹುದೊಡ್ಡ ಜಿಲ್ಲೆ ರಾಜ್ಯದಲ್ಲಿಯೇ ಶಿಕ್ಷಣ ಇಲಾಖೆಯ ಕಾಯ೯ ಚಟುವಟಿಕೆ ಗಳಿಗೆ ಹೆಸರಾಗಿರುವ ಬೆಳಗಾವಿ ಜಿಲ್ಲೆ ..ಕಾರವಾರ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಉಪನಿರ್ದೇಶಕರಾಗಿಯೂ ಕಾಯ೯ ಮಾಡಿರುವರು. ಅತ್ಯಂತ ಜನಪ್ರಿಯ, ಜನಸ್ನೇಹಿ ಅಧಿಕಾರಿ ಎನಿಸಿದ್ದರು.

ಪ್ರಾಥಮಿಕ ಶಿಕ್ಷಣ ನಿರ್ದೇಶಕರಾಗಿ, ಆಂಗ್ಲ ಭಾಷೆ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾಗಿ, ಧಾರವಾಡದ ಆಯುಕ್ತರ ಕಚೇರಿ ಹೆಚ್ಚುವರಿ ಆಯುಕ್ತರಾಗಿ, ವೊಕೇಶನಲ್ ಎಜುಕೇಶನ್ ನಿರ್ದೇಶಕರಾಗಿ, ಪಿಯು ನಿರ್ದೇಶಕರಾಗಿ, ಸಂಶೋಧನೆ ಮತ್ತು ತರಬೇತಿ ನಿರ್ದೇಶಕರಾಗಿ, ಅಕ್ಷರ ದಾಸೋಹದ ನಿರ್ದೇಶಕರಾಗಿ, ಕೇಂದ್ರ ಪ್ರವೇಶಾತಿ ಸೆಲ್ ಉಪನಿರ್ದೇಶಕರಾಗಿ, ಮಂಗಳೂರು, ಗುಬ್ಬಿ, ತುಮಕೂರು, ಶೃಂಗೇರಿ, ಚನ್ನರಾಯ ಪಟ್ಟಣಗಳಲ್ಲಿ ವಿವಿಧ ಹುದ್ದೆಗಳಲ್ಲಿ ಅವರು ಕಾಯ೯ ನಿರ್ವಹಿಸಿ ಜನಮನ್ನಣೆ ಗಳಿಸಿರುವರು.

ತಮ್ಮ ಶೈಕ್ಷಣಿಕ ನೆನಪು ಗಳಲ್ಲಿ ಬೆಳಗಾವಿ ಜಿಲ್ಲೆಯ ಡಿಡಿಪಿಐ ರಾಗಿ ಸೇವೆಯನ್ನು ಸಲ್ಲಿಸುವ ಸಮಯದಲ್ಲಿಯ ಕೆಲ ಘಟನೆ ಸ್ಮರಣೆ ಮಾಡಿರುವರು ರಾತ್ರಿ ವೇಳೆ ಬೈಲಹೊಂಗಲ ದಲ್ಲಿ ಗರಡಿ ಮನೆ (ಕುಸ್ತಿ ಪಟು ಗಳನ್ನು ರೂಪಿಸುವ ಕೇಂದ್ರ) ನೋಡಿ ಅವುಗಳ ಕಾಯ೯ ವೈಖರಿ ಗಮನಿಸಿ ತಿಳಿದುಕೊಂಡ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವರು.

ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಶಾಲೆಯ ವಿಜ್ಞಾನ ಶಿಕ್ಷಕರು ಆಗ್ರಹಿಸಿ ತಮ್ಮ ಶಾಲೆಯ ಕಾಯ೯ ಚಟುವಟಿಕೆಗಳನ್ನು ಗಮನಿಸಲು ಕರೆದುಕೊಂಡು ಹೋದ ಪ್ರಸಂಗ ವಿವರಿಸಿ ಅಲ್ಲಿಯ ಕಾಯ೯ ಗಳನ್ನು ಮಕ್ಕಳ ಚಟುವಟಿಕೆಗಳನ್ನು ಹಾಗೂ ಶಾಲಾ ಪರಿಸರ ಗಮನಿಸಿ ಈ ಶಾಲೆಯ ಶಿಕ್ಷಕರು ಸಾಧಕರು ಅವರು ಇತರರಿಗೆ ಮಾದರಿ ಎಂದಿರುವರು. ಅದೇ ತೆರನಾಗಿ ಬೆಳಗಾವಿ ತಾಲೂಕಿನ ಒಂದು ಶಾಲೆಯ (ಶಾಲೆಯ ಹೆಸರು ಉಲ್ಲೇಖ ಮಾಡಿಲ್ಲ) ಎಸ್ ಡಿ ಎಮ್ ಸಿ ಸಭೆಯು ಅಚ್ಚುಕಟ್ಟಾಗಿ ನಡೆಸಿದ ಕುರಿತು ಮೆಚ್ಚುಗೆ ಸೂಚಿಸಿರುವರು. ಆ ಶಾಲೆಯ ಶಾಲಾ ಕೊಠಡಿಯ ಒಳಗಡೆ ಗೋಡೆಗೆ ಕಟ್ಟೇ ಕಟ್ಟಿದ್ದು ನೋಡಿ ಕುಚಿ೯ಗಳಲ್ಲದೇ ಸಭೆಯು ಜರುಗಲಿಕ್ಕೇ ಸಹಾಯಕ ವಾಗಿರುವ ಅಂಶದ ಕುರಿತು ಮೆಚ್ಚುಗೆ ಸೂಚಿಸಿರುವರು.

