This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ಕರ್ನಾಟಕ ಹೈಕೋರ್ಟಗೆ ೫ ದಿನ ದಸರಾ ರಜೆ


ಬೆಂಗಳೂರು ಸೆ., ೩೦- ಅಕ್ಟೋಬರ ೩ ರಿಂದ ೫ ದಿನಗಳ ಕಾಲ ದಸರಾ ರಜೆ ಇರಲಿದೆ. ತುರ್ತು ಪ್ರಕರಣಗಳ ವಿಚಾರಣೆಗೆ ಮಾತ್ರ ಅವಕಾಶ ನೀಡಲಾಗಿದೆ.
ಈ ರಜಾ ಕಾಲದಲ್ಲಿ ಕಾರ್ಯ ನಿರ್ವಹಿಸಲು ನ್ಯಾಯಪೀಠಗಳನ್ನು ರಚಿಸಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ ಅರಾಧೆ ಅವರು, ರಜಾ ಕಾಲಾದಲ್ಲಿ ನ್ಯಾಮೂರ್ತಿಗಳಾದ ಎಸ್. ಸುನೀಲ ದತ ಯಾದವ ಅವರು ಮತ್ತು ಟಿ.ಜಿ.ಶಿವಶಂಕರೇಗೌಡ ಅವರು ೮ ನೇ ಕೋರ್ಟ ಹಾಲ್ ನಲ್ಲಿ ವಿಚಾರಣೆ ನಡೆಸಲಿದ್ದಾರೆ. ಇನ್ನೂ ಕೋರ್ಟ ಹಾಲ್ ನಂ. ೯ ರಲ್ಲಿ ನ್ಯಾಯಮೂರ್ತಿಗಳಾದ ಎನ್.ಎಸ್.ಸಂಜಯಗೌಡ ಅವರು, ಕೋರ್ಟ ಹಾಲ್ ನಂ. ೧೦ ರಲ್ಲಿ ನ್ಯಾಯಮೂರ್ತಿಗಳಾದ ಎಂ.ಜಿ.ಎಸ್.ಕಮಲ್ ಅವರು ಮತ್ತು ಕೋರ್ಟ ಹಾಲ್ ನಂ. ೧೧ ರಲ್ಲಿ ಸಿ.ಎಂ.ಪೊಣ್ಣಚ್ಚ ಅವರು ಏಕ ಸದಸ್ಯ ಪೀಠಕ್ಕೆ ಸಂಬಂಧಿತ ಪ್ರಕರಣಗಳ ವಿಚಾರಣೆಯನ್ನು ನಡೆಸಲಿದ್ದಾರೆ.
ಧಾರವಾಡ ಮತ್ತು ಕನಬುರ್ಗಿ ಪೀಠಗಳಲ್ಲಿ ಈ ರಜೆ ಸಮಯದಲ್ಲಿ ಯಾವುದೇ ತರಹದ ಭೌತಿಕ ವಿಚಾರಣೆ ಇರುವುದಿಲ್ಲ. ಇನ್ನೂ ತುರ್ತು ಪ್ರಕರಣಗಳ ವಿಚಾರಣೆಯನ್ನು ಬೆಂಗಳೂರಿನ ಪ್ರಧಾನ ಪೀಠವಿ ವರ್ಚುವಲ್ ಮೂಲಕ ವಿಚಾರಣೆಯನ್ನು ನಡೆಸುತ್ತದೆ. ತುರ್ತು ಮಧ್ಯಂತರ ಆದೇಶ, ತಡೆಯಾಜ್ಞೆ, ಮಧ್ಯಂತರ ನಿರ್ದೇಶನಗಳಿಗೆ ಸಂಂಧಿತ ವಿಷಯಗಳ ವಿಚಾರಣೆಗನ್ನು ಮಾತ್ರ ಮಾಡಲಾಗುತ್ತದೆ. ಈ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳ ಸಂಬಂಧ ಅರ್ಜಿಗಳನ್ನು ಅಕ್ಟೋಬರ್ ೩ ರಂದು ಬೆಳಿಗ್ಗೆ ೧೦.೩೦ ರಿಂದ iಧ್ಯಾಹ್ನ ೧೨.೩೦ ವರೆಗೆ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿ ದಾಖಲು ಮಾಡಬಹುದು ಮತ್ತು ಇ-ಫೈಲಿಂಗ್ ಪೋರ್ಟಲ್ ಮೂಲಕ ಸಹ ಅರ್ಜಿಯನ್ನು ದಾಖಲಿಸಬಹುದಾಗಿದೆ. ಎಂದು ಪ್ರಭಾರಿ ನ್ಯಾಯಿಕ ರಜಿಸ್ಟ್ರಾರ ಕೆ.ಎಸ್.ಭರತಕುಮಾರ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.


Leave a Reply