ಎಟಿಎಂ ವಾಹನದಲ್ಲಿ ಸಾಗಿಸುತ್ತಿದ್ದ ದಾಖಲೆರಹಿತ 4 ಕೋಟಿ ಹಣ ಚುನಾವಣಾಧಿಕಾರಿಗಳ ವಶಕ್ಕೆ

Ravi Talawar
WhatsApp Group Join Now
Telegram Group Join Now

ಚಿಕ್ಕಬಳ್ಳಾಪುರ ಏಪ್ರಿಲ್ 17: ಸೂಕ್ತ ದಾಖಲೆಗಳಿಲ್ಲದೇ ಎಟಿಎಂ ವಾಹನದಲ್ಲಿ ಸಾಗಿಸುತ್ತಿದ್ದ ಅಂದಾಜು 4 ಕೋಟಿ ರೂ.ಗಳನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಚಿಕ್ಕಬಳ್ಳಾಪುರ ನಗರದ ಡಿ-ಕ್ರಾಸ್ ಬಳಿ ಖಚಿತ ಮಾಹಿತಿ ಮೇರೆಗೆ ವಾಹನವನ್ನು ತಪಾಸಣೆ‌ ನಡೆಸಿದಾಗ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ. ಬಳಿಕೆ ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ಇಡಿ ಹಾಗೂ ಐಟಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಮೇಲ್ನೋಟಕ್ಕೆ ರೋಜಿಪುರದ ಎಟಿಎಂ ಗೆ ಸಾಗಿಸುತ್ತಿದ್ದ ಹಣ ಎಂದು ತಿಳಿದುಬಂದಿದೆ. ಆದರೆ ಹಣಕ್ಕೆ‌ ಸಂಬಂಧಿಸಿದ ಸೂಕ್ತ ದಾಖಲೆ ಇರಲಿಲ್ಲ. ಹಾಗಾಗಿ ಹಣವನ್ನು ಠಾಣೆಗೆ ಸಾಗಿಸಿದ್ದು, ಲೆಕ್ಕ ಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಚುನಾವಣಾಧಿಕಾರಿಗಳು ದೂರು ಸಹ ನೀಡಿದ್ದು, ಪ್ರಕರಣ ದಾಖಲಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

WhatsApp Group Join Now
Telegram Group Join Now
Share This Article