Monday, October 25, 2021

ಮನೆ ಮಠ ಬಿಟ್ಟು ಹಗಲಿರುಳು ಶ್ರಮಿಸುತ್ತಿರುವ ಅಥಣಿ ಹೋಮ್ ಗಾಡ್ರ್ಸ್ ಸಿಬ್ಬಂದಿಗಳು

Must Read
- Advertisement -

ಅಥಣಿ, ಮೇ., 04- 14 ದಿನಗಳ ಲಾಕ್‍ಡೌನ್ ಸಮಯದಲ್ಲಿ ಮನೆ ಮಠ ಬಿಟ್ಟು ಹಗಲಿರುಳು ಶ್ರಮಿಸುತ್ತಿರುವ ಅಥಣಿ ಹೋಮ್ ಗಾಡ್ರ್ಸ್ ಸಿಬ್ಬಂದಿಗಳು.
ರಾತ್ರಿ ಹಗಲು ಎನ್ನದೆ ಕೊರೊನಾ ದಿಂದಾಗಿ ಜಾರಿಗೆ ತಂದ 14 ದಿನಗಳ ಲಾಕ್ ಡೌನ್ ನಲ್ಲಿ ಸಾರ್ವಜನಿಕರ ಓಡಾಟಕ್ಕೆ ಕಡಿವಾಣ ಹಾಕಲು ಹೋಮ್ ಗಾಡ್ರ್ಸ್ ತಮ್ಮ ಕುಟುಂಬವನ್ನು ಬಿಟ್ಟು ಪೋಲೀಸ್ ರ್ ಸಹಾಯಕ್ಕೆ ನಿಂತು ಕಾರ್ಯನಿರತರಾಗಿದ್ದು, ಬಂದು ಹೋಗುವ ಜನರ ಚೇಕ್ ಮಾಡಿ ಜನರಿಗೆ ಯಾವುದೇ ರೀತಿ ಮನೆಯಿಂದ ಹೋರ ಬರದಂತೆ ಮನವಿಯನ್ನು ಮಾಡಿಕೊಂಡು ಹಾಗೆ ಪೋಲೀಸ್ ಅಧಿಕಾರಿಗಳ ಗಮನಕ್ಕೆ ತಂದು ಕ್ರಮಕ್ಕೆ ಮುಂದಾಗುತ್ತಾರೆ.

ಅಥಣಿ ಪೋಲೀಸ್ ಠಾಣೆ ಸಿಬ್ಬಂದಿಯ ಕೋರತೆಯನ್ನು ಅನುಭವಿಸುತ್ತಿದ್ದು, ಸಿಬ್ಬಂದಿಯ ಕೋರತೆಯನ್ನು ನಿಗಿಸಲು ಹೋಮ್ ಗಾಡ್ಸ್ರ್ಳ ನೆರವನ್ನು ಪಡೆದು ಅವರನ್ನು ಆಯಾ ನಿಗದಿತ ಸ್ಥಳಗಳಲ್ಲಿ ನೆಮಸಿ ಅವರಿಂದ ಸಹಾಯವನ್ನು ಪೋಲೀಸ್ ಇಲಾಖೆ ಪಡೆಯುತ್ತಿದೆ. ಇದರಿಂದ ಅಥಣಿಯಲ್ಲಿ ಸ್ವಲ್ಪ ಮಟ್ಟಿಗೆ ಜನರ ಹದ್ದು ಬಸ್ತಗೆ ಬಂದಿದೆ ಎಂದು ಹೇಳ ಬಹುದು.

- Advertisement -

ಲಾಕ್ ಡೌನ್ ಇದ್ದರು ಸಹ ವಾಹನಗಳ ಓಡಾಟ ಕಡೆಮೇ ಎನು ಆದಂತೆ ಕಾನುತ್ತಾ ಇಲ್ಲಾ ಆದರೆ ಹೋಮ್ ಗಾಡ್ಸ್ರ್ಗಳು ನಿಯೋಜನೆ ಆದಾಗಿನಿಂದ ಜನರ ಓಡಾಟ ಕಡಿಮೆ ಆಗಿದೆ ಎನ್ನಬಹುದು. ಅಥಣಿ ಪೋಲೀಸ್ ಠಾಣೆ ಅಧಿಕಾರಿಗಳು ತಾಲೂಕಾಧ್ಯಾಂತ ಸಾಂಕ್ರಾಮಿಕ ಕರೋನಾ ಮಹಾಮಾರಿ ತಾಂಡವಾಡುತ್ತಿದ್ದರು ಜನರ ಓಡಾಟ ಕಡಿಮೆ ಆಗದೆ ಇರುವದನ್ನು ಅರೆತು ಇವರನ್ನು ತಾತ್ಕಾಲಿಕವಾಗಿ ನೆಮಕ ಮಾಡಿದರು ಸಹ ಇವರಿಗೆ ಸಿಗಬೇಕಾದ ಗೌರವ ಧನ ಸರಿಯಾಗಿ ಸಿಗುತ್ತಿಲ್ಲ ಎಂಬುದು ಕೇಳಿ ಬರುತ್ತಿದೆ ಎನ್ನಲಾಗಿದೆ.

- Advertisement -

ಮೂದಲು ನಮ್ಮನ್ನು ನಿರಂತರವಾಗಿ ಸುರಕ್ಷಿತ ದೃಷ್ಟಿಯಿಂದ ಪೋಲೀಸ್ ಇಲಾಖೆ ತೆಗೆದುಕೊಂಡು ನಮ್ಮಿಂದ ಕೆಲಸವನ್ನು ಪಡೆದುಕೋಳ್ಳುತ್ತಿದ್ದರು ಆದರೆ ಇತ್ತಿಚಿಗೆ ನಮ್ಮ ಸೇವೆಯನ್ನು ಕಡಿತ ಗೋಳಿಸಲಾಗಿತ್ತು ಆದರೆ ಈಗ ಮರಳಿ ತೆಗೆದುಕೊಂಡಿದ್ದಾರೆ. ಲಾಕ್ ಡೌನ್ ವೇಳೆ ನಿಯುಕ್ತಿಗಳಾದ ಹೋಮ್ ಗಾಡ್ರ್ಸಗಳು ತಮಗೆ ನೀಡುವಂತಾ ಗೌರವ ಧನವನ್ನು ಹೆಚ್ಚಿಸುವಂತೆ ಮೇಲಾಧಿಕಾರಿಗಳಲ್ಲಿ ವಿನಂತಿಸಿದ್ದಾರೆ. ಈ ವೇಳೆ ತಹಶಿಲ್ದಾರ ದೊಡ್ಡಪ್ಪ ಕೊಮ್ಮಾರ, ಡಿವೈಎಸ್ಪಿ ಎಸ್.ವಿ. ಗಿರೀಶ್, ಸಿಪಿಐ ಶಂಕರಗೌಡ ಬಸನಗೌಡರ, ಉಪ ತಹಶಿಲ್ದಾರ ಮಹಾದೇವ ಬಿರಾದಾರ, ಸಮಾಜ ಕಲ್ಯಾಣ ಅಧಿಕಾರಿ ಪ್ರವೀಣ ಪಾಟೀಲ, ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರ, ಪಿಎಸ್‍ಐ ಕುಮಾರ ಹಾಡಕಾರ, ಬಸವರಾಜ ಕಾಂಬಳೆ, ಇನ್ನೂ ಹಲವಾರು ಉಪಸ್ಥಿತರಿದ್ದರು.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -