Saturday, October 23, 2021

ಒಂದೊಂದು ಮತದ ಮೌಲ್ಯವನ್ನು ತಿಳಿಸಿಕೊಟ್ಟ ಮತದಾರ

Must Read
- Advertisement -

ಬೆಳಗಾವಿ: ಕರ್ನಾಟಕದ ಕಿತ್ತೂರು ಭಾಗದ ಮುಂಬೈ ಪ್ರಾಂತ್ಯ ಎಂದು ಗುರುತಿಸಿಕೊಳ್ಳುತ್ತಿರುವ ಬೆಳಗಾವಿ ಎಂದಾಕ್ಷಣ ಭಾಷೆ, ಗಡಿ, ವಿವಿಧ ಸಂಸ್ಕೃತಿಯ ವೈಭವ ಇಡೀ ರಾಜ್ಯದ ಗಮನವನ್ನು ಸೆಳೆಯುತ್ತಿತ್ತು. ರಾಜಕೀಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಎಲ್ಲ ಪಕ್ಷದ ನಾಯಕರು ಉತ್ತರ ಕರ್ನಾಟಕದ ಗಂಡುಮೆಟ್ಟಿನ ಸ್ಥಳದ ಖ್ಯಾತಿಹೊಂದಿದ ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಸುವ ಮೂಲಕ ಇತಿಹಾಸ ಬರೆದರೆ ಆ ಇತಿಹಾಸಕ್ಕೆ ಮತ್ತೊಂದು ಗರಿಯಂತೆ ಸುವರ್ಣ ವಿಧಾನಸೌಧ ನಿರ್ಮಾಣವಾಯಿತು.

ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬೆಳಗಾವಿ ಬದಲಾದ ರಾಜಕೀಯದಿಂದ  ಬಿಜೆಪಿಯ ಬಲಿಷ್ಠ ಜಿಲ್ಲೆಯಾಗಿ ಪರಿವರ್ತನೆಯಾಯಿತು ಕಳೆದ ನಾಲ್ಕು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಬಲ ಸ್ಪರ್ಧಿಯಾಗಿದ್ದನ್ನು ಬಿಟ್ಟರೆ ಯಾರು ಅಂತಹ ಸ್ಪರ್ಧೆ ನೀಡಿರಲಿಲ್ಲ. ಆದರೆ 2019ನೇಯ ಲೋಕಸಭಾ ಚುನಾವಣೆಯಲ್ಲಿ 3ಲಕ್ಷ 62ಸಾವಿರ ಲೀಡ್ ಪಡೆದಿದ್ದ ಸುರೇಶ್ ಅಂಗಡಿಯವರು ನಾಲ್ಕು ಬಾರಿ ಹೊರಳಿ ನೋಡಿದ್ದೆ ಇರಲಿಲ್ಲ. ಅವರು ಕೇಂದ್ರಮಂತ್ರಿಗಳಾದ ನಂತರ ಅವರ ಕಾರ್ಯಕ್ಷಮತೆಯಿಂದ ಈ ಬಾರಿ ರಾಜ್ಯಕ್ಕೆ ಮತ್ತು ಬೆಳಗಾವಿ ಕ್ಷೇತ್ರಕ್ಕೆ ಅನುದಾನ ಹೊಳೆಯನ್ನೇ ಹರಸಿದ್ದರು ಆದರೆ ಅವರ ಅಕಾಲಿಕ  ಮರಣದಿಂದ ತೆರವಾಗಿದ್ದ ಆಸ್ಥಾನಕ್ಕೆ ಅವರ ಪತ್ನಿ ಮಂಗಳ ಅಂಗಡಿಯವರ ಹೆಸರು ಘೋಷಣೆಯಾದಾಗ ಒಂದು ಹಂತದಲ್ಲಿ ಅವಿರೋಧ ಆಯ್ಕೆಯಾಗುವ ಮೂಲಕ ರಾಷ್ಟ್ರಕ್ಕೆ  ಮಾದರಿ ಕ್ಷೇತ್ರವಾಗಿ ಬೆಳಗಾವಿ ಲೋಕಸಭೆ ಹೆಸರುವಾಸಿಯಾಗಲಿದೆ  ಎಂದು ಭಾವಿಸಿದ್ದ ಪ್ರಜ್ಞಾವಂತರಿಗೆ ಫಲಿತಾಂಶ ಬಂದಾಗ ಜಿಜ್ಞಾಸೆ ಮೂಡಿಸಿದೆ. ಬಿಜೆಪಿ ಶಕ್ತಿ ಮುಂದೆ ಕಾಂಗ್ರೆಸ್ ಶೂನ್ಯ ಎಂಬ ಭಾವನೆಯಿತ್ತು ಬಿಜೆಪಿಯಲ್ಲಿ ಬೂತ ಮಟ್ಟದಲ್ಲಿ ಕಾರ್ಯಕರ್ತರು, ಬೂತ ಸಮೀತಿ, ಶಕ್ತಿಕೇಂದ್ರ ಮಹಾಶಕ್ತಿ ಕೇಂದ್ರದ ಪ್ರಮುಖರು, ಜಿಲ್ಲೆಯ ಮುಂಡಲ ಮೊರ್ಚಾಗಳ ಪ್ರಕೋಷ್ಠಗಳು ಸಾಮಾಜಿಕ ಜಾಲತಾಣಗಳ ಪದಾಧಿಕಾರಿಗಳು ಉಸ್ತುವಾರಿಗಳು ಪ್ರಭಾವಿಗಳು ಎಲ್ಲ ಸಂಖ್ಯೆಗಳನ್ನು ಗಮನಿಸಿದಾಗ ಮತ್ತು ಅದರ ಮೇಲೆ ಹಿಡಿತವಿರುವ ಶಿಸ್ತಿನ ಪಕ್ಷದ ನಾಯಕರು ಹಾಗೂ ಎಲೆಮರೆಯ ಕಾಯಿಯಂತೆ ಸಂಘಪರಿವಾರದ ಕಾರ್ಯ ಬಹಳಷ್ಟು ವ್ಯವಸ್ಥಿತವಾಗಿ ನಡೆಯುತ್ತಿದೆ ಇವುಗಳ ಗಂಧಗಾಳಿ ಗೊತ್ತಿಲ್ಲದ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಅಜಗಜಾಂತರ ವ್ಯತ್ಯಾಸವಿದ್ದರೂ ಈ ಪ್ರಮಾಣದಲ್ಲಿ ಮತಗಳನ್ನು ಪಡೆದಿರುವುದು ಬಿಜೆಪಿಗರಲ್ಲಿ ನಿದ್ದೆಗೆಡು ಮಾಡುವಂತೆ ಮಾಡಿದೆ.

- Advertisement -

ಈ ಚುನಾವಣೆಯ ಬಿಜೆಪಿ ಪಕ್ಷದ ಮಾಸ್ಟರ್ ಮೈಂಡ್* ಭಾರತೀಯ ಜನತಾ ಪಾರ್ಟಿಯಲ್ಲಿ ಬೆಳಗಾವಿ ಲೋಕಸಭೆಯ ಉಸ್ತುವಾರಿಯನ್ನು ಪಕ್ಷದ ಪರವಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಯವರಿಗೆ ವಹಿಸಲಾಗಿತ್ತು ಕೇಂದ್ರ ಗೃಹ ಸಚಿವರಾದ ಅಮಿತ ಷಾರವರ ಕಾರ್ಯಕ್ರಮದಿಂದ ಲೋಕಸಭಾ ಚುನಾವಣೆಯವರೆಗೆ ಒಂದಿಲ್ಲೊಂದು ರಚನಾತ್ಮಕವಾಗಿ ಕಾರ್ಯಕ್ರಮಗಳನ್ನು  ಹಾಕಿಕೊಳ್ಳುವುದರ ಮೂಲಕ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸಿದರು ಪಕ್ಷದ ನಾಯಕರು ಬೆಳಗಾವಿಗೆ ಬರುವ ಪ್ರವಾಸದಲ್ಲಿ ಅವರನ್ನು ಯಾವ ಕ್ಷೇತ್ರದಲ್ಲಿ ಯಾವ ಜಿಲ್ಲಾ ಪಂಚಾಯಿತಿಗೆ ವ್ಯಾಪ್ತಿಗೆ ಅಣಿಗಳಿಸಬೇಕೆಂಬ  ಸೂಕ್ಷ್ಮತೆ ಅವರಲ್ಲಿತ್ತು ಜೊತೆಗೆ ವಿವಿಧ ಸಮಾಜದ ಜನತೆಯನ್ನು ಒಗ್ಗೂಡಿಸಲು ರಾಜ್ಯ ನಾಯಕರನ್ನು ಒಂದು ಮಿಷನ್ ವಿಶ್ರಮಿಸದಂತೆ ಸಭೆಗಳ ಮೇಲೆ ಸಭೆಗಳನ್ನು ಆಯೋಜಿಸುತ್ತಾ ಲೋಕಸಭೆಯ ಚುನಾವಣಾ ತಂತ್ರಗಳ ಅಸ್ತ್ರಗಳನ್ನು ರಚನೆಮಾಡಿದರು. ಆ ಪ್ರಕಾರ ಅವುಗಳ ಅನುಷ್ಠಾನಕ್ಕೆ ಅತ್ಯಂತ ಕ್ರಿಯಾಶೀಲ ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ಸಂಜೆಯ ಪಾಟೀಲ, ಮಹಾನಗರ ಅಧ್ಯಕ್ಷ ಶಶಿ ಪಾಟೀಲ್ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಮೋಹಿತೆ ಸುಭಾಷ್ ಪಾಟೀಲ್ ಸಂದೀಪ್ ದೇಶಪಾಂಡೆ ಮುರಿಗೆಂದ್ರ ಪಾಟೀಲ್ ದಾದಾಗೌಡ  ಬಿರಾದಾರ್ ಗಿರೀಶ್ ದೊಂಗಡಿ ಜಿಲ್ಲಾ ಮಧ್ಯಮ ಸಂಚಾಲಕ ಎಫ್.ಎಸ್. ಸಿದ್ದನಗೌಡರ, ಶರದ ಪಾಟೀಲ್ ಜಿಲ್ಲಾ ವಕ್ತಾರರಾದ ಹನುಮಂತ್ ಕೊಂಗಾಲಿ ಸಂಜೆಯ ಕಂಚಿ ಸಾಮಾಜಿಕ ಜಾಲತಾಣ ನಿತಿನ್ ಚೌಗುಲೆ ಕೇದಾರ್ ಜೋರಪೂರ್, ಶ್ರೇಯಸ್ಸ ನಾಕಾಡೆ ಹಾಗೂ ಎಲ್ಲ ಮೋರ್ಚಾಗಳ ಮತ್ತು ಪ್ರಕೊಷ್ಠಾಗಳ ಸಂಚಾಲಕರ ಸಾವಿರಾರರು ಪದಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಪಡೆಯನ್ನು ರಚನೆಮಾಡಿ ಕೆಲಸಕ್ಕೆ ಜೋಡಿಸಿದ್ದರು ಇದರ ಜೊತೆಯಾಗಿ ಪಕ್ಕದ ಚಿಕ್ಕೋಡಿ ಅಧ್ಯಕ್ಷರಾದ ಡಾ. ರಾಜೇಶ್ ನೆರ್ಲಿ, ಕಾರ್ಯವನ್ನು ಪಡೆದುಕೊಂಡಿದ್ದರು ಎಲ್ಲ ಕಾರ್ಯತಂಡಗಳ ದೊಂದಿಗೆ ರಾಜ್ಯ ನಾಯಕರು  ಪ್ರವಾಸಗಸ್ಥಳ ನಿಗದಿಗೊಳಿಸಿ ಪ್ರತಿದಿನದ ಚುನಾವಣಾ ನಿರ್ವಹಣೆಯ ಕೆಲಸಕ್ಕೆ ನಿಯೋಜನೆ ಮಾಡಿ ಅತ್ಯಂತ ಯಶಸ್ವಿಯಾಗಿ ಕಾರ್ಯ ನಡೆಯುತ್ತಿರುವಾಗ ಮಹಾಮಾರಿ ಕರುಣ ರೋಗ ಅವರಿಗೆ ತಗುಲಿ ಚುನಾವಣಾ ರಣತಂತ್ರ ಗಳಲ್ಲಿ ಏರು-ಪೇರು ಪ್ರಾರಂಭವಾಯಿತು ಇದು ಸಹಿತ ಮತ ಮುನ್ನಡೆ ಪಡೆಯುವಲ್ಲಿ ತೊಂದರೆಯಾಯಿತು.

- Advertisement -

ಈ ಸಂದರ್ಭದಲ್ಲಿ ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಸಹ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಸವರಾಜ ಯಕ್ಕಂಚಿ, ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ ಮತ್ತು ರಾಜ್ಯ ಶಿಸ್ತು ಸಮೀತಿಯ ಸಂಚಾಲಕರಾದ ಲಿಂಗರಾಜ ಪಾಟೀಲರು ನಂತರದ ದಿನಗಳನ್ನು ನಿಭಾಯಿಸಿದ್ದು ಬಿಜೆಪಿಯ ಗೆಲುವಿಗೆ ರಹದಾರಿಯಾಯಿತು.

ಜಿಲ್ಲಾ ಉಸ್ತುವಾರಿಗಳ ಗೊಕಾಕ ಜಯದ ಮುಂಚುಣಿಯಲ್ಲಿದ್ದರು, ಅವರ ಅನುಪಸ್ಥಿತಿ ಬಹಳ ಗಂಭೀರವಾದ ಪ್ರಭಾವ ಈ ಚುನಾವಣೆಯಲ್ಲಿ ಆದದ್ದು ನಿಜ. ಎಂಟು ಕ್ಷೇತ್ರಗಳಲ್ಲಿ ಮತಗಳ ಮುನ್ನಡೆ ಸಾಧಿಸಲು ಎಲ್ಲಿಲ್ಲದ ಕಸರತ್ತು ಬಿಜೆಪಿ ಪಕ್ಷದಿಂದ ನಡೆದಿತ್ತು *ಚುನಾವಣೆ ಉಸ್ತುವಾರಿಗಳಾದ*  ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯ ಬೃಹತ್ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ವಹಿಸಿಕೊಂಡು ಅನೇಕ ನಾಯಕರ ತಂಡ ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು ಚುನಾವಣೆ ಮುಗಿಯುವರೆಗೂ ಬೆಳಗಾವಿಯಲ್ಲಿ ಠಿಕಾನಿ ಹಾಕಿ ಕ್ಷೇತ್ರದ ಹಳ್ಳಿಹಳ್ಳಿಗಳಲ್ಲಿ ಸಂಚರಿಸಿ ಮನೆ ಮನೆ ಬಾಗಿಲಿಗೆ ತೆರಳಿ ಮತಯಾಚಿಸಿದರು ಕೇವಲ ಅವರಷ್ಟೆಯಲ್ಲದೆ ಜಿಲ್ಲೆಯ ನಾಯಕರುಗಳಾದ ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೊರೆ, ಮಂತ್ರಿಗಳಾದ ಉಮೇಶ್ ಕತ್ತಿ ಶ್ರೀಮಂತ್ ಪಾಟೀಲ್ ಶಶಿಕಲಾ ಜೊಲ್ಲೆ ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ರಾಜ್ಯಸಭಾ ಸದಸ್ಯ  ಈರಣ್ಣ ಕಡಾಡಿ ಉಪಸಭಾಪತಿ ಆನಂದ ಮಾಮನಿ, ದಿಲ್ಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ  ಶಾಸಕರುಗಳಾದ ಬಾಲಚಂದ್ರ ಜಾರಕಿಹೊಳಿ ಅಭಯ್ ಪಾಟೀಲ್ ಅನಿಲ್ ಬೆಣಕೆ  ಮಹದೇವಪ್ಪ ಯಾದವಾಡ ಮಹೇಶ್ ಕುಮಟಳ್ಳಿ  ಮಹಾಂತೇಶ್ ದೊಡ್ಡಗೌಡರ ಪಿ ರಾಜೀವ್  ದುರ್ಯೋಧನ ಐಹೊಳೆ, ಮಹಾಂತೇಶ ಕವಟಗಿಮಠ, ಮಾಜಿ ಸಂಸದ ರಮೇಶ್ ಕತ್ತಿ, ಅಮರಸಿಂಹ ಪಾಟೀಲ, ಮಾಜಿ ಶಾಸಕರಾದ ಡಾ.ವಿ.ಆಯ್. ಪಾಟೀಲ್ ಜಗದೀಶ್ ಮೆಟಗುಡ್ಡ, ಶಶಿಕಾಂತ ಪಾಟೀಲ್ ಎಂಎಲ್  ಮುತ್ಯನ್ನವರ್, ಎಮ್.ಬಿ.ಝಿರಲಿ, ಉಜ್ವಲ ಬಡ್ವಣಾಚೆ, ಗೀತಾ ವಿವೇಕಾನಂದ, ಭಾರತಿ ಮಗದುಮ್ಮ, ಪ್ರಶಾಂತ ಜಾಧವ, ಸಿದ್ದು ಮೊಗಲಿಶೆಟ್ಟರ, ಗೂಳಪ್ಪ ಹೊಸಮನಿ, ಡಾ.ಸಂದೀಪಕುಮಾರ   ಜಿಲ್ಲಾ ಮತ್ತು ಮಂಡಲ ಹಾಗೂ ಪ್ರಕೋಷ್ಠಗಳು ಪದಾಧಿಕಾರಿಗಳ ತಂಡ ಜೊತೆಗೂಡಿಸಿಕೊಂಡು ಎಡಬಿಡದೆ ಇವರೊಂದಿಗೆ ಕಾರ್ಯನಿರ್ವಹಿಸಿ ಗೆಲುವಿನ ತಂತ್ರ ಹೆಣೆಯಲಾಗಿತ್ತು. ಇವರ ಕಾರ್ಯಕ್ಷಮತೆ  ಈ ಚುನಾವಣೆಯಲ್ಲಿ ಮತದಾರ ಕೈಬಿಡಲಿಲ್ಲ ಆದರೆ ಸರಿಯಾದ ಪ್ರತಿಫಲ ತೋರದಿರುವುದು ವಿಪರ್ಯಾಸ.

ರಾಜ್ಯ ಮತ್ತು ರಾಷ್ಟ್ರ ನಾಯಕರು ದಂಡವೇ ಚುನಾವಣೆಯಲ್ಲಿ ಪಾಲ್ಗೊಂಡಿತ್ತು* ರಾಜ್ಯದ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಅತ್ಯಂತ ಪ್ರತಿಷ್ಠಿತವಾಗಿ ತೆಗೆದುಕೊಂಡು ಈ ಚುನಾವಣೆಯಲ್ಲಿ ಜ್ವರದಿಂದ ಬಳಲುತ್ತಿದ್ದರು ಎರಡನೇ ಬಾರಿ ಕ್ಷೇತ್ರಕ್ಕೆ ಆಗಮಿಸಿ ಬಿಜೆಪಿ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಹೆಚ್ಚಿನ ಶ್ರಮವಹಿಸಲು ತಿಳಿಸುವುದರೊಂದಿಗೆ ಅನೇಕ ಬಹಿರಂಗ ಸಭೆಗಳನ್ನು ಆಯೋಜನೆ ಮಾಡುವುದರ ಮೂಲಕ ಜಯಭೇರಿ ಭಾರಿಸುವಂತೆ ಎಲ್ಲರ ಗಮನಸೆಳೆದಿದ್ದರು. ರಾಜ್ಯಾಧ್ಯಕ್ಷರಾದ ನಳಿನ ಕುಮಾರ ಕಟೀಲ, ರಾಜ್ಯದ ಉಸ್ತುವಾರಿಗಳಾದ ಅರುಣ ಸಿಂಗ್,ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ ಕುಮಾರ, ರಾಜ್ಯದ ಮಂತ್ರಿಗಳಾದ ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ಬೈರತಿ ಬಸವರಾಜ ಸಿಸಿ ಪಾಟೀಲ್ ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ,ಸಂಸದರಾದ ಶೋಭಾ ಕರದ್ಲಾಂಚೆ, ಎ.ನಾರಾಯಣಸ್ವಾಮಿ, ಮಾಜಿ ಸಂಸದೆ, ತೇಜಸ್ವಿನಿ ರಮೇಶ, ವಿಧಾನ ಪರಿಷತ್ ಸದಸ್ಯ ಮುನಿರಾಜುಗೌಡ,  ಹಣಮಂತ ನೀರಾಣಿ, ಹೀಗೆ ಅನೇಕ ಮಂತ್ರಿಗಳ ತಂಡ ಗ್ರಾಮ ಗ್ರಾಮಗಳಿಗೆ ತೆರಳಿ ಪ್ರಚಾರ ನಡೆಸಿದ್ದರು ಇದರ ಮಧ್ಯದಲ್ಲಿ ವಿಜಾಪುರ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಸಹಿತ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡು ಮಾಧ್ಯಮದ ಮೂಲಕ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

ಇಷ್ಟೆಲ್ಲ ನಾಯಕರ ದಂಡ ಲಕ್ಷ ಲಕ್ಷ ಮುನ್ನಡೆ ಸಾಧಿಸಲು ಬಂದರು ಗುಡ್ಡ ಅಗೆದು ಇಲಿ ಹುಡಿಕಿದಂತೆ ಮಾಡಿದ ಮತದಾರ ತನ್ನ ಗೌಪ್ಯತೆ ಕೊನೆಯವರೆಗೂ ಬಿಟ್ಟು ಕೊಡಲಿಲ್ಲ.

ಕಾಂಗ್ರೆಸ್ ಪಕ್ಷ ಶತಾಯಗತಾಯ ಗೆಲ್ಲಲೇಬೇಕೆಂಬ ನಿಶ್ಚಯದೊಂದಿಗೆ ಚುನಾವಣಾ ಕಣಕ್ಕೆ* ಇಳೆದಿತ್ತು ಬಿಜೆಪಿ ಚುನಾವಣಾ ಸಭೆಗಳು ಒಂದು ಕಡೆ ನಡೆದರೆ ಪ್ರತಿಯೊಂದು ಬೂತಿನಲ್ಲಿ ಚುನಾವಣಾ ಕಾರ್ಯವನ್ನು ಕಾಂಗ್ರೆಸ್ ಗೊತ್ತಿಲ್ಲದೆ ಪ್ರಾರಂಭ ಮಾಡಿತ್ತು ಬಿಜೆಪಿಯ ವೋಟ್ ಬ್ಯಾಂಕ್ ಅರಿತಿದ್ದ‌ ಕಾಂಗ್ರೆಸ್ ಅದಕ್ಕೆ ಪ್ರತಿತಂತ್ರ ಕೂಡಲು ಮಾಸ್ಟರ್ ಮೈಂಡ್ ಕೆಲಸ ಪ್ರಾರಂಭಿಸಿದರು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18.17 ಲಕ್ಷ ಮತದಾರರಲ್ಲಿ 7.4ಲಕ್ಷ ಅಹಿಂದ ಮತಗಳಿಗೆ ಗಾಳ ಹಾಕಿದರು ಇದನ್ನು ತಡೆಯಲು ಬಿಜೆಪಿ ಅನೇಕ ಹಿಂದುಳಿದ ನಾಯಕರು ಶ್ರಮ ಪಟ್ಟಿರುವ ಅಷ್ಟಿಷ್ಟಲ್ಲ ಹಾಗೂ ಬಿಜೆಪಿಯ ಕಟ್ಟರಗಳಾದ 1.90 ಲಕ್ಷ ಮರಾಠ ಮತದಾರರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ  ಬರುವುದಿಲ್ಲ  ಎಂಬ  ಸತ್ಯ ಗೊತ್ತಿದ್ದು ಆ ಮತಗಳ ಒಡೆದು ಆಳುವ ನೀತಿಯ ಮೂಲಕ ಕೈ ಹಾಕಿ ಎಮ್.ಈ.ಎಸ್.ಅಭ್ಯರ್ಥಿ ನಿಲ್ಲಿಸಿದ್ದು ಯಾರು ಎನ್ನುವದು ಬಹಿರಂಗ ಗುಟ್ಟು. 8.5 ಲಕ್ಷ ಲಿಂಗಾಯತ ಮತದಾರರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಮತದಾನ ಮಾಡುವುದಿಲ್ಲ ಮಾಡಿದರು ಬಿಜೆಪಿಗೆ ಮಾಡುತ್ತಾರೆ ಎಂಬುವದನ್ನರಿತು ಅಷ್ಟೊಂದು ಪ್ರಚಾರಕ್ಕು ಪ್ರಾಮುಖ್ಯತೆ ನೀಡಲಿಲ್ಲ. ಇನ್ನುಳಿದ ಅರ್ಧದಲ್ಲಿ ಕೆಲವೊಂದು ನಾಯಕರನ್ನು ತಮ್ಮ ಕಡೆ ಸೆಳೆಯುವುದರ ಮೂಲಕ ಹಾಗೂ ಕೆಲ ಸಕ್ರಿಯ ನಾಯಕರನ್ನು ಬ್ಲಾಕ್ ಮಾಡುವುದರ ಮೂಲಕ ಬಿಜೆಪಿಗೆ ಹೊಡೆತ ನೀಡುವ ತಂತ್ರ ಕೆಲತಿಂಗಳ ಹಿಂದೆ ಪ್ರಾರಂಭವಾಗಿತ್ತು ಇದರಲ್ಲಿ ಮರಾಠಿ ಮತಗಳನ್ನು ಒಡೆಯುವ ತಂತ್ರ ಫಲಿಸಿತು ಲಿಂಗಾಯತ ಮತಗಳು ಸಂಪೂರ್ಣವಾಗಿ ಸೆಳೆಯುವಲ್ಲಿ ವಿಫಲವಾದ ಮಾಸ್ಟರ್ ಮೈಂಡ್ ಕೊನೆಗೆ ಕೂದಲೆಳೆಯಂತರದಲ್ಲಿ ಸೋಲಬೇಕಾಯಿತು. ಮರಾಠ ಮತಗಳು  ಎಂಇಎಸ್ ಗೆ ಬರಲು ಅನೇಕ ತಂತ್ರಗಳನಡುವೆ ಕೊನೆಯ ಕ್ಷಣದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್   ರವರ ಕಾರ್ಯಕ್ರಮ ಆಯೋಜನೆಯ ಮೂಲಕ ಕನಿಷ್ಠ 20 ಸಾವಿರ ಮರಾಠ ಮತಗಳು ಎಂಇಎಸ್ ಪಾಲಾಗುವುದನ್ನು ತಡೆದು ಬಿಜೆಪಿಯ ಗೆಲುವಿನಲ್ಲಿ ಈ ಸಭೆಯ ಪಾತ್ರವಿದೆ ಎನ್ನುವುದು ಸಾಬೀತಾಗಿದೆ ಹೀಗೆ ಅನೇಕ ತಂತ್ರ ಗಳ ಮಧ್ಯದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ಅನೇಕ ಮುನ್ನುಡಿ ಗಳಿಗೆ ನಾಂದಿಯಾಯಿತು.

