Saturday, October 23, 2021

ಕೋವೀಡ್-19 ಗೆ ವಿಶ್ವವಾಣಿ ಪತ್ರಕರ್ತ ಸಿದ್ದರಾಮಪ್ಪ ಸಿರಿಗೇರಿಯವರ ತಂದೆ ಕೆಂಚಪ್ಪ ನಿಧನ

Must Read
- Advertisement -

ಬಳ್ಳಾರಿ ಮೇ 04:- ವಿಶ್ವವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರ ಸಿದ್ದರಾಮಪ್ಪ ಸಿರಿಗೇರಿ ಅವರ ತಂದೆ ಕೆಂಚಪ್ಪ ಸಿರಿಗೇರಿ (70) ಸೋಮವಾರ ಕೋವಿಡ್-19 ಗೆ ಬಲಿಯಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಉಸಿರಾಟದ ತೊಂದರೆಯಿಂದ ನಗರದ ನಿವಾಸದಲ್ಲಿ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ನಾಲ್ಕು ಜನ ಪುತ್ರಿಯರಿದ್ದು, ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಮಂಗಳವಾರ ಸಂಜೆ ಬಳ್ಳಾರಿ ತಾಲೂಕಿನ ಕೆ. ಕೆ ಹಾಳ್ ಗ್ರಾಮದಲ್ಲಿ ನಡೆಯಲಿದ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಆಕ್ರೋಶ: ಚಿಕಿತ್ಸೆಗಾಗಿ ಸೋಮವಾರ ನಗರದ ಅನೇಕ ಆಸ್ಪತ್ರೆಗಳಿಗೆ ಅಲೆದಾಡಿದರೂ ಬೆಡ್ ಗಳ ಕೊರತೆ, ಆಕ್ಸಿಜನ್ ಕೊರತೆ ನೆಪ ಹೇಳಿ ಯಾವ ವ್ಯೆದ್ಯರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿಕೊಳ್ಳಲಿಲ್ಲ ಎಂದು ಪತ್ರಕರ್ತ ಸಿದ್ದರಾಮಪ್ಪ ಸಿರಿಗೇರಿ ಆರೋಪಿಸಿದ್ದಾರೆ. ಕನಿಷ್ಟ ಮಾನವೀಯತೆ ದೃಷ್ಟಿಯಿಂದ ಒಬ್ಬ ವೈದ್ಯರು ತಂದೆಯನ್ನು ಮುಟ್ಟಿ ಚಿಕಿತ್ಸೆ ನೀಡಲು ಮುಂದಾಗಲಿಲ್ಲ, ಜಿಲ್ಲಾಡಳಿತ ಬೆಡ್‍ಗಳ ಕೊರತೆಯಿಲ್ಲ, ಆಕ್ಸಿಜನ್ ಕೊರತೆಯಿಲ್ಲ ಎಂದು ಹೇಳುತ್ತಿದೆ. ಆದರೇ ಸೋಮವಾರ ತಂದೆಯನ್ನು ಆಸ್ಪತ್ರೆಗೆ ದಾಖಲಿಸಲು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ತೆರಳಿದರೆ, ಬೆಡ್‍ಗಳ ಕೊರತೆ ನೆಪವೊಡ್ಡಿದರು. ಎಲ್ಲಿಯೂ ದಾಖಲಿಸಿಕೊಳ್ಳಲಿಲ್ಲ, ಉಸಿರಾಟದ ತೊಂದರೆಯಿಂದ ತಂದೆ ನಿಧನರಾದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -