This is the title of the web page

ಶ್ರೀ ವೇಮನ್ ಸೊಸಾಯಿಟಿಯ 21ನೇ ವಾರ್ಷಿಕ ಸರ್ವ ಸಾಧಾರಣ ಸಭೆ

ವರ್ಷ ಅಂತ್ಯಕ್ಕೆ 1.72 ಕೋಟಿ ಲಾಭ, ಶೇರುದಾರರಿಗೆ ಶೇ.13ರಷ್ಟು ಲಾಭಾಂಶ ವಿತರಣೆ...

0 6

ಮೂಡಲಗಿ: ಸಹಕಾರ ತತ್ವದಡಿಯಲ್ಲಿ ಹುಟ್ಟಿದ ವೇಮನ ಸೊಸಾಯಿಟಿಯು ಕಳೆದ 21 ವರ್ಷಗಳ ಕಾಲ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿ ಪ್ರಗತಿ ಪಥದತ ಸಾಗುತ್ತಿರುವುದು ಶ್ಲಾಘನಿಯ, ಇನ್ನೂ ಹೆಚ್ಚಿನ ಕಾರ್ಯ ಕ್ಷೇತ್ರವನ್ನು ವಿಸ್ತರಿಸಿ ಸಾಮಾನ್ಯ ಜನರಿಗೆ ಹಣಕಾಸಿನ ನೇರವು ನೀಡಿ ಸಾವಲಂಬಿ ಜೀವನ ನಡೆಸಲು ಸಹಕರಿಸ ಬೇಕೆಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎ.ಪಿ.ರಡ್ಡಿ ಹೇಳಿದರು.

ಬುಧವಾರ ಪಟ್ಟಣದಲ್ಲಿ ಜರುಗಿದ ಪಟ್ಟಣದ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ಶ್ರೀ ವೇಮನ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ 21ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ ಸೊಸೈಟಿಯ ಅಧ್ಯಕ್ಷ ಸಂತೋಷ್ ಸೋನವಾಲಕರ ಮಾತನಾಡಿ, ಕಳೆದ ಆರ್ಥಿಕ ವರ್ಷದ ಅಂತ್ಯಕ್ಕೆ 2.69 ಕೋಟಿ ರೂ ಶೇರು ಬಂಡವಾಳ, 6.16 ಕೋಟಿ ರೂ ನಿಧಿಗಳು, 99.10 ಕೋಟಿ ರೂ ಠೇವು ಸಂಗ್ರಹಿಸಿ ಒಟ್ಟು 114.22 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿ 1.72 ಕೋಟಿ ಲಾಭಗಳಿಸಿ ಶೇರುದಾರರಿಗೆ ಶೇ.13ರಷ್ಟು ಲಾಭಾಂಶವನ್ನು ವಿತರಿಸಲಾಗಿದೆ, ಶೇರುದಾರ ಮತ್ತು ಸಿಬ್ಬಂದಿ ವರ್ಗದವರ ಸಹಕಾರದಿಂದ ಸೋಸೈಟಿಯ ಆರು ಶಾಖೆಗಳು ಪ್ರಗತಿ ಪಥದತ್ತ ನಡೆದಿವೆ ಎಂದರು.

ಗೋಕಾಕದ ಲೆಕ್ಕಪರಿಶೋಧಕ ಎಸ್. ಬಿ. ಗದಾಡಿ ಮಾತನಾಡಿ, ಸರಕಾರ ಮಾಡಲಾಗದ ಕಾರ್ಯವನ್ನು ಇಂದು ಸಹಕಾರಿ ರಂಗ ಮಾಡುತ್ತಿದೆ, 20 ವರ್ಷಗಳ ಹಿಂದೆ ಹುಟ್ಟಿದ ವೇಮನ ಸಂಸ್ಥೆಯು ಆರೋಗ್ಯ, ಶಿಕ್ಷಣ ಹಾಗೂ ಇತರೆ ಸಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಮಾಜಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಮುಂದಾಗಬೇಕೆಂದು ಸೋಸೈಟಿಯ ಆಡಳಿತ ಮಂಡಳಿಗೆ ಸಲಹೆ ನೀಡಿದರು.ಬೆಳಗಾವಿ ಡಿಆರ್ ಕಚೇರಿಯ ಅಧಿಕಾರಿ ವಿನಾಯಕ ಲಕ್ಷಾಣಿ ಮತ್ತು ಪಿಎಸ್‌ಐ ಹಾಲಪ್ಪ ಬಾಲದಂಡಿ ಮಾತನಾಡಿದರು.

ಸಭೆಯ ವೇದಿಕೆಯಲ್ಲಿದ ಸೋಸಾಯಿಟಿಯ ಉಪಾಧ್ಯಕ್ಷ ಎಚ್.ಆರ್.ಪ್ಯಾಟಿಗೌಡ್ರ, ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಸೋಸೈಟಿಯ ವಿವಿಧ ಶಾಖೆಯಗಳ ಸಲಹಾ ಸಮೀತಿಯ ಅಧ್ಯಕ್ಷರಾದ ಗೋವಿಂದಪ್ಪ ನಾಯಿಕ, ರಾಮಣ್ಣ ಕಾತರಕಿ, ಹನಮಂತ ಹುಚ್ಚರಡ್ಡಿ, ವೆಂಕಣ್ಣ ಗಿಡ್ಡಪ್ಪನವರ, ಪ್ರಧಾನ ವ್ಯವಸ್ಥಾಪಕ ಪಿ.ಬಿ.ಕುಟರಟ್ಟಿ ಅವರನ್ನು ಹಾಗೂ ಪ್ರಧಾನ ಕಛೇರಿಯ ನಿರ್ದೇಶಕರಾದ ವಿಜಯಕುಮಾರ ಸೋನವಾಲ್ಕರ, ಪಾಂಡಪ್ಪ ಸೋನವಾಲ್ಕರ, ಯಮನಪ್ಪ ಮಂಟನವರ, ತಮ್ಮಣ್ಣಾ ಝಂಡೇಕುರಬರ, ಹಣಮಂತ ದಂಡಪ್ಪನವರ, ಸಿದ್ದಪ್ಪ ಪೂಜೇರಿ, ಸಚೀನ ಸೊನವಾಲ್ಕರ, ಲಕ್ಷ್ಮೀಬಾಯಿ ಸಂತಿ, ಲತಾ ಸತರಡ್ಡಿ ರಾಮಪ್ಪ ಹಾದಿಮನಿ ಹಾಗೂ ಶಾಖೆಗಳ ಸಲಹಾ ಸಮೀತಿ ಸದಸ್ಯರನ್ನು ಹಾಗೂ ಅತಿಥಿಗಳನ್ನು ಸತ್ಕರಿಸಿ ಗೌರವಿಸಿದರು.

ಸಭೆಯಲ್ಲಿ 2021-22ರ ವರದಿ ವಾಚನ ಮತ್ತು ಅಢಾವೆ ಪತ್ರಿಕೆಯನ್ನು ಶ್ರೀಮತಿ ಎಸ್.ಎಲ್.ಮರಾಠಿ ಮತ್ತು ಎಲ್. ಆಯ್.ಕುರುಬಗಟ್ಟಿ, ಲಾಭ-ಹಾನಿ ಗಂಗಪ್ಪ ಹುಂಡೆಕರ, ಲಾಭ ವಿಭಾಗವನ್ನು ಎ.ಎನ್. ಅಣ್ಣಿಗೇರಿ ಅವರು ಮಂಡಿಸಿದರು, ಎಚ್. ಎಲ್. ತೇರದಾಳ 2022-23ರ ಅಂದಾಜು ಪತ್ರಿಕೆ ಮಂಡಿಸಿ ಮಂಜುರು ಪಡೆದರು. ಪಿ.ಬಿ.ಕುಲಕರ್ಣಿ ನಿರೂಪಿಸಿದರು, ಮಹಾವೀರ ಸಲ್ಲಾಗೋಳ ಸ್ವಾಗತಿಸಿ ವಂದಿಸಿದರು.

You might also like
Leave a comment