ಅವರಲ್ಲಿ ಇತರರ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡುವ ದೊಡ್ಡ ಗುಣವಿತ್ತು.

ಬೆಳಗಾವಿ ನಗರದ ಭರತೇಶ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿದ್ದ, ಸದ್ಯ ನಿವೃತ್ತಿ ಜೀವನ ಸಾಗಿಸುತ್ತಿರುವ ಹಿರಿಯ ಕವಿ ಲೇಖಕ ಶ್ರೀ ಎ. ಎ. ಸನದಿ ಯವರಿಗೆ ಮಾಗ೯ದಶ೯ನ ಮಾಡಿ ಅಜಿ೯ ಸಲ್ಲಿಸುವಂತೆ ಹೇಳಿ ಅವರಿಗೆ ರಾಜ್ಯ ಹಾಗೂ ರಾಷ್ಟ್ರೀಯ ಆದಶ೯ ಶಿಕ್ಷಕ ಪ್ರಶಸ್ತಿ ಪಡೆಯಲು ಸಹಕಾರ ನೀಡಿರುವರು.ಇಂದು ಶಿಂದೋಳ್ಳಿ ಗ್ರಾಮದ ರಹವಾಸಿಯಾಗಿರುವ ನಮ್ಮ ಆತ್ಮೀಯರಾಗಿರುವ ಶ್ರೀ ಎ. ಎ. ಸನದಿ ಯವರು ಪ್ರಾಮಾಣಿಕವಾಗಿ ಈ ವಿಷಯವನ್ನು ಒಪ್ಪುವರು, ಇಂದು ರಾಜ್ಯ ಹಾಗೂ ರಾಷ್ಟ್ರೀಯ ಆದಶ೯ ಶಿಕ್ಷಕ ಪ್ರಶಸ್ತಿ ಗೆ ಅರ್ಜಿ ಸಲ್ಲಿಸಲು ಹಲವು ಪ್ರಭಾವಿಗಳ ಬೆನ್ನು ಬಿದ್ದು ಪಡೆಯುವ ಸ್ಥಿತಿ ಇದೇ. ಆದರೆ ತಾವಾಗಿಯೇ ಗುರುತಿಸಿ ಗೌರವಿಸುವ ಜಯಕುಮಾರ ರವರ ಕಾಯ೯ ಇಂದಿನ ಶಿಕ್ಷಣ ಇಲಾಖೆಯಅಧಿಕಾರಿಗಳಿಗೆ ಬಂದರೆ ಸಂತೋಷ. ಅದುವೇ ಅವರಿಗೆ ಸಲ್ಲಬೇಕಾದ ಶೃದ್ದಾಂಜಲಿ.

ಸೇವಾವಧಿಯಲ್ಲಿ ಹಲವು ಉಪಯುಕ್ತ ಲೇಖನಗಳನ್ನು ಶಿಕ್ಷಣ ಇಲಾಖೆ ಕುರಿತು ಬರೆದು ಗಮನ ಸೆಳೆದಿದೆಯಲ್ಲದೆ. ಶಿಕ್ಷಣ ಇಲಾಖೆಯ ಸುಧಾರಣೆಗೆ ಒತ್ತು ನೀಡಿ ಅದರಲ್ಲಿ ಯಶಸ್ಸು ಗಳಿಸಿದರು . ಇಂದು ಅವರು ನೆನಪು ಮಾತ್ರ.

ಅವರು ಸಹಧಮಿ೯ನಿ ಶಾರದಮ್ಮ ನವರು, ಮಗ ದಶ೯ನ – ಸೊಸೆ ವಿನುತಾ ಮಗಳು ಉಷಾ -ಅಳಿಯ ಜಗದೀಶ್ ಮೊಮ್ಮಕ್ಕಳೂ ಸೇರಿದಂತೆ ಅಪಾರ ಬಂಧು ಬಳಗ ವನ್ನು ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದರು. ಅವರೋಬ್ಬರೂ ಸಾವ೯ಜನಿಕ ಶಿಕ್ಷಣ ಇಲಾಖೆಗೆ ದೊಡ್ಡ ಆಸ್ತಿಯಾಗಿದ್ದರು.ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲೆಂದು ಪ್ರಾಥಿ೯ಸುವೇನು.

  • ಬಸವರಾಜ ಫಕೀರಪ್ಪ ಸುಣಗಾರ

ಮುಖ್ಯೋಪಾಧ್ಯಾಯರು ಬೆಳಗಾವಿ

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -