ಮನುಕುಲ ಬೆಳಗುವ ಶಿಕ್ಷಕ ಜ್ಯೋತಿ

ಮಹಾನ ತತ್ವಜ್ಞಾನಿ ರೂಸೋ ಹೇಳಿದಂತೆ ‘ಶಿಕ್ಷಕ ಮಾನವ ನಿರ್ಮಾತೃ’ ಎಂದಿದ್ದು ನಿಜಕ್ಕೂ ಅಕ್ಷರಶ: ಸತ್ಯವಾದ ಮಾತು.ಶಿಕ್ಷಕ ಸಮಾಜದ ಶಿಲ್ಪಿ,ಈ ದೇಶದ ಬೆನ್ನೆಲಬು. ಯಾವ ದೇಶ ಅಭಿವೃದ್ಧಿ ಹೊಂದಬೇಕಾಗಿದೆಯೋ ಅದು ಅಲ್ಲಿನ ಜ್ಞಾನ ಸಂಪನ್ನಮೂಲ ಶಿಕ್ಷಕರನ್ನು ಅವಲಂಭಿಸಿರುತ್ತದೆ.ನೆಪೋಲಿಯನ್ ಹೇಳುವಂತೆ A development of country depend upon a quality teachers. ಎಂದಿದ್ದು ಸೂಕ್ತವಾಗಿದೆ.ದೇಶದ ನವ ನಾಗರೀಕರನ್ನು ನಿರ್ಮಾಣ ಮಾಡುವ ಗುರುತರವಾದ ಹೊಣೆಗಾರಿಕೆ ಅಂತಹ ಶಿಕ್ಷಕರ ಮೇಲಿರುತ್ತದೆ.ಅಂತೆಯೇ ಹಿಂದೂ ಧರ್ಮದ ಪ್ರಕಾರ ತಾಯಿಯ ಗರ್ಭದಿಂದ ಹೊರ ಬಂದ ನಂತರ ಮಗು ನಂತರದಲ್ಲಿ ಶಿಕ್ಷಕನ ಕೈಯಲ್ಲಿ ಪುನರ ಜನ್ಮ ಪಡೆಯುತ್ತದೆ.ಅದಕ್ಕಾಗಿಯೇ ನಾವು ಪ್ರಾಚೀನ ಕಾಲದಿಂದಲೂ ಗುರು ಬ್ರಹ್ಮ ಗುರು ವಿಷ್ಣು ಗುರುದೇವ ಸಾಕ್ಷಾತ್ ಮಹೇಶ್ವರ ಎಂದು ಹೇಳಿದ್ದು ಸೂಕ್ತವಾಗಿದೆ.ಆ ಕಾಲದ ಶಿಕ್ಷಕರ ನಿಷ್ಠೆ,ಕರ್ತವ್ಯಪಾಲನೆ,ವೃತ್ತಿ ಗೌರವ,ಮಕ್ಕಳಪರ ಕಾಳಜಿ,ಸಾಮಾಜಿಕ ಕಳಕಳಿ ಇವೆಲ್ಲವುಗಳಿಂದ ಅಂದಿನ ಕಾಲದ ಶಿಕ್ಷಕರು ದೇವರ ನಂತರದ ಸ್ಥಾನವನ್ನು ಪಡೆದು ಕೊಂಡು ಶಿಕ್ಷಕನ ಸ್ಥಾನಮಾನಗಳನ್ನು ಸಮಾಜದಲ್ಲಿ ಉತ್ತುಂಗಕ್ಕೇರಿಸಿದರು. ಅಂಥವರ ಸಾಲಿಗೆ ಸರ್ವಪಲ್ಲಿ ರಾಧಾಕೃಷ್ಣನ್‍ನವರು ಒಬ್ಬರು.


ಸೆಪ್ಟೆಂಬರ 05 ಡಾ. ಸರ್ವಪಲ್ಲಿ ರಾಧಾಕೃಷ್ಣನ್ ನವರ ಹುಟ್ಟು ಹಬ್ಬವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. 1888 ರಂದು ಸಪ್ಟೆಂಬರ 05 ರಂದು ಆಂಧ್ರಪ್ರದೇಶದ ತಮಿಳುನಾಡಿನ ಗಡಿ ಭಾಗದ ಊರಾದ ತಿರುತ್ರಣಿ ಎಂಬಲ್ಲಿ ರಾಧಾಕೃಷ್ಣನ್ನವರ ಜನನ.ತಂದೆ ವೀರಸ್ವಾಮಿ,ತಾಯಿ ಸೀತಮ್ಮ.ಅವರ ಅಜ್ಜ ಆಂಧ್ರದ ನೆಲ್ಲೂರು ಜಿಲ್ಲೆಯ ಸರ್ವೇಪಲ್ಲಿಯವರಾದ್ದರಿಂದ ಅವರಿಗೆ ಸರ್ವೇಪಲ್ಲಿ ರಾಧಾಕೃಷ್ಣನ್ ಎಂಬ ಹೆಸರು ಬಂದಿತು. ಬಾಲ್ಯದಿಂದಲೇ ಉಪನಿಷತ್ತು,ರಾಮಾಯಣ,ಮಹಾಭಾರತ,ಪುರಾಣಗಳಲ್ಲಿ ವಿಶೇಷ ಒಲವು. 1911 ರಲ್ಲಿ ಮದ್ರಾಸ ವಿಶ್ವವಿದ್ಯಾಲಯದಿಂದ ಎಂಎ,ಪದವೀಧರರಾದರು.


ನಂತರದಲ್ಲಿ ಅನೇಕ ಶಾಲಾ ತನಿಖಾಧಿಕಾರಿಯಾಗಿ ಸೇವೆ ಪ್ರಾರಂಭಿಸಿ,1914 ರಲ್ಲಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಉಪನ್ಯಾಸಕರಾದರು.1918 ರಿಂದ 1921 ರವರೆಗೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ತತ್ವಶಾಸ್ತ್ರ ಪ್ರಾಧ್ಯಾಪಕರಾದರು.1921 ರಿಂದ 1925 ರವರೆಗೆ ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥರಾದರು.1926 ರಲ್ಲಿ ಚಿಕ್ಯಾಗೋ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ, 1929 ರಿಂದ 1930 ರವರೆಗೆ ಆಕ್ಸಫರ್ಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ,1931ರಲ್ಲಿ ಆಂಧ್ರ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳಾಗಿ 1939ರವರೆಗೆ,ನಂತರದಲ್ಲಿ 1945 ರವರೆಗೆ, ಬನಾರಸ ವಿವಿಯಲ್ಲಿ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದರು.ಇವರ ಪತ್ನಿಯ ಹೆಸರು ಶಿವಕಾಮಮ್ಮ.
ಅವರು 1948-49 ರ ಅವಧಿಗೆ ಅವರು ಯುನೆಸ್ಕೋ ಅಧ್ಕಕ್ಷ

ರು ಆದರು.1949-52- ರಲ್ಲಿ ಅವರು ಸೋವಿಯತ್ ರಷ್ಯಾಕ್ಕೆ ರಾಯಭಾರಿಗಳಾಗಿ ನೇಮಕಗೊಂಡರು.1952ರಲ್ಲಿ ಭಾರತದ ಮೊಟ್ಟ ಮೊದಲ ಉಪರಾಷ್ಟ್ರಪತಿಗಳಾಗಿ
ಆಯ್ಕೆಯಾದರು.1962 ರ ಮೇ 11 ರಂದು ಭಾರತದ ರಾಷ್ಟ್ರಪತಿಗಳು ಆದರು.ಇವರು ರಾಷ್ಟ್ರಪತಿಗಳಾಗಿದ್ದಾಗ ತಮ್ಮ 10000 ಇದ್ದ ವೇತನವನ್ನು 2000 ಕ್ಕೆ ಕಡಿತಗೊಳಿಸಿದ್ದರು.ಇವರ ಅವಧಿಯಲ್ಲಿ ಭಾರತವು ಚೀನ ಪಾಕದೊಂದಿಗೆ ಯುದ್ಧ ನಡೆದ ಕ್ಲಿಷ್ಟ ಪರಿಸ್ಥಿತಿಯನ್ನು ನಿಭಾಯಿಸಿದರು.1965 ರ ನಂತರ


ಎಲ್ಲದರಿಂದ ನಿವೃತ್ತಿ ಹೊಂದಿ ಒಬ್ಬ ಸಂಶೋಧಕ ವಿದ್ಯಾರ್ಥಿಯಂತೆ ನಿತ್ಯವೂ ಹೊಸ ವಿಷಯಗಳನ್ನು ಗ್ರಹಿಸುತ್ತ ತಮ್ಮ ಬೋಧನೆಯನ್ನು ವಿದ್ಯಾರ್ಥಿಗಳಲ್ಲಿ ಮುಂದುವರೆಸಿದರು.ಬೋಧನೆ ಅವರ
ಉಸಿರಾಗಿತ್ತು ಅದು ಅವರ ಜೀವನದ ತಪಸ್ಸು ಆಗಿತ್ತು.ಡಾ.ರಾಧಾಕೃಷ್ಣನ್ನವರು ಕಲ್ಕತ್ತ
ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಮೈಸೂರಿನಿಂದ ಹೊರಟ ಆ ದಿನ ಅವರಿಗೆ ಅವರು ವಿದ್ಯಾರ್ಥಿಗಳು ನೀಡಿದ ಬೀಳ್ಕೊಡಿಗೆಯನ್ನು ಬಹುಶ: ಯಾವ ಚಕ್ರವರ್ತಿಗೂ ಕೊಟ್ಟಿರಲಿಕ್ಕಿಲ್ಲ.ರೇಲ್ವೆಸ್ಟೇಷನ ರವರೆಗೆ ಅವರು ಕುಳಿತು ಕೊಳ್ಳುವ ಕುದರೆ ಗಾಡಿಯನ್ನು ಸಿಂಗರಿಸಿ ಅದನ್ನು ಕುದರೆಯಿಂದ ಎಳೆಗೊಡದೇ ತಾವೇ ಮೈಸೂರಿನ ಬೀದಿಯುದ್ದಕ್ಕೂ ಎಳೆದುಕೊಂಡು ಹೋದರು.ರೈಲನ್ನು ವಶಪಡಿಸಿಕೊಂಡ ವಿದ್ಯಾರ್ಥಿಗಳು ಅವರು ಕುಳಿತುಕೊಳ್ಳುವ ಬೋಗಿಯನ್ನು ತಳಿರು ತೋರಣಗಳಿಂದ ಸಿಂಗರಿಸಿ ರತ್ನಗಂಬಳಿಯಿಂದ ಸಿಂಗರಿಸಿ ಗುರುವಿನ ರಥೋತ್ಸವದ ಮುಂದೆ ಅವರೆಲ್ಲಾ ಗುರುಗಳ ಮುಂದೆ ಬಿಕ್ಕಿ ಬಿಕ್ಕಿ ಅತ್ತರಂತೆ.ಎಂದೂ ಮರೆಯಲಾರದ ಈ ಬೀಳ್ಕೊಡಿಗೆ ಕಂಡು ರಾಧಾಕೃಷ್ಣನ್ ನವರ ಕಣ್ಣುಗಳು ತೇವಗೊಂಡವು.
ಯಾವ ಉನ್ನತ ಪೀಠವೂ ಇವರಲ್ಲಿ ಅಹಂಕಾರವನ್ನು ತುಂಬಲಿಲ್ಲ.ಅಂತಹ ರಾಧಾಕೃಷ್ಣನ್ನವರು ವಿಶ್ವಮಾನ್ಯರಾಗಿದ್ದರು.ತಮ್ಮ ಅನೇಕ ಗ್ರಂಥಗಳ ಮೂಲಕ ಭಾರತೀಯ ತತ್ವಜ್ಞಾನವನ್ನು ಸಮೃದ್ಧಗೊಳಿಸಿದರು.ವಿದ್ಯಾರ್ಥಿಗಳ ಮೇಲೆ ಅವರೆಂದೂ ದರ್ಪವನ್ನು ಪ್ರದರ್ಶಿಸಲಿಲ್ಲ.ಪ್ರೀತಿಯಿಂದಲೇ ಅವರನ್ನು ಬೋಧನೆಯಲ್ಲಿ ಬಂಧಿಸಿ ಬಿಡುತ್ತಿದ್ದರು.ವಾತ್ಸಲ್ಯವನ್ನೇ ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿದ್ದರು.ಶಿಕ್ಷಕರೊಬ್ಬರು ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ್ದು ನಿಜಕ್ಕೂ ಶಿಕ್ಷಕ ಕುಲಕೋಟಿಗೆ ಸಂತಸದಾಯಕ ಸಂಗತಿ. ಭಾರತ ಸರಕಾರವು 1954 ರಲ್ಲಿ ದೇಶದ ಅತ್ಯುನ್ನತ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು ಘೋಷಿಸಿದಾಗ ಮೂರು ಹೆಸರುಗಳೂ ಪ್ರಶಸ್ತಿ ಪಟ್ಟಿಯಲ್ಲಿದ್ದವು.ಆ ಮೂರು ಹೆಸರುಗಳೂ ‘ರಾ’ ದಿಂದ ಪ್ರಾರಂಭವಾಗಿದ್ದವು. ರಾಧಾಕೃಷ್ಣನ್ ,ರಾಜಾಜಿ,ರಾಮನ್.


ಕಾಲ ಕಳೆದಂತೆ ಇಂದು ಸಮಾಜದಲ್ಲಿ ಶಿಕ್ಷಕರ ಸ್ಥಾನಮಾನಗಳು ಕಡಿಮೆಯಾಗುತ್ತಿವೆ.ಆ ಶಿಕ್ಷಕನ ಪಾವಿತ್ರ್ಯತೆಗೆ ಆಗಾಗ ಧಕ್ಕೆಯಾಗುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡುತ್ತಿರುತ್ತೇವೆ.ಯಾರೋ ಒಂದಿಬ್ಬರು ಮಾಡಿದ ತಪ್ಪನ್ನು ಇಡೀ ಶಿಕ್ಷಕ ಸಮುದಾಯಕ್ಕೆ ಅನ್ವಯಿಸುವದನ್ನು ಕಂಡಾಗ ಎಷ್ಟೋ ಪ್ರಾಮಾಣಿಕ ಶಿಕ್ಷಕರಿಗೆ ನೋವಾಗುತ್ತಿದೆ.ಈಗಲೂ ಅದೇಷ್ಟೋ ಪ್ರಾಮಾಣಿಕ ಆದರ್ಶ ಶಿಕ್ಷಕರು ತಮ್ಮ ವೃತ್ತಿಯನ್ನು ಉಸಿರಾಗಿರಿಸಿ ಕೊಂಡು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತದ್ದಾರೆ.ಅಂತವರಿಗೆ ನಮೋ ನಮ:. ಖಿeಚಿಛಿheಡಿ is ಚಿಟತಿಚಿಥಿs ಟeಚಿಡಿಟಿeಡಿ,sಣuಜeಟಿಣ ಅಂತಾ ಹೆಳುತ್ತೇವೆ.ಶಿಕ್ಷಕ ಜ್ಯೋತಿ ಅದು ಸ್ವತ: ಉರಿತಾ ಇದ್ದರೆ ಮಾತ್ರ ಇನ್ನೋಬ್ಬರಿಗೆ ಬೆಳಕನ್ನು ಕೊಡಲಿಕ್ಕೆ ಸಾಧ್ಯ.ಅಂತಹ ಶಿಕ್ಷಕರು ನಿರಂತರ ಜ್ಞಾನದಾಹಿಗಳಾಗಬೆಕು.ಈ ದೇಶದ ಉತ್ತಮ ಸತ್ಪ್ರಜೆಗಳನ್ನು ನಿರ್ಮಿಸಿ ಸಮಾಜಕ್ಕೆ ಅವರಿಂದ ಉತ್ತಮ ಕೊಡುಗೆಯನ್ನು ಕೊಡುವಂತೆ ಮಾಡಬೇಕು.ಶಿಕ್ಷಕರು ತಮ್ಮ ನಡೆ ನುಡಿಯಲ್ಲಿ ಆದರ್ಶರಾಗಿ ಮಕ್ಕಳಿಗೆ ಅನುಕರಣಾಪ್ರಾಯರಾಗಬೇಕಾಗಿದೆ.ಒಬ್ಬ ಡಾಕ್ಟರ ತಪ್ಪು ಮಾಡಿದರೆ ಒಂದೆರಡು ಜೀವ ಸಾಯಬಹುದು,ಒಬ್ಬ ಇಂಜನೀಯರ ತಪ್ಪು ಮಾಡಿದರೆ ಒಂದೆರಡು ಕಟ್ಟಡ ಬೀಳಬಹುದು,ಆದರೆ ಒಬ್ಬ ಶಿಕ್ಷಕ ತಪ್ಪು ಮಾಡಿದರೆ ಮನುಕುಲವೇ ನಾಶವಾಗಿ ಹೋಗಬಹುದು. ಅಂತಹ ಆದರ್ಶ ನಡಾವಳಿಕೆಯ ಚಾರಿತ್ರ್ಯವನ್ನು ಶಿಕ್ಷಕ ಹೊಂದಿ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು.ತನ್ನ ಮುಂದೆ ಕುಳಿತು ಪಾಠ ಕೇಳುವ ಮಕ್ಕಳು ನನ್ನ ಮಕ್ಕಳೆಂದೇ ಭಾವಿಸಿ ವಾತ್ಸಲ್ಯದಿಂದ ಪಾಠ ಮಾಡುವ ಹಂಬಲ ಪ್ರತಿಯೊಬ್ಬ ಶಿಕ್ಷಕನಲ್ಲಿ ಮೂಡಿ ಬರಬೇಕಾಗಿದೆ. ಕೇವಲ ಶಿಕ್ಷಕ ಸಂಬಳದ


ಉಪಾಧ್ಯಾಯನಾಗದೇ ತನ್ನ ವೃತ್ತಿಯನ್ನು ಆರಾಧಿಸುವ. ಪ್ರೀತಿಸುವ ಶಿಕ್ಷಕನಾಗಬೇಕು. ಯಾವ ಶಿಕ್ಷಕನಿಗೆ ತನ್ನ ವೃತ್ತಿಯ ಮೇಲೆ ಅಭಿಮಾನವಿಲ್ಲವೋ ಆತ ತನ್ನ ಆತ್ಮವನ್ನು ವಂಚಿಸಿಕೊಂಡಂತೆ.ಹಾಗೆಯೇ ಇಂದು ಶಿಕ್ಷಕ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.ನನ್ನಿಂದ ಈ ಸಮಾಜಕ್ಕೆ,ಈ ದೇಶಕ್ಕೆ ಏನು ಕೊಡಲಿಕ್ಕೆ ಸಾಧ್ಯ ಇದೆ ಎಂಬುದನ್ನು ಅರಿತು ಈ ನಾಡಿನ ಜ್ಞಾನದೀಪ ಬೆಳಗಿಸುವಂತ, ಯುವಶಕ್ತಿಯನ್ನು ನಿರ್ಮಿಸುವಂತ, ನಂದಾದೀಪ ಶಿಕ್ಷಕನಾಗಿ ತನ್ನ ಅದ್ವಿತೀಯ ಪಾತ್ರವನ್ನು ಸಲ್ಲಿಸಿದಾಗ ಮಾತ್ರ ಶಿಕ್ಷಕ ದಿನಾಚರಣೆಗೆ ಬೆಲೆ ಬರುವುದು ಅಲ್ಲವೇ?

  • ಬಸವರಾಜ ಗಂ. ಪುರಾಣಿಕಮಠ
    ಬೈಲಹೊಂಗಲ

 

ಶಿಕ್ಷಕ ದಿನಾಚರಣೆ: ಒಂದುಚಿಂತನೆ
ಶಿಕ್ಷಕ ಅಂದಾಗ ಪ್ರಾಥಮಿಕ ಶಿಕ್ಷಕರ ನೆನೆಪು ಮೊದಲಾಗುತ್ತದೆ.ಮಗುವಿನ ಭವ್ಯ ಭವಿತವ್ಯಕ್ಕೆ ಬುನಾದಿ ಹಾಕುವ, ನಾಳಿನ ಆದರ್ಶ ನಾಗರಿಕನನ್ನಾಗಿರೂಪಿಸುವ ಗುರುತರ ಹೊಣೆ ಈ ಗುರುಗಳ ಹಾಗೂ ಗುರುಮಾತೆಯರದ್ದಾಗಿರುತ್ತದೆ. ವಿದ್ಯಾರ್ಥಿಗಳ ಮನದಲ್ಲಿ ಶಿಕ್ಷಣ ಸಂಸ್ಕಾರವನ್ನು ಬಿತ್ತುವದರೊಂದಿಗೆಅವರಲ್ಲಿದೇಶಾಭಿಮಾನ, ಸಮಾಜಸೇವೆ, ಜಾತ್ಯಾತೀತ ಭಾವ ಹೀಗೆಲ್ಲ ಉದಾತ್ತ ಗುಣಗಳನ್ನು ಅರುಹಿ ಮಕ್ಕಳ ಮನಸ್ಸು ಅರಳುವಂತೆ ಮಾಡುವ ಪುಣ್ಯದû ಮತು ್ತಜವಾಬ್ದಾರಿಯುತವಾದ ಕೆಲಸ ಶಿಕ್ಷಕರದ್ದಾಗಿದೆ. ‘ಶಿಕ್ಷಣ ಇರುವದೇ ಚಾರಿತ್ರ್ಯ
ನಿರ್ಮಾಣಕ್ಕಾಗಿ’ಎಂದುಮಹಾತ್ಮಾಗಾಂಧೀಜಿ ಹೇಳಿದ್ದನ್ನು ನೆನಪಿನಲ್ಲಿಡಬೇಕು. ಸಾಮಾನ್ಯವಾಗಿ ದೊಡ್ಡವರು ತಪ್ಪು ಮಾಡಿದಾಗ‘ಯಾವಮಾಸ್ತರನಿನಗಶಾಲೀ ಕಲಿಸಿದ್ದಾನೆ’ಎಂದುಹೇಳುವಮಾತನ್ನು ಕೇಳಿದ್ದೇವೆ. ಅಂದರೆ ನಮ್ಮ ಬದುಕಿನ ಉದ್ದಕ್ಕೂ ನಮ್ಮನ್ನು ತಿದ್ದಿತೀಡಿ ಮನುಷ್ಯರನ್ನಾಗಿಮಾಡಿದ