ವೀರರಾಣಿ ಕಿತ್ತೂರು ಚನ್ನಮ್ಮನ ನಾಡಿನಲ್ಲಿ 18ನೇ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯೋರ್ವರು ಸಂಸದರಾಗಿ ಪ್ರಥಮ ಬಾರಿಗೆ ಆಯ್ಕೆಯಾದರು ಈ ಭಾಗದ ಮಹಿಳೆಯರಿಗೆ ಸಂದ ಗೌರವ ಇದಾಗಿದೆ. ಎಂದು ಸೋಲರಿಯದ ಸತೀಶ್ ಜಾರಕಿಹೊಳಿ ಅವರಿಗೆ ಸೋಲಿನ ರುಚಿ ಮಂಗಲ ಅಂಗಡಿ ಅವರಿಂದ ಆಯ್ತು ಸುರೇಶ್ ಅಂಗಡಿಯವರನ್ನು ಐದು ವರ್ಷಕ್ಕೆ ಆಯ್ಕೆಮಾಡಿದ ಮತದಾರರು ಅವರ ನಿಧನಕ್ಕೆ ಅನುಕಂಪ ದೊಂದಿಗೆ ಅವರ ಮೇಲಿರುವ ಗೌರವವನ್ನು ಮತ್ತೊಮ್ಮೆ ತೊರ್ಪಡಿಸಲಾಯಿತು ರಾಷ್ಟ್ರೀಯ ಪಕ್ಷಗಳಿಗೆ ಸಂಘಟನೆ ಮತ್ತು ಮತದಾರರ ಒಲವು ಯಾವ ರೀತಿ ಇರುತ್ತದೆ ಎಂಬುದನ್ನು ಕ್ಷಣಕ್ಷಣಕ್ಕೂ ತಿಳಿಸಿಕೊಟ್ಟ ಚುನಾವಣೆ ಇದಾಗಿದೆ. ಹೈಟೆಕ್ ಸಭೆಗಳಿಗಿಂತ ಬೂತ ಮಟ್ಟದ ಕೆಲಸ ಬಹುಮುಖ್ಯ ಎಂಬುವುದನ್ನು ನಾಯಕರುಗಳಿಗೆ ಅರ್ಥ ಮಾಡಿಸಿದೆ ಸ್ಥಳೀಯ ನಾಯಕರು ಜವಾಬ್ದಾರಿ ನಿಭಾಯಿಸದಿದ್ದರೆ ಮತದಾನ ಕನಿಷ್ಠಮಟ್ಟಕ್ಕೆ ಹೋಗುತ್ತದೆ ಎಂಬುವುದನ್ನು ತಿಳಿಸಿಕೊಟ್ಟಿದೆ ಗೆಲುವು ಕಾಣದ ಕಾಂಗ್ರೆಸ್ ಪಕ್ಷಕ್ಕೆ ಸಂಘಟನೆಯ ಶಕ್ತಿ ತಿಳಿಸಿದ ಮತದಾರರು, ಸಂಘಟನೆಯಿಂದ  ಸಲೀಸಾಗಿ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿಗೆ ನೆನಪಿಸಿ ಒಂದೊಂದು ಮತದ ಮೌಲ್ಯವನ್ನು ತಿಳಿಸುವ ದಿಟ್ಟ ನಿರ್ಧಾರ ಮತದಾರ ತಗೆದುಕೊಂಡಿದ್ದಾನೆ. ಬಿಜೆಪಿಗೆ ಈ ಚುನಾವಣೆ ನಾಯಕರ ಹೈಟೆಕ್ ಸಭೆಗಳಿಂದ, ನಾಯಕರ‌ ಗಾಳಿಯಲ್ಲಿ ಜಯ ಹರಿದು ಬರಬವುದೆಂಬ ಕನಸ್ಸು ಕಾಣುವದನ್ನು ಬಿಡಿಸಿದ ಪಾಠವೇ ಆಗಿದೆ ಇದರ ತಿರುಳಿನಿಂದ ಬಿಜೆಪಿ ನಾಯಕರು ಎಚ್ಚೆತ್ತುಕೊಳ್ಳಲಿದ್ದಾರೆ ಎಂಬುವದನ್ನು ಕಾದು ನೋಡಬೇಕಿದೆ.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -