ಪ್ರಬುದ್ದ ಮತದಾರ, ಕಲಿಯಬೇಕಾದ ಪಾಠ

ನಮ್ಮ ಭಾರತ ದೇಶವು ನೂರಾರು ವರ್ಷಗಳ ಗುಲಾಮಗಿರಿಯಿಂದ ಸ್ವತಂತ್ರವಾಯಿತು. ಸ್ವಾತಂತ್ರ್ಯ ಪಡೆಯಲು ದೇಶವಾಸಿಗಳೆಲ್ಲ ಪ್ರಯತ್ನಪಟ್ಟರು. ಕೆಲವು ಜನ ಸ್ವಹಿತಾಸಕ್ತಿಯುವರು ಗುಲಾಮಗಿರಿಯನ್ನೇ ಪ್ರೀತಿಸಿ ಅದರ ಲಾಭವೇ ತಮಗೆ ಅನುಕೂಲವೆಂದು ಅಂಥ
ಗುಲಾಮಗಿರಿಯ ಕಾಲಾಡಿಕೆಯ ಪ್ರಯತ್ನದಲ್ಲಿಯೂ ಇದ್ದರು. ಯಾರೇ ಏನೇ ಮಾಡಿದರೂ 1947 ರಲ್ಲಿ ದೇಶ ಪಾರತಂತ್ರ್ಯದ ಸಂಕೋಲೆಯಿಂದ ಮುಕ್ತವಾಯಿತು. ಆ ಮುಕ್ತತೆಗೆ ಇಂದು ಏಳು ದಶಕಕ್ಕಿಂತ ಹೆಚ್ಚು ಕಾಲವಾಗಿದೆ. ಸ್ವಾತಂತ್ರ್ಯ ಪಡೆದಾಗ ನಾವು ಸುಮಾರು 30 ಕೋಟಿಯಷ್ಟಿದೆವು.

ಆದರೆ ಕೇವಲ ಏಳು ದಶಕಗಳ ಕಾಲಾವಧಿಯಲ್ಲಿಯೇ 100 ಕೋಟಿಯಷ್ಟು ವೃದ್ದಿಗೊಂಡು ನಾವಿಂದು 130 ಕೋಟಿಯಷ್ಟಾಗಿದ್ದೇವೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿ ಮುಂದುವರಿದು ವ್ಯವಸ್ಥೆಯ ಬೇರುಗಳನ್ನು ಗಟ್ಟಿಗೊಳಿಸುತ್ತ ಇಂದು ಅತ್ಯಂತ ಭದ್ರವಾದ ವ್ಯವಸ್ಥೆಯನ್ನಾಗಿ ಮಾಡಿ ಜಗತ್ತಿಗೆ ತೋರಿಸಲಾಗಿದೆ. ನಮ್ಮದು ಜಗತ್ತಿನಲ್ಲಿಯೇ ಅತ್ಯಂತ ಬೃಹತ್ತಾದ ಪ್ರಜಾಪ್ರಭುತ್ವವಾಗಿದೆ. ಅದಕ್ಕಾಗಿ ನಾವು ಹೆಮ್ಮೆ ಪಡುವಂತೆಯೂ ಆಗಿದೆ.

1952ರ ಮಹಾಚುನಾವಣೆಯಿಂದ ಇಂದಿನ 2019ರ ಲೋಕಸಭೆಯ ಚುನಾವಣೆಯವರೆಗೆ ಜರುಗಿದ ಎಲ್ಲ ಚುನಾವಣೆಗಳನ್ನು ಕಣ್ಣಾರೆ ಕಂಡಿರುವೆನು. 1957 ರ ಮಹಾಚುನಾವಣೆಯಿಂದ ಇಂದಿನ ಚುನಾವಣೆಯವರೆ ಜರುಗಿದ ಎಲ್ಲ ಚುನಾವಣೆಗಳಲ್ಲಿ ನನ್ನ ಮತ ಚಲಾಯಿಸಿ ಸಕ್ರಿಯ ಭಾಗೀದಾರನು ಆಗಿರುವೆನು. ಈ ಎಲ್ಲ ಚುನಾವಣೆಗಳು ಜರುಗಿದÀ ಸ್ಥಿತಿಯ ಬಗೆಗೆ ತಿಳಿದುದೂ ಆಗಿದೆ. ಸ್ಥಿತಿಯ ಅವಲೋಕನೆಯ ಸಂಗಡ ಉಂಟಾಗುತ್ತ ಬಂದ ಪರಿಸ್ಥಿತಿಯಲ್ಲಿಯ ಬದಲಾವಣೆಯನ್ನು ಅರಿಯಲು ಪ್ರಯತ್ನವನ್ನೂ ಮಾಡಲಾಗಿದೆ.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟದ ನಿಸ್ವಾರ್ಥ ಸೇವೆಯ ಜನರು ಅಂದು ಜನ ಸಮೂಹದಲ್ಲಿದ್ದರು ಅವರಲ್ಲಿ ಅಧಿಕಾರದ ಆಶೆಯವರ ಕಡಿಮೆಯಿದ್ದರು ಎಂದರೆ ಇದ್ದಿಲ್ಲವೆಂದರೂ ಸಲುವಂತಹ ಸ್ಥಿತಿಯಿದ್ದಿತು. ವ್ಯಕ್ತಿಗತ ಯಾವುದೇ ಆಶೆ ಆಮಿಷವಿಲ್ಲದ ದೇಶದ ಸ್ವಾತಂತ್ರ್ಯಕ್ಕಾಗಿ ಬಹಳಷ್ಟು ಕಳೆದುಕೊಂಡವರು ಇದ್ದರು. ಅವರನ್ನು ಜನ ಗುರುತಿಸಿಯೂ ಇದ್ದರು. ಅಂತಹವರನ್ನು ಒತ್ತಯ ಪೂರ್ವಕ ಕರೆತಂದು ಆಯ್ಕೆ ಮಾಡಿ ಅವರ ಸೇವೆ ಪಡೆಯಲಾಯಿತು. ಆದರೆ ಈ ಸಮಾಜದಲ್ಲೇ ಅನೇಕ ಕುಕೃತ್ಯಗಳಿಂದ ಬದುಕಿ ತಮ್ಮ ಸ್ವಾರ್ಥ ಸಾಧಿಸುವವರೂ ಇದ್ದರು. ಒಂದೆರಡು ಚುನಾವಣೆಗಳು ಮುಗಿಯುತ್ತಲೇ ಇಂಥ ಜನರು ಆಡಳಿತದ ಖುರ್ಚಿ ಹಿಡಿಯಲು ಗರಿ ಬಿಚ್ಚ ಹತ್ತಿದರು. ಅವರ ಸಂಖ್ಯೆ ಕ್ರಮೇಣ ಬೆಳೆಯುತ್ತಲೇ ನಡೆಯಿತು.

ನಮ್ಮ ಜನ ಸಜ್ಜನರು ಮೇಲಾಗಿ ಪಾಪ ಭೀರುಗಳು ಅವರು ಈ ಬದಲಾವಣೆಯ ಪ್ರಕ್ರಿಯಿಗೆ ಸೂಕ್ತವಾಗಿ ಸ್ಪಂದಿಸದೇ ಹೋದರು. ಕೆಲ ಸಂದರ್ಭದಲ್ಲಿ ಜನಕ್ಕೆ ಅಸಹಾಯಕತೆಯ ಭಾಸವೂ ಆಯಿತು. ಅದರ ದುರುಪಯೋಗದಿಂದ ಸ್ವಾರ್ಥಿಗಳ ಕುಬುದ್ದಿಯ ಜನರ ಪ್ರಮಾಣ ವಿಪರೀತವಾಗಿ ಬೆಳೆದು ಅವರ ಪ್ರಭಾವವೇ ಮಂಚೂಣಿಗೆ ಬಂದು ಒಳ್ಳೆಯವರೆನ್ನುವವರು ದೂರ ಸರಿದಂತಾಯಿತು ಹಾಗೂ ಅವರನ್ನು ಉದ್ದೇಶಪೂರ್ವಕ ದೂರ ಸರಿಸಿದಂತೆಯೂ ಅಯಿತು.

ಅಧಿಕಾರ ಸೇವೆಗಾಗಿ ದೊರೆತ ಒಂದು ಅವಕಾಶ ಎಂಬ ಭಾವನೆ ಬದಲಾಗಿ ಸುಲಭದಲ್ಲಿಯೇ ಹಣ ಮಾಡುವ ಮತ್ತು ಜನ ಶೋಷಣೆ ಮಾಡಿ ಕೊಳ್ಳೆ ಹೊಡೆಯುವ ಸುಲಭದ ಉಪಾಯವೆಂದು ತಿಳಿಯಲಾಯಿತು. ಆ ತಿಳುವಳಿಕೆಯಿಂದಲೇ ಲೂಟಿ ಮಾಡಿ ಸುಲಭದಲ್ಲಿಯೇ ಅನೇಕ ಜನರು ಕುಬೇರರಾಗಹತ್ತಿದರು. ಅದಕ್ಕಾಗಿ ಅವರು ಕಾನೂನು ನೆಪ ಮಾತ್ರಕ್ಕೆ ಇದ್ದುದು ಎಂದು ಕಡೆಗಣಿಸಿ ನಿಯಮ ಬಾಹ್ಯವಾಗಿ ಹಣ ಲೂಟಿ ಮಾಡುವುದೇ ಸೇವೆಯೆಂದಾಯಿತು. ಕ್ರಮೇಣ ವ್ಯವಸ್ತೆಯೇ ಭ್ರಷ್ಟಾಚಾರಮಯವಾಗಿ ಪರಿವರ್ತಿತವಾಯಿತು. ಅದರಿಂದ ಸಾಮಾನ್ಯ ಜನರ ಜೀವನ ಕಠಿಣವಾದಂತಾಯಿತು. ಪ್ರಮಾಣಿಕವಾಗಿ ಬದುಕುವುದು ಒಂದು ಅಪರಾಧ ಎನ್ನುವಂತಾಯಿತು. ಸತ್ಯ ನ್ಯಾಯ ನೀತಿ ಪ್ರಾಮಾಣಿಕತೆಗಳು ಜೀವನ ವ್ಯಾಪಾರದಿಂದ ಮುಕ್ತತೆ ಪಡೆದಂತಾಯಿತು. ಬಹು ಸಂಖ್ಯರ ಜೀವನ ಹೈರಾಣಾಗುತ್ತ ನಡೆಯಿತು.

ಭಾರತವು ಪಾರತಂತ್ರ್ಯಕ್ಕೆ ನೂರಾರು ವರ್ಷಗಳವರೆಗೆ ಒಳಗಾಗಿ ಪರಕೀಯರ ಲೂಟಿಯಿಂದ ಅತ್ಯಂತ ಹೀನಾಯ ಸ್ಥಿತಿಗೆ ಬಂದರೂ ತನ್ನ ಮೂಲಭೂತ ಭದ್ರತಳಹದಿಯ ಸಂಸ್ಕøತಿಯಿಂದ ದೂರ ಸರಿದಿದ್ದಲ್ಲ ಭಾರತೀಯ ಸಂಸ್ಕøತಿಯು ಜಗತ್ತಿಗೆ ಆದರ್ಶವಾದ ಮಾನವೀಯ ಮೌಲ್ಯಗಳ ಕಾಪಾಡಿಕೆಯ ಅತ್ಯಂತ ಪ್ರಾಚೀನ ಸಂಸ್ಕøತಿ ಆಗಿದ್ದಿತು. ಇಲ್ಲಿ ಜಾತಿಭೇದವಿದ್ದರೂ ಸಾಮರಸ್ಯದ ಬದುಕು ಇದ್ದಿತ್ತು. ಬಡತನ ಯಾವುದೇ ಜಾತಿ ವರ್ಗಕ್ಕೆ ಮೀಸಲು ಎನ್ನುವ ಸ್ಥಿತಿ ಇದ್ದಿದ್ದಿಲ್ಲ. ಆದರೆ ಅತಿಯಾದ ಶೋಷಣೆಯ ಬವಣೆಯ ಸಮೂಹ ಸಮಾಜದಲ್ಲಿದ್ದಿತು. ಸ್ವಾತಂತ್ರ್ಯ ಪ್ರಾಪ್ತಿಯ ಅನಂತರ ಎಲ್ಲರಿಗೂ ಎಲ್ಲ ತೊಂದರೆಗಳಿಂದ ಮುಕ್ತಿ ದೊರೆತು ನೆಮ್ಮದಿಯ ಜೀವನದ ಅಪೇಕ್ಷೆ ಇದ್ದಿತು. ಆ ಪ್ರಯತ್ನದಲ್ಲಿ ಪ್ರಾರಂಭದಲ್ಲಿ ಪ್ರಯತ್ನಗಳೂ ಆದವು. ಆದರೆ ಅದೇ ಸಮಯದಲ್ಲಿ ಅಧಿಕಾರದ ದುರಾಸೆಯು ಸಮಾಜವನ್ನು ತಮ್ಮ ದುರಾಸೆಗಾಗಿ ಛಿದ್ರಗೊಳಿಸಲು ಪ್ರಾರಂಭವಾಗಿ ಕೇವಲ ಕೆಲ ಸಮೂಹವೇ ಲಾಭಾನ್ವಿವಾಗುವಂತಹ ಕ್ರಮ ನಡೆಯಿತು.

ಜನರಿಗೆ ಪರಿಸ್ಥಿತಿಯ ಅರಿವಾಗಿರಬೇಕು ಹಾಗೂ ಈ ಭಾರತೀಯ ಸಂಸ್ಕøತಿ ಅದರ ಪರಿಪಾಲಕರು ಇದನ್ನು ತಡೆಯಲು ಮಾರ್ಗೋಪಾಯದಲ್ಲಿ ಹುಡುಕಾಟದಲ್ಲಿರಬೇಕು ಆಗ ಸ್ವಾತಂತ್ರ್ಯವೆಂದರೆ ಆಡಳಿತದಲ್ಲಿ ಕೇವಲ ವ್ಯಕ್ತಿಯ ಬದಲಾವಣೆ ಮಾತ್ರ ಅಲ್ಲ. ನಮ್ಮತನದ ಪಾಲನೆಯ ಮುಕ್ತತೆಯೆಂಬುದನ್ನು ಅರಿಯುವಂತಾಯಿತು. ಅದಕ್ಕೆ ಒಂದು ಅವಕಾಶವೆನ್ನುವಂತೆ ದಿಕ್ಕನ್ನೆ ಬದಲಿಸುವ ಒಂದು ಮಹಾ ಘಟನೆ ಜರುಗಿತು. ಅಥವಾ ಜರುಗುವಂತೆ ಮೂಡಲಾಯಿತು. ಬದಲಾದ ದಿಶೆಯು ಜನರಲ್ಲಿ ಒಂದು ಸುನಾಮಿಯಂತೆ ಕಾರ್ಯ ಮಾಡಿ ದಲಾದ ಸಂಘಟನೆ ಮೂಡಿ ಬೆಳೆದು ಬರುವಂತೆ ಅದೂ ಸಹ ತೀವ್ರದಲ್ಲಿಯೇ ಬೆಳೆದು ಬರುವಂತೆ ಮಾಡಿತು. ಜನತೆ ಎಲ್ಲವನ್ನು ತಿರಸ್ಕರಿಸಿ ಅದನ್ನೇ ಬಲಪಡಿಸುವ ಪ್ರಯತ್ನದಲ್ಲಿ ತೊಡಗಿತು. ನಮ್ಮ ಸಂಸ್ಕøತಿಯ ಮೇಲೆ ಆಘಾತ ಜರುಗುವುದನ್ನು ಸಮಾಸ್ತಗೊಳಿಸಲು ಮುಕ್ತ ಪ್ರಯತ್ನ ನಡೆಯಿತು ಎಲ್ಲರೂ ಸಾಮರಸ್ಯದ ಜೀವನಾಪೇಕ್ಷೆ ಒತ್ತು ಕೊಟ್ಟರು. ಇದು ಶುಭ ಸೂಚಕವೆನ್ನುವುದರಲ್ಲಿ ಸಂಶಯವಿಲ್ಲ. ಕಳಪೆ ಮುಕ್ತಗೊಳ್ಳುವ ಸಂಕೇತ ತುರ್ತಕ್ಕಂತು ದೊರೆತಂತಾಗಿದೆ. ಭವ್ಯ ಭವಿಷ್ಯತ್ತಿನ ಆಶಾವಾದಿ ನಾವಾಗಬೇಕು. ಏಕೆಂದರೆ ಈ ಪುಣ್ಯಭೂಮಿಯ ವಾರಸುದಾರರು ನಾವೆಲ್ಲ ಎನ್ನವುದನ್ನು ಮರೆಯಬಾರದು ಯಾರೂ ಮರೆಯುವಂತಾಗಬಾರದು.

ಅಪಪ್ರಚಾರದಿಂದ ಹಣ ಹೆಂಡದಿಂದ ಯಶಸ್ಸು ಸಾಧಿಸಿ ಮುಕ್ತವಾಗಿ ಲೂಟಿ ಮಾಡಬಹುದೆಂಬ ಮನೋಭಾವನೆಯ ಜನರಿಗೆ ಹಾಗೂ ಅಧಿಕಾರ ಚಲಾಯಿಸಲೇ ನಾವಿರುವವರು ಎಂಬ ಭಾವನೆಯ ಜನರಿಗೆ ಮತದಾರನಿಂದು ಒಂದು ತಿರುಗಿ ಬಾರದ ಮಾರ್ಗ ತೋರಿಸಿದ್ದಾನೆ. ಏನಕೇನು ಮಾಡಿದರೂ ನಡೆಯುವುದೆಂಬ ಹುಂಬ ಮನೋಭಾವನೆಯ ಜನರಿಗೆ ಸೂಕ್ತ ಅನುಭವ ಪಡೆಯುವಂತೆ ನಮ್ಮ ಮತದಾರರು ಮಾಡಿದ್ದಾರೆ. ಪ್ರಬುದ್ದರು ಹೊರಬಂದು ತಮ್ಮ ಪ್ರಬುದ್ಧನೆ ತೋರಿಸಿದ್ದಾನೆ. ಹೆಂಡ ಹಣದ ಆಮಿಷದ ಜನರ ಆಟ ಮಂಗಾಟವಾಗಿದೆ. ಇದೇ ಪ್ರಬುದ್ಧತೆ ಸದಾಕಾಲ ಅಪೇಕ್ಷಣೀಯವಾಗಿದೆ. ಹಣ, ಹೆಂಡ,ತಾತ್ಕಾಲಿಕ, ಲಾಭದ್ದು ತಮ್ಮನ್ನೇ ಲೂಟಿಗೆ ಮೈಯೊದ್ದುವಂತೆ ಮಾಡುವುದೆಂಬುದನ್ನು ಆ ಜನ ತಿಳಿದರೆ ಅವರಿಗೆ ಲಾಭ.

ಆದರೆ ಒಂದು ಮಾತನ್ನು ಇಲ್ಲಿ ಸ್ಮರಣಗೆ ತಂದೇ ಸಂಭ್ರಮಿಸಬೇಕಾದ ಸಮಯವಿದಾಗಿದೆ. ಪ್ರಜಾಪ್ರಭುತ್ವ ಎಂದಿಗೂ ಅಪಾಯಕ್ಕೆ
ಗುರಿಯಾಗದಂತೆ ಕಾಪಾಡುವುದು ಪ್ರಬುದ್ಧ ಮತದಾರರ ಹೊಣೆಯಾಗಿದೆ. ಅವರು ಅ ಗುರುತರ ಹೊಣೆಯಿಂದ ನುಣುಚಿಕೊಳ್ಳಲು ಪ್ರಯತ್ನವನ್ನು ಸುತರಾಮ್ ಮಾಡಬಾರದು. ದೇಶ ಈ ದೇಶದ ಎಲ್ಲ ದೇಶವಾಸಿಗಳಿಗೆ ಸೇರಿದುದು ಈ ದೇಶದ ಪ್ರತಿಯೊಂದರ ಮೇಲೆ ಪ್ರತಿಯೊಬ್ಬನದ್ದೂ ಸಮಾನ ಹಕ್ಕಿದೆ. ಅದರ ಲಾಭದ ನಿಜ ವಾರಸುದಾರ ಅತನು. ಅದಕ್ಕಾಗಿ ಇದರ ನಿಜವಾದ ಲಾಭ ಆತನಿಗೆ ಸೇರಲೇ ಬೇಕು. ಲೂಟಿ ಆಗದಂತೆ ಕಾಪಾಡುವುದು ಹೊಣೆ ಹೊತ್ತವರ ಆದ್ಯ ಕರ್ತವ್ಯ, ಪ್ರತಿಯೊಬ್ಬನ ಪ್ರಗತಿಯ ಆಶಾಭಾವನೆ ನಾವೆಲ್ಲ ತಳೆಯೋಣ ಆಶಾವಾದಿ ಆಗೋಣ.

 

ಪ್ರಜಾಪ್ರಭುತ್ವ ವ್ಯವಸ್ಥೆಗಿದು ಅಪಚಾರ
ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆಯ ರಾಷ್ಟ್ರವಾಗಿರುತ್ತದೆ. ಸ್ವಾತಂತ್ರ್ಯಾನಂತರದ ಏಳು ದಶಕಗಳನ್ನು ಕಳೆದಾಗಿದೆ. ಈ ಏಳು ದಶಕಗಳಲ್ಲಿ ಭೌತಿಕ ಪ್ರಗತಿಯನ್ನಂತೂ ಸಾಧಿಸಲಾಗಿದೆ. ಪ್ರಗತಿಯು ಅಪೇಕ್ಷೆಯ ಮಟ್ಟಕ್ಕೆ ಆಗದೇ ಹೋದರೂ ಪ್ರಗತಿ ಆಗಿರುವುದನ್ನು ಒಪ್ಪಲೇಬೇಕಾದ ಮಾತಾಗಿದೆ. ಆದರೆ ನಾವು ಪ್ರಗತಿ ಮುಖವಾಗಿ ಚಲಿಸುತ್ತಿರುವಾಗ ಅನೇಕ ಸಂಗತಿಗಳನ್ನು ಕಳೆದುಕೊಳ್ಳುತ್ತ ನಡೆದೆವು. ಅದರ ಪರಿಣಾಮವಾಗಿ ಕೆಲವು ಕಹಿ ಫಲಗಳನ್ನು ಅನುಭವಿಸುವ ಸಮಯ ಪ್ರಾಪ್ತವಾದಂತಾಗಿದೆ. ನಾವು ಕೆಲ ಸಂಗತಿಗಳಲ್ಲಿ ಜಗತ್ತಿಗೆ ಆದರ್ಶವಾಗಿದ್ದೆವು. ಆ ಆದರ್ಶ ಕಳೆದುಕೊಂಡು ನಗೆಪಾಟಲಿಗೆ ಗುರಿಯಾದಂತಾಗುತ್ತದೆ.

ಅತ್ಯಂತ ಪ್ರಾಚೀನ ಸಂಸ್ಕøತಿಯನ್ನು ಪಡೆದ ರಾಷ್ಟ್ರ ನಮ್ಮದಾಗಿದ್ದಿತು. ಇಹದ ಬದುಕಿನೊಡನೆ ಪಾರಮಾರ್ಥಿಕ ಬದುಕನ್ನು ನಾವು ಅರಿಯುವವರಾಗಿದ್ದೆವು. ಜಗತ್ತಿಗೆ ಅಹಿಂಸೆಯನ್ನು ಸಾರಿ ಹೇಳಿದ ದೇಶ ನಮ್ಮದಾಗಿರುತ್ತದೆ. ಅಹಿಂಸೆಯ ಹೋರಾಟದಿಂದಲೇ ನಾವು ಸ್ವಾತಂತ್ರ್ಯ ಪಡೆದವರಾಗಿದ್ದೇವೆ. ಇಂದಿನ ಈ ಜಾಗತಿಕ ತ್ವೇಷಮಯ ದಿನಗಳಲ್ಲಿ ಇದರ ಉಳಿವಿಗಾಗಿ ಮಾನವನ ಉದ್ಧಾರಕ್ಕಾಗಿ ಅಹಿಂಸೆ ಮಾತ್ರ ಇಂದಿನ ಅಗತ್ಯವೆಂದು ಹೇಳುವುದರ ಸಂಗಡವೇ ಅದೊಂದೇ ತಾರಕ ಮಾರ್ಗವೆಂದು ಜಾಗತಿಕ ಸಮುದಾಯದೆದುರು ಒಕ್ಕೊರಲಿನಿಂದ ಹೇಳಲಾಗಿರುತ್ತದೆ. ಜಗತ್ತೇ ಅದನ್ನು ಒಪ್ಪಿ ಅದರ ಆಚರಣೆಗೆ ಪ್ರಯತ್ನಿಸುತ್ತ ಆ ಮಾರ್ಗದ ಚಲನೆಯ ಅಳವಡಿಕೆಯ ಪ್ರಯತ್ನ ಮಾಡುತ್ತಿರುವುದು. ಈ ಅಹಿಂಸೆಯ ಅತ್ಯಂತ ಸೂಕ್ಷ್ಮ ವಿಶ್ಲೇಷಣೆಯ ಆಚರಣೆಯನ್ನು ಪ್ರತಿಪಾದಿಸಿದ, ಅದರಂತೆ ಆಚರಣೆ ಮಾಡುತ್ತಿರುವ ಜನ ಸಮುದಾಯವನ್ನು ಪಡೆದ ಏಕಮಾತ್ರ ಧರ್ಮ “ಜೈನ ಧರ್ಮ” ಆಗಿರುತ್ತದೆ.

ಜೈನ ಧರ್ಮವು ಅತ್ಯಂತ ಪ್ರಾಚೀನ ಧರ್ಮವಾಗಿದೆ. ಅದರ ಆಚರಣೆ ನಮ್ಮ ದೇಶದ ಬಹುಸಂಖ್ಯಾಕರ ಆಚರಣೆ ಆಗಿದ್ದಿತೆನ್ನುವುದು, ನಮ್ಮ ಪ್ರಾಚೀನ ನಿಜ ಇತಿಹಾಸದ ಪುಟಗಳನ್ನು ಮಗುಚಿ ಹಾಕಿದರೆ ತಿಳಿದು ಬರುತ್ತದೆ. ಇದರ ವ್ಯಾಪನೆಯ ಪ್ರಮಾಣವಿದ್ದುದು ಇಂದಿನ
ಉತ್ಖನನದಲ್ಲಿ ದೊರೆಯುತ್ತಿರುವ ಅವಶೇಷಗಳಿಂದ ತಿಳಿದು ಬರುತ್ತದೆ. ಜೈನ ಧರ್ಮದ ಅಹಿಂಸೆ ಕೇವಲ ಮಾನವ ಕೇಂದ್ರಿತವಾಗಿರದೆ ಎಲ್ಲ ಜೀವಿಗಳನ್ನು ಒಳಗೊಂಡ ಅಹಿಂಸೆ ಆಗಿರುತ್ತದೆ. ಸೂಕ್ಷ್ಮ ಎಂದರೆ ಕಣ್ಣಿಗೆ ಕಾಣಿಸದ ಜೀವಿಗಳ ಅಸ್ತಿತ್ವವನ್ನು ಸಾವಿರಾರು ವರ್ಷಗಳ ಪೂರ್ವದಲ್ಲಿಯೇ ಸಾರಿದ ಧರ್ಮ ಇದಾಗಿರುತ್ತದೆ. ಯಾವುದೇ ಜೀವಿ ಅದು ಸೂಕ್ಷ್ಮದಿಂದ ಮಾನವನವರೆಗಿನ ಎಲ್ಲಾ ಜೀವಿಗಳಿಗೆ ಒಂದಿಲ್ಲೊಂದು ಬಗೆಯ ತೊಂದರೆಯನ್ನೀಯುವುದೆಲ್ಲ ಹಿಂಸೆಯೆಂದು ಪ್ರತಿಪಾದಿಸಿ ಅದರಿಂದ ಮುಕ್ತವಾಗಿರಬೇಕೆಂದು ಸಾರಿದ ಧರ್ಮ ಜೈನ ಧರ್ಮ ಆಗಿರುತ್ತದೆ. ಕೊಲ್ಲುವುದು ಎಂಧರೆ ಯಾವುದೇ ಕಾರಣಕ್ಕಾಗಿ ಒಂದು ಜೀವಿಯ ಪ್ರಾಣತೆಗೆಯುವುದು ಸಂಪೂರ್ಣವಾಗಿ ನಿಷೇಧ ಎಂದು ಸಾರಿದ ಧರ್ಮ ಜೈನ ಧರ್ಮ ಆಗಿರುತ್ತದೆ. ಯಾವುದೇ ಜೀವಿಯು ಹಿಂಸೆಯಿಂದ ಸಂಪಾದಿತ ಪಾಪದಿಂದ ಪರಿಪೂರ್ಣವಾಗಿ ಮುಕ್ತವಾದಾಗ ಅದು ಮೋಕ್ಷ ಪ್ರಾಪ್ತಿ ಹೊಂದುತ್ತದೆ. ಮೋಕ್ಷ ಪ್ರಾಪ್ತಿಗೆ ಮನುಷ್ಯ ಜನ್ಮ ಪಡೆಯುವುದು ಅನಿವಾರ್ಯದ್ದಾಗಿದೆ. ಮೋಕ್ಷವೆಂದರೆ ನಿರಂತರವಾದ ಸುಖ ಎಂದರೆ ನಿರಂತರವಾದ ನೆಮ್ಮದಿಯಾಗಿರುತ್ತದೆ. ಮೋಕ್ಷದ ಸ್ಥಿತಿಯಲ್ಲಿ ಅದು ಶರೀರ ರಹಿತವಾದ ಆತ್ಮದ ಸ್ಥಿತಿಯಲ್ಲಿ ಇರುತ್ತದೆ. ಆತ್ಮ ನಿರಂತರವಾಗಿದ್ದು ಅದು ಬೇರೆ ಬೇರೆ ಜೀವ ಸ್ವರೂಪವನ್ನು ತನ್ನ ಪಾಪ ಫಲವಾಗಿ ಪಡೆಯುತ್ತ ಹೋಗುತ್ತದೆ. ಮನುಷ್ಯ ಜನ್ಮವೇ ಶ್ರೇಷ್ಠವಾದುದು. ಅದು ವಿರಳವಾಗಿ ಪ್ರಾಪ್ತವಾಗುವುದು. ಅದು ದೊರೆತಾಗ ಅದರ ಸದುಪಯೋಗ ಪಡೆದು ಪಾಪ ಮುಕ್ತವಾಗಿ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳಬೇಕೆಂದು ಹೇಳುವ ಧರ್ಮ ಜೈನ ಧರ್ಮ ಆಗಿರುತ್ತದೆ. ಪ್ರತಿಯೊಂದು ಜೀವಿಯ ಕೊನೆಯ ಗುರಿ ಮೋಕ್ಷ ಪ್ರಾಪ್ತಿಯೆಂದೂ ಪ್ರತಿಪಾದಿಸುತ್ತದೆ. ಆ ಸಾಧನೆಗಾಗಿ ಜೀವನ ಕ್ರಮವನ್ನು ಹೇಗೆ ರೂಪಿಸಿಕೊಳ್ಳಬೇಕೆಂದೂ ವಿವರಣೆಯನ್ನೀಯುತ್ತದೆ. ಅದನ್ನೇ ನಾವು ನಮ್ಮ ಜೈನ ಸಂಸ್ಕøತಿಯೆಂದು ಹೇಳುವುದು. ಜೈನ ಸಂಸ್ಕøತಿಯ ವಿಶೇಷತೆಯನ್ನು ಕಾಯ್ದು ಕೊಂಡು ಬರುತ್ತಿರುವ ಅದರ ಅನುಯಾಯಿಗಳು ಇಂದಿಗೂ ಇರುವರು. ಅವರು ಸಮಾಜದಲ್ಲಿ ಒಳ್ಳೆಯವರೆಂದು, ಸಮಾಜ ಕಂಟಕರು ಅಲ್ಲವೆಂದು ಗುರುತಿಸಲ್ಪಟ್ಟು ಇರುವರು. ಈ ಸಂಸ್ಕøತಿಯೇ ಜೀವ ಜಗತ್ತಿಗೆ ತಾರಕವಾದುದೆಂದು ಅದರ ಪ್ರಚಾರ ಪ್ರಸಾರ ಅತ್ಯಂತ ಅಗತ್ಯದ್ದೆಂದು ಹೇಳಲು ಹೆಮ್ಮೆ ಪಡುವ ಸಂಗತಿಯಾಗಿದೆ. ಅದರ ಹ್ರಾಸವಾಗದಂತೆ ಕಾಪಾಡಬೇಕಾದುದು ಪ್ರತಿಯೊಬ್ಬ ಮಾನವೀಯತೆಗೆ ಪ್ರಾಧಾನ್ಯತೆಯನ್ನೀಯುವ ಮನುಷ್ಯನ ಪರಮ ಕರ್ತವ್ಯವೆಂದರೆ ತಪ್ಪಾಗದು. ಅದರೆ ಇಂದು ಕೇವಲ ಭೌತಿಕತೆಗೆ ಮಾತ್ರ ಪ್ರಾಧಾನ್ಯತೆಯನ್ನೀಯುವ ಸಂಸ್ಕøತಿಯು ನಮ್ಮ ಸಂಸ್ಕøತಿಯ ಮೇಲೆ ಆಕ್ರಮಣ ಮಾಡಲು, ತನ್ನ ಪ್ರಭುತ್ವ ಸಾಧಿಸಲು ಪ್ರಯತ್ನಪಡುತಿರುವರು. ಅದಕ್ಕೆ ಯಾವುದೇ ಬಗೆಯ ಕಟ್ಟಳೆಯಿಲ್ಲ. ಜೀವನವು ಭೋಗದಲ್ಲಿದೆಯೆಂದು ಪ್ರತಿಪಾದಿಸುವುದು. ಅದಕ್ಕಾಗಿ ಅನೇಕ ಬಗೆಯ ಐಹಿಕ ಭೋಗಕ್ಕೆ ಅವಕಾಶವಿತ್ತು. ನಮ್ಮ ಜನರನ್ನು ಮರುಳು ಮಾಡುತ್ತಿರುವುದು. ಅದಕ್ಕೆ ಬಲಿಯಾದ ಜನರು ಕೇವಲ ಭೌತಿಕ ಜೀವನಕ್ಕಾಗಿ ಬದುಕುಬೇಕೆಂದು ಬಯಸುತ್ತಿರುವರು. ಅದರಿಂದಾಗಿ ಅನೇಕ ಪ್ರಕಾರದ ಕೃತ್ಯಗಳಲ್ಲಿ ತೊಡಗುತ್ತಿರುವರು.
ನ್ಯಾಯ, ನೀತಿ, ಸಹಿಷ್ಣುತೆ,ಸತ್ಯ ಸಹಬಾಳುಗಳು ಜೀವನ ಕ್ರಮದಿಂದ ದೂರವಾಗುತ್ತ ನಡೆದಿರುತ್ತವೆ. ಅವುಗಳ ಸ್ಥಾನವನ್ನು ಇನ್ನಾವುದೋ ಸಂಗತಿಗಳು ಆಕ್ರಮಿಸಿ ನಮ್ಮ ಸಂಸ್ಕøತಿಯ ಎಂದರೆ ನೆಮ್ಮದಿಯ ಜೀವನ ಕ್ರಮ ತರುವ ಕ್ರಮವು ಬದಲಾಗಿ ಇಹದ ಭೌತಿಕ ಭೋಗದ ಜೀವನದ ಸಂಗತಿಗಳು ವಿಜೃಂಭಿಸುವಂತೆ ಅಗುತ್ತಿದೆ. ಅದಷ್ಟು ಮಾತ್ರ ಆಗದೇ ನಮ್ಮ ಜೀವನ ಕ್ರಮ ಬದಲಾವಣೆಯ ಪ್ರಯತ್ನಗಳೂ ಆಗಲು ಪ್ರಾರಂಭಿಸಿವೆ. ಅದು ವಿಷಾಧನೀಯವೆನ್ನಿಸಿದುದರಿಂದ ಪ್ರತಿರೋಧದ ಸ್ಥಿತಿಗೆ ತಲುಪಿದಂತಾಗಿದೆ.

ಜೈನರ ಅಹಿಂಸಾಮೂಲ ಸಂಸ್ಕøತಿಯ ಜೀವನ ಕ್ರಮವೇ ಒಂದು ವಿಶಿಷ್ಟ ಪ್ರಕಾರದ್ದಾಗಿದೆ. ಅಹಿಂಸೆಯ ಪರಿಪಾಲನೆಗಾಗಿ ಅವರು ಪರಿಪೂರ್ಣ ಶಾಕಾಹಾರಗಳಾಗಿದ್ದಾರೆ. ಪರಿಪೂರ್ಣ ಅಹಿಂಸೆ ಸಾಧ್ಯವಿಲ್ಲದೇ ಹೋದರೂ ಕನಿಷ್ಠ ಮಟ್ಟದ ಹಿಂಸೆ ಮಾಡುತ್ತ ಪರಿಪೂರ್ಣ ಅಹಿಂಸೆಯ ಹಂತ ತಲುಪುವುದು ಸಂಸ್ಕøತಿಯ ತಿರುಳಾಗಿದೆ. ಆದ್ದರಿಂದ ವನಸ್ಪತಿಯು ತಾನೇ ತ್ಯಜಿಸಿದ ಧಾನ್ಯ ಮುಂತಾದವುಗಳ ಸೇವನೆ ಮಾಡುವರು. ರಕ್ತ ಹರಿಸಿ ಹೊಟ್ಟೆ ಹೊರೆಯುವ ಯಾವುದೇ ಆಹಾರ ತ್ಯಾಜ್ಯವೆಂದು ಹೇಳಲಾಗಿದೆ. ಮಧು, ಮಧ್ಯ, ಮಾಂಸ ಸೇವನೆ ನಿಷಿದ್ಧವೆಂದು ಹೇಳಲಾಗಿದೆ. ಅದರ ಪಾಲನೆಯನ್ನು ಪ್ರತಿಯೊಬ್ಬ ಜೈನನ ಪಾಲಿಸಿಯೇ ಪಾಲಿಸುವನು. ದೇವಪೂಜಕರಾದ ಇವರು ಕರ್ಮ ಸಿದ್ದಾಂತದ ಪ್ರತಿಪಾದಕರು. ದೇವ ಪೂಜಕರೆಂದರೆ ಯಾವುದನ್ನೇ ದಯಪಾಲಿಸುವೆ ದೇವರು ಇವರಿಗಿಲ್ಲ. ದೇವರೆಂದರೆ ಅವರು ಜೀವನ ಪಥಿಕರು. ಅವರು ಚಲಿಸಿದ ಮಾರ್ಗವನ್ನು ಅನುಸರಿಸುವವರು. ಇವರ ದೇವರು ಮೋಕ್ಷ ಪ್ರಾಪ್ತಿ ಮಾಡಿಕೊಂಡ ತೀರ್ಥಂಕರರಾಗಿದ್ದಾರೆ. ಅವರು ಒಂದು ಕಾಲ ಖಂಡದಲ್ಲಿ ಇಪತ್ನಾಲ್ಕು ಮಾತ್ರ ಇರುವರು. ಈ ಕಾಲಖಂಡದ ಕೊನೆಯ ಎಂದರೆ 24ನೆ ತೀರ್ಥಂಕರರು ಭಗವಾನ ಮಹಾವೀರರರಾಗಿದ್ದಾರೆ. ಜನರು ಇವರನ್ನು ಭಗವಾನ ಮಹಾವೀರರ ಅನುಯಾಯಿಗಳೆಂದು ಗುರುತಿಸುವರು. ಇವರು ಅಪರಿಗ್ರಹಿಗಳಾಗಿದ್ದಾರೆ. ಅವಶ್ಯಕತೆಗೆ ತಕ್ಕಷ್ಟನ್ನು ಸೂಕ್ತ ಮಾರ್ಗದಲ್ಲಿ ಸಂಪಾದಿಸಲು ಹಾಗೂ ಸಂಗ್ರಹಿಸುವವರಾಗಿದ್ದಾರೆ. ಇವರ ಮಾರ್ಗದರ್ಶನಕರೆನ್ನುವವರು ಸಂಪೂರ್ಣವಾಗಿ ಅಪರಿಗ್ರಹಿಗಳಾಗಿರುತ್ತಾರೆ. ಅವರೇ ಮುನಿಗಳಾಗಿದ್ದಾರೆ. ಅವರಿಗೆ ಪರಿಗ್ರಹವಾಗಿ ಬಟ್ಟೆಯೂ ಇಲ್ಲ. ಆಹಾರ ಸೇವನೆಗೆ ಕರಪಾತ್ರ ಎಂದರೆ ಅಂಗೈಯಲ್ಲಿ ಪಡೆದು ಸ್ವಿಕರಿಸುವರು. ಮುನಿ ಪರಂಪರೆಯೊಡನೆ ಶ್ರಾವಕ ಪರಂಪರೆಯೆಂದರೆ ಅನುಯಾಯಿಗಳ ಪರಂಪರೆಯೂ ಇರುತ್ತದೆ.

ನಮ್ಮ ಭಾರತೀಯ ಸಮಾಜವು ಧರ್ಮಮೂಲ ಸಂಸ್ಕøತಿಯನ್ನು ಪಡೆದ ದೇಶವಾಗಿರುತ್ತದೆ. ಅನೇಕ ಧರ್ಮಗಳು ಇಲ್ಲಿ ಅಸ್ತಿತ್ವ ಕಂಡಿವೆ. ಅನೇಕತೆಯಲ್ಲಿ ಏಕತೆಯನ್ನು ಕಾಣುವ ದೇಶ ನಮ್ಮದಾಗಿರುತ್ತದೆ. ಸಹಜೀನವಕ್ಕೆ ಹೇಳಿ ಮಾಡಿಸಿದಂತಿದೆ. ನಮ್ಮ ಪರಂಪರೆಗಳ ಅನೇಕ ಧರ್ಮ ಸಂಸ್ಕøತಿಗಳ ಸಂಗಮವೇ ನಮ್ಮ ಸಮಾಜವಾಗಿರುತ್ತದೆ. ಪ್ರತಿ ಧರ್ಮ ಸಂಸ್ಕøತಿಗೆ ಅವುಗಳದ್ದೇ ಆದ ಶ್ರದ್ಧಾ ಕೇಂದ್ರಗಳಿವೆ. ಅವು ಅವರವರಿಗೆ ಪೂಜನೀಯವಾಗಿವೆ.

ಅವುಗಳನ್ನು ಅತ್ಯಂತ ಪವಿತ್ರವೆಂದು ಕಾಣುವ ಮತ್ತು ಕಾಪಾಡುವ ಶ್ರದ್ಧಾಳುಗಳಿರುವರು. ಅವರ ನಿಷ್ಠೆ ಅವುಗಳ ಅಸ್ತಿತ್ವ, ಪ್ರಗತಿಗೆ ಕಾರಣೀಭೂತವಾಗಿದೆ. ಅವುಗಳು ನೆಮ್ಮದಿ ಸಮಾಜದ ನಿರ್ಮಾಣದಲ್ಲಿ ಕಾರಣೀಭೂತವೂ ಆಗಿರುತ್ತವೆ. ಅವುಗಳನ್ನು ಇದ್ದಂತೆ ಕಾಪಾಡಲು ಸಮಾಜದ ಎಲ್ಲ ಜನರೂ ಅಶಯ ತಳೆಯುವರು. ಇಂಥ ಸ್ಥಿತಿಯಲ್ಲಿ ಯಾವುದೇ ಅನುಚಿತ ಘಟನೆ ಘಟಿಸಲು ಕಾರಣೀಭೂತವಾದರೆ ಅಲ್ಲೋಲ್ಲ ಕಲ್ಲೋವಾಗುವ ಸಾಧ್ಯತೆಯಿರುತ್ತದೆ. ಕೆಲವು ಶ್ರದ್ಧಾ ಕೇಂದ್ರಗಳನ್ನು ಹೆಸರಿಸಬೇಕೆಂದರೆ ಹರಿದ್ವಾರ, ಕಾಶಿ, ಅಮೃತಸರ, ಕೂಡಲ ಸಂಗಮ ಮಥುರ, ತಿರುಪತಿ ಮುಂತಾದವುಗಳು ಕೆಲವು ಆಗಿರುತ್ತವೆ. ಇದೇ ಬಗೆಯ ಚೈನರ ಶ್ರದ್ಧಾ ಕೇಂದ್ರ ‘ಸಮ್ಮೆದ ಶಿಬಿರಜಿ’ ಆಗಿರುತ್ತದೆ.

ಸಮ್ಮೇದ ಶಿಖರಜಿಯು ಜೈನರ ಶ್ರದ್ಯಾಕೇಂದ್ರವಾಗಿರುವಂತೆ ಅವರಿಗೆ ಸಿದ್ದಕ್ಷೇತ್ರ ಆಗಿರುತ್ತದೆ. ತೀರ್ಥಂಕರರು ಕೇವಲ ಜ್ಞಾನ ಪಡೆದ ಅನಂತರ ಧರ್ಮ ಪ್ರಚಾರ ಮಾಡಿ ಕೊನೆಗೆ ಅವರಿಗೆ ದಿವ್ಯ ಧ್ವನಿ ಪ್ರಾಪ್ತವಾದಾಗ ಅವರು ಸಮಸ್ತ ಜೀವಿಗಳಿಗೆ ಉಪದೇಶವನ್ನೀಯುವರು. ಅವರ ಧರ್ಮಸಭೆ ಯಾವುದನ್ನು ಜೈನರು ಸಮವಸರಣವೆನ್ನುವರು ಅದರಲ್ಲಿ ಉಪದೇಶ ಕೇಳಲು ಮನುಷ್ಯರು ಮಾತ್ರವಲ್ಲ ತೀರ್ಯಂಚ ಪ್ರಾಣಿ ಮೊದಲಾಗಿ ವಿವಿಧ ಜೀವಿಗಳು ಉಪಸ್ಥಿತವಿರುತ್ತವೆ. ಅವುಗಳಿಗೂ ಧರ್ಮೋಪದೇಶದ ಅನುಭವ ತಲುಪುತ್ತಿದ್ದಿತು. ಅಂಥ ಸಿದ್ದಕ್ಷೇತ್ರಗಳು ಕೈಲಾಸ ಪರ್ವತ, ಚಂಪಾಪುರ, ಗಿರಿನಾರ, ಪಾವಾಪುರಿ ಮತ್ತು ಸಮ್ಮೇದಶಿಖರಜಿಗಳಾಗಿರುತ್ತವೆ. ಸಮ್ಮೇದ ಶಿಖಿರಜಿಯಲ್ಲಿ ಇಪ್ಪತ್ತು ಜನ ತೀರ್ಥಂಕರರು ಮೋಕ್ಷ ಗೈದಿರುವರು. ಉಳಿದ ಸ್ಥಳಗಳಲ್ಲಿ ಒಬ್ಬೊಬ್ಬ ತೀರ್ಥಂಕರರು ಮೋಕ್ಷಗೈದಿರುತ್ತಾರೆ. ಅದಕ್ಕಾಗಿ ಈ ಸ್ಥಳಗಳು ಜೈನರಿಗೆ ಅತ್ಯಂತ ಪವಿತ್ರ ಸ್ಥಳಗಳಾಗಿರುತ್ತವೆ. ಸಮ್ಮೇದÀಶಿಖರಜಿಯಂತೂ ಮಿಗಿಲಾದ ಸ್ಥಾನವಾಗಿದೆ. ಜೈನರು ಜೀವನದಲ್ಲಿ ಒಮ್ಮೆಯಾದರೂ ಅದರ ಯಾತ್ರೆ ಕೈಗೊಂಡು ದರ್ಶನ ಭಾಗ್ಯ ಪಡೆಯಬೇಕೆಂಬುದು ಧರ್ಮಪಾಲನೆಯ ನಿಯಮದಂತಾಗಿದೆ.

ಇಲ್ಲಿಯವರೆಗೆ ಸಮ್ಮೆದ ಶಿಖರಜಿಯಲ್ಲಿ ಯಾವುದೇ ಜೀವ ಹಿಂಸೆ ನಡೆದಿಲ್ಲ ಮಧ್ಯ ಮಾಂಸ ಸೇವನೆ ಕಾಣದು. ದರ್ಶನಾರ್ಥಿಗಳು ರಾತ್ರಿ ಎರಡು ಗಂಟೆಗೇನೇ ಎದ್ದು ಸ್ನಾನ ಮಾಡಿ ಶುದ್ದ ಬಟ್ಟೆ ಧರಿಸಿ ಸುಮಾರು 33 ಕಿ. ಲೋ ಮಿಟರುಗಳಷ್ಟು ದೂರವನ್ನು ಬರಿಗಾಲಿನಿಂದ ಬೆಟ್ಟದ ಮೇಲೆ ಚಲಿಸಿ ದರ್ಶನ ಪಡೆಯುವರು. ಅದಕ್ಕಾಗಿ ಅಂಥ ಪವಿತ್ರತೆಯ ಪ್ರತೀಕವಾದ ಸ್ಥಳದಲ್ಲಿ ಯಾವುದೇ ಕಾರಣವನ್ನು ಮುಂದೆ ಮಾಡಿ ಆ ಬೆಟ್ಟದ ಮೇಲೆ ಅಧುನಿಕ ಅನುಕೂಲತೆ ಒದಗಿಸುವುದು, ಹಿಂಸೆ ಜರುಗುವಂತಹ ದೇವಿ, ದೇವತೆಯ ಮಂದಿರ ನಿರ್ಮಾಣ ಮಾಡುವುದು ಅನಪೇಕ್ಷಿತವಾಗಿರುತ್ತದೆ. ಸರಕಾರ ಒಳ್ಳೆಯದನ್ನು ಕಾಪಾಡಬೇಕು, ಇನ್ನುಳಿದವರಲ್ಲಿ ಒಳ್ಳೆಯ ಸಾಂಸ್ಕøತಿಕ ಪರಿವರ್ತನೆ ಉಂಟಾಗುವ ಪ್ರಗತಿಪರ ಕಾರ್ಯ ಮಾಡಬೇಕು. ಯಾವ ಸಂಸ್ಕøತಿ ಮಾನವನನ್ನು ಮಾನವೀಯತೆ ಇಂದ ಬದುಕಿ ಪ್ರಗತಿ ಸಾಧಿಸಲು ಸಹಕರಿಸುವುದಿಲ್ಲ ಅದನ್ನು ಹುಟ್ಟು ಹಾಕುವುದು, ಪ್ರೋತ್ಸಾಹಿಸುವುದು ಎರಡೂ ನಿಷೇಧಿತವಾದವುಗಳಾಗಿವೆ. ಅದಕ್ಕಾಗಿ ಒಂದು ಸಂಸ್ಕøತಿಯ ಪವಿತ್ರತೆ ನಾಶಪಡಿಸುವ ಪ್ರಯತ್ನ ಆಗಬಾರದು. ಅದು ಸಾಮಾಜಿಕ ನೆಮ್ಮದಿ ಕೆಡಿಸುವುದಲ್ಲದೆ ಅಲ್ಪಸಂಖ್ಯಾಕರ ದಮನವೂ ಆಗುವುದು. ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲರ ಹಿತ ಸಾಧಿಸವಂತದ್ದಾಗಿರುತ್ತದೆ. ಅದರ ವಿಪರೀತಾರ್ಥ ಮಾಡಿ ಅಧೋಗತಿಯ ದಾರಿ ತುಳಿಯುವುದು ವಿವೇಕದ ಮಾತಾಗದು.

  • ಜಲತ್ಕುಮಾರ ಪುನಜಗೌಡ