ಕಿತ್ತೂರು ವಿಧಾನ ಸಭಾ ಮತ ಕ್ಷೇತ್ರದಲ್ಲಿ ಶೇ 76.25 ಮತದಾನ

Ravi Talawar
WhatsApp Group Join Now
Telegram Group Join Now

ಎಂ.ಕೆ.ಹುಬ್ಬಳ್ಳಿ, 07: ರಾಜ್ಯದ ಎರಡನೇ ಹಂತದ ಲೋಕಸಭಾ ಚುನಾವಣೆ ಮೇ 07 ರಂದು ಬೆಳಗ್ಗೆ 07 ರಿಂದ ಸಂಜೆ 06 ಗಂಟೆ ವರೆಗೆ ಕಿತ್ತೂರು ಮತ ಕ್ಷೇತ್ರದಲ್ಲಿಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಮತದಾನ ಜರುಗಿತು.

ಬೆಳಗ್ಗೆ ಮತದಾರ ಪ್ರಭುಗಳು ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು ಇನ್ನೂ ಅನೇಕರು ತಮ್ಮ ಕುಟುಂಬ ಸಮೇತ ಆಗಮಿಸಿ ಮತ ಚಲಾಯಿಸಿದರು. ಪ್ರಥಮ ಬಾರಿಗೆ ಮತ ಚಲಾಯಿಸುವ ಹಕ್ಕು ಪಡೆದ ಯುವಕ ಯುವತಿಯರು ತಮ್ಮ ಹಕ್ಕು ಚಲಾಯಿಸಿ ಸಂತಸ ವ್ಯಕ್ತ ಪಡಿಸಿದರು.

ಅದೇ ರೀತಿ ವಿಕಲಚೇತನರು ಸಹ ತಮ್ಮ ಹಕ್ಕು ಚಲಾಯಿಸಲು ತಮ್ಮ ಕುಟುಂಬದ ಸಹಾಯದೊಂದಿಗೆ ಆಗಮಿಸಿ ಮತ ಚಲಾಯಿಸುವ ದೃಶ್ಯಗಳು ಕಂಡುಬಂದವು.
ಕಿತ್ತೂರು ವಿಧಾನ ಸಭಾ ಮತ ಕ್ಷೇತ್ರದಲ್ಲಿ ಶೇ 76.25 ಮತದಾನಯಾಗಿದೆ ಎಂದು ಕಿತ್ತೂರು ತಹಸೀಲ್ದಾರ ರವೀಂದ್ರ ಹಾದಿಮನಿ ತಿಳಿಸಿದ್ದಾರೆ.

ಪ್ರಥಮ ವೋಟರ್ಸ್ ಅನಿಸಿಕೆ

“ಮತದಾನ ನಮ್ಮ ಹಕ್ಕು ಮಾತ್ರವಲ್ಲ ನಮ್ಮ ಕರ್ತವ್ಯ ಕೂಡ, ಪ್ರಥಮ ಬಾರಿಗೆ ಮತದಾನ ಮಾಡಿರುವುದು ನನಗೆ ಸಂತಸ ಉಂಟಾಗಿದೆ”

• ಪ್ರಿಯಾಂಕಾ ಎಸ್.ತಿಲಗರ,ವಿದ್ಯಾರ್ಥಿನಿ

WhatsApp Group Join Now
Telegram Group Join Now
Share This Article