ನಾನು ಏನೇ ಆಗಿದ್ದರೂ ಕನ್ನಡದಿಂದ...
ನಾಯಕನಟಿ ರಾಗಿಣಿ ದ್ವಿವೇದಿ ಅವರ ಪಾತ್ರವೇ ಪ್ರಧಾನವಾಗಿರುವ ಚಿತ್ರ ದಿ ಟೆರರಿಸ್ಟ್ ಇಂದು ಕನ್ನಡಿಗರ ಮುಂದೆ ಬಂದಿದೆ. ಸಿನೆಮಾದ ಬಹುತೇಕ ಜವಾಬ್ದಾರಿ ರಾಗಿಣಿ ಹೆಗಲಿಗಿದೆ. ಕನ್ನಡ ಮತ್ತು ಕನ್ನಡ ಚಿತ್ರರಂಗವೆಂದರೆ ನನಗೆ ಹೆಮ್ಮೆ ನಾನು ಇವತ್ತು ಯಾವುದೇ ಎತ್ತರಕ್ಕೆ ಬೆಳೆದಿದ್ದರೂ ಕನ್ನಡಕ್ಕೆ ಸಲ್ಲುತ್ತದೆ ಎನ್ನುವ ರಾಗಿಣಿ ಮನಸಿನ ಮಾತುಗಳು ಇಲ್ಲಿವೆ.
* ದಿ ಟೆರರಿಸ್ಟ್ ಚಿತ್ರದಲ್ಲಿ ಯಾವ ರೀತಿಯ ರಾಗಿಣಿಯನ್ನು ನೋಡಬಹುದು?
ಮೊದಲ ಬಾರಿಗೆ ಮುಸ್ಲೀಂ ಸಂಸ್ಕøತಿಯಿಂದ ಬಂದಂತಹ ಹುಡುಗಿ ರೇಷ್ಮ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಪಾತ್ರಕ್ಕಾಗಿ ಮೂರ್ನಾಲ್ಕು ಶೇಡ್ಗಳಲ್ಲಿ ನಟಿಸಿರುವ ರಾಗಿಣಿಯನ್ನು ನೋಡಬಹುದು. ಸರಳವಾಗಿ ಎಲ್ಲರನ್ನೂ ಪ್ರೀತಿಯಿಂದ ಕಾಣುವಂತಹ ಹುಡುಗಿ ಘಟನೆಗಳಿಂದಾಗಿ ಪಾಸಿಟೀವ್ನಿಂದ ನೆಗೆಟೀವ್ಗೆ ಹೇಗೆ ಬದಲಾಗುತ್ತಾಳೆ ಎನ್ನೋದಿದೆ. ಕುಟುಂಬದಲ್ಲಿ ಎಲ್ಲರ ನೆಚ್ಚಿನವಳಾಗಿ ಎಲ್ಲರಿಗಾಗಿ ಕೆಲಸ ಮಾಡುತ್ತಾಳೆ, ಹೊರಗೂ ದುಡಿಯುತ್ತಾಳೆ, ಪ್ರೀತಿಸುವ ವ್ಯಕ್ತಿಯೂ ಇರುತ್ತಾನೆ ಹಾಗೆ ತನ್ನದೇ ಪುಟ್ಟ ಸುಖ ಪ್ರಪಂಚದಲ್ಲಿ ಇರುವವಳು ಹಠಾತ್ತಾಗಿ ಬೋಲ್ಡ್ ಮತ್ತು ಸ್ಟ್ರಾಂಗ್ ಆಗಿ ಬದಲಾಗಿ ಇಡೀ ಸಮೂಹಕ್ಕಾಗಿ ಹೋರಾಟಕ್ಕೆ ಇಳಿಯುತ್ತಾಳೆ. ಪ್ರತಿಯೊಬ್ಬರೂ ಬದುಕಿನಲ್ಲಿ ಒಂದಲ್ಲಾ ಒಂದು ಸಂದರ್ಭದಲ್ಲಿ ಟೆರರಿಸ್ಟ್ ಆಗ್ತಾರೆ. ಹಾಗಾದ್ರೆ ಟೆರರಿಸಂ ಅಂದ್ರೆ ಏನು? ಪ್ರತಿಯೊಬ್ಬರು ಯಾಕೆ ಅದನ್ನು ಎದುರಿಸಲೇ ಬೇಕು? ಹೀಗೆ ಟೆರರಿಸ್ಟ್ ಅನ್ನೋದಕ್ಕೆ ನಿರ್ದೇಶಕ ಶೇಖರ್ ಅವ್ರು ಬೇರೆಯೇ ಅರ್ಥಕೊಡುವ ಪ್ರಯತ್ನ ಮಾಡಿದ್ದಾರೆ. ಟೆರರಿಸ್ಟ್ ಅಂದಾಕ್ಷಣಕ್ಕೆ ಬಾಂಬ್, ವಿದ್ವಂಸಕ ಕೃತ್ಯ ಎಸಗೋರು ಅಂತೆಲ್ಲಾ ಕಲ್ಪಿಸಿಕೊಳ್ಳುತ್ತೇವೆ ಆದ್ರೆ ದಿ ಟೆರರಿಸ್ಟ್ನ ಟ್ರೇಲರ್ನಲ್ಲಿ ಒಂದು ಡೈಲಾಗ್ನಲ್ಲಿ “ಶಾಂತಿ ಪಡೆಯಲು ಕೆಲವೊಂದು ಯುದ್ಧಗಳು ನಡೆಯಲೇಬೇಕು” ಅನ್ನೋದಿದೆ. ಆ ಒಂದು ಸಾಲಿಗೆ ಸಿನೆಮಾದಲ್ಲಿ ಶಕ್ತಿಯುತವಾದ ಆರ್ಥವಿದೆ.
* ಕನ್ನಡ ಚಿತ್ರೋದ್ಯದ ಬಗ್ಗೆ ನಿಮಗಿರುವ ಬದ್ಧತೆ?
ನಾನು ಮತ್ತು ನನ್ನ ಕುಟುಂಬ ಇವತ್ತು ಏನೇ ಆಗಿದ್ದರು ಅದು ಕನ್ನಡ ಜನತೆಯಿಂದ. ನಾನು ಯಾವುದೇ ಎತ್ತರಕ್ಕೆ ಬೆಳೆದಿದ್ದರೂ, ನನ್ನ ಸಿನೆಮಾಗಳಿಗೆ ಮಾರುಕಟ್ಟೆಯಲ್ಲಿ ಯಾವುದೇ ಮೌಲ್ಯ ಇದ್ದರೂ, ನನ್ನ ಅಭಿಮಾನಿಗಳ ಸಂಘವೇ ಇದ್ದರೂ ಎಲ್ಲವೂ ಕನ್ನಡ ಜನರಿಂದಾಗಿ. ನನಗಿರುವ ಕನ್ನಡದ ಮೇಲಿನ ಹೆಮ್ಮಯನ್ನು ಎಲ್ಲೆಡೆ ತೋರಿಸಲು ಇಷ್ಟಪಡ್ತೀನಿ. ಒಬ್ಬ ನಟಿಯಾಗಿ ಬೇರೆ ಭಾಷೆಗಳಲ್ಲಿ ನಟಿಸೋದು ಸುಲಭ. ಆದರೆ ನನಗೆ ನಾಯಕನಟಿಯಾಗಿ ಕನ್ನಡದಲ್ಲಿ ಬೇರೆಯೇ ರೀತಿಯ ಎತ್ತರದ ಸ್ಥಾನ ಕೊಟ್ಟಿದ್ದಾರೆ. ಹೀಗಾಗಿ ಜಾಗತಿಕ ಮಟ್ಟಕ್ಕೆ ನಮ್ಮ ಕನ್ನಡ ಚಿತ್ರೋದ್ಯಮವನ್ನು ಕೊಂಡೊಯ್ಯುವುದು ನನ್ನ ಕರ್ತವ್ಯವೂ ಆಗಿದೇಂತ ನಾನು ಭಾವಿಸ್ತೀನಿ. ಇದಕ್ಕಾಗಿ ಎಲ್ಲಾ ರೀತಿಯಿಂದಲೂ ಪ್ರಯತ್ನಿಸಬೇಕೆಂದುಕೊಳ್ಳುತ್ತೇನೆ.
* ದಿ ಟೆರರಿಸ್ಟ್ನಲ್ಲಿ ಇರುವ ಹೊಸ ಪ್ರಯತ್ನ?
ನಿಮ್ಮ ಮೊಬೈಲ್ ಫೋನ್ಗಳಲ್ಲಿ ಕೂಡ ದಿ ಟೆರರಿಸ್ಟ್ನ ಟೇಲರ್, ಸಾಂಗ್ಸ್ ನೋಡಿದ್ರೆ, ಕೇಳಿದ್ರೆ ಥಿಯೇಟರ್ನಲ್ಲಿ ಕೇಳಿದ ಹಾಗೆನೇ ಇರುತ್ತೆ. ಬಹುಶಃ ಇದುವರೆಗೆ ಕನ್ನಡದಲ್ಲಿ 5.1 ಡಾಲ್ಫಿ ಎಫೆಕ್ಟ್ನಲ್ಲಿ ಯಾರು ಮಾಡಿಲ್ಲ ನಾವು ಮಾಡಿದ್ದೇವೆ, ನನ್ನೊಬ್ಬಳನ್ನು ಬಿಟ್ಟರೆ ಬೇರೆ ಎಲ್ಲಾ ಕಲಾವಿದರು ರಂಗಭೂಮಿಯಿಂದ ಬಂದವರೇ ನಟಿಸಿದ್ದಾರೆ, ಬೇರೆ ರೀತಿಯ ಮ್ಯೂಸಿಕ್, ಹಾರರ್, ಕಥಾವಸ್ತು ಹೀಗೆ ದಿ ಟೆರರಿಸ್ಟ್ನಲ್ಲಿ ಅನೇಕ ಟ್ರೆಂಡ್ ಸೆಟ್ ಮಾಡಲು ಪ್ರಯತ್ನಿಸಿದ್ದೇವೆ. ಜೊತೆಗೆ ದಿ ಟೆರರಿಸ್ಟ್ನ ಮುಂಬೈ, ಹಿಂದಿತನಕ ಗುರುತಿಸಿದ್ದಾರೆ. ಅಲ್ಲಿಯ ಮಾರ್ಕೇಟ್ನಲ್ಲಿ ಒಳ್ಳೆ ಆಫರ್ ಕೊಟ್ಟಿದ್ದಾರೆ ಈಗಾಗ್ಲೆ ಮಾತುಕತೆ ಆಗಿದೆ.
* ವಿಲನ್ ಚಿತ್ರದ ಎದುರು ನಿಮ್ಮ ದಿ ಟೆರರಿಸ್ಟ್ ಬಿಡುಗಡೆಯಾಗುತ್ತಿರುವುದು ಸಾಹಸ ಅನ್ಸಿದೆಯಾ?
ಆ ತರಹಾ ಏನಿಲ್ಲ ನಾವು ಸ್ಪರ್ಧಿಗಳಾಗಿ ಬರ್ತಿಲ್ಲ. ದಸರಾ ರಜಾ ಇದೆ ಕನ್ನಡ ಪ್ರೇಕ್ಷಕರು ಎರಡೂ ಸಿನೆಮಾಗಳನ್ನು ನೋಡಬಹುದು. ಕನ್ನಡಿಗರು ಚಿತ್ರ ನೋಡಿ ಗೆಲ್ಲಿಸಬೇಕೆನ್ನೋದೆ ನನ್ನ ಮನವಿ.
* ಸಿನೆಮಾಕ್ಕೆ ಬಂದು ಸುಮಾರು ಹತ್ತು ವರ್ಷಗಳಾಗ್ತಿದೆ ನಟಿಸಲೇಬೇಕೆಂದುಕೊಳ್ಳುವ ಪಾತ್ರ?
ನಾನು ಸಾಕಷ್ಟು ತೂಕ ಇಳಿಸಿಕೊಂಡಿರೋದರಿಂದ ಎಲ್ಲರೂ ಮೊದಲ ಚಿತ್ರಕ್ಕೆ ರೆಡಿ ಆಗಿದ್ದೀನಿ ಅಂತಿದ್ದಾರೆ ಹಾಗೇ ನೋಡಿದ್ರೆ ಇದು ನನ್ನ ಸೆಕೆಂಡ್ ಇನ್ನಿಂಗ್ಸ್. ಭವಿಷ್ಯದ ಬಗ್ಗೆ ಹೆಚ್ಚಾಗಿ ಪ್ಲಾನ ಆಡೋಲ್ಲ ಒಳ್ಳೋಳ್ಳೆ ಸಿನೆಮಾಗಳನ್ನು ಮಾಡ್ತಾನೇ ಇರ್ತೀನಿ.
* ನಿರ್ದೇಶಕಿ, ನಿರ್ಮಾಪಕಿಯಾಗುವ ಆಸೆ?
ಖಂಡಿತಾ ಸಿನೆಮಾ ನಿರ್ದೇಶನ ಮಾಡ್ತೀನಿ ಅದ್ರೆ ಅದಕ್ಕಾಗಿ ಕಲಿಯೋದು ಇನ್ನೂ ತುಂಬಾ ಇದೆ.
-ಕೆ.ಬಿ. ಪಂಕಜ
ಶಿವಣ್ಣ, ಸುದೀಪ್, ಪ್ರೇಮ್ ಯಾರು ದಿ ವಿಲನ್?
ಶಿವರಾಜ್ ಕುಮಾರ್, ಜಗತ್ತಿನ ಯಾವ ಮೂಲೆಯಲ್ಲೇ ಇದ್ದರೂ ಆ ಬೇಟೆ ನಂದು ಎಂದು ಅಬ್ಬರಿಸಿದರೆ, ಸುದೀಪ್ ವ್ಯಂಗ್ಯವಾಗಿ” ಓವ್ ಭ್ರಮೆ” ಎನ್ನುವುದಿರುವ ದಿ ವಿಲನ್ ಚಿತ್ರದ ಟ್ರೇಲರ್ ಸಖತ್ ಹಿಟ್ ಆಗಿದೆ. ಇದಕ್ಕೆ ಮುನ್ನ ಬಿಡುಗಡೆಯಾದ ಮೋಷನ್ ಪೆÇೀಸ್ಟರ್ ನಲ್ಲಿಶಿವಣ್ಣನ ಮುಖವಾಡ ಕಳಚಿದಾಗ ಸುದೀಪ್ ಹಾಗೆ ಸುದೀಪ್ ಮುಖವಾಡ ಕಳಚಿದಾಗ ಶಿವಣ್ಣ ಕಾಣಿಸಿಕೊಂಡಿದ್ದು ಸಾಕಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಜೊತೆಗೆ ಇದೇ ಚಿತ್ರದಲ್ಲಿ ಯಾರು ವಿಲನ್ ಎನ್ನುವ ಪ್ರಶ್ನೆ ಹುಟ್ಟು ಹಾಕುವ ತಂತ್ರಗಾರಿಕೆ ಮಾಡಿದ್ದರು ಪ್ರೇಮ್.
ವಿಲನ್ ಯಾರು? ಎನ್ನುವ ಪ್ರಶ್ನೆಗೆ ಉತ್ತರ ಸಿಗದಂತೆ ಸಿನಿಮಾ ಬಿಡುಗಡೆ ತನಕ ಕಾದುಕೊಂಡು ಸಿನಿರಸಿಕರು, ಪ್ರೇಕ್ಷಕರು, ದಿಗ್ಗಜ ತಾರೆಗಳಿಬ್ಬರ ಅಭಿಮಾನಿಗಳನ್ನು ಹುಚ್ಚೆಬ್ಬಿಸಿರುವ ಪ್ರೇಮ್ ಕೂಡ ವಿಲನ್? ಇದಕ್ಕೆ ಎಲ್ಲಾ ವರ್ಗದ ಪ್ರೆ?ಕ್ಷಕರು ದಿ ವಿಲನ್ ಸಿನೆಮಾ ನೋಡಿಯೇ ಉತ್ತರ ಕಂಡುಕೊಳ್ಳಬೇಕು! ಚಿತ್ರ ನೋಡಿದ ನಂತರವೂ ಉತ್ತರ ಸಿಗದಿದ್ದರೆ ಅದಕ್ಕೂ ಅಚ್ಚರಿ ಪಟ್ಟು ಕೊಳ್ಳಬೇಕಾಗಿಲ್ಲ.
ಶಿವಣ್ಣ ಮತ್ತು ಸುದೀಪ್ ತೆರೆಯ ಮೇಲೆ ಅಬ್ಬರಿಸಿದರೆ ಅವರಿಬ್ಬರನ್ನು ನಿಭಾಯಿಸುವ ಸಾಹಸವನ್ನು ಮಾಡಿರುವ ಪ್ರೆ?ಮ್ ದಿ ವಿಲನ್ ಚಿತ್ರದ ಚಿತ್ರೀಕರಣ ಆರಂಭವಾದಾಗಿನಿಂದ ಸೆನ್ಸೆ?ಷನ್ ಕ್ರಿಯೇಟ್ ಮಾಡುತ್ತಾ ಅಬ್ಬರದ ಪ್ರಚಾರ ಗಿಟ್ಟಿಸುತ್ತಲೇ ಇದ್ದಾರೆ. ವಿಶೇಷವೆಂದರೆ ಯಾರು ನಿಜವಾಗಿ ಹೀರೋ? ಶಿವಣ್ಣ ಮತ್ತು ಸುದೀಪ್ ಇಬ್ಬರ ಪಾತ್ರಕ್ಕೂ ಸಮಾನ ಪ್ರಾಮುಖ್ಯತೆ ಇದೆಯೆ? ಎನ್ನುವುದಕ್ಕಿಂತ, ದಿ ವಿಲನ್ ಅಥವಾ
ರಾವಣ ಯಾರು? ಈ ಕುತೂಹಲ ಹುಟ್ಟಿಸಿದ್ದಾರೆ ಪ್ರೆeಮ್. ಬಂಗಾರದ ಮನುಷ್ಯ ಅಥವಾ ಗಂಧದ ಗುಡಿ ಚಿತ್ರಗಳು ಬಂದಂತ ಕನ್ನಡ ಚಿತ್ರರಂಗದಲ್ಲಿ ದಿ ವಿಲನ್ ಟ್ರೆಂಡ್ ಶುರುವಾಗಿದೆ.
ತಮ್ಮ ನಾಯಕನೇ ಹೆಚ್ಚೆಂದು ಅಭಿಮಾನಿಗಳು ಕಿತ್ತಾಡಿಕೊಳ್ಳಬಾರದೆಂದು ಮುನ್ನೆಚ್ಚರಿಕೆಯಾಗಿ ಶಿವಣ್ಣ ಮತ್ತು ಸುದೀಪ್ ತಮ್ಮ ಅಭಿಮಾನಿಗಳು ದಿ ವಿಲನ್ ಚಿತ್ರವನ್ನು ಒಂದು ಸಿನೆಮಾವಾಗಷ್ಟೇ ನೊಡಬೇಕು ಎಂದು ತಮ್ಮದೇ ಶೈಲಿಯಲ್ಲಿ ಮನವಿ
ಮಾಡಿದ್ದಾರೆ. ವಿದೇಶದಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಸುದೀಪ್ ಅಲ್ಲಿಗೆ ತಮ್ಮ ಹೆಂಡತಿ ಮಗಳನ್ನು ಕರೆಸಿಕೊಂಡಿದ್ದಾರೆ. ಸ್ವಲ್ಪ ಹುಷಾರಿಲ್ಲದ ಶಿವಣ್ಣ ಹುಷಾರಿಲ್ಲ ಇಲ್ಲಿಯೇ ಇದ್ದಾರೆ. ಬೇರೆ ಭಾಷೆಗಳ ಚಿತ್ರಗಳಲ್ಲಿ ಸುದೀಪ್ ವಿಲನ್ ಆಗಿಯೇ ಹೆಚ್ಚು ಫೇಮಸ್. ಆದರೆ ಕನ್ನಡವನ್ನೆ ನೆಚ್ಚಿ ಇಲ್ಲಿಯೇ ಇರುವ ಶಿವಣ್ಣ ವಿಲನ್ ಆಗಿ ರಂಜಿಸಿರುವುದು ಬಹುಶಃ ಇಲ್ಲ. ಹಾಗೊಂದು ವೇಳೆ ನಟಿಸಿದ್ದರು ಅದು ಪ್ರೇಮ್ ಗಾಗಿ ಅಥವಾ ಅವರಂಥ ನಿರ್ದೇಶಕರಿಂದಾಗಿ. ಹೇಳಬೇಕೆಂದರೆ ದಿ ವಿಲನ್ ಚಿತ್ರದ ಆಡಿಯೊ ಬಿಡುಗಡೆ ಸಂದರ್ಭದಲ್ಲಿ ಸುದೀಪ್ ಗೆ ಅತ್ಯಾಧಿಕ ಹೈಪ್ ಕ್ರಿಯೇಟ್ ಮಾಡಲಾಯಿತು. ಬೇಕೆಂದೇ ಅಭಿಮಾನಿಗಳು ಶಿವಣ್ಣ ಬಂದಾಗ ಸುದೀಪ್ ಹೆಸರು ಕೂಗುವಂತೆ ಮಾಡಲಾಯಿತು. ಆದರೆ ಶಿವಣ್ಣ ಆ ಸಂದರ್ಭದಲ್ಲಿ ಟಿಕ್ ಟಿಕ್ ಹಾಡಿಗೆ ಹೆಜ್ಜೆ ಹಾಕಿ ರಂಜಿಸಿದ್ದು ಮತ್ತು ಅವರ ಸರಳ ಸಜ್ಜನಿಕೆಯ ಮಾತುಗಳು ಅವರಿಗೆ ಕನ್ನಡ ಚಿತ್ರರಂಗದ ದೊಡ್ಮನೆಯಿಂದ ಬಂದಂಹ ಸಂಸ್ಕಾರವನ್ನು ತಿಳಿಸುವಂತಿತ್ತು .
ತೆಲುಗಿನವರಾದ ಡಾ. ಮನೋಹರ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆ ತಂದು ದಿ ವಿಲನ್ ನಂತಹ ಅದ್ಧೂರಿ ಚಿತ್ರವನ್ನು ಅದು ನಿರ್ಮಾಣ ಮಾಡುವಂತೆ
ಮಾಡಿರುವುದು ಮತ್ತು ಶಿವಣ್ಣ ಹಾಗೂ ಸುದೀಪ್ ನ ಒಟ್ಟಿಗೆ ತೆರೆ ಮೇಲೆ ತಂದಿರುವುದು ನಿರ್ದೇಶಕ ಪ್ರೇಮ್ ಅವರ ಸಾಧನೆ. ಇದರ ಜೊತೆಗೆ
ದಿ ವಿಲನ್ ಕಥಾವಸ್ತು ಉತ್ತಮವೇ, ಅದ್ಧೂರಿ, ಭಾರಿ ಬಜೆಟ್ ಚಿತ್ರ ಮಾಡಿದ್ದೇವೆಂದು ಇನ್ನಿಲ್ಲದಂತೆ
ಚಿತ್ರದ ಬಗ್ಗೆ ಹುಚ್ಚೆಬ್ಬಿಸಿ ಹಾಕಿದ ಅಷ್ಟು ಹಣ
ಒಂದೆರಡು ದಿನಗಳಲ್ಲಿ ಬರುವಂತೆ ಆನ್ ಲೈನ್ ಮೂಲಕವು ಮುಂಗಡ ಟಿಕೆಟ್ ಮಾರಾಟ (ಒಂದು ವಾರ ಮೊದಲೇ ಆರಂಭಿಸಿ) ಟಿಕೆಟ್ ನ ಕನಿಷ್ಠ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವುದು ಸರಿಯೇ ? ಪ್ರೆಕ್ಷಕರು, ಅಭಿಮಾನಿಗಳು ಉತ್ತರ ಕಂಡುಕೊಳ್ಳಬೇಕು.
ಜೊತೆಗೆ ಏಕಕಾಲದಲ್ಲಿ ದಿ ವಿಲನ್ ಚಿತ್ರ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಬಿಡುಗಡೆಯಾಗುತ್ತಿದೆ.
ಒಟ್ಟಾರೆಯಾಗಿ ಕಥಾವಸ್ತು ಜೊತೆಗೆ ನಾಯಕರು ಇಷ್ಟವಾಗಿ ಜನ ಚಿತ್ರ ನೋಡುತ್ತಾರೆ, ಅವರಾಗಿ ಚಿತ್ರಮಂದಿರಕ್ಕೆ ಬರುತ್ತಾರೆ ಎನ್ನುವುದಕ್ಕಿಂತ, ಜನ ಮರಳೋ ಜಾತ್ರೆ ಮರಳು ಅನ್ನೋ ತರಹರದಲ್ಲಿ ದಿ ವಿಲನ್ ಚಿತ್ರ ತೆರೆಗೆ ಬಂದಿದೆ.
- ತಾವರೆ
ಜನಸಾಮಾನ್ಯರನ್ನು ಎಚ್ಚರಿಸುವ ಚಿತ್ರ ಜಗತ್ ಕಿಲಾಡಿ
ಎಲ್ಲಿಯವರೆಗೆ ವಂಚನೆಗೆ ಒಳಗಾದವರು ಇರುತ್ತಾರೋ ಅಲ್ಲಿಯವರೆಗೆ ಮೋಸಗಾರರು ಇದ್ದೇ ಇರುತ್ತಾರೆ. ಜನಸಾಮಾನ್ಯರು ಮೋಸ ಹೋಗದೆ ಎಚ್ಚರಿಕೆಯಿಂದ ಇರಬೇಕೆಂದು ಜಾಗೃತಿ ಮೂಡಿಸುವ ಪ್ರಯತ್ನವನ್ನು ಜಗತ್ ಕಿಲಾಡಿ ಚಿತ್ರದಲ್ಲಿ ಮಾಡಲಾಗಿದೆ ಎಂದು ಹೇಳುವ ಮೂಲಕ ನಿರ್ದೇಶಕ ಆರವ್.ಬಿ.ಧೀರೇಂದ್ರ ಅವರು, ಜಗತ್ ಕಿಲಾಡಿ ಚಿತ್ರ ಮನರಂಜನೆಯೊಂದಿಗೆ ಸಾಮಾಜಿಕ ಸಂದೇಶವನ್ನು ದಾಟಿಸು ಚಿತ್ರವಾಗಿ ತಮಿಳು ರೀಮೇಕ್ ಆದರೂ ಜನರಿಗೆ ಇಷ್ಟವಾಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ.
ದುರಾಸೆಯಿಂದಾಗಿ ಮೋಸ ಹೋಗುವವರು ಸಾಕಷ್ಟು ಜನರಿದ್ದಾರೆ. ಈ ಪರಿಕಲ್ಪನೆ ಹೊಂದಿರುವ ಜಗತ್ಕಿಲಾಡಿ ಚಿತ್ರವು ಬಿಡುಗಡೆ ಸಿದ್ಧವಾಗಿದ್ದು ಚಿತ್ರದ ಹಾಡುಗಳ ಸಿಡಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.
ನಿರ್ಮಾಪಕ ಲಯನ್ ಆರ್.ರಮೇಶ್ಬಾಬು ಅವರ ಗೆಳಯರೊಬ್ಬರನ್ನು ಆನೇಕಲ್ದಲ್ಲಿ ಬೆಳ್ಳಿ ನಾಣ್ಯದ ಮೂಟೆ ಕೊಡುವುದಾಗಿ ನಂಬಿಸಿ ವಂಚಿಸಲಾಗಿದೆಯಂತೆ. ತಮಿಳು ಚಿತ್ರದಲ್ಲಿರುವ ರೈಸ್ ಪುಲ್ಲಿಂಗ್ ವ್ಯವಹಾರದ ಕುರಿತ ಕತೆಯು ಇಲ್ಲಿಯೂ ನಡೆಯುವಂತೆ ಇರುವುದರಿಂದ ಕನ್ನಡ ಪ್ರಾದೇಶಿಕತೆಗೆ ಹೊಂದಿಸಿಕೊಳ್ಳಲು ಆಗುತ್ತದೆನ್ನುವುದರಿಂದಾಗಿ ಹಣ ಹೊಡಿ, ನ್ಯಾಯಧೀಶರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಹದಿನೈದು ಗೆಟಪ್ಗಳಲ್ಲಿ ಕಾಣಿಸಿಕೊಂಡಿರುವ ನಾಯಕ ನಿರಂಜನ್ಶೆಟ್ಟಿಕುಮಾರ್ ಮಾತನಾಡಿ, ಕತೆಯಲ್ಲಿ ಸುಚೇಂದ್ರಪ್ರಸಾದ್, ರಂಗಾಯಣರಘು ನಾಯಕರುಗಳಾಗಿ, ವಿಲನ್ ಆಗಿ ನನ್ನ ಮುಖಾಂತರ ಚಿತ್ರವು ತೆರೆದುಕೊಳ್ಳುತ್ತದೆ. ಪ್ರತಿಯೊಬ್ಬರು ಅವರವರ ಮಟ್ಟದಲ್ಲಿ ಕಿಲಾಡಿಗಳು ಆಗಿರುತ್ತಾರೆ. ಎಲ್ಲರಿಗೂ ಚೆಳ್ಳೆಹಣ್ಣು ತಿನ್ನಿಸುವವನಿಗೆ ಜಗತ್ ಕಿಲಾಡಿ ಅಂತ ಕರೆಯುತ್ತಾರೆ ಎಂದರೆ, ಇದರಲ್ಲಿ ನಟಿಸಬಾರದೆಂದು ತೀರ್ಮಾನಿಸಿದ್ದವರು ನಂತರ ಮೂಲ ಸಿನೆಮಾವನ್ನು ಮೂರು ಬಾರಿ ವೀಕ್ಷಿಸಿ, ಒಳ್ಳೆ ಪಾತ್ರ ಇರುವುದರಿಂದ ಒಂದು ಕೈ ನೋಡಿಬಿಡುವ ಎಂದು ಧೈರ್ಯ ಮಾಡಿ ಕ್ಯಾಮರ ಮುಂದೆ ನಿಂತೆ ಎಂದು ನಾಯಕಿ ಅಮಿತಾಕುಲಾಲ್ ಹೇಳಿಕೊಂಡರು. ರಿಯಲ್ನಲ್ಲಿ ಮೋಸ ಹೋಗಿರುವ ರವಿಚೇತನ್ಗೆ ರೀಲ್ನಲ್ಲಿ ಮೋಸ ಮಾಡುವ ಪಾತ್ರ ಸಿಕ್ಕಿದ್ದರಿಂದ ಸೇಡು ತೀರಿಸಿಕೊಂಡಿದ್ದಾರಂತೆ.
ಸಂಗೀತ ನಿರ್ದೇಶಕ ಗಿರಿಧರ್ದಿವಾನ್ ಮತ್ತು ಸಂಗೀತ ನಿರ್ದೇಶಕ ವಿ.ಮನೋಹರ್ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಿದರು ಮನೋಹರ್ ನನ್ನ ಶಿಷ್ಯನಾಗಿದ್ದ ನಿರಂಜನ್ ಶೆಟ್ಟಿ ಛಲದಲ್ಲಿ ತ್ರಿವಿಕ್ರಮ ಎಂದು ಪ್ರಶಂಸಿಸಿದರು.
ಕರ್ಷಣಂ ಗೆ ಯು/ಎ ಸರ್ಟಿಫಿಕೇಟ್
ಡಿ,ಜೆ, ಎಂಟರ್ಟೈನ್ಮೆಂಟ್ಸ್ ಲಾಂಛನದಲ್ಲಿ ಧನಂಜಯ ಅತ್ರೆ ನಿರ್ಮಿಸುತ್ತಿರುವ ಕರ್ಷಣಂ ಚಿತ್ರವನ್ನು ಇತ್ತೀಚೆಗೆ ವೀಕ್ಷಿಸಿದ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಇದೊಂದು ಸಸ್ಪೆನ್ಸ, ಥ್ರಿಲ್ಲರ್ ಕಥಾಹಂದರ ಹೊಂದಿದೆ. ಚಿತ್ರವನ್ನು ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಶರವಣ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಹೇಮಂತ್ ಸುಬ್ರಮಣ್ಯ ಸಂಗೀತ, ಮೋಹನ್.ಎಂ ಮುಗುಡೇಶ್ವರನ್ ಛಾಯಾಗ್ರಹಣ, ವೆಂಕಟೇಶ್ ಡಿ.ವಿ.ಡಿ ಸಂಕಲನ, ಡಾ.ವಿ.ನಾಗೇಂದ್ರ ಪ್ರಸಾದ್, ಮನುವರ್ಷ ಸಾಹಿತ್ಯ, ಅಶೋಕ್ ಸಾಹಸ, ಗೀರಶ್ ನೃತ್ಯ ನಿರ್ದೇಶನ, ಗೌರಿ ಅತ್ರೆ ಕಥೆ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿದ್ದು. ಧನಂಜಯ ಅತ್ರೆ, ಶ್ರೀನಿವಾಸ ಮೂರ್ತಿ, ಅನುಷಾ ರೈ, ವಿಜಯ್ ಚೆಂಡೂರ್, ಎಚ್.ಎಂ.ಟಿ ವಿಜಯ್, ಚಿರಾಗ್.ಎಂ.ಎಸ್, ಕಾಳಿ ಪ್ರಸಾದ್, ಯಮುನಾ, ವಂದಾನ, ಗೌತಮ್ ರಾಜ್, ಮನ್ ಮೋಹನ್ ರೈ, ರಾಮಸ್ವಾಮಿ, ಗೀರಿಶ್ ಶೆಟ್ಟಿ, ಮೀನಾಕ್ಷಿ ಮುಂತಾದವರ ತಾರಾಬಳಗವಿದೆ.