ಅಂದಿನಶಿಕ್ಷಕರುಸದಾಸ್ಮರಣೀಯರಾಗುತ್ತಾರೆ. ಗಟ್ಟಿಯಾದ ತಳಪಾಯದ ಮೇಲೆ ಭವ್ಯವಾದ ಸೌಧವನ್ನು ನಿರ್ಮಿಸುವ ಕೆಲಸದ ನಿರ್ವಹಣೆ ಮುಂದಿನ ಶಿಕ್ಷಣ ಕ್ಷೇತ್ರದ ಪ್ರಾಧ್ಯಾಪಕರ ಮೇಲಿರುತ್ತದೆ. ಮಕ್ಕಳು ಅನುಕರಣಾಶೀಲರು ತಮಗೆ ಕಲಿಸುವ ಗುರುಗಳ ಹಾವ ಭಾವ, ಆದರ್ಶತೆ, ಆಚಾರ ವಿಚಾರ, ಉಡುವ ಬಟ್ಟೆ, ಮಾತಿನ ಶೈಲಿ, ಹಾಗೂ ಬೋಧನಾರೀತಿ ವಿದ್ಯಾರ್ಥಿಗಳ ದೃಷ್ಟಿಇದ್ದೇಇರುತ್ತದೆ. ಕಾರಣ ಕಲಿಸುವವರು ಮೊದಲುಆದರ್ಶತೆಯನ್ನು ಮೈಗೂಡಿಸಿಕೊಳ್ಳುವದು ಅಗತ್ಯವಾದುದು.ಶಿಕ್ಷಕರು ಕೇವಲ ಪಾಠಗಳಿಗೆ ಸೀಮಿತಗೊಳಿಸದೆ ಮಕ್ಕಳನ್ನು ಶಾಲೆಯ ನಾಲ್ಕು ಗೋಡೆಗಳಾಚೆ ಕರೆದುಕೊಂಡು ಹೋಗಬೇಕು.ಗುಡ್ಡ ಬೆಟ್ಟ, ಹರಿವ ಹೊಳೆ ಹಳ್ಳ, ಗ್ರಾಮೀಣ ಪರಿಸರಅಲ್ಲಿಯ ಶ್ರಮ ಸಂಸ್ಕೃತಿ, ಪರಂಪರೆ, ಮಾನವೀಯತೆ, ಐತಿಹಾಸಿಕ ಸ್ಥಳ ಹೀಗೆಲ್ಲ ಮಗು ಹೊರಜಗತ್ತಿನ ವಿದ್ಯಮಾನದ, ಅಧ್ಯಯನದಅರಿವುಇರುವದುಅವಶ್ಯವಾದುದು. ಮನೋರಂಜನೆಯೊಂದಿಗೆ ಹೆಚ್ಚಿನ ತಿಳುವಳಿಕೆ, ವ್ಯವಹಾರಜ್ಞಾನದ ಗಳಿಕೆ ಮಕ್ಕಳಿಗೆ ಇರುವದುಅಗತ್ಯವಾದುದು.ಈ ದಿಸೆಯಲ್ಲಿ ಶಿಕ್ಷಕರ ಹಾಗೂ ಪಾಲಕರುಗಮನಹರಿಸಬೇಕು.ಅಂಕ ಗಳಿಸುವದರೊಂದಿಗೆ ಹೊರಜಗತ್ತಿನಜ್ಞಾನ, ವ್ಯವಹಾರಿಕ ಬುದ್ಧಿಯ ಸಂಪಾದನೆ ಮಾಡುವದು ಪ್ರಧಾನವಾದುದು.ಮಕ್ಕಳು ಸರ್ವ ಬಗೆಯಾಗಿ ವಿಕಸಿಸಬೇಕು.


ಶಿಕ್ಷಕರ ದಿನಾಚರಣೆ ಇದೊಂದು ಶಾರದೆಯ ಆರಾಧನೆ.ಇದೊಂದು ಪವಿತ್ರ ವೃತ್ತಿ. ಆಸಕ್ತಿ ಇರುವವರು , ಪ್ರವೃತ್ತಿ ಹೊಂದಿದವರು ಮಾತ್ರ ಈ ಕ್ಷೇತ್ರದಲ್ಲಿ ಪ್ರವೇಶ ಮಾಡಬೇಕು. ನೌಕರಿಗಾಗಿ, ವೇತನಕ್ಕಾಗಿಅಂದರೆ ಹೊಟ್ಟೆ ಹೊರೆಯುವದಕ್ಕಾಗಿ ಮಾತ್ರ ಶಿಕ್ಷಕನಾಗುವದು ಅಕ್ಷಮ್ಯಅಪರಾಧವಾಗುತ್ತದೆ.ಸಮರ್ಪಣಾ ಭಾವದಿಂದಕೂಡಿದ ವೃತ್ತಿಇದಾಗಿದೆ.ಅಧ್ಯಯನ ಮತ್ತುಅಧ್ಯಾಪನಇದೊಂದು ನಿರಂತರವಾದ ಪ್ರಕ್ರಿಯೆಯಾಗಬೇಕು.ಶಿಕ್ಷಣ ಇರುವದು ಮುಖ್ಯವಾಗಿ ಮಕ್ಕಳ ಚಾರಿತ್ರ್ಯ ನಿರ್ಮಾಣಕ್ಕಾಗಿ, ವ್ಯಕ್ತಿತ್ವ ವಿಕಾಸಕ್ಕಾಗಿ. ಇದರಿಂದ ಸಹಜವಾಗಿ ಮಕ್ಕಳಲ್ಲಿ ಸ್ವಾಭಿಮಾನ, ಸ್ವಾವಲಂಬಿತನತಾನೇತಾನಾಗಿ ಹುಟ್ಟಿಕೊಳ್ಳುತ್ತದೆ.ನಾಳಿನ ನಾಗರಿಕರನ್ನಾಗಿರೂಪಿಸುವ, ಅವರಲ್ಲಿಆತ್ಮವಿಶ್ವಾಸವನ್ನು, ಆತ್ಮಗೌರವವನ್ನುಅಂಕುರಿಸುವಲ್ಲಿ ಶಿಕ್ಷಕರ ಪಾತ್ರ ಪ್ರಧಾನವಾಗಿದೆ. ‘ಮನೆಯೇಮೊದಲಪಾಠಶಾಲೆ, ಜನನಿಮೊದಲಗುರು’ ಎಂಬಮಾತುಜನಜನಿತವಾದುದು.ಮನೆಯ ಪರಿಸರ, ಪರಿಸ್ಥಿತಿ ಮಕ್ಕಳ ಮನದ ಮೇಲೆ ಗಾಢ ಪರಿಣಾಮ ಬೀರುತ್ತದೆ.ಇದಕ್ಕೆಎರಡು ಮಾತಿಲ್ಲ.ಶಾಲೆಯೆಂಬ ವಾತಾವರಣದಲ್ಲಿ ಮಗುವು ಸ್ನೇಹ, ಸಹಕಾರ, ಹೊಂದಾಣಿಕೆ, ಹೆಚ್ಚಿನಅಕ್ಷಾರಾಭ್ಯಾಸವನ್ನು ಹೊಂದುತ್ತದೆ.

ಸಂವೇದನಾಶೀಲತೆ, ಕುತೂಹಲತೆ ಮಗುವಿನ ಮನಸ್ಸಿನ ವಿಕಾಸಕ್ಕೆ ದೃಢವಾದ ಮೆಟ್ಟಿಲುಗಳಾಗುತ್ತವೆ. ಬ್ರಿಟನ್‍ದೇಶದರಾಜಕೀಯ ಮುತ್ಸದ್ಧಿ ಹಾಗೂ ಕಾದಂಬರಿಕಾರ ಬೆಂಜಮಿನ್‍ಡಿಸ್ರೇಲಿ ಎಂಬವರು‘ದೇಶದಭವಿಷ್ಯಅಲ್ಲಿಯಶಿಕ್ಷಣದಮೇಲೆಹೊಂದಿಕೊಂಡಿದೆ’ ಎಂಬಮಾತುಸತ್ಯವಾದುದು. ಸುಶಿಕ್ಷಿತ, ಸುಸಂಸ್ಕೃತವಾದದೇಶಉದ್ಧಾರದತ್ತಮುಖಮಾಡುತ್ತದೆ.ಭೂಮಿಗೆ ಬಿದ್ದ ಬೀಜಎದೆಗೆ ಬಿದ್ದಅಕ್ಷರ, ಇಂದಲ್ಲ ನಾಳೆ ಫಲ ಕೊಡುವದೆಂದು ತಿಳಿಸಿದ ದೇವನೂರ ಮಹಾದೇವಇವರ ಮಾತುಅರ್ಥಪೂರ್ಣವಾದುದು.ಅಕ್ಷರಎಂದರೆ ನಾಶವಿಲ್ಲದ್ದು.ಜ್ಞಾನದ ಗಳಿಕೆಯನ್ನು ಯಾರೂ ಕಳವು ಮಾಡಲಾರರು, ಬಳಸಿದಂತೆ ಇದು ಅಧಿಕಗೊಳ್ಳುತ್ತದೆ. ಇದರ ಮೇಲೆ ಯಾವ ಸುಂಕವಿರುವದಿಲ್ಲ. ಇದೊಂದು ನಿಜವಾದ ಮಹಾ ಆಸ್ತಿ.ಇದನ್ನೆಲ್ಲ ಗಮನದಲ್ಲಿರಿಸಿ ಇಂದಿನ ಶಿಕ್ಷಕ ಸಮೂಹ ತಮ್ಮಕರ್ತವ್ಯದಕ್ಷತೆಗೆಆದ್ಯತೆ ನೀಡಬೇಕು.ಮನಸ್ಸಿಟ್ಟು ಕಾರ್ಯನಿರ್ವಹಿಸುವ ಶಿಕ್ಷಕರು ನಮ್ಮ ಮಧ್ಯಅನೇಕರುಇದ್ದಾರೆ.


ನಮ್ಮದೇಶದಎರಡನೆಯ ರಾಷ್ಟ್ರಪತಿ ಗಳಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ ಇವರುರಾಷ್ಟ್ರ ನಿರ್ಮಾಣದಲ್ಲಿ, ಮತ್ತು ಮಕ್ಕಳಲ್ಲಿ ಚಾರಿತ್ರ್ಯ ಮೂಡಿಸುವಲ್ಲಿ ಶಿಕ್ಷಕರ ಪಾತ್ರ


ಹಿರಿದಾಗಿದೆಎಂಬುದನ್ನುಅರಿತುತಮ್ಮ ಹುಟ್ಟಿದ ದಿನವನ್ನು ಶಿಕ್ಷಕರ ದಿನಾಚರಣೆಯನ್ನುಆಚರಿಸಲುಕರೆ ನೀಡಿದ್ದು ಸ್ತುತ್ಯ ಮತ್ತು ಸಮರ್ಥನೀಯವಾದುದು.ಸಪ್ಟೆಂಬರ 5 ರಂದುಆಚರಿಸುವ ಈ ಶಿಕ್ಷಕರ ದಿನಾಚರಣೆ ಶಿಕ್ಷಣ ವ್ಯವಸ್ಥೆಯ, ಶಿಕ್ಷಕರ ಸಮಸ್ಯೆ ಮತ್ತು ಸವಾಲುಗಳನ್ನು ತಿಳಿಯುವ ಹಾಗೂ ಗುರುಕುಲಕ್ಕೆಗೌರವ ಸಲ್ಲಿಸುವ ಸುಂದರವಾದ, ಮಹತ್ವದ ದಿನವೆಂದು ಹೇಳಬಹುದಾಗಿದೆ.


ಆದರೆ ಪ್ರಸ್ತುತದಲ್ಲಿ ಒಳಹೊಕ್ಕು ನೋಡಿದರೆ ಸರಕಾರಿ ಶಿಕ್ಷಕರು ಇಂದುಅಕ್ಷರಶ: ಕಾರಕೂನರಾಗಿದ್ದಾರೆಂದು ಹೇಳಬಹುದಾಗಿದೆ. ಮೊದಲಿನ ಶಿಕ್ಷಣ ಕ್ರಮದಲ್ಲಿ ಗುರುಗಳಿಗೆ ಕಲಿಸುವಲ್ಲಿ ಹೆಚ್ಚಿನ ಅವಕಾಶ ಮತ್ತು ಪೆÇ್ರೀತ್ಸಾಹ ನೀಡಲಾಗುತ್ತಿತ್ತು.ಜನಗಣತಿ, ಜಾತಿ, ಆರ್ಥಿಕ ಮೊದಲಾದಗಣತಿ, ಚುನಾವಣೆ ಕೆಲಸ ಇಂತೆಲ್ಲವುಗಳ ಜವಾಬ್ದಾರಿಗಳು ಇವರ ಮೇಲೆ ಹೇರಲ್ಪಡುತ್ತವೆ. ಇವರು ನೆಮ್ಮದಿಯಿಂದ ಕೆಲಸ ಮಾಡುವಂತಿಲ್ಲ. ಆಗಾಗ ಅನಾವಶ್ಯಕ ತನಿಖೆಗಳು, ಅಲ್ಲಿಯ ಪರಿಸ್ಥಿತಿ


ಸಂದರ್ಭವನ್ನರಿಯದೆ ಶರಾ ಬರೆದುಅವರ ಮನಸ್ಥಿತಿಯನ್ನು ಹಾಳು ಮಾಡುವ ಪ್ರಸಂಗಗಳು ಹೆಚ್ಚಾಗುತ್ತಿವೆ. ಯಾವದೆ ಕಿರುಕಳವಿಲ್ಲದೆ ಸರಿಯಾಗಿ ವೇತನ, ಬಡತಿ, ವರ್ಗಾವಣೆ, ವೇತನ ಹೆಚ್ಚಳ ಮೊದಲಾದವುಗಳು ಇವರಿಗೆ ಸಿಗುವಂತಾಗಬೇಕು. ಭ್ರಷ್ಟತೆ, ಅಕ್ರಮ ಎಂಬ ಮಾರಿ ಶಿಕ್ಷಣ ಕ್ಷೇತ್ರದಲ್ಲೂಇದೆಎಂಬುದು ತಿಳಿದು ಬರುವ ಸಂಗತಿಯಾಗಿದೆ. ಅಲೆಮಾರಿ, ಬಡತನದ, ಹಿಂದುಳಿದ ಜಾತಿಜನಾಂಗದ ಮನೆಗಳ ಮಕ್ಕಳು ಸರಕಾರಿ ಶಾಲೆಗಳಲ್ಲಿ ಅಧಿಕವಾಗಿದಾಖಲಾಗುತ್ತಾರೆ.ಒಮ್ಮೆಮ್ಮೆ ಈ ಮಕ್ಕಳ ಮಾತೃ ಭಾಷೆ ಬೇರೆಯದ್ದಾಗಿರುತ್ತದೆ.


ಇಂಥ ಪ್ರತಿಕೂಲ ಸ್ಥಿತಿಯಲ್ಲಿ ಮಕ್ಕಳಿಗೆ ಬೋಧಿಸುತ್ತಿರುವ ಶಿಕ್ಷಕರ ಸಮಸ್ಯೆಯನ್ನು ಅರಿಯಬೇಕು.ನಿರಾತಂಕವಾಗಿ, ಸಮರ್ಥವಾಗಿ ಬೋಧಿಸುವದಕ್ಕಾಗಿ ಅವಕಾಶ ನೀಡಬೇಕು.ಕೆಲ ಶಾಲೆಗಳಲ್ಲಿ ಪ್ರವಾಹದ ವಿರುದ್ಧ ಈಸಿ ಯಶಸ್ಸು ಪಡೆಯುವ ಸಾಹಸದ ಕೆಲಸ ಇಲ್ಲಿಯ ಬೋಧಕರಾಗಿರುತ್ತದೆ.ಇದನನ್ನು ಸರಕಾರ ಹಾಗೂ ಅಧಿಕಾರಿ ವರ್ಗಅರಿಯುವದುಅಗತ್ಯವಾದುದು.ಯೋಗ್ಯರನ್ನು ಆರಿಸಿ ಅವರಿಗೆ ಶಿಕ್ಷಕ ಪ್ರಶಸ್ತಿ ನೀಡಿ ಪೆÇ್ರೀತ್ಸಾಹ ನೀಡುವ ಕೆಲಸವಾಗಬೇಕು.ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ಪದ್ಧತಿ ಸಲ್ಲದು.ಈ ದಿಸೆಯಲ್ಲಿ ಪಾರದರ್ಶಕ ಮತ್ತು ಪ್ರಾಮಾಣಿಕತೆಇರಲಿ.


ಸಂಬಳ ಏರಿಕೆ, ಭತ್ಯ ಹಾಗೂ ಇನ್ನಿತರ ಸೌಲಭ್ಯಗಳಿಗಾಗಿ ಹೋರಾಡುವ ಶಿಕ್ಷಕ ಶಿಕ್ಷಕಿಯ ಸಮೂಹ ಮಕ್ಕಳ ಉಜ್ವಲ ಭವಿತವ್ಯಕ್ಕಾಗಿ ಅವರ
ಚಾರಿತ್ರ್ಯ ನಿರ್ಮಾಣಕ್ಕಾಗಿ ಲವಲವಿಕೆಯನ್ನು ತೋರಬೇಕು.ತಮ್ಮ ಹಕ್ಕುಗಳನ್ನು ಕೇಳುವ ಶಿಕ್ಷಕರು ತಮ್ಮ ಹೊಣೆಗಾರಿಕೆಯನ್ನು ತಿಳಿಯಬೇಕು.
ಆರು ದಶಕಗಳ ಹಿಂದೆ ಗುರುಗಳು ಎಂದರೆ ಮಕ್ಕಳಲ್ಲಿ ಅಷ್ಟೇ ಏಕೆ ಸಮಾಜದಲ್ಲಿ ಅವರಿಗೆ ಹೆಚ್ಚಿನಗೌರವ ಸಲ್ಲುತ್ತಿತ್ತು.ಮಕ್ಕಳ ಸರ್ವಾಂಗೀಣ ಪ್ರಗತಿಯೊಂದಿಗೆಅವರು ಸಮಾಜ ಸುಧಾರಣೆಯಲ್ಲೂ ಪಾಲ್ಗೊಳ್ಳುತ್ತಿದ್ದರು.ನಮ್ಮಆದರ್ಶ ಬದುಕಿಗೆ ಬುನಾದಿ ಹಾಕಿದ ಅಂದಿನ ಗುರುಗಳನ್ನು ಇಂದಿಗೂ ನಾವು ಮರೆತಿಲ್ಲ.ಅವರಲ್ಲಿ ಸಮರ್ಪಣಾ ಭಾವಇರುತ್ತಿತ್ತು. ಮಕ್ಕಳು ಜಾಣರಾದರೆಅವರಲ್ಲಿ ಸಂತೃಪ್ತತೆ, ಸಾರ್ಥಕತೆ ನೆಲೆಯೂರುತ್ತಿತ್ತು.ಹಣದ ಹಿಂದೆಇವರುಎಂದೂ ಬೀಳಲಿಲ್ಲ. ರಜಾದಿನಗಳಲ್ಲಿ ಮಕ್ಕಳಿಗೆ ಹೆಚ್ಚಿನ ಪಾಠಗಳನ್ನು ಉಚಿತವಾಗಿ ಇವರು ಹೇಳಿಕೊಡುತ್ತಿದ್ದರು. ಇಂದು ಬೀದಿ ಬೀದಿಗೂ ಟ್ಯುಶನ್ ಕ್ಲಾಸಗಳು ಹಣ ಗಳಿಸಲು ಮುಂದಾಗಿವೆ. ಶಿಕ್ಷಣ ಕ್ಷೇತ್ರ ವಾಣೀಜ್ಯೀಕರಣಗೊಳ್ಳುತ್ತಿರುವದು ಕಳವಳಕಾರಿಯಾಗಿದೆ. ಈ ಕ್ಷೇತ್ರಜಾತಿ ಮತ ಹಾಗೂ ಯಾವದೇ ಪ್ರಲೋಭನೆಗಳಿಂದ ದೂರವಾಗಿರಬೇಕು.


ಶಿಕ್ಷಕ ದಿನಾಚರಣೆಯಂದು ಶಿಕ್ಷಕರು, ಸಮಾಜ, ಸರಕಾರ, ಸಂಘ ಸಂಸ್ಥೆಗಳು ಈ ಕೆಳಗಿನ ಸಂಕಲ್ಪಗಳನ್ನು ಮಾಡಿ ಸಾಕಾರರೂಪಕ್ಕಿಳಿಸಬೇಕು. ಆದರ್ಶವಾದ ತಳಹದಿಯ ಮೇಲೆ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳಬೇಕು.ನಿರಪೇಕ್ಷಾಭಾವ ಶಿಕ್ಷಣ ಸಂಸ್ಥೆಗಳಲ್ಲಿ, ಶಿಕ್ಷಕರಲ್ಲಿ ಮೂಡಬೇಕು.ಈ ರಂಗಜಾತಿ ಮತ ಪಂಥದ ತಾರತಮ್ಯದಿಂz À ದೂರವಿರಬೇಕು. ಶಿಕ್ಷಕರು ತಮ್ಮ ಹಕ್ಕುಗಳೊಂದಿಗೆ ತಮ್ಮ ಗುರುತರವಾದ ಜವಾಬ್ದಾರಿಯನ್ನು
ಅರಿಯಬೇಕು. ಸುಂದರವಾದ, ಸಮೃದ್ಧವಾದ, ಶಾಂತಿ ಸುವ್ಯವಸ್ಥಿತ ಸಮಾಜಕಟ್ಟುವಲ್ಲಿ ಶಿಕ್ಷಕರು ಸಂಕಲ್ಪಿಸಲಿ. ಈ ದಿಸೆಯಲ್ಲಿ ಮಕ್ಕಳಿಗೆ ಬೋಧಿಸುವಲ್ಲಿ ಸಮರ್ಥತೆಯನ್ನುತೋರಲಿ.

  • ಶಿ.ಗು.ಕುಸುಗಲ್ಲ