10 ವರ್ಷಗಳ ಕೆಲಸ ಕೇವಲ ಟ್ರೇಲರ್​, ಪಿಕ್ಚರ್ ಅಭೀ ಬಾಕಿ ಹೈ: ಪ್ರಧಾನಿ ಮೋದಿ

Ravi Talawar
WhatsApp Group Join Now
Telegram Group Join Now

ಚುರು,ರಾಜಸ್ಥಾನ ಏಪ್ರಿಲ್​ 05:  ”ಕಳೆದ ಹತ್ತು ವರ್ಷಗಳಿಂದ ನಡೆದ ಕಾರ್ಯಗಳು ಕೇವಲ ಟ್ರೇಲರ್​ ಅಷ್ಟೇ. ಇನ್ನೂ ಸಾಕಷ್ಟು ಕೆಲಸಗಳನ್ನು ಮಾಡಬೇಕಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಶುಕ್ರವಾರ ಚುನಾವಣಾ ಪ್ರಚಾರಸಭೆ ಉದ್ದೇಶಿಸಿ ಅವರು ಭಾಷಣ ಮಾಡಿದರು.

”ಕಳೆದ 10 ವರ್ಷಗಳಲ್ಲಿ ಎಷ್ಟಾಗಿದೆ ಎಂಬುದು ವಿಷಯವಲ್ಲ. ಏನಾಗಿದೆಯೋ ಅದು ಇಲ್ಲಿಯವರೆಗಿನ ಕೇವಲ ಟ್ರೇಲರ್. ಈತನಕ ಮೋದಿ ಏನು ಮಾಡಿದ್ದರೋ, ಅದು ಕೇವಲ ಹಸಿವು ನೀಗಿಸುವುದಾಗಿತ್ತು. ಪ್ರಮುಖ ಉದ್ದೇಶ ಸಾಧನೆ ಇನ್ನು ಮುಂದೆ ಆಗಲಿದೆ. ಇನ್ನೂ ಸಾಕಷ್ಟು ಮಾಡಬೇಕಿದೆ. ಬಹಳಷ್ಟು ಕನಸುಗಳಿವೆ” ಎಂದು ಪ್ರಧಾನಿ ತಿಳಿಸಿದರು.

”ಇಂದು ಇಡೀ ದೇಶ ಭಾರತವನ್ನು ಅಭಿವೃದ್ಧಿಪಡಿಸುವ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದೆ. ರಾಜಸ್ಥಾನವೂ ಇದರಲ್ಲಿ ದೊಡ್ಡ ಪಾತ್ರ ಹೊಂದಿದೆ. ನವ ಭಾರತ ಎಂಬುದು ನಮ್ಮ ಶತ್ರುಗಳಿಗೂ ಸಹ ಗೊತ್ತಾಗಿದೆ. ತಮ್ಮದೇ ಪ್ರದೇಶಗಳಿಗೆ ನುಗ್ಗಿ ದಾಳಿ ಮಾಡುವ ಭಾರತದ ಪರಾಕ್ರಮದ ಬಗ್ಗೆ ಶುತ್ರುಗಳಿಗೆ ತಿಳಿದಿದೆ” ಎಂದರು.

ಇದೇ ವೇಳೆ, ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ ಅವರು, ”ದೇಶದ ಸೇನೆಗೆ ಅವಮಾನ ಮತ್ತು ದೇಶವನ್ನು ವಿಭಜನೆ ಮಾಡುವುದು ಮಾತ್ರ ಆ ಪಕ್ಷಕ್ಕೆ ಗೊತ್ತು” ಎಂದು ದೂರಿದರು. ಕಾಂಗ್ರೆಸ್​ ಹಾಗೂ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವನ್ನು ಟೀಕಿಸಿದ ಮೋದಿ, ”ಆ ಪಕ್ಷಗಳಿಗೆ ತಮ್ಮ ಸ್ವಂತ ಹಿತಾಸಕ್ತಿವೇ ಮುಖ್ಯ. ಬಡವರು, ದಲಿತರು, ಅವಕಾಶ ವಂಚಿತ ಜನರ ಕಲ್ಯಾಣ ಮತ್ತು ಅವರಿಗೆ ಗೌರವ ಕೊಡುವಂಥದ್ದು ಮಾಡಿಲ್ಲ” ಎಂದ ಹೇಳಿದರು.

ಅಲ್ಲದೇ, ”ಈ ಘಮಾಂಡಿಯಾ ಘಟ್​ಬಂಧನ್ ಜನರು ಚುನಾವಣಾ ಸಭೆಗಳನ್ನು ನಡೆಸುತ್ತಿಲ್ಲ, ಅವರು ಭ್ರಷ್ಟರನ್ನು ಉಳಿಸಲು ಸಭೆಗಳನ್ನು ನಡೆಸುತ್ತಿದ್ದಾರೆ. 10 ವರ್ಷಗಳಲ್ಲಿ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಇಡಿ ವಶಪಡಿಸಿಕೊಂಡಿದೆ” ಎಂದು ಮಾಹಿತಿ ನೀಡಿದರು. ತಮ್ಮ ಭಾಷಣದಲ್ಲಿ ತ್ರಿವಳಿ ತಲಾಖ್​​ ಕಾನೂನು ಕುರಿತು ಪ್ರಸ್ತಾಪಿಸಿ, ”ಈ ಕಾನೂನು ಕೇವಲ ಮುಸ್ಲಿಂ ಸಹೋದರಿಯರ ಜೀವನವನ್ನು ಮಾತ್ರವೇ ರಕ್ಷಿಸಿಲ್ಲ. ಬದಲಿಗೆ ಎಲ್ಲ ಮುಸ್ಲಿಂ ಕುಟುಂಬಗಳನ್ನೂ ಉಳಿಸಿದೆ” ಎಂದರು.

WhatsApp Group Join Now
Telegram Group Join Now
Share This Article