ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ

ಕೊರೋನಾ ಸಲುವಾಗಿ ಎಲ್ಲ ಕಡೆಗೂ ವಿವಿಧ ಆಚರಣೆಗಳಿಗೆ ಹಬ್ಬ ಹರಿದಿನಗಳ ಆಚರಣೆಗಳಿಗೆ ಕಡಿವಾಣ ಹಾಕುವಂತೆ ಸಲಹೆ ವ್ಯಕ್ತವಾಗುತ್ತಿದೆ. ರೂಪಾಂತರದ ಎರಡನೇ ತಳಿಯು ಕೂಡ ಭಯಾನಕ ವಾತಾವರಣವನ್ನು ಸೃಷ್ಟಿಸಿದೆ.ಇಂತಹುದರಲ್ಲಿ ಹೊಸ ವರ್ಷ ಬಂದಿದೆ. ಪ್ರತಿ ದಿನವೂ ಒಂದು ಹೊಸ ಬೆಳಗನು ್ನನಾವು ಕಾಣುತ್ತೇವೆ. ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಯುಗದ ಆದಿ ಯುಗಾದಿಯನ್ನು ನೂತನ ವರ್ಷವನ್ನು ಆರಂಭಿಸಿದರೆ.

ವಿದೇಶಿಗರು ಕ್ಯಾಲೆಂಡರ್ ವರ್ಷವನ್ನು ಜನೇವರಿ ಒಂದರಂದು ಆರಂಭಿಸುತ್ತಾರೆ., ಅದು ಏನೇ ಇರಲಿ ದ.ರಾ.ಬೇಂದ್ರೆಯವರ ಯುಗಾದಿ ಕವನದ ಸಾಲುಗಳನ್ನು ನಾವು ಎಷ್ಟು ಸ್ಮರಿಸಿದರೂ ಕಡಿಮೆಯೇ. ನಿದ್ದೆಗೊಮ್ಮೆ ನಿತ್ಯ ಮರಣ. ಎದ್ದ ಸಲ ನವೀನ ಜನನ. ಇದು ನಿಜಕ್ಕೂ ಅರ್ಥ ಪೂರ್ಣ.ಹೊಸ ವರ್ಷದ ನೆಪದಲ್ಲಿ ಹಿಂದಿನ ಮಧ್ಯರಾತ್ರಿಯವರೆಗೆ ಟೀವಿಗಳಲ್ಲಿನ ವಿವಿಧ ವರ್ಣರಂಜಿತ ಕಾರ್ಯಕ್ರಮಗಳು.ಅದರಲ್ಲೂ ಮಧ್ಯ ಪ್ರೀಯರಂತೂ ಅದಕ್ಕೆಂದೇ ಹೊಸ ವರ್ಷದ ಸ್ವಾಗತ ನೀಡುವ ಸಂಭ್ರಮಗಳು.ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಇದು ನಗರಕ್ಕಷ್ಟೇ ಸೀಮಿತವಾಗದೇ ಹಳ್ಳಿ ಹಳ್ಳಿಗಳಿಗೂ ಯುವಕರನ್ನು ಸೆಳೆಯುತ್ತಿರುವುದು ಶೋಚನೀಯ ಸಂಗತಿ.


ರಸ್ತೆ ತುಂಬೆಲ್ಲ ಸುಣ್ಣದಿಂದ ಹೊಸ ವರ್ಷದ ಶುಭಾಶಯಗಳನ್ನು ಬರೆದು ರಸ್ತೆಯಲ್ಲಿಯೇ ತಮ್ಮ ಹಲವು ಕಾರ್ಯಕ್ರಮಗಳನ್ನು ಮಾಡಿ ಫೇಸ್ಬುಕ್.ವ್ಯಾಟ್ಸಪಗಳ ತುಂಬೆಲ್ಲ ಅದೇ ಚಿತ್ರಗಳು. ಇನ್ನು ಕೆಲವರು ಇದು ನಮ್ಮ ಭಾರತೀಯ ಸಂಸ್ಕøತಿಯದ್ದಲ್ಲ ನಾವು ಯುಗಾದಿಯನ್ನು ಹೊಸ ವರ್ಷವೆಂದು ಆಚರಿಸೋಣ ಎಂಬೆಲ್ಲ ಸಂದೇಶಗಳನ್ನು ಹಾಕುವುದು ಇದನ್ನು ನೋಡಿದಾಗ ಇವೆರಡಕ್ಕಿಂತ ಭಿನ್ನವಾದ ಆಲೋಚನೆಯನ್ನು ದ.ರಾ.ಬೇಂದ್ರೆಯವರು ಮಾಡಿದ್ದು ಎಷ್ಟು ಸತ್ಯ. ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ಎಂಬುದು ಅಕ್ಷರಶಃ ಸತ್ಯ.


ಪ್ರತಿ ಮುಂಜಾವು ನಮಗೆ ಒಂದು ಹೊಸತನ್ನು ತಂದು ಕೊಡುತ್ತದೆ. ಅದನ್ನು ಸಾರ್ಥಕ ಪಡಿಸಿಕೊಳ್ಳಬೇಕಾದರೆ ನಾವು ಹೇಗೆ ಬದುಕಬೇಕು ಎಂಬುದು ಅಷ್ಟೇ ಮುಖ್ಯವಲ್ಲವೇ.? ನೀವು ಏನೇ ಆಗಿರಿ ಪ್ರತಿ ದಿನದ ಬೆಳಗನ್ನು ಆಶಾಭಾವದೊಂದಿಗೆ ಆರಂಭಿಸಿದರೆ ಬದುಕು ಸಾರ್ಥಕ.ಪ್ರತಿ ಮುಂಜಾವು ಹಲವು ಸಾಧ್ಯತೆಗಳನ್ನು ಹೊತ್ತು ತರುತ್ತದೆ.ಇಂದು ನಾನು ಅಸಾಧ್ಯವಾದುದನ್ನು ಮಾಡುತ್ತೇನೆ ಎಂದು ದಿನವನ್ನು ಆರಂಭಿಸಿ.ಆ ದಿನ ನಿಮ್ಮ ಯಶಸ್ಸಿನ ದಿನವಾಗಿರುತ್ತದೆ. ಪ್ರಯತ್ನ ಆತ್ಮವಿಶ್ವಾಸದೊಂದಿಗೆ ಹೊಸ ಬೆಳಗು ಆರಂಭವಾಗಬೇಕಷ್ಟೇ.?


ಹಾಗಾದರೆ ನಾವು ಹೇಗೆ ಪ್ರತಿ ದಿನವನ್ನು ಆರಂಭಿಸಬಹುದು. ವಿದ್ಯಾರ್ಥಿಗಳಾಗಿದ್ದರೆ ಓದಿನತ್ತ ಗಮನ ಕೊಡುವ ಮೂಲಕ.ಗೃಹಿಣಿಯಾಗಿದ್ದರೆ ಮನೆಗೆಲಸದಲ್ಲಿ ತೊಡಗುವ ಮೂಲಕ. ನೌಕರರಾಗಿದ್ದರೆ ಮನೆಯ ಹಿರಿಯರಿಗೆ ಸಹಾಯ ಮಾಡುತ್ತ ಮನೆಯ ಕೆಲಸಗಳನ್ನು ನಿರ್ವಹಿಸುತ್ತ ನಮ್ಮ ಕಾರ್ಯ ಇಂದು ಏನೇನು ಎಂಬುದರ ಮೂಲಕ.ರೈತರಾಗಿದ್ದರೆ ಭೂತಾಯಿಯ ಸೇವೆಗೆ ಅಣಿಯಾಗುವ ಮೂಲಕ. ಹೀಗೆ ನಾವು ಏನೇನಾಗಿದ್ದೇವೆಯೋ ಎಲ್ಲದರಲ್ಲೂ ಸಕಾರಾತ್ಮಕ ಚಿಂತನೆಯ ಮೂಲಕ ಪ್ರತಿದಿನದ ಆರಂಭವಾದರೆ ಆ ದಿನದ ಅಂತ್ಯವು ಉತ್ತಮವಾಗಿರಲು ಸಾಧ್ಯ.


ನಾವು ಎಷ್ಟು ಹೊತ್ತು ಕೆಲಸ ಮಾಡುತ್ತೇವೆ ಎಂಬುದು ಮುಖ್ಯವಲ.್ಲ ಹೇಗೆ ಮಾಡುತ್ತೇವೆ.? ಎಂಬುದು ಮುಖ್ಯ. ಅಧಿಕವಾಗಿ ಮಾಡುವುದಕ್ಕಿಂತ ಸರಿಯಾಗಿ ಮಾಡುವುದು ಶ್ರೇಷ್ಠ. ಇಂದಿನ ದಿನಗಳಲ್ಲಿ ಯಾವುದೇ ಕೆಲಸ ಮಾಡಿ ಅದರಲ್ಲಿ ನಿಮ್ಮತನವಿರಲಿ ಎಂಬುದಕ್ಕೆ ಒಂದು ಮಾತು.ಬಸವಣ್ಣನವರು ಕಾಯಕ ನಿಷ್ಠೆಯ ಬಗ್ಗೆ ತಮ್ಮ ಹಲವಾರು ವಚನಗಳಲ್ಲಿ ಹೇಳಿದ್ದಾರೆ. ಬಸವಣ್ಣನವರ ಕಾಯಕ ತತ್ವಪ್ರೇರಣೆಯಿಂದ ಅನೇಕ ಶರಣ ಶರಣೆಯರು ವಿವಿಧ ಕಾಯಕದಲ್ಲಿ ತೊಡಗಿದರು.ಅವರ ಕಾಯಕದಿಂದ ಅವರ ಹೆಸರುಗಳು ಇತರರಿಗೆ ಪ್ರೇರಕ ಶಕ್ತಿಯಾದವು ಉದಾಹರಣೆಗೆ ಆಯ್ದಕ್ಕಿ ಲಕ್ಕಮ್ಮ. ಅಮುಗೆ ರಾಯಮ್ಮ.ಮೋಳಿಗೆ ಮಹಾದೇವಿ.ಇಂತಹ ಹಲವಾರು ಶರಣೆಯರು ಕೂಡ ಕಾಯಕ ತತ್ವದ ಮೂಲಕ ಸ್ವಾತಂತ್ರ್ಯ ಅನುಭವಿಸಿದರು.


“ತಿoಡಿಞ is ತಿoಡಿshiಠಿ”( ವರ್ಕ ಇಜ್ ವರ್ಸಿಪ್) ಅಂದರೆ ಕಾಯಕವೇ ಕೈಲಾಸ ಎಂದಿದ್ದಾರೆ ಬಸವಣ್ಣನವರು. ನಾವು ಮಾಡುವ ದಿನ ನಿತ್ಯದ ಕೆಲಸಗಳು ಶೃದ್ಧೆ, ಪ್ರಾಮಾಣಿಕತೆ, ನಿಷ್ಠೆಯಿಂದ ಮಾಡಿದರೆ ‘ಕಾಯಕವೇ ಕೈಲಾಸ’ ಎಂಬ ಮಾತಿಗೆ ನಾವು ಸಲ್ಲಿಸಿದ ಋಣ. ಏಕೆಂದರೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಜವಾಬ್ದಾರಿಗಳಿವೆ. ಆ ಜವಾಬ್ದಾರಿ ಅರಿತರೆ ಸಾಕು ಅವರವರ ಕಾರ್ಯ ಸುಗಮವಾದಂತೆ. ಕೆಲಸ ಯಾರ ಗೌರವವನ್ನು ತಗ್ಗಿಸುವುದಿಲ್ಲ. ಆದರೆ ತಾವು ಮಾಡುತ್ತಿರುವ ಕೆಲಸದಲ್ಲಿ ಶೃದ್ಧೆ ತೋರದೆ ಆ ಕೆಲಸದ ಗೌರವವನ್ನು ತಾವೇ ತಗ್ಗಿಸುವ ಸಂಪ್ರದಾಯ ಇಂದು ಕಂಡು ಬರುತ್ತಿದೆ.


ದೇಶದಲ್ಲಿ, ಹಲವಾರು ಭ್ರಷ್ಟಾಚಾರ, ಲಂಚ, ಕೊಲೆ-ಸುಲಿಗೆ ಅನೈತಿಕತೆಯಂಥ ಹೇಯ ಕೃತ್ಯಗಳು ಜರುಗುತ್ತಿರುವುದಕ್ಕೆ ಕಾರಣ ನಮ್ಮಲ್ಲಿ ಶ್ರದ್ಧೆ, ಭಕ್ತಿ, ನಿಷ್ಠೆ ಪ್ರಾಮಾಣಿಕತೆಯ ಕೊರತೆ ಇರುವುದೇ ಕಾರಣ. ಮನಸ್ಸು ಹೇಯ ಕೃತ್ಯಗಳತ್ತ ತೊಡಗಿದರೆ ಅದರಿಂದ ‘ಹೇಯ’ ಪರಿಣಾಮ ಎದುರಿಸಬೇಕಾಗುತ್ತದೆ. ಅಂದರೆ ಮಾಡಬಾರದ ಕೃತ್ಯ ಮಾಡಿದರೆ ಆಗಬಾರದ್ದು ಆಗಿಯೇ ತೀರುತ್ತದೆ ಎಂಬ “ಮಾಡಿದ್ದುಣ್ಣೋ ವiಹಾರಾಯ” ಗಾದೆಯಂತಾಗುತ್ತದೆ. ಮಹಾತ್ಮಾ ಗಾಂಧೀಜಿಯವರು ಸಾಬರಮತಿ ಆಶ್ರಮದಲ್ಲಿದ್ದಾಗ ಒಂದು ದಿನ ಹಲವಾರು ಜನ ಗಾಂಧೀಜಿ ಭೇಟಿ ಮಾಡಲೆಂದು ಬೆಳಿಗ್ಗೆ ಅಲ್ಲಿಗೆ ಬಂದರಂತೆ, ಆಗ ಗಾಂಧೀಜಿ ಆಶ್ರಮದಲ್ಲಿರಲಿಲ್ಲ. ಹುಡುಕಿದರೆ ಒಂದು ಮೇಕೆಯ ಹಾಲು ಕರೆಯುತ್ತಿದ್ದರಂತೆ. ಅಂದರೆ ‘ಸ್ವಾವಲಂಬನೆ’ಯ ಬದುಕು ಅವರು ತೋರಿಸಿದ ಪಾಠ, ನಮ್ಮ ಮನೆಯ ಒಳಗೆ ಹೊರಗೆ ನಮ್ಮ ಪ್ರಥಮ ಕರ್ತವ್ಯ ನಾವು ಮಾಡಿದರೆ ನಿರುದ್ಯೋಗ ಸಮಸ್ಯೆಯೇ ಇರದು. ನಾವು ಕರ್ತವ್ಯ ಭ್ರಷ್ಟರಾಗಿ ಪರಾವಲಂಬಿಗಳಾದರೆ ಅಲ್ಲಿ ಸೋಮಾರಿತನ ಹೆಚ್ಚಾಗುತ್ತದೆ.


ನಮ್ಮ ದೇಶ ವಿಶಾಲ ಸಂಪದ್ಭರಿತ ನಾಡು, ಇಲ್ಲಿ ಸಂಪನ್ಮೂಲಗಳ ಕೊರತೆ ಇಲ್ಲ. ಇರುವಂತಹ ಪರಿಸರ, ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡರೆ ಜಗತ್ತಿನಲ್ಲಿಯೇ ‘ಭಾರತ’ದಂತಹ ಮುಂದುವರಿದ ರಾಷ್ಟ್ರ ಯಾವುದೂ ಆಗಲು ಸಾಧ್ಯವಿಲ್ಲ. ಆದರೆ ನಮ್ಮಲ್ಲಿ ‘ಕರ್ತವ್ಯ ಪ್ರಜ್ಞೆ’ ಇಲ್ಲದಿರುವುದೇ ಇಂದಿನ ಪ್ರಚಲಿತ ವಿದ್ಯಮಾನಕ್ಕೆ ಕಾರಣ. ಸರಕಾರದ ಯಾವ ಯೋಜನೆಗಳಿಗೂ ಸರಿಯಾದ ಸ್ಪಂದನೆ ಎಲ್ಲಿಯವರೆಗೂ ಇರುವುದಿಲ್ಲವೋ ಅಲ್ಲಿಯವರೆಗೂ ಅದರ ದಾರಿಯಲ್ಲಿ ಎಡರು-ತೊಡರುಗಳು ಸಹಜ.


‘ಪಾಲಿಗೆ ಬಂದದ್ದು ಪಂಚಾಮೃತ’ ಎನ್ನುವಂತೆ ಸಣ್ಣ ಕೆಲಸವೇ ಇರಲಿ, ದೊಡ್ಡ ಕೆಲಸವಿರಲಿ, ಕೆಲಸದ ಬಗ್ಗೆ ಉದಾಸೀನ ಮಾಡದೇ ಕಾರ್ಯ ಮಾಡುತ್ತಾ ಹೋದಂತೆ ಕಾರ್ಯಕ್ಷಮತೆ ತನ್ನಿಂದ ತಾನೆ ನೆಲೆಗೊಳ್ಳುತ್ತಾ ಹೋಗುತ್ತದೆ. ಸ್ವಾಮಿ ವಿವೇಕಾನಂದರು ಕೂಡ ‘ಯಾವುದಾದರೊಂದು ಕೆಲಸ ಮಾಡುತ್ತಿರುವಾಗ, ಅದರಿಂದಾಚೆಗಿನ ಯಾವ ವಿಷಯವನ್ನು ಯೋಚಿಸಬಾರದು’ ಎಂದು ಹೇಳಿದ್ದಾರೆ. ಮನುಷ್ಯ ಮಾಡುವ ಪ್ರತಿಯೊಂದು ಕೆಲಸಕ್ಕೂ ಉಚಿತ ಸಮಯವೊಂದಿದೆ ಮತ್ತು ಪ್ರತಿ ಸಮಯಕ್ಕೆ ಆತ ಮಾಡಬೇಕಾದ ಉಚಿತ ಕೆಲಸವೊಂದಿದೆ.ಇಂದಿನ ದಿನದಲ್ಲಿ ಸರ್ಕಾರಿ ಕೆಲಸ ಸಿಗುವುದು ತುಂಬ ಕಷ್ಟ ಕಲಿತವರೆಲ್ಲರೂ ಸರ್ಕಾರಿ ಕೆಲಸಕ್ಕೆ ಕಾಯುವ ಬದಲು ತಮ್ಮ ಮನೆತನದ ಕೆಲಸವನ್ನೋ. ವ್ಯವಸಾಯವನ್ನೋ.ಸ್ವಂತ ಉದ್ದಿಮೆಯನ್ನೋ ಅವಲಂಬಿಸಿದರೆ ಅದಕ್ಕಿಂತ ಹೆಚ್ಚಿನ ಕಾಯಕ ಬೇರೊಂದಿಲ್ಲ.ಇದ್ದುದರಲ್ಲಿಯೇ ತೃಪ್ತಿ ಕಾಣಬೇಕು.


‘ಸುಖಬೇಕೆ? ಕಾಯುತ್ತಿರುವ ಕರ್ತವ್ಯಗಳನ್ನು ಆಗಿಂದಾಗ್ಗೆ ಮಾಡಿ ಮುಗಿಸಿ”ಎಂದು ಐರ್ಲೆಂಡ್ ಗಾದೆ ಮಾತಿದೆ. ಒಳ್ಳೆಯ ಕಾರ್ಯಗಳಿಗೆ ತಕ್ಕ ಉತ್ತಮ ಫಲಗಳು ಬರುವುದು ನಿಶ್ಚಿತ. ಯಶಸ್ಸಿನ ಗುಟ್ಟು ಯಾವುದು ಗೊತ್ತೆ? ಹಿಡಿದ ಕೆಲಸದಲ್ಲಿ ದೃಢ ಸಂಕಲ್ಪದಿಂದಿರುವುದು.


ಹೊಸದಿನ ಹೊಸ ವರ್ಷ ಎಂದೆಲ್ಲ ಪರಿಕಲ್ಪನೆಗಳನ್ನು ಕಟ್ಟಿಕೊಂಡು ಮೋಜು.ಮಸ್ತಿ ಹೀಗೆ ಮಾಡಿ ರಾತ್ರಿಯಿಡೀ ಕುಣಿದು ಕುಪ್ಪಳಿಸಿ ಬೆಳಿಗ್ಗೆ ಮಲಗಿದರೆ ಬದುಕು ಸಾರ್ಥಕವಾಗದು.ಅದು ಇನ್ನಷ್ಟು ಗೋಜಲುವಾಗಿ ಶರೀರದ ಮೇಲೆ ಕೆಟ್ಟ ಪರಿಣಾಮವನ್ನೇ ಉಂಟು ಮಾಡೀತು. ಈ ದಿನ ನಾನು ಏನನ್ನು ಒಳ್ಳೆಯ ಆಲೋಚನೆಯಲ್ಲಿ ತೊಡಗಿಸಿಕೊಳ್ಳಬಹುದು ಎಂಬುದನ್ನು ಯೋಚಿಸಿದರೆ ಅದಕ್ಕಿಂತ ಸಾರ್ಥಕತೆ ಬೇರೊಂದಿರದು.ಅದು ಬಿಟ್ಟು ಹಾಳಾದ ಕೆಟ್ಟ ದುರಭ್ಯಾಸದಿಂದ ಕೂಡಿದ ಚಟುವಟಿಕೆಗಳತ್ತ ಗಮನ ಹರಿಸಿದರೆ ಶಾರೀರಿಕವಾಗಿಯೂ ಹಾಳು ಮಾನಸಿಕವಾಗಿಯೂ ಹಾಳು.ಹೀಗಾಗಿ ನಾವು ನೂತನ ವರ್ಷ ಎಂಬುದನ್ನು ಬಿಟ್ಟು ನಮ್ಮತನ ನಮ್ಮ ಸಂಸ್ಕøತಿಗೆ ಪೂರಕವಾದ ಬದುಕನ್ನು ಬದುಕೋಣ.ಜೊತೆಗೆ ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ಎಂಬುದನ್ನು ಮರೆಯದೇ ಪಾಲಿಸೋಣ.ನಮ್ಮ ಸಂಸ್ಕಾರಯುತ ಬದುಕನ್ನು ಪ್ರತಿನಿತ್ಯ ಬದುಕೋಣ.ಇದು ಪ್ರತಿ ಬೆಳಗಿನ ಆಶಯ ಎಂಬುದನ್ನು ಮರೆಯದಿರೋಣ.
ಮೂಡಲ ಮನೆಯ ಮುತ್ತಿನ ನೀರಿನ
ಎರಕವಾ ಹೊಯ್ದ
ನುಣ್ಣನ್ನೆರಕವ ಹೊಯ್ದಾ
ಬಾಗಿಲ ತೆರೆದೂ ಬೆಳಕೂ ಹರಿದು
ಜಗವೆಲ್ಲಾ ತೊಯ್ದ
ಜಗವೆಲ್ಲಾ ತೊಯ್ದಾ.ಪ್ರತಿದಿನದ ಸೂರ್ಯೋದ ಯವನ್ನು ಬೇಂದ್ರೆಯವರ ಇನ್ನೊಂದು ಕವಿತೆ “ಬೆಳಗು”ವಿನ ಸಾಲುಗಳಂತೆ ಸ್ವಾಗತಿಸೋಣವಲ್ಲವೇ ?.

 • ವೈ.ಬಿ.ಕಡಕೋಳ
  ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
  ಮಾರುತಿ ಬಡಾವಣೆ.ಸಿಂದೋಗಿ ಕ್ರಾಸ್‍ಮುನವಳ್ಳಿ-591117
 •  

ವರುಷಗಳು ಉರುಳಿದರು ಹರುಷ ಮರಳಿ ಬರುತ್ತಿಲ್ಲ
ಹೊಸ ವರುಷ ಬಂದಿದೆ. ಹಳೆಯದು ಉರುಳಿ ಹೋಗಿದೆ. ಮರಳಿ ಎಂದಿಗೂ ಬಾರದು. ಕಳೆದ ಸಮಯ ಕೋಟಿ ಕೊಟ್ಟರೂ ಮರಳಿ ಬಾರದು. ಸಮಯಕ್ಕೆ ಬೆಲೆ ಕಟ್ಟಲಾಗದು. ಅದಕ್ಕೆ ಬದುಕನ್ನು ಸಾರ್ಥಕಗೊಳಿಸಲು ಸಮಯದ ಸದ್ವಿನಿಯೋಗವಾಗಬೇಕು. ಆದರೆ ಇಂದಿನ ಬಹುತೇಕ ಜನರು ಜೀವನದ ಮೌಲ್ಯವನ್ನು ಅರಿಯದೆ, ಅಮೂಲ್ಯ ವೇಳೆಯನ್ನು ದುರಾಚಾರ, ದುರಾಕ್ರಮಣಗಳಲ್ಲಿ ವ್ಯಯಿಸುತ್ತಿದ್ದಾರೆ. ‘ಮಾನವ ಜನ್ಮ ದೊಡ್ಡದು ಅದನನ್ನು ವ್ಯರ್ಥ ಹಾಳು ಮಾಡಬೇಡಿರಿ ಹುಚ್ಚಪ್ಪಗಳೀರಾ’ ಎಂದು ದಾಸರು ಹೇಳಿದರೂ ಜನ ಅದನನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಸಮುದ್ರದ ಅಲೆಗಳಂತೆ ವರುಷಗಳು ಬಂದು ಮರಳಿ ಹೋಗುತ್ತಿವೆ. ಹೊಸ ವರುಷಗಳು ಯಾರಿಗೂ ಹೊಸ ಹರುಷವನ್ನು ತರುತ್ತಿಲ್ಲ. ಇದಕ್ಕೆ ಆ ಕಾಲಮಾನಗಳ ತಪ್ಪಲ್ಲ. ಜನರ ಮನಸ್ಸುಗಳು ಸಂಕುಚಿತಗೊಳ್ಳುತ್ತಿವೆ. ಜಾತಿ. ಮತ, ಹಣ, ಅಧಿಕಾರ ಇವುಗಳ ಬೆಂಬತ್ತಿ ಮಾನವ ದಾನವನಾಗುತ್ತಿದ್ದಾನೆ.
ವಿಶಾಲಭಾವ ತಾಳಲು , ವಿಶ್ವಮಾನವನಾಗಲು ರಾಷ್ಟ್ರಕವಿ ಕುವೆಂಪು ಇವರು ಕರೆ ನೀಡಿದರು. ಹುಟ್ಟಿದ ಮಗು ವಿಶ್ವ ಮಾನವನಾದರೆ ಅದು ಬೆಳೆಯುತ್ತಾ ಹೋದಂತೆ ಮನೆ ಹಾಗೂ ಪರಿಸರ ಆ ಮಗುವನ್ನು ಜಾತಿ, ಧರ್ಮ, ಅಕ್ರಮಗಳ ಜಾಲದಲ್ಲಿ ಸಿಲುಕಿಸುತ್ತಾರೆ. ಆತ ಬೆಳೆದಂತೆ ದಾನವನಾಗಿ ಸಮಾಜಕ್ಕೆ ಹೊರೆಯಾಗುತ್ತಾನೆ.
ದಿನ, ತಿಂಗಳು, ವರುಷ ಇವೆಲ್ಲ ನಾವು ಮಾಡಿಕೊಂಡ ಕಾಲಮಾಪಕಗಳು. ಹಿಂದು ಧರ್ಮದ ಪ್ರಕಾರ ಉಗಾದಿ ಹೊಸ ವರುಷದ ಪ್ರಾರಂಭವಾಗುತ್ತದೆ. ಹಾಗೆ ನೋಡಿದರೆ ಪ್ರತಿ ಕ್ಷಣವೂ ಹೊಸತು. ಕಾಲಕ್ರಮಿಸಿದಂತೆ ಜೀವಿಗಳು ಕಾಲಾಂತಕನ ಹತ್ತಿರ ಸಾಗುತ್ತವೆ. ಅದಕ್ಕಾಗಿ ಇದ್ದಷ್ಟು ದಿನ ಬದುಕನ್ನು ಸಾರ್ಥಕವಾಗಿ, ಅರ್ಥಪೂರ್ಣವಾಗಿ ಕಳೆಯಬೇಕು. ವರುಷಗಳು ಉರುಳಿದಾಗ, ಇಲ್ಲವೆ ಹುಟ್ಟು ಹಬ್ಬಗಳು ಬಂದಾಗ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಕಳೆದ ದಿನಗಳ ಮೌಲ್ಯಮಾಪನ ಮಾಡಿಕೊಳ್ಳುವದು ಸೂಕ್ತವಾದುದು.
2020 ವರುಷವಂತೂ ಕರೊನಾ ಆಕ್ರಮಣದಿಂದ ಕರಾಳವಾಗಿ ಇಡಿ ವಿಶ್ವ ತತ್ತರಿತು. ಸಾಂಕ್ರಾಮಿಕ ರೋಗದಿಂದ ಜನಸಮೂಹ ವಿಹ್ವಲಗೊಂಡರು. ಮನುಕುಲದ ನಾಶಕ್ಕಾಗಿ ಕಾಣದ ಸೂಕ್ಷ್ಮಾಣು ಜೀವಿ; ವೈರಾಣು ಕುತ್ತಾಗಿ ಬಂದಿತು. ಶಿಕ್ಷಣ, ಆರ್ಥಿಕ ,ಸಾಮಾಜಿಕ ವ್ಯವಸ್ಥೆ ಬುಡಮೇಲಾಯಿತು. ಶಾಲೆ ಕಾಲೇಜುಗಳು ಬಾಗಿಲು ಮುಚ್ಚಿದವು. ಅನೇಕ ತಿಂಗಳುಗಳ ಅವಧಿಯ ಕರ್ಫ್ಯೂದಿಂದ ಹಗಲುಗಳು ನೀರವವಾದವು. ಉದ್ದಿಮೆಗಳು ಬಂದಾದವು. ದುಡಿಮೆಗಾಗಿ ನಗರಕ್ಕೆ ಬಂದ ಕಾರ್ಮಿಕರು ನಿರುದ್ಯೋಗಿಗಳಾಗಿ ಹಳ್ಳಿಗಳತ್ತ ದೌಡಾಯಿಸಿದರು. ನಮ್ಮಊರು ನಮಗೆ ಶ್ರೇಷ್ಠವೆಂಬ ಅರಿವು ಮೂಡಿತು.
ಪಶು ಪಕ್ಷಿಗಳು ನಿರಾತಂಕವಾಗಿ ಬೀದಿಗೆ ಬಂದವು. ಕಂಡು ಕೇಳರಿಯದ, ಊಹಾತೀತವಾದ ಹೃದಯ ವಿದ್ರಾವಕ ಪ್ರಸಂಗಗಳನ್ನು ನೋಡಬೇಕಾಯಿತು, ಸಾವು ನೋವುಗಳನ್ನು ಕಾಣಬೇಕಾಯಿತು. ಕಣ್ಣೆದುರಿಗೆ ಬಂಧು, ಬಳಗ, ಆತ್ಮೀಯರನ್ನು ಕಳೆದುಕೊಳ್ಳಬೇಕಾಯಿತು. ಮಾನವನ ಜೀವನ ಶೈಲಿ ಸಂಪೂರ್ಣ ಬದಲಾಯಿತು. ಯಾರೂ ಮನೆಗೆ ಬರುವಂತಿಲ್ಲ, ನಾವೂ ಇನ್ನೊಬ್ಬರ ಮನೆಗೆ ಹೋಗುವಂತಿಲ್ಲ. ಎಲ್ಲರೂ ಬಾಯಿ ಮೂಗು ಮುಚ್ಚಿಕೊಳ್ಳಲು ಮುಖ ಗವಸು ಹಾಕಿಕೊಳ್ಳಬೇಕಾದ ದುರ್ಭರ ಪ್ರಸಂಗ ಬಂದಿತು. ಈ ಎಲ್ಲ ಅವಗಡಕ್ಕೆ ಕಾರಣ ನಿಸರ್ಗದ ಮೇಲಿನ ಮಾನವನ ನಿರಂತರ ದೌರ್ಜನ್ಯ, ಪ್ರಕೃತಿ ಸಂಪನ್ಮೂಲಗಳ ಹಾಗೂ ಅರಣ್ಯ ನಾಶ. ವಾಯು, ಜಲ ಮಾಲಿನ್ಯ ಇಂತೆಲ್ಲ ಕೆಡಕುಗಳಿಗೆ ಮಾನವನ ಮನದ ಮಾಲಿನ್ಯ ಮೂಲ ಕಾರಣವಾಗಿದೆ. ಹೀಗಿದ್ದರೂ ಮಾನವನೇನೂ ಬದಲಾಗಲಿಲ್ಲ. ಮಂಗನಾದರೂ ಬದಲಾದೀತು ಮಾನವನ ಮಾತ್ರ ಬದಲಾಗುವದಿಲ್ಲವೆನಿಸುತ್ತದೆ.
ಹೊಸ ವರುಷದ ಬಾಗಿಲಲ್ಲಿ ನಿಂತ ಸಮಯದಲ್ಲಿ ಗ್ರಾಮ ಪಂಚಾಯತ ಚುನಾವಣೆಗಳು ಎದುರಾದವು. ಯಾವದೆ ಚುನಾವಣೆಗಳಲ್ಲಿ ಆರಿಸಿ ಬಂದ ಜನಪ್ರತಿನಿಧಿಗಳು, ತಾವು ಜನಸೇವಕರೆಂಬುದನ್ನು ಸಾಮಾನ್ಯವಾಗಿ ಮರೆಯುತ್ತಿದ್ದಾರೆ.
ಅವರಲ್ಲಿ ಸೇವಾಭಾವನೆ, ಸಮಾಜಮುಖಿ ಧೋರಣೆ, ಜನಪರ ಕಾಳಜಿ ಹುಟ್ಟಬೇಕು. ಗ್ರಾಮಸ್ವರಾಜ್ಯ ಇದು ಗಾಂಧಿಜಿಯವರ ಕಲ್ಪನೆ. ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಇದು ಸ್ಥಾನಿಕ ಸ್ವಾಯತ್ತ ಸರಕಾರ. ಚುನಾವಣೆಗಳಲ್ಲಿ ಹಣ ಹೆಂಡ ಹಾಗೂ ಇನ್ನಿತರ
ಪ್ರಲೋಭನೆಗಳಿಂದ ಮತದಾರರನ್ನು ಸೆಳೆಯುವ ತಂತ್ರಗಳು ಜರುಗಿದ ಸಂಗತಿಗಳ ಸುದ್ದಿಗಳನ್ನು ಓದಿದ್ದೇವೆ. ಮತದಾರರು ಇಂದು ಹೆಚ್ಚಾಗಿ ಮತಿಹೀನರಾಗುತ್ತಿರುವದು ಕಳವಳಕಾರಿಯಾದುದು. ಪ್ರಜೆ ಪ್ರಜ್ಞಾವಂತನಾದಾಗ ಮಾತ್ರ ಪ್ರಜಾ ಪ್ರಭುತ್ವ ಯಶಸ್ವಿಯಾಗುತ್ತದೆ ಎಂಬುದನ್ನು ಯಾರೂ ಮರೆಯಬಾರದು.
ವರುಷಗಳು ಹರುಷವನ್ನು ತರಿಸಬೇಕಾದರೆ. ಮಾನವನ ಮನಸ್ಸು ವಿಶಾಲತೆಯಿಂದ ಕೂಡಬೇಕು. ನಿಸರ್ಗ ಪ್ರೀತಿ, ಮಾನವೀಯ ಮೌಲ್ಯ, ಭ್ರಾತೃತ್ವ ಭಾವ ಅಂಕುರಿಸಬೇಕು. ಕಾಲವನ್ನು ಸಾರ್ಥಕಗೊಳಿಸಬೇಕಾದರೆ ಬದುಕು ಸತ್ವಪೂರ್ಣವಾಗಬೇಕು. ಸಾತ್ವಿಕವಾಗಿರಬೇಕು. ಎಲ್ಲರೂ ನಮ್ಮವರೆಂಬ ಉದಾರ ಭಾವವನ್ನು ತಾಳಬೇಕು.

 • ಶಿ.ಗು.ಕುಸುಗಲ್ಲ
  ಹಿರಿಯ ಸಾಹಿತಿಗಳು
  ಮೊ.8277334150
  ಬೆಳಗಾವಿ