Thursday, October 21, 2021

ಕೊರೊನಾ ನಿರ್ವಹಣೆ : ಹಿರಿಯ ಸಚಿವರಿಗೆ ಉಸ್ತುವಾರಿ – ಸುಧಾಕರಗೆ ಕೊಕ್

Must Read
- Advertisement -

ಬೆಂಗಳೂರು ಮೇ., 04- ರಾಜ್ಯದಲ್ಲಿಯ ಕೊರೊನಾ ಪರಿಸ್ಥಿತಿ ಮತ್ತು ಆಕ್ಸಿಜನ್ ಸರಬರಾಜು ಕುರಿತಂತೆ ಸಚಿವ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೊರೊನಾ ನಿರ್ವಹಣೆಗೆ ಸಚಿವರಿಗೆ ಬೇರೆ ಬೇರೆ ಉಸ್ತುವಾರಿಗಳನ್ನು ನೀಡಿ, ನಾಳೆಯಿಂದಲೇ ಕಾರ್ಯಪ್ರವೃತ್ತರಾಗಲು ಸೂಚಿಸಿದ್ದಾರೆ. ಮತ್ತು ಪತ್ರಕರ್ತರನ್ನು ಕೊರೊನಾ ವಾರಿಯರ್ಸ ಎಂದು ಮುಖ್ಯಂತ್ರಿಗಳು ಘೋಷಿಸಿದ್ದಾರೆ.

ಕೊರೊನಾ ಅಬ್ಬರ ಹೆಚ್ಚಾಗುತ್ತಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಉಸ್ತುವಾರಿ ಸಚಿವರು ತಮ್ಮ ತಮ್ಮ ಜಿಲ್ಲೆಯಲ್ಲಿಯೇ ಇರಬೇಕೆಂದು ಖಡಕ್ ಸೂಚನೆ ನೀಡಿದ್ದಾರೆ. ಕೊರೊನಾ ವಾರ್ ರೂಮ್ ಉಸ್ತುವಾರಿಗಳನ್ನು ಮುಖ್ಯಮಂತ್ರಿಗಳು ನೇಮಕ ಮಾಡಿದ್ದಾರೆ. ಜಗದೀಶ ಶೆಟ್ಟರ ಅವರಿಗೆ ಆಕ್ಸಿಜನ್ ಹಂಚಿಕೆ ಹೊಣೆಗಾರಿಕೆ ನೀಡಲಾಗಿದೆ. ಇನ್ನು ಮಾನವ ಸಂಪನ್ಮೂಲ, ರೆಮಿಡಿಸಿವಿರ್ ಸೇರಿದಂತೆ ವಿವಿಧ ಔಷಧಗಳ ಸರಬರಾಜು ಕಂಪನಿಗಳ ಜೊತೆಗೆ ಅಶ್ವತ್ಥ ನಾರಯಣಗೆ ಸಂಪರ್ಕ ಹೊಣೆ ನೀಡಲಾಗಿದೆ. ಖಾಸಗಿ ಮತ್ತು ಸರಕಾರಿ ಆಸ್ಪತ್ರೆ ಬೆಡ್ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಇಂಧನ ಸಚಿವ ಆರ ಅಶೋಕ ಅವರಿಗೆ ಮತ್ತು ಬಸವರಾಜ ಬೊಮ್ಮಾಯಿ ಅವರಿಗೆ ನೀಡಲಾಗಿದೆ. ಇನ್ನೂ ವರ ರೂಮ್ ಕಾಲ ಸೆಂಟರ್ ನಿರ್ವಹಣೆಯ ಜವಾಬ್ದಾರಿಯನ್ನು ಅರವಿಂದ ಲಿಂಬಾವಳಿಯವರಿಗೆ ನೀಡಲಾಗಿದೆ. ಚಾಮರಾಜನಗರದ ದುರಂತದ ಹಿನ್ನಲೆಯಲ್ಲಿ ಸಚಿವ ಡಾ. ಕೆ.ಸುಧಾಕರ್ ಮತ್ತು ಸುರೇಶ ಕುಮಾರ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು. ಇಂದು ನಡೆದ ಸಭೆಯಲ್ಲಿ ಸುಧಾರಕರ ಅವರನು ತರಾಟೆಗೆ ತೆಗೆದುಕೊಂಡಿದ್ದಾರೆ.

- Advertisement -

ಇನ್ನೂ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಅವರವರ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಹೊಣೆಗಾರಿಕೆ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳು ತಮ್ಮ ಉಸ್ತುವಾರಿ ಜಿಲ್ಲೆಯಲ್ಲಿಯೇ ಇದ್ದು ಪರಿಸ್ಥಿತಿಯನ್ನು ನಿಭಾಯಿಸಬೇಕೆಂದು ಸೂಚಿಸಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಧ್ಯಮಗಳಿಗೆ ತಿಳಿಸಿದರು.

- Advertisement -

ಜನತಾ ಕಫ್ರ್ಯುವನ್ನು ಮತ್ತೆ 10 ದಿನಗಳ ಕಾಲ ವಿಸ್ತರಿಸುವ ಚಿಂತನೆ ನಡೆದಿದ್ದು, ಅದನ್ನು ಮೇ. 10 ರ ನಂತರ ಸಭೆ ನಡೆಸಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಕೊರೊನಾ ಅಬ್ಬರದ ನಡುವೆಯೂ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರನ್ನು ಕೊರೊನಾ ವಾರಿಯರ್ಸಗಳೆಂದು ಪರಿಗಣಿಸುವಂತೆ ಆದೇಶ ಹೊರಡಿಸಲಾಗಿದೆ. ಅವರನ್ನು ಕೊರೊನಾ ವಾರಿಯರ್ಸ ಎಂದು ಪರಿಗಣಿಸಿ ಕೊರೊನಾ ಲಸಿಕೆ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -