ನಗರಾಭಿವೃದ್ಧಿ ಕುಂಠಿತ; ಜನರಲ್ಲಿ ನಿರಾಸೆ

ದೇಶದಲ್ಲಿ ನಗರಾಭಿವೃದ್ಧಿಯ ಪ್ರಗತಿ ಕುಂಠಿತಗೊಂಡಿದೆ. ಜನರ ನಿರೀಕ್ಷೆಗಳು ಮತ್ತು ನಗರಸಭೆಗಳ ಕಾರ್ಯಕ್ಷಮತೆಯಲ್ಲಿ ಭಾರಿ ಅಂತರ ಕಾಣಿಸುತ್ತಿದೆ. ನಗರದ ಸಮಸ್ಯೆಗಳ ಕುರಿತು ಶ್ರಮಿಸುತ್ತಿರುವ ಮುಂಬೈ ಮೂಲದ ಎನ್‍ಜಿಒ ಪ್ರಜಾ ಫೌಂಡೇಶನ್, ದೇಶಾದ್ಯಂತ 40 ಮುನಿಸಿಪಾಲಿಟಿಗಳು ಮತ್ತು ಪಟ್ಟಣಗಳಲ್ಲಿ ಅಧ್ಯಯನ ನಡೆಸಿದ್ದು, ಉತ್ತಮ ಆಡಳಿತವನ್ನು ಆಧರಿಸಿ ಸೂಚ್ಯಂಕಗಳನ್ನು ಬಿಡುಗಡೆ ಮಾಡಿರುವುದು ಅಧ್ಯಯನಕ್ಕೆ ವಿಷಯ ಒದಗಿಸಿದೆ.


ಪಟ್ಟಿಯಲ್ಲಿ ಒಡಿಶಾ ಮೊದಲ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ, ಛತ್ತೀಸ್ ಗಢ, ಕೇರಳ ಮತ್ತು ಮಧ್ಯಪ್ರದೇಶ ನಂತರದ ಸ್ಥಾನದಲ್ಲಿದೆ. ತೆಲುಗು ರಾಜ್ಯ ಗಳ ಪೈಕಿ ಆಂಧ್ರ ಪ್ರದೇಶ 16 ಮತ್ತು ತೆಲಂಗಾಣ 19ನೇ ಸ್ಥಾನದಲ್ಲಿದೆ.ಮುನಿಸಿಪಾಲಿಟಿಯಲ್ಲಿನ ಸದಸ್ಯರ ಕಾರ್ಯಕ್ಷಮತೆ, ಶಾಸಕಾಂಗ ವ್ಯವಸ್ಥೆಯು ಅನುಸರಿಸುವ ನೀತಿಗಳು, ನಾಗರಿಕರ ಸಹಭಾಗಿತ್ವ, ಸಮಸ್ಯೆ ಪರಿಹಾರಕ್ಕೆ ರೂಪಿಸಿರುವ ವ್ಯವಸ್ಥೆ ಮತ್ತು ಆರ್ಥಿಕ ವಿಕೇಂದ್ರೀಕರಣದ ಅಂಶಗಳನ್ನು ಆಧರಿಸಿ ಸೂಚ್ಯಂಕದಲ್ಲಿ ರಾಜ್ಯಗಳ ಸ್ಥಾನಮಾನವನ್ನು ನಿಗದಿಸಲಾಗಿದೆ.


ನೂರು ಅಂಕಗಳಲ್ಲಿ ಯಾವ ರಾಜ್ಯವೂ 60 ಅಂಕವನ್ನೂ ತಲುಪಿಲ್ಲ ಎಂಬುದು ಅತ್ಯಂತ ಗಮನಾರ್ಹ. ಇದು ದೇಶದಲ್ಲಿ ಮುನಿಸಿಪಾಲಿಟಿಗಳ ಆಡಳಿತದಲ್ಲಿನ ಕೊರತೆ ಮತ್ತು ನಾಗರಿಕ ಸೇವೆ ವ್ಯವಸ್ಥೆಯಲ್ಲಿ ವೈಫಲ್ಯಗಳನ್ನು ನಮ್ಮೆದುರು ಬಿಚ್ಚಿಡುತ್ತಿವೆ. 74ನೇ ತಿದ್ದುಪಡಿಯ 12ನೇ ಶೆಡ್ಯೂಲ್‍ನಲ್ಲಿ ಶಿಫಾರಸು ಮಾಡಿದ 18 ಅಂಶಗಳನ್ನು ಯಾವ ಮುನಿಸಿಪಾಲಿಟಿಯೂ ಸಂಪೂರ್ಣವಾಗಿ ಅನುಷ್ಠಾನಗೊಳಿಸಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ.


ಸಂವಿಧಾನದಲ್ಲಿ ವಿವರಿಸಿದ ರೀತಿಯಲ್ಲಿ ಮುನಿಸಿಪಾಲಿಟಿಗಳು ಸ್ವಾಯತ್ತತೆ ಅನುಭವಿಸುತ್ತಿಲ್ಲ. 74ನೇ ಸಂವಿಧಾನ ತಿದ್ದುಪಡಿಯ ಮೂಲ ಧ್ಯೇಯವನ್ನು ರಾಜ್ಯ ಸರ್ಕಾರಗಳು ಪದೇ ಪದೆ ಉಲ್ಲಂಘಿಸುತ್ತಲೇ ಇವೆ. ಮುನಿಸಿಪಾಲಿಟಿಯ ಕಾರ್ಯ ನಿರ್ವಹಣೆಗೆ ಸಂಬಂಧಿಸಿದ ಹಲವು ಅಧಿಕಾರಗಳನ್ನು ತಮ್ಮ ಬಳಿ ಇಟ್ಟುಕೊಂಡಿವೆ. ರಾಜ್ಯ ಸರ್ಕಾರ ಮತ್ತು ಮುನಿಸಿಪಾಲಿಟಿಯ ಮಧ್ಯೆ ಹಣದ ಹಂಚಿಕೆಯು ವೈಜ್ಞಾನಿಕವಾಗಿ ನಡೆಯಬೇಕು ಎಂದು ಸಂವಿಧಾನ ಸ್ಪಷ್ಟೀಕರಿಸುತ್ತದೆ. ರಾಜ್ಯ ಹಣಕಾಸು ಆಯೋಗದ ಮೇಲ್ವಿಚಾರಣೆಯಲ್ಲಿ ಈ ಇಡೀ ಪ್ರಕ್ರಿಯೆಯನ್ನು ನಡೆಸಬೇಕು ಎಂದು ಸಂವಿಧಾನ ನಿರ್ದೇಶಿಸುತ್ತದೆ.


ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ನೀಡುವುದು ಮತ್ತು ಕೆಲವು ವಿಭಾಗಗಳನ್ನು ಹೊರಗಿಡುವಂತಹ ಕ್ರಮಗಳನ್ನು ರಾಜಕೀಯ ಅಗತ್ಯಕ್ಕೆ ಅನುಗುಣವಾಗಿ ಮಾಡುತ್ತವೆ. ಇದು ಮುನಿಸಿಪಾಲಿಟಿಯ ಆದಾಯದ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತಿದೆ. ನೀರು ಪೂರೈಕೆ, ಬೀದಿ ದೀಪ, ನೈರ್ಮಲ್ಯ, ರಸ್ತೆಗಳು, ಸಾರಿಗೆ ಮತ್ತು ಘನ ತ್ಯಾಜ್ಯ ನಿರ್ವಹಣೆಯಂತಹ ಪ್ರಾಥಮಿಕ ಕಾರ್ಯಗಳನ್ನೂ ಸಂಪೂರ್ಣವಾಗಿ ಮತ್ತು ಸಂತೃಪ್ತಿಕರವಾಗಿ ಮಾಡಲು ಮುನಿಸಿಪಾಲಿಟಿಗಳಿಗೆ ಸಾಧ್ಯವಾಗುತ್ತಿಲ್ಲ.ಕೊಳಗೇರಿಗಳು ದಿನದಿಂದ ದಿನಕ್ಕೆ ವಿಸ್ತರಿಸುವುದು ಇನ್ನೊಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಸಂವಿಧಾನದಲ್ಲಿ ನಿರ್ದೇಶಿಸಿದ ಜವಾಬ್ದಾರಿಗಳು ಒಂದೊಂದಾಗಿ ಮುನಿಸಿಪಾಲಿಟಿಯ ಕೈಯಿಂದ ಜಾರುತ್ತಿದೆ. ರಾಜ್ಯ ಸರ್ಕಾರವು ಸ್ಥಾಪಿಸಿದ ಒಳಚರಂಡಿ ಮಂಡಳಿ, ಜಲ ಮಂಡಳಿ ಮತ್ತು ನಗರಾಭಿವೃದ್ಧಿ ಸಂಸ್ಥೆಗಳು ಸೇರಿದಂತೆ ಹಲವು ಸಂಸ್ಥೆಗಳು ಮುನಿಸಿಪಾಲಿಟಿ ನಡೆಸಬೇಕಿರುವ ಕೆಲಸಗಳನ್ನು ಮಾಡುತ್ತಿವೆ. ಆಂಧ್ರಪ್ರದೇಶ ಮುನಿಸಿಪಾಲಿಟಿ ಏಳು ಕಾರ್ಯಗಳನ್ನು ನಡೆಸುತ್ತಿದ್ದರೆ, ತೆಲಂಗಾಣ ಮುನಿಸಿಪಾಲಿಟಿ ನಾಲ್ಕು ಕಾರ್ಯಗಳನ್ನು ನಡೆಸುತ್ತಿದೆ. ಪ್ರಜಾಪ್ರಭುತ್ವದ ಆಡಳಿತದಲ್ಲಿ ಮೂರನೇ ಹಂತದ ಈ ಮಂಡಳಿಗಳು ತಮ್ಮ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿವೆ. ಮುನಿಸಿಪಾಲಿಟಿಗಳಿಗೆ ಆಯ್ಕೆಯಾದ ಕಾಪೆರ್Çರೇಟರ್??ಗಳು ಮತ್ತು ಮೇಯರ್‍ಗಳು ಸೀಮಿತ ಅಧಿಕಾರ ಹೊಂದಿದ್ದಾರೆ. ಸಂಪೂರ್ಣ ಆಡಳಿತ ಅಧಿಕಾರವು ಕಮಿಷನರ್ ಬಳಿ ಇರುತ್ತದೆ.


ನಗರಾಡಳಿತದಲ್ಲಿ ನಾಗರಿಕರ ಸಕ್ರಿಯ ಭಾಗವಹಿಸುವಿಕೆಯು ಅತ್ಯಂತ ನಿರ್ಣಾಯಕವಾಗಿದೆ. ಆದರೆ, ಇನ್ನೊಂದೆಡೆ ಮುನಿಸಿಪಾಲಿಟಿಯ ಆಡಳಿತದಲ್ಲಿ ಜನರ ಆಸಕ್ತಿ ನಿರಂತರವಾಗಿ ಕುಸಿಯುತ್ತಲೇ ಇದೆ ಎಂಬುದನ್ನು ನಾವು ಗಮನಿಸಬೇಕು. ಮುನಿಸಿಪಲ್ ಚುನಾವಣೆಯಲ್ಲಿ ಮತದಾನದ ಪ್ರಮಾಣ ಅತ್ಯಂತ ಕಡಿಮೆ ಇರುತ್ತದೆ. ವಾರ್ಡ್ ಸಮಿತಿಗಳನ್ನು ಸ್ಥಾಪಿಸಿದರೆ, ಆಡಳಿತದಲ್ಲಿ ನಾಗರಿಕರ ಭಾಗವಹಿಸುವಿಕೆಯನ್ನು ಪೆÇ್ರೀತ್ಸಾಹಿಸುತ್ತದೆ. ಆದರೆ ಹಲವು ಮುನಿಸಿಪಾಲಿಟಿಗಳಲ್ಲಿ ವಾರ್ಡ್ ಕಮಿಟಿಗಳೇ ಇಲ್ಲ. ನಗರಾಡಳಿತದಲ್ಲಿ ಇನ್ನೊಂದು ಪ್ರಮುಖ ಅಂಶವೆಂದರೆ, ದೂರು ನಿರ್ವಹಣೆ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯೂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಗಮನಾರ್ಹ ಸಂಗತಿ.


ಉತ್ತಮ ನಗರಾಡಳಿತಕ್ಕೆ ಕುಶಲ ಮಾನವ ಸಂಪನ್ಮೂಲದ ಕೊರತೆಯೇ ಮುಖ್ಯ ಕಾರಣವಾಗಿದೆ. ಹಲವು ಮುನಿಸಿಪಾಲಿಟಿಗಳಲ್ಲಿ ಮಂಜೂರಾದ ಹುದ್ದೆಗಳಿಗೆ ನೇಮಕಾತಿ ಮಾಡಲಿಲ್ಲ. ಉದ್ಯೋಗಿಗಳನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲೂ ಮುನಿಸಿಪಾಲಿಟಿಗಳಿಗೆ ಸ್ವಾತಂತ್ರ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಮೂರನೇ ಅಂಗ ಎಂದು ಕರೆಯಲಾಗುವ ಮುನಿಸಿಪಾಲಿಟಿಗಳು, ಉತ್ತಮ ಆಡಳಿತವನ್ನು ನೀಡಲು ಸಂಪೂರ್ಣ ಸ್ವಾಯತ್ತತೆಯನ್ನು ಹೊಂದಿರಬೇಕು. ನಿರ್ಧಾರಗಳನ್ನು ತೆಗೆದುಕೊಳ್ಳಲು ಅವುಗಳಿಗೆ ಸ್ವಾತಂತ್ರ್ಯ ನೀಡಬೇಕು.


ಸಂವಿಧಾನಕ್ಕೆ ಹನ್ನೆರಡನೇ ಶೆಡ್ಯೂಲ್‍ನಲ್ಲಿ ಉಲ್ಲೇಖಿಸಿದ 18 ಕಾರ್ಯಗಳ ಮೇಲೆ ಮುನಿಸಿಪಲ್ ಆಡಳಿತವು ಸಂಪೂರ್ಣ ಅಧಿಕಾರ ಹೊಂದಿರಬೇಕು.ನಗರಾಡಳಿತದಲ್ಲಿ ಚುನಾಯಿತ ವ್ಯಕ್ತಿಗಳಿಗೆ ಉತ್ತಮ ತರಬೇತಿ ಯನ್ನು ಒದಗಿಸಬೇಕಿದೆ. ಹುದ್ದೆಗಳಿಗೆ ನೇಮಕಾತಿಯಲ್ಲಿ ಮುನಿಸಿ ಪಾಲಿಟಿಗಳಿಗೆ ಸಂಪೂರ್ಣ ಅಧಿಕಾರನ್ನು ನೀಡಬೇಕಿದೆ. ಮೇಯರ್ ಮತ್ತು ಕೌನ್ಸಿಲರ್‍ರನ್ನು ವಾಪಸ್ ಕರೆಸಿಕೊಳ್ಳುವ ಹಕ್ಕು ನಾಗರಿ ಕರಿಗೆ ಇರಬೇಕು. ರಾಜ್ಯಗಳಿಗೆ ಕೇಂದ್ರ ಸರ್ಕಾರವು ತೆರಿಗೆ ನೀಡುವ ರೀತಿಯಲ್ಲೇ ರಾಜ್ಯಗಳು ನಗರಸಭೆಗಳಿಗೆ ತೆರಿಗೆಯಲ್ಲಿ ಪಾಲು ನೀಡಬೇಕು. ಆಗ ಮಾತ್ರ ನಗರಸಭೆಗಳ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿರುತ್ತದೆ.

ಸಬ್ಸಿಡಿ ಬದಲು ಅಗತ್ಯ ಬೆಂಬಲ ಮುಖ್ಯ
ಮುಂಬರುವ ಬಜೆಟ್‍ನಲ್ಲಿ ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆಯಂತಹ ಸಬ್ಸಿಡಿ ನೀಡುವ ಬದಲು ರೈತರ ಬೆಂಬಲವನ್ನು ವ್ಯಾಪಕಗೊಳಿಸಬೇಕು ಎಂದು ಕೃಷಿ ತಜ್ಞರು ಪ್ರತಿಪಾದಿಸಿರುವುದು ಚಿಂತನಾರ್ಹವಾಗಿದೆ.


ಕೃಷಿ ಕ್ಷೇತ್ರದ ಸಂಪೂರ್ಣ ಬೆಳವಣಿಗೆಗೆ ಸ್ಥಳೀಯ ಕೃಷಿ ಸಂಶೋಧನೆ, ಎಣ್ಣೆಕಾಳು ಉತ್ಪಾದನೆ, ಆಹಾರ ಸಂಸ್ಕರಣೆ ಮತ್ತು ಸಾವಯವ ಕೃಷಿ ಉತ್ತೇಜಿಸಲು ಸರ್ಕಾರ ಮುಂಬರುವ ತನ್ನ ಬಜೆಟ್‍ನಲ್ಲಿ ಹೆಚ್ಚುವರಿ ಹಣ ಮತ್ತು ಪೆÇ್ರೀತ್ಸಾಹ ನೀಡಬೇಕು ಎಂದು ಉದ್ಯಮ ತಜ್ಞರು  ಅಭಿಪ್ರಾಯಪಟ್ಟಿದ್ದಾರೆ. ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆಯನ್ನು ಸಬ್ಸಿಡಿ ನೀಡುವ ಬದಲು ರೈತರ ಬೆಂಬಲವನ್ನು ವ್ಯಾಪಕಗೊಳಿಸಬೇಕು ಎಂದು ಪ್ರತಿಪಾದಿಸಲಾಗುತ್ತಿದೆ.


ಆಹಾರ ಸಂಸ್ಕರಣಾ ಉದ್ಯಮವು ರೈತನಿಗೆ ಉತ್ತಮ ಬೆಲೆ ಮತ್ತು ಮಧ್ಯವರ್ತಿಗಳ ವೆಚ್ಚ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಬಡ್ಡಿ ಸಬ್ವೆನ್ಷನ್, ಕಡಿಮೆ ತೆರಿಗೆ, ತಂತ್ರಜ್ಞಾನದ ಪ್ರವೇಶದಂತಹ ಮುಂತಾದ ಪೆÇ್ರೀತ್ಸಾಹಕಗಳ ಮೂಲಕ ಆಹಾರ ಸಂಸ್ಕರಣೆಗೆ ಬಜೆಟ್ ವಿಶೇಷ ಪೆÇ್ರೀತ್ಸಾಹ ನೀಡಬೇಕು ಎಂದು ಡಿಸಿಎಂ ಶ್ರೀರಾಮ್ ಅಧ್ಯಕ್ಷ ಮತ್ತು ಎಂಡಿ ಅಜಯ್ ಶ್ರೀರಾಮ್  ಅವರ ಅಭಿಪ್ರಾಯಗಳು ಎಲ್ಲ ಕೋನಗಳಿಂದ ಉತ್ತಮ ಪ್ರತಿಕ್ರಿಯೆ ಎನ್ನಬಹುದು.


ರೈತರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕವಾಗಿ 6,000 ರೂ. ನೇರವಾಗಿ ಪಾವತಿಸುವ ಪಿಎಂ-ಕಿಸಾನ್ ಯೋಜನೆಯನ್ನು ಉಲ್ಲೇಖಿಸಲಾಗುತ್ತಿದೆ. ಡಿಬಿಟಿ ಕಾರ್ಯವಿಧಾನ ಉತ್ತಮವಾಗಿ ಹೊಂದಿಸಬೇಕು. ಕ್ರಮೇಣ ಇತರ ಸಬ್ಸಿಡಿಗಳಿಗೆ ಬದಲಾಗಿ ರೈತರನ್ನು ಬೆಂಬಲಿಸಲು ಬಳಸಿಕೊಳ್ಳಬೇಕಾಗಿದೆ. ಹಣವನ್ನು ಹೇಗೆ ಬಳಸಬೇಕೆಂಬುದನ್ನು ರೈತರು ನಿರ್ಧರಿಸಲಿ. ಡಿಬಿಟಿಯ ಲಾಭದೊಂದಿಗೆ ರೈತರು ಉತ್ತಮ ಬೀಜ ಖರೀದಿಸಬಹುದು. ಹೊಸ ಮಾದರಿಯ ಗೊಬ್ಬರಗಳನ್ನು ಬಳಸಬಹುದು. ನೀರಿನ ಬಳಕೆಯನ್ನು ಉತ್ತಮಗೊಳಿಸಬಹುದಾಗಿದೆ.


ಅನೇಕ ಭಾರತೀಯ ಉದ್ಯಮಗಳು ಕೃಷಿ-ತಂತ್ರಜ್ಞಾನ ಜಾಗದಲ್ಲಿ ಹೂಡಿಕೆ ಮಾಡಿವೆ. ಈ ಕಂಪನಿಗಳ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಇತ್ತೀಚಿನ ತಂತ್ರಗಳನ್ನು ಅಳವಡಿಸಿಕೊಳ್ಳುವ ನೀತಿಯನ್ನು ತಜ್ಞರು ಪ್ರತಿಪಾದಿಸುತ್ತಿದ್ದಾರೆ. ಸ್ಥಳೀಯ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಯಿಂದ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಮಹತ್ವದ ಪ್ರಗತಿಯಾಗಿಲ್ಲ. ಇದು ಸಂಪನ್ಮೂಲ ಬಿಕ್ಕಟ್ಟಿನ ಕಾರಣದಿಂದಾಗಿರಬಹುದು. ತಕ್ಷಣದ ಗಮನ ಹರಿಸಬೇಕಾದ ಎರಡು ಕ್ಷೇತ್ರಗಳಲ್ಲಿ ಮೊದಲನೆಯದ್ದು ಕೃಷಿ ಸಂಶೋಧನೆಯನ್ನು ಉದ್ಯಮದ ಅಗತ್ಯತೆಗಳೊಂದಿಗೆ ಜೋಡಿಸುವುದು, ಎರಡನೆಯದಾಗಿ ಜಿಎಂ ಬೆಳೆಗಳಂತಹ ಹೊಸ-ಯುಗದ ತಂತ್ರಜ್ಞಾನಗಳಿಗೆ ಸೈದ್ಧಾಂತಿಕ ಪ್ರತಿರೋಧ ತಪ್ಪಿಸುವುದಾಗಿದೆ.


ರೈತರ ಆದಾಯವನ್ನು ಹೆಚ್ಚಿಸಲು ಜಾನುವಾರು ಸಾಕಣೆ ಒಂದು ಪ್ರಮುಖ ಆಧಾರಸ್ತಂಭವಾಗಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಒಂದು ದೊಡ್ಡ ಅಡೆತಡೆ ಎಂದರೆ ಮರಣ, ಉತ್ಪಾದಕತೆ ಮತ್ತು ಒಟ್ಟಾರೆ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ವಿವಿಧ ರೋಗಗಳ ಹಬ್ಬುವಿಕೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸಲು ಲಸಿಕೆಗಳ ಪೂರೈಕೆ ಸಮರ್ಪಕವಾಗಿಲ್ಲ. ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಅಗತ್ಯ ಮೂಲಸೌಕರ್ಯಗಳನ್ನು ರಚಿಸಲು ಈ ಬಜೆಟ್‍ನಲ್ಲಿ ಹಣದ ಅವಶ್ಯಕತೆಯಿದೆ.

ಭರವಸೆಯ ದಾರಿಯಲ್ಲಿ ಹೊಸಬೆಳಕು
2025ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪುವ ಪ್ರಧಾನ ಕನಸು ಸಾಧಿಸಲು ಭಾರತ ಇಡೀ ಪರಿಸರ ವ್ಯವಸ್ಥೆ ಬಲಪಡಿಸುತ್ತಿದೆ. ಇದಕ್ಕಾಗಿ ನಾವು ತ್ವರಿತ ರಚನಾತ್ಮಕ ಸುಧಾರಣೆಗಳನ್ನು ತರುತ್ತಿದ್ದೇವೆ. ಸುಲಲಿತವಾಗಿ ವ್ಯವಹಾರ ಮಾಡುವುದನ್ನು ರೂಢಿಸಿಕೊಳ್ಳುತ್ತಿದ್ದೇವೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿರುವುದು ಭರವಸೆಯ ದಾರಿಯಲ್ಲಿ ಹೊಸಬೆಳಕಿನ ಎನ್ನಬಹುದಾಗಿದೆ.
ತ್ವರಿತ ರಚನಾತ್ಮಕ ಸುಧಾರಣೆಗಳ ಮೂಲಕ 2025ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಸಾಧಿಸಲು ಭಾರತ ಇಡೀ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿದೆ ಎಂಬುದು ಈಗ ಬರೀ ಮಾತಲ್ಲ,ವಾಸ್ತವದ ಕನ್ನಡಿಯಾಗಿದೆ ಎನ್ನಬಹುದು.
ನಮ್ಮಲ್ಲಿನ ಗುಣಮಟ್ಟ, ಉತ್ಪಾದಕತೆ, ದಕ್ಷತೆಯಲ್ಲಿ ಬೇಕಾದ ಮಿತಿ ತರಲು ನಾವು ಏಕಕಾಲದಲ್ಲಿ ಕೆಲಸ ಮಾಡುತ್ತಿದ್ದೇವೆ. ಇದರಿಂದಾಗಿ ಭಾರತೀಯ ಉದ್ಯಮದ ರಫ್ತು ಜಾಲ ವಿಸ್ತರಿಸಿ, ಅದು ದೊಡ್ಡದಾಗಿದೆ ಉತ್ತಮ ಮತ್ತು ವಿಶಾಲವಾಗಿ ಬೆಳೆಯಲಿದೆ ಎಂದರು.ಜಾಗತಿಕವಾಗಿ ಭಾರತೀಯ ಉತ್ಪನ್ನಗಳ ವ್ಯಾಪ್ತಿ ಹೆಚ್ಚಿಸಲು ಹೊಸ ಮಾರುಕಟ್ಟೆಗಳನ್ನು ಆಕ್ರಮಣಕಾರಿಯಾಗಿ ಅನ್ವೇಷಿಸಲಾಗುತ್ತಿದೆ. ಕೋವಿಡ್ ಸೋಂಕು ತನ್ನಿಂದ ಉಂಟಾಗುವ ಅಡೆತಡೆಗಳ ದೊಡ್ಡ ಕಾರ್ಯಗಳನ್ನು ಎದುರಿಸಲು ಒಬ್ಬರು ಧೈರ್ಯ ಮಾಡಬೇಕಾಗಿದೆ ಎಂಬುದನ್ನು ಎಲ್ಲರಿಗೂ ಅರಿವು ಮೂಡಿಸಿರುವುದು ನಿಜ.
ಈ ಕೆಲಸ ಮಾಡದಿದ್ದರೆ ನಾವು ಜಾಗತಿಕ ನಾಯಕರಾಗುವ ಸಾಮಥ್ರ್ಯ ಕಳೆದುಕೊಳ್ಳಬಹುದು. ಇದು ಆತ್ಮನಿರ್ಭರ ಭಾರತನ ಹಿಂದಿನ ತತ್ತ್ವವಾಗಿದೆ. ಇದು ಬಾಗಿಲು ಮುಚ್ಚಿ ಕೂರುವ ವಿಷಯವಲ್ಲ. ಭಾರತದ ಸಾಮಥ್ರ್ಯ ಮತ್ತು ಯೋಗ್ಯತೆಯ ಜೊತೆಗೆ ವೇಗ, ಕೌಶಲ್ಯ ಮತ್ತು ಪ್ರಮಾಣದಲ್ಲಿ ಸ್ಥರವಾದ ವಿಶಾಲವಾದ ಬಾಗಿಲು ತೆರೆಯುವ ಉದ್ದೇಶವಿದೆ.
2025ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪುವ ಪ್ರಧಾನ ಕನಸು ಸಾಧಿಸಲು ಭಾರತ ಇಡೀ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿದೆ. ಇದಕ್ಕಾಗಿ ನಾವು ತ್ವರಿತ ರಚನಾತ್ಮಕ ಸುಧಾರಣೆಗಳನ್ನು ತರುತ್ತಿದ್ದೇವೆ. ಸುಲಲಿತವಾಗಿ ವ್ಯವಹಾರ ಮಾಡುವುದನ್ನು ರೂಢಿಸಿಕೊಳ್ಳುತ್ತಿದ್ದೇವೆ. ಭಾರತ ವೇಗವಾಗಿ ಬೆಳೆಯುತ್ತಿದೆ ಮತ್ತು ವಿಶ್ವದಾದ್ಯಂತ ಭಾರತೀಯರಿಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತದೆ. ಪ್ರಪಂಚದಾದ್ಯಂತದ ನಮ್ಮ ಸಹೋದರ ಸಹೋದರಿಯರು ಈ ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ಮೊದಲಿಗರಾಗಬೇಕೆಂಬುದು ಎಂಬುದು ಪ್ರಾಜ್ಞರ ಸದಾಶಯವಾಗಿದೆ.

ಭಾರತದ ಆರ್ಥಿಕತೆಯ ವಿಶೇಷ ಸಾಧನೆ
ಜಗತ್ತಿನ 500 ಪ್ರಮುಖ ಕಂಪೆನಿಗಳ ಪೈಕಿ ಭಾರತದ 11 ಖಾಸಗಿ ಕಂಪೆನಿಗಳು ಸ್ಥಾನ ಪಡೆದಿವೆ. ಈ ಪಟ್ಟಿಯಲ್ಲಿ ಭಾರತ ಜಗತ್ತಿನ ಪ್ರಮುಖ ಕಂಪೆನಿಗಳ ಪಟ್ಟಿಯಲ್ಲಿ 10 ನೇ ಶ್ರೇಯಾಂಕ ಪಡೆದ ವಿಶೇಷ ಸಾಧನೆ ಮಾಡಿ ಛಾಪು ಮೂಡಿಸಿದೆ.
ಈ 11 ದೇಶೀಯ ಕಂಪೆನಿಗಳ ಒಟ್ಟು ಮೌಲ್ಯ ಶೇ.14 ರಷ್ಟು ಅಭಿವೃದ್ಧಿಯಾಗಿದ್ದು (805 ಬಿಲಿಯನ್ ಅಮೆರಿಕನ್ ಡಾಲರ್) ಅಥವಾ ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ ಭಾರತದ ಒಟ್ಟಾರೆ ಆರ್ಥಿಕತೆಯ ಮೌಲ್ಯದ ಮೂರನೇ ಒಂದರಷ್ಟು ಎನ್ನಬಹುದು.
ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಇಂಡಸ್ಟ್ರೀಸ್ ಕಳೆದ ಡಿಸೆಂಬರ್‍ಗೆ ಶೇ 20.5 ರಷ್ಟು ಮೌಲ್ಯ ಹೆಚ್ಚಿಸಿಕೊಂಡಿದೆ. ಈ ಮೂಲಕ ಜಾಗತಿಕವಾಗಿ 54ನೇ ಸ್ಥಾನ ಪಡೆದಿದೆ ಎಂದು ವರದಿ ಹೇಳುತ್ತಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮೌಲ್ಯವೂ ಕೂಡಾ ಶೇ 30 ರಷ್ಟು ಏರಿಕೆಯಾಗಿದ್ದು ಜಾಗತಿಕವಾಗಿ 73ನೇ ಸ್ಥಾನವನ್ನು ಪಡೆದಿದೆ. ಈ ಮೂಲಕ ಕಂಪೆನಿ ಎರಡನೇ ಮಹತ್ವದ ಭಾರತೀಯ ಸಂಸ್ಥೆಯೆಂದು ಪರಿಗಣಿಸಲ್ಪಟ್ಟಿದೆ.
ಹೆಚ್‍ಡಿಎಫ್‍ಸಿ ಬ್ಯಾಂಕ್ ಮೌಲ್ಯವು ಶೇ 11.5 ರಷ್ಟು ಏರುಗತಿ ಕಂಡಿದ್ದು ಉಳಿದಂತೆ ಹಿಂದೂಸ್ತಾನ ಲೆವರ್ ಶೇ 3.3, ಇನ್ಫೋಸಿಸ್ ಶೇ 56, ಕೋಟಕ್ ಮಹೀಂದ್ರಾ ಬ್ಯಾಂಕ್ ಶೇ 16.6 ರಷ್ಟು ಗಳಿಕೆ ಕಂಡಿದೆ.ಐಸಿಐಸಿಐ ಬ್ಯಾಂಕ್‍ನ ಒಟ್ಟು ಮೌಲ್ಯ 0.5 ರಷ್ಟು ಕುಸಿತ ದಾಖಲಿಸಿದೆ. ಈ ಮೂಲಕ ಒಟ್ಟು ರ್ಯಾಂಕಿಂಗ್‍ನಲ್ಲಿ 316 ಸ್ಥಾನಕ್ಕೆ ಕುಸಿದಿದೆ. ಇದೇ ರೀತಿ ದೇಶದ ಮತ್ತೊಂದು ಪ್ರಮುಖ ಖಾಸಗಿ ಕಂಪೆನಿ ಐಟಿಸಿ ಗಳಿಕೆಯೂ ಕೂಡ ಶೇ 22 ರಷ್ಟು ಕುಸಿದಿದೆ. ಈ ಮೂಲಕ 500 ಕಂಪನಿಗಳ ಪಟ್ಟಿಯಲ್ಲಿ 480ರ ಸ್ಥಾನ ಪಡೆದಿದೆ.
ಭಾರತದಲ್ಲಿ ಮುಖ್ಯ ಕಚೇರಿ ಹೊಂದಿಲ್ಲದ 239 ಕಂಪೆನಿಗಳು ದೇಶದ ಹಣಕಾಸು ರಾಜಧಾನಿ ಮುಂಬೈನಲ್ಲಿ ಪ್ರಾದೇಶಿಕ ಕಚೇರಿಗಳನ್ನು ಹೊಂದಿವೆ. ಪ್ರತಿಷ್ಟಿತ ಪಟ್ಟಿಯಲ್ಲಿರುವ ಭಾರತದ 11 ಕಂಪೆನಿಗಳ ಪೈಕಿ 7 ಮುಂಬೈನಲ್ಲೇ ಮುಖ್ಯಕಚೇರಿಯನ್ನು ಹೊಂದಿ ತನ್ನ ವ್ಯವಹಾರಗಳನ್ನು ಜಾಗತಿಕವಾಗಿ ನಿಯಂತ್ರಿಸುತ್ತಿವೆ. ಇವುಗಳನ್ನು ತಲಾ ಒಂದೊಂದು ಕಚೇರಿಗಳು ಪುಣೆ, ಬೆಂಗಳೂರು, ಕೊಲ್ಕತ್ತಾ ಹಾಗು ನವದೆಹಲಿಯಲ್ಲಿವೆ.ಈ ವರದಿಯ ಪ್ರಕಾರ, ಷೇರು ಮಾರುಕಟ್ಟೆಯ ಮೌಲ್ಯವು ಸಾಂಕ್ರಾಮಿಕ ರೋಗದ ಹೊರತಾಗಿಯೂ ಈ ಅವಧಿಯಲ್ಲಿ ಶೇ 12 ರಷ್ಟು ವೃದ್ಧಿಸಿದೆ.ಇದನ್ನೂ ಓದಿ: ಕುಸಿದ ಕೆಟ್ಟ ಸಾಲ: ಡಿಸೆಂಬರ್? ತ್ರೈಮಾಸಿಕದಲ್ಲಿ ಕರ್ನಾಟಕ ಬ್ಯಾಂಕ್ ಗಳಿಕೆ ಶೇ.10ರಷ್ಟು ಏರಿಕೆ