ಬೀದರ್ ಜಿಲ್ಲಾ ಸಾಹಿತಿಗಳ ಪರಿಚಯ ಭಾಗ 1

1) ಬುದ್ಧದೇವಿ ಅಶೋಕ ಸಂಗಮ್ಮ

ಬೀದರ ಜಿಲ್ಲೆಯ ಉದಯೋನ್ಮುಖ ಬರಹಗಾರರಲ್ಲಿ ಒಬ್ಬರಾಗಿ ಕವನ, ಪ್ರಬಂಧ, ಚುಟುಕು, ಹನಿಗವನ, ಲೇಖನಗಳನ್ನು ಬರೆಯುತ್ತಿರುವ ಶಿಕ್ಷಕಿ ಹಾಗೂ ಕವಯತ್ರಿಯೆಂದರೆ, ಬುದ್ಧದೇವಿ ಅಶೋಕ ಸಂಗಮ್ಮ. ಇವರು ಬೀದರ ತಾಲೂಕಿನ ಅಷ್ಟೂರ ಗ್ರಾಮದ ಶಂಕರರಾವ ಮೆಲ್ಲದೊಡ್ಡಿ ಮತ್ತು ಘಾಳೆಮ್ಮ ದಂಪತಿಗಳಿಗೆ ದಿನಾಂಕ 1-6-1976 ರಲ್ಲಿ ಜನಿಸಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿ, ಪ್ರೌಢ ಶಿಕ್ಷಣ ಬೀದರದ ರಮಾಬಾಯಿ ಅಂಬೇಡ್ಕರ್ ಪ್ವೌಢ ಶಾಲೆಯಲ್ಲಿ, ಪಿ.ಯು ಮತ್ತು ಪದವಿ ಶಿಕ್ಷಣವು ಬೀದರದ ಡಾ.ಅಂಬೇಡ್ಕರ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ. ನಂತರ ಟಿ.ಸಿ.ಎಚ್. ಶಿಕ್ಷಕರ ತರಬೇತಿಯನ್ನು ಪಡೆದು 1998 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ, ಬೀದರದ ಅವರಾಧ (ಎಸ್) ಗ್ರಾಮದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ 13 ವರ್ಷ ಸೇವೆ ಸಲ್ಲಿಸಿ, ಸದ್ಯ ಜನವಾಡ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲೇಜು ದಿನಗಳಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತರಾಗಿದ್ದ ಇವರು ಬಹುದಿನಗಳ ನಂತರ ಬರವಣಿಗೆಯನ್ನು ಪ್ರಾರಂಭಿಸಿ ಬುದ್ದ, ಬಸವ, ಅಂಬೇಡ್ಕರ್ ತತ್ವದಡಿಯಲ್ಲಿ ಹಲವಾರು ಕವನ, ಲೇಖನ, ಚುಟುಕು, ಹನಿಗವನ, ಪ್ರಬಂಧಗಳು ಸೇರಿದಂತೆ ಮೊದಲಾದ ಪ್ರಕಾರದ ಸಾಹಿತ್ಯ ರಚಿಸುತ್ತಿದ್ದಾರೆ. ಇವರ ಕವನ,ಲೇಖನಗಳು ಹಸಿರು ಕ್ರಾಂತಿ. ಮತ್ತಿತರ ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ. ಅಷ್ಟೇಯಲ್ಲದೆ ಬೀದರ ಜಿಲ್ಲೆಯಾದ್ಯಂತ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವಾರು ಕವಿಗೊಷ್ಠಿಗಳಲ್ಲಿಯು ಪಾಲ್ಗೊಂಡು ಕವನ ವಾಚನವು ಮಾಡಿದ್ದಾರೆ. ಉತ್ತಮ ಶಿಕ್ಷಕರು ಆಗಿದ್ದರಿಂದ ಇವರ ಶೈಕ್ಷಣಿಕ, ಸಾಧನೆಗೆ ಮೆಚ್ಚಿ 2018 ರಲ್ಲಿ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಮತ್ತು ಇಂಡಿಯನ್ ಲಿಟರೆಸ್ಸಿ ಮಿಷನ್ ರೋಟರಿ ಕ್ಲಬ್ ವತಿಯಿಂದ ರಾಷ್ಟ್ರ ನಿರ್ಮಾಣ ಪ್ರಶಸ್ತಿ, 2019ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, 2009ರಲ್ಲಿ ಭಾರತೀಯ ಸ್ಕೌಟ್ ಮತ್ತು ಗೈಡ್ಸ ವತಿಯಿಂದ ಉತ್ತಮ ಗೈಡ್ಸ ಪ್ರಶಸ್ತಿ, ಮತ್ತು ಕರ್ನಾಟಕ ರಾಜ್ಯ ನೌಕರರ ಕ್ರೀಡಾ ಕೂಟದಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ಇವರಿಗೆ ವಿವಿಧ ಕ್ರೀಡೆಗಳಲ್ಲಿ 12 ಕ್ಕಿಂತ ಹೆಚ್ಚು ಪ್ರಥಮ ದ್ವಿತೀಯ ಬಹುಮಾನಗಳು ಪಡೆದು 1 ಚಿನ್ನದ ಪದಕ ಮತ್ತು 8. ಬೆಳ್ಳಿಯ ಪದಕಗಳು ಪಡೆದು ಉತ್ತಮ ಕ್ರೀಡಾ ಪಟುವಾಗಿಯು ಗುರುತಿಸಿ ಕೊಂಡಿದ್ದಾರೆ. ಸದ್ಯ ಇವರು ಬೀದರ ನಗರದ ನಿವಾಸಿಯಾಗಿದ್ದು, ಕತೆ ಕವನ ಲೇಖನ ಮೊದಲಾದ ಬರವಣಿಗೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಇವರ `ಅಂತರಾಳ’ ಎಂಬ ಕವನ ಸಂಕಲನ ಪ್ರಕಟಣೆಯ ಹಂತದಲ್ಲಿದೆ.

 

2) ಪ್ರಭುಲಿಂಗಯ್ಯಾ ಬಿ.ಟಂಕಸಾಲಿಮಠ

ಚಿತ್ರಕಲಾವಿದ, ಸಾಹಿತಿ, ಪತ್ರಕರ್ತರಾಗಿ ಗುರುತಿಸಿ ಕೊಂಡ  ಪ್ರಭುಲಿಂಗಯ್ಯಾ ಟಂಕಸಾಲಿಮಠ ಇವರು  ಬೀದರ ಜಿಲ್ಲೆಯ ಹುಮನಾಬಾದ ನಗರದ  ಬಸಯ್ಯಾ ಮತ್ತು ವಿದ್ಯಾವತಿ ದಂಪತಿಗಳಿಗೆ ದಿನಾಂಕ      19-9-1973 ರಲ್ಲಿ ಜನಿಸಿ ಚಿತ್ರಕಲೆಯಲ್ಲಿ ಸ್ನಾತಕೋತರ ಪದವಿಧರರಾಗಿ ಸಾಹಿತ್ಯದಲ್ಲಿಯೂ ಇವರು ತುಂಬ ಆಸಕ್ತರಾಗಿ ಕವನ ಲೇಖನಗಳನ್ನು ಬರದು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಅμÉ್ಟೀಯಲ್ಲದೆ 1998 ರಲ್ಲಿ ‘ಕಲಾನಿಕೇತನ ‘ ಎಂಬ ತಮ್ಮ ಪ್ರಕಾಶನದಡಿಯಲ್ಲಿ ಇತರ ಸಾಹಿತಿಗಳ ಏಳು  ಕೃತಿಗಳಾದ ‘ಚಿತ್ತ - ಪಲ್ಲವಿ‘   ‘ಚಿತ್ತ- ಚಿತ್ತ ‘ ‘ಕಲ್ಯಾಣ ಕಲಾಶ್ರೀ ‘   ‘ ಹತ್ತು ಮುಖಗಳ ನೂರು ಭಾವಗಳು ‘ ‘ಸಾಲು- ದೀಪ ‘   `ಚಿಣ್ಣರ ಚುಟುಕು’  ‘ಕಲ್ಯಾಣದ ಕಲಾ ಪ್ರತಿಭೆ ‘ ಎಂಬ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.ಇವರು 2007 ರಿಂದ 2010 ರವರೆಗೆ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಎರಡು ದಶಕಗಳಿಂದ ಬೀದರದ ‘ಉತ್ತರ ಕರ್ನಾಟಕ ‘ ಕನ್ನಡ ದಿನ ಪತ್ರಿಕೆಯ ವರದಿಗಾರರಾಗಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾ  ಅಧ್ಯಕ್ಷರಾಗಿ, ಸೇವೆ ಸಲ್ಲಿಸಿದ್ದಾರೆ. ಹೀಗೆ ಇವರು ಚಿತ್ರಕಲೆ, ಸಾಹಿತ್ಯ ,ಪ್ರಕಾಶನ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಮೆಚ್ಚಿ ಕಲಬುರಗಿಯ ಮಹಾನ್ ಚಿತ್ರಕಲಾವಿದ ‘ಡಾ.ಜೆ.ಎಸ್.ಖಂಡೇರಾವ ಪ್ರಶಸ್ತಿ ‘ ಮತ್ತು ಭಾಲ್ಕಿ ಮಠದಿಂದ ‘ಡಾ.ಚನ್ನಬಸವ ಪಟ್ಟದೇವರ ಕನ್ನಡ ಪ್ರಶಸ್ತಿ ‘ಹಾರಕೂಡ ಮಠದಿಂದ ‘ ಶ್ರೀಚನ್ನ ರತ್ನ ಪ್ರಶಸ್ತಿ ‘ ಹುಲಸೂರು ಮಠದಿಂದ ‘ ಕಲಾ ಪ್ರೇಮಿ’  ಭಾತಂಬ್ರಾ  ಮಠದಿಂದ ‘ಕಲಾ ರತ್ನ ‘ ಮತ್ತು ತಾಲೂಕಿನ ಆಡಾಳಿತದಿಂದ ‘ಗಣರಾಜ್ಯೋತ್ಸವ ‘ ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಅμÉ್ಟೀಯಲ್ಲದೆ ಇವರು ಅಪಾರ ಅಂಚೆ ಚೀಟಿ ಮತ್ತು ನಾಣ್ಯಗಳ ಸಂಗ್ರಹವು ಮಾಡಿರುವುದು ವಿಶೇಷವಾಗಿದೆ. ಸದ್ಯ ಇವರು ತಮ್ಮದೆ ಆದ ಬಸವೇಶ್ವರ ಚಿತ್ರಕಲಾ ಮಹಾವಿದ್ಯಾಲಯ ಹುಟ್ಟು ಹಾಕಿ 25 ವರ್ಷದಿಂದ ಅದರ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಾ  ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಇವರು ಬರೆದ ಲೇಖನಗಳ ಒಂದೆರಡು ಸಂಕಲನಗಳು ಪುಸ್ತಕ ಮುದ್ರಣದ ಹಂತದಲ್ಲಿವೆ.

 

3 ) ವೀರೇಂದ್ರ ಸಿಂಪಿ

ಬೀದರ ಜಿಲ್ಲೆಯ ಹಿರಿಯ ಸಾಹಿತಿಗಳಲ್ಲಿ ಎದ್ದು ಕಾಣುವ ಹೆಸರೆಂದರೆ ವೀರೇಂದ್ರ ಸಿಂಪಿ ಅವರದು.ಇವರು  ಬಿಜಾಪುರ ಜಿಲ್ಲೆಯ  ನೂತನ ಚಡಚಣ ತಾಲ್ಲೂಕಿನ ಜಾನಪದ ತಜ್ಞರಾದ ಸಿಂಪಿ ಲಿಂಗಣ್ಣ ಮತ್ತು ಸೊಲಬವ್ವ ದಂಪತಿಗಳಿಗೆ ದಿನಾಂಕ 14-10-1948 ರಲ್ಲಿ ಜನಿಸಿದ್ದಾರೆ.  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಡಚಣದಲ್ಲಿ ಪೂರೈಸಿ. ಕಾಲೇಜು ಶಿಕ್ಷಣವು ಬಿಜಾಪುರದ ವಿಜಯಾ ಕಾಲೇಜಿನಿಂದ ಬಿ.ಎ. ಪದವಿ ಪಡೆದು, ಕರ್ನಾಟಕ ವಿಶ್ವ ವಿದ್ಯಾಲಯದಿಂದ ಎಂ.ಎ. ಸ್ನಾತಕೋತ್ತರ ಪದವಿಧರರಾಗಿ, 1962 ರಲ್ಲಿ ಬೀದರದ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಇಂಗ್ಲಿμï ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, 1999ರಲ್ಲಿ ನಿವೃತ್ತಿ ಹೊಂದಿದರುನಂತರ ನಾಲ್ಕು ವರ್ಷ ಚಿದಂಬರ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಹೈಸ್ಕೂಲಿನಲ್ಲಿದ್ದಾಗಲೇ ಇವರು ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡು ಮೊದಲು ಬರೆದ. ‘ಖೊಟ್ಟಿ ನಾಣ್ಯ’ ಎಂಬ ಕಥೆ  ‘ಸಂಗಮ’ ಎಂಬ ಕೈ ಬರಹದ ಪತ್ರಿಕೆಯಲ್ಲಿ ಪ್ರಕಟಿತವಾಗಿದೆ. `ಏಕಲವ್ಯ’ ಎಂಬ  ಹಿಂದಿ ನಾಟಕವನ್ನು ಕನ್ನಡಕ್ಕೆ ಅನುವಾದವು ಮಾಡಿದ್ದಾರೆ. ಇಂದಿನ ವಿದ್ಯಾರ್ಥಿಗಳಲ್ಲಿ  ‘ಅಸಂತೋಷವೇಕೆ ? ’ ಪ್ರಬಂಧ ಬರೆದು ಅಂತರ ಕಾಲೇಜು ಸ್ಪರ್ಧೆಯಲ್ಲಿ  ಬಹುಮಾನ ಪಡೆದುಕೊಂಡಿದರು. ಇವರು ಬರೆದ ಇತರೆ ಸಾಹಿತ್ಯ ಹಾಗೂ ಕಥೆ, ವಿಮರ್ಶೆ ಕಾಲೇಜು ಪತ್ರಿಕೆಗಳಲ್ಲಿ ಪ್ರಕಟಿತವಾಗಿವೆ. ಇಂಗ್ಲಿμï  ಪ್ರಾಧ್ಯಾಪಕರಾದರೂ ಬರೆದದ್ದೆಲ್ಲಾ ಕನ್ನಡದಲ್ಲೆ.  ಪ್ರಮುಖ ಪ್ರಬಂಧ ಬರಹಗಾರರು. ಅಂಕಣಕಾರರೆಂದೇ ಪ್ರಸಿದ್ಧಿಯಾಗಿದ್ದಾರೆ. ಇವರು ಬರೆದ  ಪ್ರಬಂಧ ಸಂಕಲನಗಳೆಂದರೆ, ಕಾಗದದ ಚೂರು, ಭಾವ ಮೈದುನ, ಸ್ವಚ್ಛಂದ ಮನದ ಸುಳಿಗಾಳಿ, ಪರಸ್ಪರ ಸ್ಪಂದನ, ಲಲಿತ , ಇವು ಅವರು ಬರೆದ ಪ್ರಮುಖ ಲಲಿತ ಪ್ರಬಂಧ ಸಂಕಲನಗಳಾದರೆ,   `ಆಯ್ದ ಲಲಿತ ಪ್ರಬಂಧಗಳು.’ `ಚನ್ನಬಸವಣ್ಣನವರ ವಚನಗಳು’  `ಬೀದರ ಜಿಲ್ಲಾ ದರ್ಶನ’ `ಬೀದರ ಜಿಲ್ಲಾ    ಸ್ವಾತಂತ್ರ್ಯ ಹೋರಾಟಗಾರರು’. ಎಂಬ ಕೃತಿಗಳು ಸಂಪಾದಿಸಿದ್ದಾರೆ. ಇವರು `ಜೀವನವೆಂದರೇನು ?’ ಎಂಬ ಅಂಕಣ ಬರಹ,  ‘ಸುಖಸಾಧನ’ ಎಂಬ ವಿಚಾರ ಸಾಹಿತ್ಯ, ‘ಚೆನ್ನಬಸವಣ್ಣ ಮತ್ತು ಆಯ್ದಕ್ಕಿ ಲಕ್ಕಮ್ಮ ‘ ಎಂಬ ವಚನ ಸಾಹಿತ್ಯ,  ‘ಯೋಗಾರಂಭ’   ‘ಗಾಯ ಡಿ ಮೊಪಾಸನ ಕಥೆಗಳು’ ಇವು ಇವರ ಅನುವಾದ ಕೃತಿಗಳು. ಸಿಂಪಿ ಲಿಂಗಣ್ಣನವರ ಸಾಹಿತ್ಯ, ಇಂಡಿ ತಾಲ್ಲೂಕ ದರ್ಶನ, ಮಾಸ್ತಿ ವೆಂಕಟೇಶ ಅಯ್ಯಂಗಾರ್,(ಜೀವನ ಚರಿತ್ರೆ) ಆರ್.ವಿ. ಬೀಡಪ್, ಹತ್ತು ಪಾಶ್ಚಾತ್ಯ  ಕಾದಂಬರಿಕಾರರು. ಬಣ್ಣಗಾರಿಕೆ ಇತ್ಯಾದಿ ಅವರ ಕೃತಿಗಳಾಗಿವೆ. ಇವರ  ಭಾವ ಮೈದುನ ಲಲಿತ ಪ್ರಬಂಧಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ ಲಭಿಸಿದೆ, `ಸ್ವಚ್ಛಂದ ಮನದ ಸುಳಿಗಾಳಿ’ ಎಂಬ ಪ್ರಬಂಧ ಸಂಕಲನವು ಕರ್ನಾಟಕ ವಿಶ್ವ ವಿದ್ಯಾಲಯ, ಶಿವಾಜಿ ವಿಶ್ವವಿದ್ಯಾಲಯ, ಗುಲಬರ್ಗಾ ವಿಶ್ವ ವಿದ್ಯಾಲಯಗಳಲ್ಲಿ ಮೊದಲ ಬಿ.ಎ. ಪಠ್ಯವಾಗಿ ಆಯ್ಕೆಯಾಗಿತ್ತು. ಪರಿಸರ ಸ್ಪಂದನಕ್ಕೆ ಗುಲಬರ್ಗಾ ವಿಶ್ವ ವಿದ್ಯಾಲಯದಿಂದ. ಬಹುಮಾನ ಪಡೆದಿದ್ದಾರೆ, ಮತ್ತು ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಯು ಇವರಿಗೆ ಲಭಿಸಿದೆ. ಮತ್ತು ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯು ಸೇವೆ ಸಲ್ಲಿಸಿದ್ದಾರೆ. ಹಾಗೂ ಇವರ ಸಾಹಿತ್ಯ ಸಾಧನೆಗೆ  ವಿಜಾಪುರ, ಬೀದರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.ಇವರ ಕುರಿತು 2007 ರಲ್ಲಿ ಸಾಹಿತಿ ಡಾ.ರಮೇಶ ಮೂಲಗೆ ಅವರ ಸಂಪಾದಕತ್ವದಲ್ಲಿ “ಲಲಿತಾರವಿಂದ”ಎಂಬ ಅಭಿನಂದನ ಗ್ರಂಥವು ಹೊರತರಲಾಗಿದೆ . ಇವರು ದಿನಾಂಕ 31-5-2017 ರಂದು ತಮ್ಮ 79 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದರಿಂದ ಸಾಹಿತ್ಯ ಲೋಕದ ಕೊಂಡಿಯೊಂದು ಕಳಚಿದಂತಾಗಿದೆ.

 

4) ಅಜಿತ ನೆಳಗೆ

ಕವಿತೆ ಚುಟುಕು ಲೇಖನಗಳನ್ನು ಬರೆದು ಪ್ರಕಟಿಸುತ್ತಿರುವ ಉದಯೋನ್ಮುಖ ಬರಹಗಾರರ ‘ಅಜಿತ ನೆಳಗೆಯವರು ಪದವಿಧರ ವಿದ್ಯಾರ್ಥಿಯಾಗಿದ್ದುಕೊಂಡು ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಇವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ‘ನೆಳಗಿ ‘ ಗ್ರಾಮದ ನೀಲಕಂಠ ಮತ್ತು ರಾಜಾಬಾಯಿ ದಂಪತಿಗಳಿಗೆ ದಿನಾಂಕ 7-10-1993 ರಲ್ಲಿ ಜನಿಸಿದ್ದಾರೆ. ಇವರು ಪ್ರಾಥಮಿಕ ಶಿಕ್ಷಣವನ್ನು ಬೀದರದ ಗಂಗೋತ್ರಿ ಪಬ್ಲಿಕ್  ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಗುರುನಾನಕ ಪಬ್ಲಿಕ್ ಶಾಲೆಯಲ್ಲಿ,ಹಾಗೂ  ಪದವಿ ಪೂರ್ವ ಶಿಕ್ಷಣವನ್ನು ಗುರುನಾನಕ ಕಾಲೇಜಿನಲ್ಲಿ , ಮತ್ತು ಬಿ.ಎ. ಪದವಿಯನ್ನು ಭೂಮರೆಡ್ಡಿ ಕಾಲೇಜಿನಲ್ಲಿ , ಬಿ.ಎಡ್. ಪದವಿಯನ್ನು  ಬೀದರದ ಗುನ್ನಳ್ಳಿಯ ಗ್ಲೋಬಲ್ ಕಾಲೇಜಿನಲ್ಲಿ ಪೂರೈಸಿದ್ದಾರೆ. ಇವರು ವಿದ್ಯಾರ್ಥಿಯಾಗಿರುವಾಗಲೆ ಸಾಹಿತ್ಯದ ಆಸಕ್ತಿಯನ್ನು ಬೆಳೆಸಿಕೊಂಡು  ಕವನ ಚುಟುಕು ಪ್ರಬಂಧ ಲೇಖನಗಳನ್ನು ಬರೆಯುತ್ತಾ ಕವಿಗೊಷ್ಠಿಯಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ. ಮತ್ತು ಹಲವಾರು ಕನ್ನಡ ದಿನಪತ್ರಿಕೆಗಳಲ್ಲಿ ಕವನ  ಲೇಖನಗಳನ್ನು ಪ್ರಕಟಿಸಿ ಬರವಣಿಗೆಯಲ್ಲಿ ತೊಡಗಿದ್ದಾರೆ. ಇವರು 2016 ರಲ್ಲಿ  ‘ ಬಯಕೆ ‘ ಎಂಬ ಒಂದು ಕವನಸಂಕಲನವನ್ನು ಹೊರ ತಂದು ಲೇಖಕರಾಗಿ ಹೊರಹೊಮ್ಮಿದ್ದಾರೆ. ಇವರ ಕಾವ್ಯ ರಚನೆಯನ್ನು ಕಂಡು ಬೀದರದ ದೇಶಪಾಂಡೆ ಪ್ರತಿμÁ್ಠನದವರು `ಕಾವ್ಯ ರತ್ನಾಕರ ‘ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಸದ್ಯ ಇವರು ಬೀದರದ ನಿವಾಸಿಯಾಗಿ ಉನ್ನತ ಶಿಕ್ಷಣದೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.

 

5) ಡಾ.ಸಿ.ಎಸ್.ಪಾಟೀಲ್

ಬೀದರ ಜಿಲ್ಲೆಯ ಸಾಹಿತಿಗಳಲ್ಲಿ ಒಬ್ಬರಾಗಿ ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲೂ ಸೃಜನಶೀಲ ಮತ್ತು ವಿಜ್ಞಾನ ಸಾಹಿತ್ಯ ರಚಿಸಿ  ಪುಸ್ತಕ ಪ್ರಕಟಿಸಿದ ಕವಿ, ಸಾಹಿತಿ, ಲೇಖಕರೆಂದರೆ , *’ಡಾ.ಸಿ.ಎಸ್.ಪಾಟೀಲ್.*ಇವರ ಪೂರ್ಣನಾಮ ‘ಚಂದ್ರಕಾಂತ ಸಂಗಶೆಟ್ಟಿ ಪಾಟೀಲ್ ‘ ಎಂದಾಗಿದೆ. ಇವರು ಬೀದರ ತಾಲ್ಲೂಕಿನ ಕಂಗನಕೋಟೆ ಗ್ರಾಮದ ಶ್ರೀ ಸಂಗಶೆಟ್ಟಿ ಪಾಟೀಲ್ ಮತ್ತು ಶ್ರೀಮತಿ ನಾಗಮ್ಮ ದಂಪತಿಗಳಿಗೆ ದಿನಾಂಕ 29-2-1960 ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ. ಪಿ.ಎಚ್.ಡಿ. ಪದವೀಧರರಾದ ಇವರು  1984 ರಲ್ಲಿ ಸುರಪುರದ ಪ್ರಭು ಕಾಲೇಜಿನಲ್ಲಿ ಸಸ್ಯಶಾಸ್ತ್ರದ ಉಪನ್ಯಾಸಕರಾಗಿ ಸೇವೆಗೆ ಸೇರಿ ನಂತರ ಬೆಂಗಳೂರಿನ ವೀರೇಂದ್ರ ಪಾಟೀಲ್ ಪದವಿ ಮಹಾವಿದ್ಯಾಲಯದಲ್ಲಿ 10 ವರ್ಷ ಸೇವೆ ಸಲ್ಲಿಸಿ  ಅಲ್ಲಿಂದ ವರ್ಗಾವಣೆಯಾಗಿ ಬೀದರದ ಬಿ.ವಿ.ಬಿ.

ಕಾಲೇಜಿನಲ್ಲಿ 5 ವರ್ಷ ಉಪನ್ಯಾಸಕರಾಗಿ,10 ವರ್ಷ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಇವರು 3 ವರ್ಷ ಗುಲ್ಬರ್ಗ ವಿಶ್ವವಿದ್ಯಾಲಯದ ಮೌಲ್ಯ ಮಾಪನ ಕುಲಸಚಿವರಾಗಿ ಸೇವೆ ಸಲ್ಲಿಸಿ ನಂತರ ಗುಲ್ಬರ್ಗ ವಿಶ್ವವಿದ್ಯಾಲಯದ ಎಂ.ಎಸ್.ಐ ಕಾಲೇಜಿನ ಪ್ರಾಚಾರ್ಯರಾಗಿ 2019 ರಲ್ಲಿ ನಿವೃತ್ತರಾಗಿದ್ದಾರೆ. ಪ್ರಾಧ್ಯಾಪಕ ವೃತ್ತಿಯೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿಯು ತುಂಬ ಆಸಕ್ತಿ ಬೆಳೆಸಿಕೊಂಡು  ಕೆಲ ಕೃತಿಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ, 1995 ರಲ್ಲಿ *’ಹೊಂಗಿರಣ’* ಎಂಬ ಕವನ ಸಂಕಲನ, 2002 ರಲ್ಲಿ  *’ತಳಿ ತಂತ್ರಜ್ಞಾನ’* ಎಂಬ ವೈಜ್ಞಾನಿಕ ಬರಹಗಳ ಸಂಕಲನ, *’ವಚನಗಳಲ್ಲಿ ವಿಜ್ಞಾನ’* ಮತ್ತು *’ಅಕ್ಕನ ವಚನಗಳಲ್ಲಿ ಪರಿಸರ’* ಎಂಬ ಕನ್ನಡ ಕೃತಿಗಳು ಪ್ರಕಟಿಸಿದರೆ  2008 ರಲ್ಲಿ *’ಬಯ ಟಿಕ್ನಾಲಜಿ,ಮತ್ತು ಮಲೆಕ್ವಲೋಡ್ ಬಯೊಲಜಿ,* ಎಂಬ ಕೃತಿಗಳು ಹೊರತಂದು 2010 ರಲ್ಲಿ *’ಸೆಲ್ ಬಯೋಲಜಿ,*   2012 ರಲ್ಲಿ *’ಬಯೋ ಇನ್ ಫಾರ್ಮೆಟಿಕ್’* ಮತ್ತು 2014 ರಲ್ಲಿ *’ಮೈಟೊಕಾಂಡ್ರಿಯಲ್ ಇಂಜಿನಿಯರಿಂಗ್’* ಎಂಬ ಕೃತಿಗಳು  ಪ್ರಕಟಿಸಿದ್ದಾರೆ.

ಇವರ ಬರಹಗಳು ಪ್ರಜಾವಾಣಿ, ವಿಜಯ ಕರ್ನಾಟಕ, ತರಂಗ, ಮೊದಲಾದ ಪತ್ರಿಕೆಗಳಲ್ಲಿ 54 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಪ್ರಕಟವಾಗಿವೆ ಮತ್ತು ಕಲಬುರಗಿ  ಆಕಾಶವಾಣಿಯಲ್ಲಿಯೂ  ಪ್ರಸಾರವಾಗಿವೆ. ಅಷ್ಟೇಯಲ್ಲದೆ ಇವರು 6 ವರ್ಷ ಬೀದರ ಜಿಲ್ಲೆಯ ವಿಜ್ಞಾನ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿ, ವಿಜ್ಞಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿ ಐದಾರು ದೇಶ ವಿದೇಶಗಳಿಗೆ ಸುತ್ತಾಡಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಸಮಾವೇಶದಲ್ಲಿ ಭಾಗಿಯಾಗಿದ್ದರಿಂದ. 2011 ರಲ್ಲಿ ದೆಹಲಿಯಿಂದ ಇವರಿಗೆ  *’ಅಂತರಾಷ್ಟ್ರೀಯ ಭಾರತ ಸೇವಾ ಪ್ರಶಸ್ತಿ,* ಮತ್ತು 2013 ರಲ್ಲಿ ಮಲ್ಲೆಷಿಯಾದಿಂದ *’ಜೈವಿಕ ತಂತ್ರಜ್ಞಾನದ ಫೆಲೋಷಿಪ್ ಪ್ರಶಸ್ತಿ,*  ಪಡೆದು ಬೀದರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಸದ್ಯ ಇವರು ಕಲಬುರಗಿಯಲ್ಲಿ ವಾಸವಾಗಿದ್ದು ತಮ್ಮ ವಿಶ್ರಾಂತಿ ಬದುಕಿನೊಂದಿಗೆ ಸಾಹಿತ್ಯ ಕೃಷಿಯು ಮುಂದುವರೆಸಿದ್ದಾರೆ.