Tuesday, October 19, 2021

ಬೆಡ್ ಬ್ಲಾಕಿಂಗ್ ದಂಧೆ : ಇಬ್ಬರು ಡಾಕ್ಟರ್ ಸೇರಿ 8 ಜನರ ಬಂಧನ

Must Read
- Advertisement -

ಬೆಂಗಳೂರು ಮೇ., 05- ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಬ್ಬರಿಸುತ್ತಿದೆ. ಜನರು ಆಕ್ಸಿಜನ್ ಮತ್ತು ಆಸ್ಪತ್ರೆಗಳಲ್ಲಿ ಬೆಡ್‍ಗಾಗಿ ಪರದಾಡುತ್ತಿದ್ದಾರೆ. ಈ ಮದ್ಯ ನಿನ್ನೆ ಸಂಸದ ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ ದಂಧೆಯನ್ನು ಬಯಲಿಗೆ ಎಳೆದಿದ್ದರು. ಈ ಕುರಿತು ಸಿಸಿಬಿ ತನಿಖೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದರು. ನಿನ್ನೆ ರಾತ್ರಿ ಸಿಸಿಬಿ ಪೊಲೀಸರು ಇಬ್ಬರು ಬಿಬಿಎಂಪಿ ಡಾಕ್ಟರಗಳು, ಡಾಟಾ ಎಂಟ್ರಿ ಆಪರೇಟರ್‍ಗಳು ಮತ್ತು ಸಹಾಯಕ ಸಿಬ್ಬಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

ಬೆಡ್ ಬ್ಲಾಕಿಂಗ್ ದಂಧೆಗೆ ಸಂಬಂಧಿಸಿದಂತೆ ಜಯನಗರದ ಪೊಲೀಸ್ ಠಾಣೆಯಲ್ಲಿ ಎರಡು ಬೇರೆ ಬೇರೆ ಪ್ರಕರಣಗಳು ದಾಖಲಾಗಿದ್ದವು. ನಿನ್ನೆ ರಾತ್ರಿ ಜಯನಗರದ ಪೊಲೀಸರು ನೇತ್ರಾವತಿ ಮತ್ತು ರೋಹಿತ್ ಎನ್ನುವವರನ್ನು ಬಂಧಿಸಿದ್ದಾರೆ. ಈ ಇಬ್ಬರು ಮೂರು ಬೆಡ್‍ಗಳನ್ನು ಕೊಡಿಸುವುದಾಗಿ ಒಟ್ಟು 1.7 ಲಕ್ಷ ಹಣ ವಸೂಲಿ ಮಾಡಿದ್ದರು ಎನ್ನಲಾಗಿದೆ. ಎರಡು ಬೆಡ್‍ಗೆ ತಲಾ 40 ಸಾವಿರ ರೂಪಾಯಿ ಮತ್ತು ಇನ್ನೂಂದು ಬೆಡ್‍ಗೆ 27 ಸಾವಿರ ರೂಪಾಯಿ ವಸೂಲಿ ಮಾಡಿದ್ದರು ಎನ್ನಲಾಗಿದೆ. ಈ ಪ್ರಕರಣದ ಬಗ್ಗೆ ಜಯನಗರದ ಪೊಲೀಸ್‍ರಿಂದ ತನಿಖೆ ಮುಂದುವರೆದಿದೆ.

- Advertisement -

ಇಂತಹ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿಯೂ ಹಣ ವಸೂಲಿಗೆ ನಿಂತಿರುವ ಅಧಿಕಾರಿಗಳ ವಿರುದ್ದ ತೀವ್ರ ಜನಾಕ್ರೋಶ ವ್ಯಕ್ತವಾಗಿದೆ.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -