ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಕಂದಕಕ್ಕೆ : 7 ಮಂದಿ ಮೃತಪಟ್ಟು 30ಕ್ಕೂ ಹೆಚ್ಚು ಮಂದಿ ಗಾಯ

Ravi Talawar
WhatsApp Group Join Now
Telegram Group Join Now

ಬಲೂಚಿಸ್ತಾನ, ಏಪ್ರಿಲ್ 11: ಬಲೂಚಿಸ್ತಾನದ ಹಬ್ ಜಿಲ್ಲೆಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಆಳವಾದ ಕಂದಕಕ್ಕೆ ಬಿದ್ದು 17 ಮಂದಿ ಮೃತಪಟ್ಟು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದಾರುಣ ಘಟನೆ ಗುರುವಾರ ನಡೆದಿದೆ. ಯಾತ್ರಿಕರು ಬಲೂಚಿಸ್ತಾನದ ಖುಜ್ದಾರ್ ಜಿಲ್ಲೆಯ ದೂರದ ಮುಸ್ಲಿಂ ಸೂಫಿ ದರ್ಗಾ ಶಾ ನೂರಾನಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಚಾಲನೆಯ ಸಮಯದಲ್ಲಿ ತೀಕ್ಷ್ಣವಾದ ತಿರುವುದಿಂದಾಗಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ . ಘಟನೆಯಲ್ಲಿ ಗಾಯಗೊಂಡಿರುವ ಟ್ರಕ್‌ನ ಚಾಲಕ ಕರೀಂ ಬಕ್ಷ್‌ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮಕ್ಲಿಯ ಖಾಸಿಮ್ ಜೋಖಿಯೋ ಗ್ರಾಮದಿಂದ 70 ಕ್ಕೂ ಹೆಚ್ಚು ಜನರು ಯಾತ್ರೆಗೆ ತೆರಳಿದ್ದರು.

ಅಪಘಾತದಲ್ಲಿ ಒಟ್ಟು 17 ಮಂದಿ ಸಾವನ್ನಪ್ಪಿದ್ದು, ಅವರಲ್ಲಿ 15 ಮಂದಿಯನ್ನು ಗುರುತಿಸಲಾಗಿದ್ದು, 38 ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ರಕ್ಷಣಾ ಕಾರ್ಯಾಚರಣೆಯು ಸುಮಾರು ಎರಡು ಗಂಟೆಗಳನ್ನು ತೆಗೆದುಕೊಂಡಿತು ಮತ್ತು 17 ಮೃತ ದೇಹಗಳನ್ನು ಮೊದಲು ಹಬ್ ಜಿಲ್ಲೆಯ ಸಿವಿಲ್​ ಆಸ್ಪತ್ರೆಯ ಶವಾಗಾರದಲ್ಲಿರಸಲಾಗಿದೆ. ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಕೂಡ ಘಟನೆಯ ಬಗ್ಗೆ ಗಮನ ಹರಿಸಿದ್ದು, ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗಳಿಗೆ ವರ್ಗಾಯಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

WhatsApp Group Join Now
Telegram Group Join Now
Share This Article