ಮಲೇಷ್ಯಾದಲ್ಲಿ 2 ಸೇನಾ ಹೆಲಿಕಾಪ್ಟರ್ ಗಳು ಢಿಕ್ಕಿಯಾದ ಪರಿಣಾಮ 10 ಮಂದಿ ದಾರುಣ ಸಾವು

Ravi Talawar
WhatsApp Group Join Now
Telegram Group Join Now

ಕೌಲಾಲಂಪುರ,23: ಅಭ್ಯಾಸದ ವೇಳೆ 2 ಹೆಲಿಕಾಪ್ಟರ್ ಗಳು ಢಿಕಿಯಾದ ಪರಿಣಾಮ ಅದರೊಳಗಿದ್ದ 10 ಮಂದಿ ಸಾವಿಗೀಡಾಗಿರುವ ಘಟನೆ ಮಲೇಷ್ಯಾದಲ್ಲಿ ನಡೆದಿದೆ.

ಮುಂದಿನ ತಿಂಗಳು ನಡೆಯಲಿರುವ ಮಲೇಷ್ಯಾ ನೌಕಾಪಡೆಯ 90ನೇ ವಾರ್ಷಿಕೋತ್ಸವದ ಅಂಗವಾಗಿ ಹೆಲಿಕಾಪ್ಟರ್‌ಗಳು ನಾರ್ತ್ ಪೆರಾಕ್ ಸ್ಟೇಟ್‌ನ ನೌಕಾ ನೆಲೆಯಲ್ಲಿ ಕಸರತ್ತು ನಡೆಸುತ್ತಿದ್ದ ಸಂದರ್ಭದಲ್ಲಿ ದುರಂತ ಸಂಭವಿಸಿದೆ. ರಾಯಲ್ ಮಲೇಷ್ಯಾ ನೇವಿ ಹೆಲಿಕಾಪ್ಟರ್ ಗಳು ಪರಸ್ಪರ ಢಿಕ್ಕಿಯಾಗಿದ್ದು, ವೈಮಾನಿಕ ಕಸರತ್ತು ನಡೆಸುತ್ತಿದ್ದ ಎಲ್ಲ 10 ಸಿಬ್ಬಂದಿ ಮೃತಪಟ್ಟಿದ್ದಾರೆ.

ಅಂತೆಯೇ ಘಟನೆಗೆ ಸಂಬಂಧಿಸಿದಂತೆ ಮಲೇಷ್ಯಾ ತನಿಖೆಗೆ ಆದೇಶಿಸಿದ್ದು, ಮೃತರ ದೇಹಗಳನ್ನು ಮಲೇಷ್ಯಾ ನೌಕಾಪಡೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಲೇಷ್ಯಾದ ವಸತಿ ಮತ್ತು ಸ್ಥಳೀಯ ಸರ್ಕಾರದ ಸಚಿವಾಲಯದ ಪ್ರಕಾರ, ಎರಡು ಹೆಲಿಕಾಪ್ಟರ್‌ಗಳು ಯುರೋಕಾಪ್ಟರ್ AS555SN ಫೆನೆಕ್ ಮತ್ತು ಅಗಸ್ಟಾ-ವೆಸ್ಟ್‌ಲ್ಯಾಂಡ್ ಸಂಸ್ಥೆ ನಿರ್ಮಿಸಿದ AW-1 ಚಾಪರ್ ಮೇ ತಿಂಗಳಲ್ಲಿ ಬೇಸ್‌ನಲ್ಲಿ ನಿಗದಿಪಡಿಸಲಾದ TLDM ಫ್ಲೀಟ್ ಓಪನ್ ಡೇಗಾಗಿ ಫ್ಲೈಪಾಸ್ಟ್ ರಿಹರ್ಸಲ್‌ ಮಾಡುತ್ತಿದ್ದವು.

ಈ ವೇಳೆ ಹೆಲಿಕಾಪ್ಟರ್ ಗಳ ರೆಕ್ಕೆಗಳು ಪರಸ್ಪರ ಬಡಿದಿದ್ದು, ಈ ವೇಳೆ ಕಾಪ್ಟರ್ ಗಳನು ಪತನವಾಗಿದೆ ಎಂದು ಹೇಳಿದೆ.

WhatsApp Group Join Now
Telegram Group Join Now
Share This Article