Saturday, October 23, 2021

ರೋಚಕ ಹಣಾಹಣಿಯಲ್ಲಿ ಗೆಲುವಿನ ನಗೆ ಬೀರಿದ ಮಂಗಳಾ ಅಂಗಡಿ

Must Read
- Advertisement -

ಬೆಳಗಾವಿ : ಸುರೇಶ ಅಂಗಡಿಯವರ ನಿಧನದಿಂದಾಗಿ ಬೆಳಗಾವಿ ಲೋಕ ಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ದಿ. ಸುರೇಶ ಅಂಗಡಿಯವರ ಪತ್ನಿ ಮಂಗಳಾ ಅಂಡಿಯವರು ತಮ್ಮ ಪ್ರತಿ ಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿಯವರ ವಿರುದ್ದ 5240 ಮತಗಳ ಅಂತರದಿಂದ ಜಯ ಸಾದಿಸಿದ್ದಾರೆ.

ಬೆಳಗಾವಿ ಲೋಕಸಭಾ ಚುನಾವಣೆ ಫಲಿತಾಂಶ ಐಪಿಎಲ್ 20-20ಯ ಪಂದ್ಯಗಳ ರೋಚಕಂತಯನ್ನು ಮಿರಿಸುವಂತಿತ್ತು. ಆರಂಭದಲ್ಲಿ ಮುನ್ನಡೆ ಪಡೆದ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಯವರು ಮದ್ಯಹ್ನದ 35ನೇ ಸುತ್ತಿನವರೆಗೆ ತಮ್ಮ ಮುನ್ನಡೆ ಓಟವನ್ನು ಮುಂದುವರೆಸಿದ್ದರು, ಮಧ್ಯಹ್ನದ ನಂತರ ಮತ್ತೆ ಮಂಗಳಾ ಅಂಡಿಯವರನ್ನು ಹಿಂದಿಕ್ಕಿದ ಸತೀಶ ಜಾರಕಿಹೊಳಿಯವರು ಒಂದು ಹಂತದಲ್ಲಿ 8-10 ಸಾವಿರ ಮತಗಳ ಮುನ್ನಡೆಯನ್ನು ಕಂಡರು. ಆದರೆ ನಂತರ ಜಾರಕಿಹೊಳಿ ಮುನ್ನಡಿ ಕ್ಷೀಣಿಸುತ್ತಾ ಸಾಗಿತು. 82ನೇ ಸುತ್ತಿನ ಮತ ಏಣಿಕೆಯಲ್ಲಿ ಮಂಗಳಾ ಅಂಗಡಿಯವರು ಮತ್ತೊಮ್ಮೇ ಮುನ್ನಡೆ ಪಡೆದುಕೊಂಡರು. ಕೊನೆಯ ಕ್ಷಣದಲ್ಲಿ ಹಂತ ಹಂತವಾಗಿ ತಮ್ಮ ಗೆಲುವಿನ ಅಂತರವನ್ನು ಹೆಚ್ಚುಸತ್ತಾ ಸಾಗಿದರು. ಕೊನೆಗೆ 5240 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು.

- Advertisement -

- Advertisement -

ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ 3459 ಅಂಚೆ ಚೀಟಿ ಮತಗಳನ್ನು ಪಡೆದರೆ ಸತೀಶ ಜಾರಕಿಹೊಳಿ 2205 ಅಂಚೆ ಚೀಟಿ ಮತಗಳನ್ನು ಪಡೆದಿದ್ದಾರೆ. ಮಂಗಳಾ ಅಂಗಡಿ ಒಟ್ಟು 440327 ಮತಗಳನ್ನು ಪಡೆದರೆ, ಸತೀಶ ಜಾರಕಿಹೊಳಿ 435087 ಮತಗಳನ್ನು ಪಡೆದಿದ್ದಾರೆ.

https://results.eci.gov.in/PCBYEResultMay2021/ConstituencywiseS102.htm?ac=2

ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಮುಳುವಾಗಿದ್ದು, ಶಿವಸೇನೆ ಬೆಂಬಲಿತ ವಿಕ್ರಾಂತ ಶುಭಂ ಶೆಲ್ಕೆ 1,17,174 ಮತಗಳನ್ನು ಪಡೆಯುವ ಮೂಲಕ ಬಿಜೆಪಿಗೆ ಬರಬೇಕಾಗಿದ್ದ ಮರಾಠಾ ಮತಗಳನ್ನು ಬಾಚಿಕೊಂಡು ಬಿಜೆಪಿಗೆ ಶಾಕ್ ನೀಡಿದರು. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಒಟ್ಟು 10 ಅಭ್ಯರ್ಥಿಗಳಲ್ಲಿ ಈ ಮೇಲಿನ ಮೂವರನ್ನು ಹೊರತು ಪಡಿಸಿ ಯಾರೂ 5000 ಗಡಿ ದಾಟಿಲ್ಲ. ಇನ್ನೂ ನೋಟಾಗೆ 10631 ಮತಗಳು ಬಿದ್ದಿವೆ.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -