ನಿರಂತರ ಅನ್ನ ದಾಸೋಹ ಪರಂಪರೆಯ ಸಾಲಹಳ್ಳಿಯ ಶಿರಡಿ ಸಾಯಿಬಾಬಾ ಮಂದಿರ

ಸರ್ವ ಧರ್ಮ ಸಮಾನ್ವತೆಯ ವಿಶೇಷ ಸ್ಥಾನ- ನಿರಂತರ ಅನ್ನ ದಾಸೋಹ ಪರಂಪರೆಯ ಸಾಲಹಳ್ಳಿಯಶಿರಡಿ ಸಾಯಿಬಾಬಾ ಮಂದಿರ
ದೇವರು ಧರ್ಮದ ಹೆಸರಿಸಲ್ಲಿ ನಡೆಯುವ ಹಬ್ಬ ಉತ್ಸವ ಜಾತ್ರೆಗಳಿಗೆ ಜಾತಿ, ಮತ, ಪಥ, ಭಾಷೆ, ಪ್ರದೇಶವನ್ನು ಮೀರಿದ ಸೋಮರಸದ ಶಕ್ತಿ ಇರುತ್ತದೆ. ನಾಡಿನಾದ್ಯಂತಹ ಜಾತ್ರೆ ರಥೋತ್ಸವಗಳದ್ದೇ ಸುದ್ದಿ. ಉತ್ತರ ಕರ್ನಾಟಕ ಪ್ರಸಿದ್ಧವು.
ಸಕಲ ಚರಾ ಚರ ವಸ್ತುಗಳನ್ನು ಭಗವಂತನೆಂಬ ನಂಬಿಕೆ ಆಸ್ತಿಕರದು ಕಲ್ಲು ಮಣ್ಣು ಮರ ಎಲ್ಲದರಲ್ಲೂ ಭಗಂತನನ್ನು ಕಂಡು ಭಕ್ತರ ನಂಬಿಕೆಯನ್ನು ಹೆಚ್ಚಿಸುವ ತಾಣಗಳು ಸಾಕಷಿಟಿವೆ. ಅಂತದರಲ್ಲಿ ಒಂದು ಶಿರಡಿ ಬಾಬಾ ಮಂದಿರ ಜಾತ್ರೆಗಳೆಂದರೆ ಸಮಾಜದ ಜಾತಿ ಜನಾಂಗಗಳ ಜನರನ್ನು ಒಂದು ಗುಡಿಸುವ ಮಹತ್ವ ಪೂರ್ಣ ಆಚರಣೆಗಳಾಗಿವೆ. ಭಾರತ ಖುಷಿ ಮುನಿಗಳು ಸಾಧು ಸಂತರು ತವರು ಮನೆ ಲೌಕಿಕ ಹಾಗೂ ಪರಮಾರ್ಥಿಕ ಜೀವನಕ್ಕೆ ಬೆಳಕು ತೊರುವಲ್ಲಿ ಅನುಭವಿಗಳು ಕಾಲಕಾಲಕ್ಕೆ ಭಾರತ ಭೂಮಿಯಲ್ಲಿ ಜನ್ಮ ಎತ್ತಿದ್ದಾರೆ
ಬೆಳಗಾವ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದ ಉತ್ತರಕ್ಕೆ ಬೆಳಗಾಂವ ಬಾಗಲಕೋಟೆ ಹೆದ್ದಾರಿಯ ಪಕ್ಕದಲ್ಲಿ ಸ್ಥಾಪಿಸಿಗೊಂಡಿರುವ ಮಂದಿರದ ರೂವಾರಿ ಯಾರು ಗೊತ್ತೆ?

ಖಾದಿ ಗ್ರಾಮೋದ್ಯೋಗದಲ್ಲಿ ಸೇವೆ ಸಲ್ಲಿಸಿ ಗಾಂಧಿವಾದಿಗಳಾದ ಮತ್ತು ಸಮಾಜ ಸೇವಕರಾದ ಆರ್.ಎಚ್. ಅಂತಾಪೂರ, ಶ್ರೀಮತಿ ಕೆ. ಆರ್. ಅಂತಾಪೂರ ಇವರ ಪುಣ್ಯ ಗರ್ಭದಲ್ಲಿ ಹಿರಿಯ ಮಗನಾಗಿ ಜನಿಸಿ ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಬಾಲ್ಯದಲ್ಲಿಯೇ ಭಾವೈಕ್ಯತೆ ಯನ್ನು ಆಳವಡಿಸಿ ಕೊಂಡು ಬಂದರು. ಇವರ ಬಾಲ್ಯದಿಂದಲೂ ಬಾಬಾರವರನ್ನು ಪೂಜಿಸುವದನ್ನು ಕಾರ್ಯಗತ ಮಾಡಿ ಕೊಂಡಿದ್ದರು. ವಿದ್ಯಾಭ್ಯಾಸ ಮುಗಿ ನಂತರ 1984 ರಲ್ಲಿ ಖಾದಿ ಗ್ರಾಮೋ ದ್ಯೋಗದಲ್ಲಿ ಖಾದಿ ಕಾರ್ಯಕರ್ತರಾಗಿ ಕೆಲಸಕ್ಕೆ ಸೇರಿದರು. ನೂಲುವ ಹಾಗೂ ನೇಯುವ ಹೆಣ್ಣು ಮಕ್ಕಳಿಗೆ ಇವರೆಂದರೆ ತುಂಬಾ ಪ್ರೀತಿ. ಇವರಿಗೆ ಪತ್ನಿ ಹಾಗೂ ಒಬ್ಬಳು ಹೆಣ್ಣು ಮಗಳು ಮತ್ತು ಮೂವರು ಗಂಡು ಮಕ್ಕಳು ಇದ್ದಾರೆ. ಜನ್ಮ ಕೊಟ್ಟ ತಾಯಿಂದ ಒಳ್ಳೆಯ ಮಾರ್ಗದರ್ಶನ ಪಡೆದೆ. ಎಂದು ಹೃದಯ ಬಿಚ್ಚಿ ಹೇಳುತ್ತಾರೆ.

ಇವರದು ನೇರ ನುಡಿ ಸತ್ಯಕ್ಕೆ ತಲೆ ಬಾಗಿ ಅಸತ್ಯಕ್ಕೆ ಗಂಭೀರವಾಗಿ ಸಿಟ್ಟಿನಿಂದ ಉತ್ತರಿಸಿಯೇ ಬಿಡುತ್ತಾರೆ. ಯಾರದು ಮುಲಾಜ್ ಇಟ್ಟು ಕೊಳ್ಳುವುದಿಲ್ಲ ಸಿಟ್ಟು ಬಂತೆಂದರೆ ಯಾರನ್ನು ಕೇಳುವುದಿಲ್ಲ. ಸಿಟ್ಟು ಅರ್ಧ ಕ್ಷಣ ಮಾತ್ರ ಬರ ಬರತ್ತಾ ಬಾಬಾರ ಸೇವೆಯು ಹೆಚ್ಚಾದಂತೆ ಸಿಟ್ಟು ಸಹಿತ ಕಡಿಮೆಯಾಗುತ್ತ ಬಂದಿದೆ. ಯಾರಾದರೂ ದು:ಖದಿಂದ ತೊಂದರೆಯಿಂದ ಬಂದು ಕೇಳಿದರೆ ಧನ ಧಾನ್ಯ ಸಹಾಯ ಮಾಡುತ್ತಿದ್ದರು. ತಮ್ಮ ಹೆಂಡಿತಿಯ ಬೋರಮಾಳ ಸರವನ್ನು ಒತ್ತಿ ಇಟ್ಟು ಬಡ ರೈತನಿಗೆ ಬೋರ ಹಾಕಲಿಕ್ಕೆ ಸಹಾಯ ಮಾಡಿದ ಕರುಣಾಮಯಿ, ಪಿತಾಂಬರವನ್ನು ಒತ್ತಿ ಇಟ್ಟು ಕರೆಂಟ ಬಿಲ್ಲು ತುಂಬಲಿಕ್ಕೆ ಸಹಾಯ ಮಾಡಿದ ಸಾತ್ವಿಕ ವ್ಯಕ್ತಿ ಹುಟ್ಟಿನಿಂದಲೂ ಜನರಿಗಾಗಿ ತ್ರಾಸ್ ತೆಗೆದು ಕೊಂಡ ಇವರ ಜೀವನ ಈಗಲಾದರೂ ತ್ರಾಸಿಯಿಂದಲೇ ತಮ್ಮ ಆದ್ಯಾತ್ಮ ಜೀವನವನ್ನು ಸಾಯಿ ಬಾಬಾರ ಸೇವೆಯಲ್ಲಿ ನಡೆಸಿದ್ದಾರೆ. ಖಾದಿ ಕೇಂದ್ರದಲ್ಲಿ ಗಣಪತಿಯನ್ನು ಕೂಡ್ರಿಸಿದಾಗ ಅವರ ಮಗ್ಗುಲಿಲ್ಲಿ ಬಾಬಾರ ಮೂರ್ತಿಯನ್ನು ಇಟ್ಟು ಬಿಡುತ್ತಿದ್ದರು. ಮುಂದೆ ಇವರು ಹೀಗೆ ಆಗುತ್ತಾರೆ. ಎಂಬುವದು ಯಾರಿಗೂ ಗೊತ್ತಿರಲಿಲ್ಲ. ಅಷ್ಟೆ ಅಲ್ಲ ಸ್ವತ: ಅವರಿಗೆ ಸಹಿತ ತಿಳಿದಿರಲಿಲ್ಲ. ಇದೆಲ್ಲವೂ ಸಾಯಿಬಾಬಾರ ಲೀಲೆ ಎನ್ನದೇ ಮತೆತೀನನ್ನುವುದು?

1995 ರಿಂದ ಶಿರಡಿಗೆ ಪ್ರತಿ ತಿಂಗಳೂ ಹೋಗಿ ಬರುತ್ತಾರೆ.ಪ್ರತಿ ತಿಂಗಳು ಜನರನ್ನು ಕರೆದುಕೊಂಡು ಹೋಗಿ ಬಂದಿದ್ದಾರೆ.
ಲೆಕ್ಕವಿಲ್ಲದ್ದಷ್ಟು ಜನರಿಗೆ ಸಾಯಿಬಾಬಾರ ದರ್ಶನ ಮಾಡಿಸಿ ಅವರ ಜೀವನವನ್ನು ಪಾವನಗೊಳಿಸಿದ್ದಾರೆ. 1996 ಜನೇವರಿ 18 ರಂದು ತಮ್ಮ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾದರು ಪ್ರತಿಯೊಂದು ಕೆಲಸಕ್ಕೆ ತಾಯಿಯ ಸಹಕಾರವನ್ನು ಪಡೆಯುತ್ತಿದ ಇವರು ತಾಯಿಯ ಮರಣಾನಂತರ ಮಂದಿರ ನಿರ್ಮಾಣದ ಕಾರ್ಯದಲ್ಲಿ ಬಗೆ ಬಗೆಯ ಕಷ್ಟಗಳನ್ನು ಎದುರಿಸಿದರು. ತಾಯಿಯ ಆಶೀರ್ವಾದ ಸದಾ ಇವರ ತಲೆಯ ಮೇಲಿದೆ ಅಂದಾಗಲೇ ಇವರು ಪ್ರತಿಯೊಂದು ಮಾತಿಗೆ ತಾಯಿಯ ಸ್ಮರಣೆ ಮಾಡುತ್ತಾರೆ. ಮಂದಿರ ಜಾಗಾ ಖರೀದಿಸಲು ತಾಯಿಯವರು ಹಣ ಸಹಾಯ ಮಾಡಿದ್ದರು.

ಶಿರಡಿಯ ದರ್ಶನ ಪಡೆದು ಸಾಯಿಬಾಬಾ ರಿಂದ ಪ್ರಭಾವಿತರಾಗಿದ್ದ ಮಾತಾಖುತಾಜಾ ಬಿಯವರು ಜೀವನದ ಕೊನೆ ಉಸಿರಿನ ವರೆಗೂ ಬಾಬಾರ ಸೇವೆಯನ್ನು ಮತ್ತು ಪತಿಯ ಆಜ್ಞೆಯನ್ನು ಪಾಲಿಸಿದರು. ತಾಯಿಯನ್ನು ಕಳೆದುಕೊಂಡ ದು:ಖದಲ್ಲಿದ್ದಾಗಲೇ ಎಲ್ಲವನ್ನು ಸಹಿಸಿಕೊಂಡು ಸಾಯಿ ಬಾಬಾ ಮಂದಿರಕ್ಕೆ ಅಡಿಗಲ್ಲು ಸಮಾರಂಭ ಮಾಡಿಸಲು ಇಚ್ಚಿಸಿದರು. ಮನಸ್ಸಿದ್ದರೆ ಮಾರ್ಗ ಎಂಬಂತೆ 6.6.1997 ರಂದು ಸಾಲಹಳ್ಳಿ ಗ್ರಾಮದಲ್ಲಿ ಎಲ್ಲಿಲ್ಲದ ಸಂಭ್ರಮ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವದೊಂದಿಗೆ ಸಾಯಿಬಾಬ ಮಂದಿರದ ಅಡಿಗಲ್ಲನ್ನು ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಜೈಘೋಷ ದೊಂದಿಗೆ ಇಡಲಾಯಿತು. ಈ ಶುಭ ಸಮಾರಂಭದಲ್ಲಿ ಅವರ ತಾಯಿಯವರು ಇದ್ದಿದ್ದರೆ ಎಷ್ಟೊಂದು ಸಂತೋಷ ಪಡುತ್ತಿದ್ದರು ಎಂದು ಊರಿನ ಹೆಣ್ಣು ಮಕ್ಕಳು ಕಣ್ಣೀರು ಸುರಿಸುತ್ತಿದ್ದ ಸಮಯ ರೋಮಾಂಚಕಾರಿಯಾಗಿತ್ತು.

ಒಂದು ವರ್ಷದ ಒಳಗಾಗಿ ಮಂದಿರವನ್ನು ನಿರ್ಮಿಸಿದರು. ಶಿರಡಿಯಿಂದ ಬಾಬಾರ ಮೂರ್ತಿಯನ್ನು ತಂದು ರಾಮದುರ್ಗದಿಂದ ಭವ್ಯ ಮೆರವಣಿಗೆಯಲ್ಲಿ ಸಾಲಹಳ್ಳಿಗೆ ತಂದು ಮೂರ್ತಿ ಪ್ರತಿಷ್ಠಾಪಣೆ ಮಾಡಿದರು. ಪಟ್ಟದಕಲ್ಲಿನ ಸಾಯಿಬಾಬಾ ಮಂದಿರದಲ್ಲಿ ಅಭಿನವ ಶರೀಫರೆಂಬ ಬಿರುದಿಗೆ ಪಾತ್ರರಾದರು.

ಇಷ್ಟೆಲ್ಲಾ ಕಾರ್ಯ ವಿಸ್ತರಣೆಗೆ ರೂವಾರಿ ಯಾರೆಂದರೆ ಅವರೇ ಸಾಲಹಳ್ಳಿ ಸಾಯಿಬಾಬಾ ಮಂದಿರದ ಅಭಿನವ ಶರೀಫರು (ರಮೇಶ ರ, ಅಂತಾಪೂ) ಪ್ರತಿ ತಿಂಗಳು ಸಾಯಿಬಾಬಾ ಸಂತ್ಸಂಗ ನಡೆಸುತ್ತಾರೆ ಧರ್ಮ ಸಮನ್ವಯ ಜನ ಜಾಗೃತಿ ಇಂದಿನ ಪೀಳಿಗೆಗೆ ಅವಶ್ಯವಾಗಿದೆ. ಈ ಕೆಲಸವನ್ನು ಸಮಾಜ ಸೇವಕರು ಹಾಗೂ ರಾಜಕೀಯ ಧುರೀಣರು ಕೈಗೆತ್ತಿಕೊಳ್ಳಬೇಕು.
ಆದರೆ ಕೃತಿಗಿಂತ ಮಾತು ಮೇಲುಗೈಯಾಗಿ ಈ ಧುರೀಣದಿಂದ ಆಗಬೇಕಾದಷ್ಟು ಜಾಗೃತಿ ಆಗುವುದಿಲ್ಲ. ಇದು ಎಲ್ಲರಿಗೂ ಗೊತ್ತು ಆದರೆ ಸಾಧು ಸಂತರ ಜ್ಞಾನಿಗಳ ಕೆಲಸ ಹಾಗಲ್ಲ. ಮಾನವ ಕುಲದ ಸುಖ ಶಾಂತಿಗಾಗಿ ಅವರ ಅಂತರಂಗ ಯಾವಾಗಲೂ ಚಿಂತನೆ ಗೈಯುತ್ತಲಿರುತ್ತದೆ.

ಇಂತಹ ಮಹಿಮರ ಸಾಲಿನಲ್ಲಿ ಸೇರುವವರೇ ಸಾಲ ಹಳ್ಳಿಯ ಶ್ರೀ ಅಭಿನವ ಶರೀಫರು ಇವರ ಉದ್ದೇಶ ಪಂಡಿತರಿಂದ ಪಾಮರರವರೆಗೂ ಭಾವೈಕ್ಯತೆಯನ್ನು ಭೋಧಿಸುವದಾಗಿದೆ.ಈ ರೀತಿಯಾಗಿ ಹಾರೂರಿಗೆ ಹರಿಯಾ ಕ್ಷೇತ್ರರವಾಗಿ , ಮುಸ್ಲಿಮರಿಗೆ ಮಕ್ಕಾ ಕ್ಷೇತ್ರವಾಗಿ ಶೀಲವಂತರಿಗೆ ಶಿವನ ಕ್ಷೇತ್ರವಾಗಿ ಹರಿ , ಹರ ಹಜಾರತ್‍ರವರ ,ಈರ, ಬೀ, ಪೀರರ, ವಾಸು, ಏಸು ನಾನಾಕರ ಹಾಗೂ ಸರ್ವಧರ್ಮ ಸಮನ್ವಯದ ಐಕ್ಯ ಸ್ಥಾನವಾದ ಸಾಲಹಳ್ಳಿ ಸಾಯಿಬಾಬಾ ಮಂದಿರದ ದರ್ಶನ ಪ್ರತಿಯೊಬ್ಬರು ಪಡೆಯಬೇಕು.
ಈ ಜಗತ್ತಿನಲ್ಲಿ ಜನ್ಮ ತಾಳಿದ ಸಮಸ್ತ ಸಾಧು ಸಂತರು ಪೈಗಂಬರು, ವೀರ ಪುರುಷರು ಮಹಾಪುರುಷರು ಶಿವಯೋಗಿಗಳು. ಅಷ್ಟೇ ಏಕೆ ಸ್ವಯಂ ಅವತಾರ ತಾಳಿದ ಸಾಯಿಬಾಬಾರವರು ಬಗೆ ಬಗೆಯ ತ್ರಾಸುಗಳನ್ನು ಸಹಿಸಿಕೊಂಡಿದ್ದರು ಎಂಬ ಸತ್ಯದ ಅಂಶವನ್ನು ಸೇವಕರು ಸದಾ ಸ್ಮರಿಸುತ್ತಿರಬೇಕು.

ಒಟ್ಟಿನಲ್ಲಿ ಹಿಂದು ಮುಸ್ಲಿಂ ಕ್ತೈಸ್ತ ಸಿಖ್, ಇಸಾಯಿ, ಬೌದ್ದ, ಜೈನ ಫಾರ್ಸಿ ಮತ್ತು ಎಲ್ಲ ಧರ್ಮದವರು ಕೂಡಿ ಸಾಲಹಳ್ಳಿಯ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ಸಾಯಿ ಬಾಬಾ ಸಂತ್ಸಂಗದಲ್ಲಿ ಧರ್ಮ ಸಮನ್ವಯ ಪಾಠ ಕಲಿಯಿರಿ. (ಪೃಥ್ವಿಯ ಮೇಲೆ ಫಕೀರನ ರೂಪದಲ್ಲಿ ಪರಮಾತ್ಮನ ಪ್ರತ್ಯಕ್ಷ ದರ್ಶನ ``ಶ್ರೀ ಶಿರಡಿ ಸಾಯಿಬಾಬಾ ಎಂಬ ನಾಮದಿಂದ’’ ಲೇಖನದ ಆಯ್ಕೆಯಿಂದ.)

ಜೀವನ್ಮುಕ್ತ ಪಾದಯಾತ್ರೆಯ ಉದ್ದೇಶ
ಅಧ್ಯಾತ್ಮದ ತಳಹದಿಯಾದ ಸರ್ವೆ ಜನಃ ಸುಖಿನೋ ಭವಂತು ಎಂಬ ಮಹಾ ಮಂತ್ರದಿಂದ ಪುಣ್ಯಭೂಮಿಯಾದ ಭಾರತವು ಜಗತ್ತಿಗೆ ಧರ್ಮ ಸಮನ್ವಯಕ್ಕೆ ಮಾದರಿಯಾಗಿದೆ. ಇದನ್ನು ಕಾಪಾಡಿಕೊಂಡು ಹೋಗುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಧರ್ಮ ಸಮನ್ವಯ ಮಹಾತ್ಮರ ಮತ್ತು ಧರ್ಮ ಸಮನ್ವಯ ಸಾಧಕರ, ಮಹಾನ್ ಸಾಧು ಸಂತರ, ದಾಸರು ಮತ್ತು ಶರಣರ, ಋಷಿ ಮುನಿಗಳ, ಔಲಿಯಾಗಳ, ಪೀರ ಪೈಗಂಬರರ ಹಾಗೂ ಬಸವಾದಿ ಪ್ರಮಥರ, ಮಹಾಯೋಗಿ ವೇಮನರ, ಸಮರ್ಥ ರಾಮದಾಸರ, ಜಗದ್ಗುರು ತುಕಾರಾಮರ, ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಜಗದ್ಗುರು ರೇಣುಕರ ಹಾಗೂ ಮಾಧವಾನಂದರ, ಬಸವ, ಗಾಂಧೀಜಿಯವರ, ಶಿರಡಿ ಸಾಯಿ ಬಾಬಾರವರ ತತ್ವಗಳನ್ನು ಪ್ರತಿಯೊಬ್ಬರ ಮನ ಮತ್ತು ಮನೆಗಳಿಗೆ ಮುಟ್ಟಿಸುವದಾಗಿದೆ. ನಿಮಗೆ ಯಾರನ್ನೂ ಹುಟ್ಟಿಸಲು ಬರವದಿಲ್ಲವೆಂದ ಮೇಲೆ ನಿಮಗೆ ಯಾರನ್ನೂ ಕೊಲ್ಲುವ ಅಧಿಕಾರವಿಲ್ಲ ಎಂಬ ಬುದ್ಧನ ಮಹಾನ್ ಸಂದೇಶವನ್ನು ಜೀವೋ ಔರ ಜೀನೆದೋ, ಬದುಕಿರಿ ಮತ್ತು ಬದುಕಿಸಿರಿ ಎಂಬ ಜೀನವಾಣಿಯನ್ನು ಪ್ರತಿಯೊಬ್ಬರಿಗೂ ತಿಳಿಸುವದು ಪಾದಯಾತ್ರೆಯ ಉದ್ದೇಶವಾಗಿದೆ. ಈ ಪಾದಯಾತ್ರೆಯ ಇನ್ನೊಂದು ಪ್ರಮುಖ ಉದ್ದೇಶವೆನೆಂದರೆ ಶಿರಡಿಸಾಯಿಬಾಬಾರವರು ಕೊಟ್ಟಿರುವ ಏಕತೆಯ ದಿವ್ಯ ಸಂದೇಶವಾದ ಸಬಕಾಮಾಲಿಕ್ ಏಕ್ ಹೈ ಎಂಬ ಮಹಾ ಮಂತ್ರವನ್ನು ಪ್ರತಿಯೊಬ್ಬರಿಗೂ ತಿಳಿಸಿ ಐಕ್ಯತೆ ಮತ್ತು ಶಾಂತಿ ನೆಲೆಸುವಂತೆ ಮಾಡುವದಾಗಿದೆ. ಇಂತಹ ಒಂದು ವಿಶ್ವ ವ್ಯಾಪಕವಾದ ಪವಿತ್ರ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದು. ಈ ಪಾದಯಾತ್ರೆಯು ಅತ್ಯಂತ ಪವಿತ್ರವಾದದ್ದರಿಂದ ಪ್ರತಿಯೊಬ್ಬರು ತನು ಮನ ಧನದಿಂದ ಸಹಾಯ ಸಲ್ಲಿಸಿ ಸತ್ಯಕ್ಕೆ ಶರಣಾಗಿರಿ.

: ರಮೇಶ ಬಾಬುರವರ ಅಮೃತ ವಾಣಿಗಳು:
1) ಭೇದವೆಂಬ ಮಹಾ ಘೋರ ಪಾಪದಿಂದ ದೂರವಿರ್ರಿ. ಭೇದವು ಭಗವಂತನಿಗೆ ಪ್ರಿಯವಲ್ಲ, ಭೇದಕ್ಕೆ ಆಸ್ಪದವಿಲ್ಲ, ಕ್ಷೆಮೆಯಿಲ್ಲ, ಭೇದವು ಯಾವಾಗಲೂ ಮಾನವ ಜೀವನಕ್ಕೆ ಬಾದಕ, ಅಭೇದ ಸಾಧಕ.
2) ನೀವು ಯಾರನ್ನೂ ದ್ವೇಷಿಸುತ್ತಿರೋ, ಮುಂದಿನ ಜನ್ಮದಲ್ಲಿ ಅವರಾಗಿಯೇ ಹುಟ್ಟುತ್ತೀರಿ. ದೇವರು ಜಗತ್ತಿಗೆ ಒಬ್ಬನೇ ಆಗಿರುವದರಿಂದ ಅವನಿಗೆ ಎಲ್ಲ ದೇಶಗಳು, ಎಲ್ಲ ಭಾಷೆಗಳು, ಎಲ್ಲ ಧರ್ಮಗಳು, ಸಕಲ ಸಂಪ್ರದಾಯಗಳು, ಸಂಬಂಧವಿರಿತ್ತವೆ. ಆದಕಾರಣ ನಿಮ್ಮನ್ನು ಭಗವಂತನು ಯಾವ ಧರ್ಮದಲ್ಲಿಯಾದರೂ ಹುಟ್ಟಿಸಬಹುದು. ನೀವು ಯಾವ ಧರ್ಮವನ್ನು ಹಿಯಾಳೀಸದೇ ಸ್ವಧರ್ಮ ಪ್ರೇಮಿಗಳಾಗಿ ಪರಧರ್ಮ ಸಹಿಷ್ಟುಗಳಾಗಿರಿ. ಮತ್ತೇ ಪುನರ್ ಜನ್ಮ ಪಡೆಯದೆ ಜೀವನ್ಮುಕ್ತರಾಗಿರಿ.
3) ಸುಖವು ಬೇಕಾದರೆ ಸುಮ್ಮನಿರು ಕಷ್ಟ ಬೇಕಾದರೆ ಕಡ್ಡಿಯಾಡಿಸು.
4) ಅಧಿಕಾರಿಗಳು ಆಳಲಿ ನ್ಯಾಯದಿ, ಪ್ರಜೆಗಳೆಲ್ಲರ ಬಾಳಿನಲಿ ಸಿಗಲಿ ನೆಮ್ಮದಿ, ಪ್ರಾಣಿಗಳೆಲ್ಲವೂ ಬಾಳಲಿ ಸುಖದಿ. ಸರ್ವರಿಗೂ ಸುಖವು ಸಿಗಲಿ ಇಹ-ಪರದಿ. ಮಾನವ ಧರ್ಮದ ಜೈ ಘೋಷ ಮೊಳಗಲಿ ನಿತ್ಯದಿ. ನಮ್ಮ ಜೀವನದ ವ್ಯವಹಾರಗಳೆಲ್ಲವೂ ನಡೆಯಲಿ ಸತ್ಯದಿ.
5) ಸರ್ವೊದಯದ ಸದ್ಭಾವ ಸರ್ವರಲಿ ಮೂಡಲಿ. ಮಾನವ ಧರ್ಮದ ಘೋಷಣೆ ಜಗದ ತುಂಬೆಲ್ಲ ಮೊಳಗಲಿ. ಭೇದ ಭಾವದ ಷೋಷಣೆ ಎಲ್ಲ ನಿಲ್ಲಲಿ.
6) ತಲೆಗಳಿದ್ದಷ್ಟು ವಿಚಾರಗಳಿವೆ. ಎಲ್ಲ ವಿಚಾರಗಳು ಅವರವರ ವಿಚಾರಕ್ಕೆ ಸರಿ ಇವೆ. ನನ್ನ ವಿಚಾರಗಳೇ ಸರಿ ಅನ್ನಬಾರದು.
ಭೋಲೋ ಭಾರತ ಮಾತಾಕಿ ಜೈ ಅಭಿನವ ಶರೀಫ ರಮೇಶ ಬಾಬಾರವರ ವಂದೇ ಮಾತರಂ

ಭಕ್ತರಿಗೆ ಶಿರಡಿ ಸಾಯಿಬಾಬಾರವರ 11 ಅಭಿವಚನಗಳು
1.ಯಾರು ಶಿರಡಿಯ ಪುಣ್ಯ ಭೂಮಿಯ ಮೇಲೆ ತಮ್ಮ ಪಾದಗಳನ್ನು ಇಡುವರೋ ಅವರ ಕಷ್ಟಗಳು ಕೊನೆಗಾಣುವವು.
2.ಈ ನನ್ನ ಮಶೀದಿಯ ಮೆಟ್ಟಲುಗಳನ್ನು ಹತ್ತಿದ ತಕ್ಷಣವೇ ಧೀನರು ಮತ್ತು ಧರಿದ್ರರು ಸುಖಃ ಸಂಪತ್ತುಗಳ ಸೋಪಾನವನ್ನು ಏರುವರು.
3.ನಾನು ನನ್ನ ದೇಹವನ್ನು ಬಿಟ್ಟ ನಂತರವೂ ನಾನು ಎಂದಿನಂತೆ ಕೃಯಾಶೀಲನಾಗಿ ಮತ್ತು ಸಚೇತನಾಗಿರುವೆನು.
4.ನನ್ನ ಸಮಾಧಿಯೇ ಭಕ್ತರ ಅವಶುಕತೆಗಳನ್ನು ಈಡೇರಿಸಿ ಅನುಗೃಹಿಸುವದು.
5.ನನ್ನ ಸಮಾಧಿಯಿಂದಲೂ ಸಹ ನಾನು ಕಾರ್ಯಾಶೀಲನಾಗಿ ಚೈತನ್ಯಗಳಿಂದಿರುವೆನು.
6.ಪಾರ್ಥಿವ ಶರೀರದ ನನ್ನ ರಕಷಣೆಯನ್ನು ನಯಸಿ ನನ್ನನ್ನೆ ನಂಬಿ ಬರುವವರಿಗೆ ನೆರವಾಗಲು ಮತ್ತು ಮಾರ್ಗದರ್ಶನ ನೀಡಲು ನಾನು ನಿತ್ಯ ಜೀವಂತನಾಗಿರುವೆ.
7.ನನ್ನಲ್ಲಿ ಶರಣಾಗತರಾಗಿ ನನ್ನ ಮೇಲೆ ಹೊರಿಸಿದಲ್ಲಿ ಖಂಡಿತವಾಗಿ ಅವಿಗಳನ್ನೆಲ್ಲಾ ನಾನು ಪೂರೈಸುವೆ.
8 ನೀನು ನನ್ನನ್ನು ಜ್ಞಾನಿಸಿದರೆ , ನಾನು ನಿನ್ನನ್ನು ಅನುಗೃಹಿಸುವೆ.
9.ನಿನ್ನ ಸಂಕಟಗಳೆನ್ನೆಲ್ಲ ನನ್ನ ಮೇಲೆ ಹೊರಿಸಿದಲ್ಲಿ ಖಂಡಿತವಾಗಿ ಅವಿಗಳನ್ನೆಲ್ಲಾ ನಾನು ಪೂರೈಸುವೆ.
10. ನೀನು ನ್ನ ಸಲಹೆ ಮತ್ತು ಸಹಾಯಗಳನ್ನು ಬಯಸಿದಲ್ಲಿ ಅತಿ ಶೀಘ್ರದಲ್ಲಿಯೆ ಅವುಗಳನ್ನು ನಾನು ನಿನಗೆ ನೀಡುವೆ.
11. ನನ್ನ ಭಕ್ತರ ಮನೆಯಲ್ಲಿ ಅಭಾವವೆಂಬುದು ಇರದು.

ಶಿರಡಿಯಾತ್ರೆಯ ನವಮಾನೋತ್ಸವ ನಿಮಿತ್ಯವಾಗಿ ರಾಮದುರ್ಗ ತಾಲೂಕಿನ ಸಾಲಹಳ್ಳಿಯ ಸಾಯಿಬಾಬಾ ನಗರದಲ್ಲಿರುವ ಸಾಯಿ ಬಾಬಾ ಮಂದಿರದಲ್ಲಿ ಜ. 17 ರಂದು ಬುಧವಾರ ದೀಪೋತ್ಸವ. ದಿ.18 ರಂದು ಗುರುವಾರ ಶಿರಡಿಯವರೆಗೆ ರಥೋತ್ಸವದ

ಬಿ. ಎಚ್.ಹೊಂಗಲ
ಸಾ || ಇಟ್ನಾಳ,
ಬೆಳಗಾವಿ.