Friday, October 22, 2021

ಬಂಗಾಳದಲ್ಲಿ ಟಿಎಂಸಿ, ಕೇರಳದಲ್ಲಿ ಎಲ್‍ಡಿಎಫ್, ತಮಿಳುನಾಡಿನಲ್ಲಿ ಡಿಎಂಕೆ, ಆಸಾಂ ಮತ್ತು ಪಾಂಡಿಚೇರಿಯಲ್ಲಿ ಬಿಜೆಪಿಗೆ ಅಧಿಕಾರ

Must Read
- Advertisement -

ಹೊಸ ದಿಲ್ಲಿ: ಪಂಚ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಆಡಳಿತ ವಿರೋಧಿ ಅಲೆ ಯಶಸ್ವಿಯಾಗಿ ಎದುರಿಸಿ ಪಶ್ಚಿಮ ಬಂಗಾಳದ ಟಿಎಂಸಿ, ಕೇರಳದ ಎಲ್‍ಡಿಎಫ್ ಮತ್ತು ಆಸ್ಸಾಂನಲ್ಲಿ ಬಿಜೆಪಿ ಗೆಲುವು ಸಾಧಿಸಿವೆ. ಇನ್ನೂ ತಮಳುನಾಡಿದಲ್ಲಿ ಡಿಎಂಕೆ ಮತ್ತು ಪದುಚೇರಿಯಲ್ಲಿ ಎನ್‍ಡಿಎ ಗೆಲುವು ಸಾಧಿಸಿವೆ.

ತೀವೃ ಸಂಘರ್ಷಕ್ಕೆ ಕಾರಣವಾಗಿದ್ದ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ತಾವು ಸೋತು ಪಕ್ಷವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 215 ಸೀಟು ಪಡೆದರೆ, ಬಿಜೆಪಿ 75 ಸೀಟುಗಳಿಸುವಲ್ಲಿ ಯಶಸ್ವಿಯಾಗಿದೆ. ಇನ್ನೂ ಲೆಫ್ಟ ಕೇವಲ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಒಂದು ಕ್ಷೇತ್ರವನ್ನು ಅನ್ಯ ಅಭ್ಯರ್ಥಿ ಪಾಲಾಗಿದೆ.
ಬಿಜೆಪಿಯ ಪ್ರಬಲ ಪೈಪೋಟಿ ಮತ್ತು ಆಡಳಿತ ವಿರೋಧಿ ಅಲೇಯನ್ನು ಸೆಣೆಸಿ ಸತತ ಮೂರನೇ ಬಾರಿಗೆ ಮುಖ್ಯಮಂತ್ರಿ ಗದ್ದುಗೆಯನ್ನು ಮಮತಾ ಬ್ಯಾನರ್ಜಿ ಎರಲಿದ್ದಾರೆ.

- Advertisement -

ಇನ್ನೂ ಕೇರಳದಲ್ಲಿಯೂ ಸಹ ಎಲ್‍ಡಿಎಫ ಆಡಳಿತ ವಿರೋಧಿ ಅಲೆಯನ್ನು ಎದುರಿಸಿ ಜಯ ಸಾಧಿಸಿದೆ. ಈ ಮೂಲಕ ಪಿಣರಾಯ ವಿಜಯನ್ ಮತ್ತೆ ಕೇರಳದ ಮುಖ್ಯಮಂತ್ರಿ ಗದ್ದುಗೆ ಎರಲಿದ್ದಾರೆ. ಇಲ್ಲಿ ಬಿಜೆಪಿ ತನ್ನ ಇದ್ದ ಒಂದು ಕ್ಷೇತ್ರವನ್ನು ಕಳೆದುಕೊಂಡಿದೆ. ಯುಡಿಎಫ್ 41 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ.

- Advertisement -

ಆಸಾಂನಲ್ಲಿ ಬಿಜೆಪಿ ಪಕ್ಷ ಆಡಳಿತವಿರೋಧಿ ಅಲೆಯನ್ನು ಎದುರಿಸಿ ಮತ್ತೆ ಅಧಿಕಾರವನ್ನು ತನ್ನದಾಗಿಸಿದೆ. ಬಿಜೆಪಿ 75, ಕಾಂಗ್ರೆಸ್ ಮೈತ್ರಿಕೂಟ 50 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಒಂದು ಕ್ಷೇತ್ರವನ್ನು ಪಕ್ಷೇತರ ಅಭ್ಯರ್ಥಿ ಪಾಲಾಗಿದೆ.

ಪಾಡಿಚೇರಿಯಲ್ಲಿ ಬಿಜೆಪಿಮೈತ್ರಿ 15 ಕ್ಷೇತ್ರಗಳಲ್ಲಿ ಗೆದ್ದರೆ, ಕಾಂಗ್ರೆಸ್ ಮೈತ್ರಿ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. 5 ಕ್ಷೇತ್ರಗಳು ಪಕ್ಷೇತರ ಅಭ್ಯರ್ಥಿಗಳ ಪಾಲಾಗಿವೆ. ಇಲ್ಲಿ ಅಧಿಕಾರದ ಗದ್ದುಗೆ ಎರಲು ಮ್ಯಾಜೀಕ ನಂಬರ 16 ಆಗಿದೆ.

ಇನ್ನೂ ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಡ 153 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದೆ. ಎಐಡಿಎಂಕೆ ಕೇವಲ 75 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಕಳೆದ ಬಾರಿಗಿಂತ ಈ ಬಾರಿ 71 ಕ್ಷೇತ್ರಗಳನ್ನು ಕಳೆದುಕೊಂಡಿದೆ.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -