ತಾಂತ್ರಿಕತೆಯನ್ನು ಮೈಗೂಡಿಸಿಕೊಂಡು ಭವಿಷ್ಯ ನಿರ್ಮಿಸಿಕೊಳ್ಳಿ

ಸಿವ್ಹಿಲ್ ಇಂಜನಿಯರಿಂಗ್
ಸಿವ್ಹಿಲ್ ಇಂಜಿನಿಯರಿಂಗ್ ವೃತ್ತಿಯು ಇಂಜಿನಿರಯರಿಂಗ್ ವೃತ್ತಗಳಲ್ಲಿಯೇ ಅತ್ಯಂತ ಹಳೆಯದು. ಇತ್ತೀಚಿನ ದಿನಮಾನಗಳಲ್ಲಿ ಸಿವ್ಹಿಲ್ ಇಂಜಿನಿಯರರು ಹೆಚ್ಚು ಹೆಚ್ಚು ಮಹತ್ವ ಪಡೆಯುತ್ತಿದ್ದಾರೆ ಮತ್ತು ದೇಶದ ಪ್ರಗತಿಯಲ್ಲಿ ಹೆಚ್ಚು ಭಾಗಗಳಾಗುತ್ತಿದ್ದಾರೆ.
ಸಿವ್ಹಿಲ್ ಇಂಜಿನಿಯರರು ರಸ್ತೆಗಳು, ಬ್ರಿಜ್‍ಗಳನ್ನು ಸುರಂಗ ಮಾರ್ಗಗಳು, ಕಟ್ಟಡಗಳು, ವಿಮಾನ ನಿಲ್ದಾಣಗಳು, ಬಂದರುಗಳು, ಡ್ಯಾಂಗಳನ್ನು ನೀರಾವರಿ ಕುಡಿಯುವ ನೀರಿನ ಯೋಜನೆಗಳಂತಹ ದೊಡ್ಡ ದೊಡ್ಡ ಯೋಜನೆಗಳನ್ನು ವಿನ್ಯಾಸಗೊಳಿಸಿ, ನಿರ್ಮಿಸಿ ಉಸ್ತುವಾರಿ ಮಾಡಿ ಸರಿಯಾಗಿ ನಿರ್ವಹಣೆ ಕೂಡ ಮಾಡುತ್ತಿದ್ದಾರೆ.

ಪ್ರತಿಯೊಂದು ಹೆಜ್ಜೆಗೂ ಸಿವ್ಹಿಲ್ ಇಂಜಿನಿಯರುಗಳ ಕೊಡುಗೆಗಳನ್ನು ಕಾಣಬಹುದಾಗಿದೆ. ಈಗ ನಾವಿರುವಂತಹ ಸ್ತಳ ತದ ನಂತರ ನಾವು ಹೋಗಲಿರುವ ಸ್ಥಳ ಅದು ಮನೆಯೇ ಆಗಿರಲಿ ಅಥವಾ ಹಾಸ್ಟೇಲ್, ರೆಸ್ಟೋರೆಂಟ್, ಸಿನೇಮಾ ಹಾಲ್, ಮಾಲ್, ಗುಡಿ, ಚರ್ಚ, ಮಸೀದಿ, ಗುರುದ್ವಾರವೇ ಆಗಿರಲಿ ಇವೆಲ್ಲವೂ ನಿರ್ಮಾಣಗೊಂಡಿದ್ದು ಸಿವ್ಹಿಲ್ ಇಂಜಿನಿಯರುಗಳಿಂದಲೇ.

ನಾವು ಬೆಳಿಗ್ಗೆ ಎದ್ದಾಕ್ಷಣ ಉಪಯೋಗಿಸಲ್ಪಡುವ ಬಾಥ್‍ರೂಮ್, ಅಲ್ಲಿನ ನೀರಿನ ಪೂರೈಕೆ, ಚರಂಡಿ ವ್ಯವಸ್ಥೆ, ನದಿಗಳಿಗೆ ಡ್ಯಾಂಕ ಕಟ್ಟಿ, ಅಲ್ಲಿ ನೀರನ್ನು ಸಂಗ್ರಹಿಸಿ ತದನಂತರ ಶುದ್ದಿಕರಿಸಿ ಜನತೆಗೆ ಪೂರೈಸುವ ವ್ಯವಸ್ಥೆ, ಚರಂಡಿ ನೀರನ್ನು ಶುಚಿಗೊಳಿಸಿ ಪುನರ್ಬಳಕೆ ಮಾಡುವ ಇಲ್ಲವೆ ಪುನಃ ನದಿಗೆ ಬಿಡುವ ವ್ಯವಸ್ಥೆ ಇವೆಲ್ಲ ನಿರ್ಮಿತವಾದದ್ದು ಸಿವ್ಹಿಲ್ ಇಂಜಿನಿಯರಿಂಗ ರೈತರ ಭೂಮಿಗೆ ನೀರುಣಿಸಲು ಡ್ಯಾಂಗಳನ್ನು ನಿರ್ಮಿಸಿ ನೀರು ಹರಿಸಲು ಕಾಲುವೆಗಳನ್ನು ನಿರ್ಮಿಸಿರವರು ಇವರೇ ನಾವು ಉಪಯೋಗಿಸುವ ವಿದ್ಯುತ್ ಶಕ್ತಿ ಬರುವುದು ಜಲವಿದ್ಯುತ್ ಯೋಜನೆಯಾಗಿರಲಿ, ಶಾಖ ವಿದ್ಯುತ್ ಯೋಜನೆಯಾಗಿರಲಿ, ಅಣುವಿದ್ಯುತ್ ಯೋಜನೆಯಾಗಲಿ, ಶಾಖ ವಿದ್ಯುತ್ ಯೋಜನೆಯಾಗಿರಲಿ, ಅಣುವಿದ್ಯುತ್ ಯೋಜನೆಯಾಗಿರಲಿ, ಅಥವಾ ಪವನ್ ವಿದ್ಯುತ್ ಯೋಜನೆಯಾಗಿರಲಿ, ಅವುಗಳನ್ನು ನಿರ್ಮಾಣ ಮಾಡಿದವರು ಸಿವ್ಹಿಲ್ ಇಂಜಿನಿಯರರು ನಾವು ಮನೆಯಿಂದಾಗಲೀ ಬೇರೆ ಎಲ್ಲಿಯಾದರೂ ಹೊರಗಡೆ ಕಾಲಿಟೊಡನೆ ಉಪಯೋಗಿಸುವ ರಸ್ತೆ, ಬ್ರಿಜ್, ಪ್ಲಾಯ್ ಓವರ್ ಬಸ್ ನಿಲ್ದಾಣ, ರೈಲು ನಿಲ್ದಾಣ, ವಿಮಾನ ನಿಲ್ದಾಣ, ರೇಲ್‍ದಾರಿಗಳು ಇವೆಲ್ಲವೂ ಸಿವ್ಹಿಲ್ ಇಂಜಿನಿಯರಿಂಗ್‍ದ ಕೊಡುಗೆಗಳೇ. ಪ್ರಾಚೀನ ಕಾಲದ ಅದ್ಬುತಗಳಿಂದ ಈಜಿಪ್ತಿನ ಪಿರಾಮಿಡ್ ಬ್ಯಾಬಿಲೋನಿಯಾದ ತೂಗು ಉದ್ಯಾನಗಳು, ಅಲೆಕ್ಸಾಂಡ್ರಿಯಾದ ದೀಪಸ್ಥಂಭ ಇತ್ಯಾದಿಗಳನ್ನು ಅಧುನಿಕ ಕಾಲದ ಅದ್ಭುತ್‍ಗಳಾದ ಚೀನಾದ ಬೃಹತ್ ಗೋಡೆ, ತಾಜ್ ಮಹಲ್, ದುಬೈನ ಪಾಮಜಲಂಡ ಎರಡು ಸಮುದ್ರಗಳನ್ನು ಜೋಡಿಸುವ ಸುಯೋಜ್ ಕಾಲುವೆ, ದುಬೈನ ಬುರ್ಜ ಖಲೀಫಾ ಇತ್ಯಾದಿಗಳ ನಿರ್ಮಾತೃರೇ ಸಿವ್ಹಿಲ್ ಇಂಜಿನಿಯರರು ದಿನನಿತ್ಯದ ಜೀವನವನ್ನು ನಾವುಗಳು ಸರಾಗವಾಗಿ ಸಾಗಿಸುವಂತ ಅನುಕೂಲಿಸಿ ಕೊಟ್ಟ ಸಿವ್ಹಿಲ್ ಇಂಜಿನಿಯರುಗಳ ಕೊಡುಗೆ ಅಪಾರವಾದ್ದಾಗಿದೆ.

ಮೆಕ್ಯಾನಿಕಲ್ ಇಂಜಿನಿಯರಿಂಗ್

ಮೆಕ್ಯಾನಿಕಲ್ ಇಂಜಿನಿಯರಿಂಗ್ ನಿಜವಾಗಿಯೂ ಒಂದು ಅದ್ಬುತವಾದ ಕೋರ್ಸ ಇದ್ದು, ಇದನ್ನು ನಾವುಗಳು ಎಲ್ಲಾ ಕೋರ್ಸುಗಳ ಒಡೆಯ (ಮಾಸ್ಟರ್) ಎನ್ನಲು ಅಡ್ಡಿ ಇಲ್ಲ. ಏಕೆಂದರೆ ಇಂದಿನ ದಿನಮಾನಗಳಲ್ಲಿ ಮೆಕ್ಯಾನಿಕಲ್ಸ್ ಕೋರ್ಸನ್ನು ಮಾಡಿದ ವ್ಯಕ್ತಿಯು ಯಾವುದೆ ಫೀಲ್ಡ್‍ನಲ್ಲಿ ಕೆಲಸ ಮಾಡಲು ಅರ್ಹನೆನಿಸಿಕೊಂಡಿರುತ್ತಾರೆ.

ಮೆಕ್ಯಾನಿಕಲ್ ಎಂಬುದು ಮುಖ್ಯವಾಗಿ ಕಾರ್ಖಾನೆಗಳಿಗೆ ಸಂಬಂಧಿಸಿದ್ದು ಕಾರ್ಖಾನೆಗಳಲ್ಲಿ ಕೆಲಸ ಮಡಲು ಒಳ್ಳೊಳ್ಳೆಯ ಅವಕಾಶಗಳಿವೆ. ನಂತರ ಈ ಕೋರ್ಸ ಮಾಡಿದ ವ್ಯಕ್ತಿಯು ಅಲ್ಪ ಅನುಭವದಿಂದ ಸಿವ್ಹಿಲ್ ಲೈನನಲ್ಲಿ ಕಾಂಟ್ರಾಕ್ಟ್‍ಕೆಲಸ ಮಾಡಿ ಮುಂದೆ ಬಂದವರನ್ನು ನಾನು ಕಂಡಿರುತ್ತೇನೆ. ಈ ಕೋರ್ಸಿನ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳು ಇಲೇಕ್ಟ್ರಿಕಲ್ ಮೆಕ್ಯಾಟ್ರಾನಿಕ್ಸ್, ಆಟೋ ಮೊಬೈಲ್, ಸಿ.ಎನ್.ಸಿ. ಇಂತಹ ವಿಷಯಗಳನ್ನು ಕಲಿಯುವುದರಿಂದ ಇವರು ಕಾರ್ಖಾನೆಗಳಲ್ಲದೇ ಆಟೋ ಮೊಬೈಲ್, ಇಲೆಕ್ಟ್ರಾನಿಕ್ಸ ಮತ್ತು ಇಲೆಕ್ಟ್ರೀಕಲ್ ಕ್ಷೇತ್ರಗಳಲ್ಲೂ ಕೆಲಸ ಮಾಡಲು ಅರ್ಹರಾಗಿದ್ದು ಜೊತೆಗೆ ಕೆಲವು ಸಾಫ್ಟ್‍ವೇಯರ್ ಕಂಪನಿಯಗಳಲ್ಲಿ ಗೂಪ್ ಲೀಡರ್ಸಗಳಾಗಿ ಕೆಲಸ ಮಾಡುತ್ತಿರುವವರನ್ನು ನಾವು ಕಾಣಬಹುದಾಗಿದೆ. ಆದ್ದರಿಂದಲೇ ಈ ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೋರ್ಸ ನನ್ನ ದೃಷ್ಟಿಯಲ್ಲಿ ಎಲ್ಲಾ ಕೋರ್ಸುಗಳಿಗೆ ಒಡೆಯನಂತೆ ಕಾಣಿಸುತ್ತದೆ. ಈ ಕೋರ್ಸನ್ನು ಪೂರ್ಣಗೊಳಿಸಿ ಹಲವು ವರ್ಷಗಳ ಅನುಭವದ ನಂತರ ಸ್ವತಃ ಕಾರ್ಖಾನೆಗಳನ್ನು ಸ್ಥಾಪಿಸಿ ಸಾಕಷ್ಟು ಕುಟುಂಬಗಳಿಗೆ ಉದ್ಯೋಗ ನೀಡಿ ಆಸರೆಯಾಗಿರುವ ಉದಾಹರಣೆಗಳು ಸಾಕಷ್ಟಿವೆ.

ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಸಾಕಷ್ಟು ಲೋಹಗಳು ಹಾಗೂ ಅವುಗಳ ಗುಣ ಧರ್ಮಗಳ ಬಗ್ಗೆ ಅರಿತು ಕೊಳ್ಳುವವರು ಹಾಗೂ ಸಾಕಷ್ಟು ಉಪಕರಣಗಳದಂತಹ ವೆಲ್ಡಿಂಗ್, ಡ್ರಿಲ್ಲಿಂಗ್, ಮಿಲ್ಲಿಂಗ್, ಗ್ರೇಂಡಿಂಗ್ ಶೇಪರ್ ಲೇಡ್ ಮಶೀನ್‍ಗಳ ಉಪಯೋಗ ಮತ್ತು ಅವುಗಳ ಮೇಲೆ ಉತ್ಪಾದಿಸುವುದು ಹೇಗೆ ಎಂಬುದನ್ನು ಕಲಿಯುವರು. ಈ ಎಲ್ಲ ಮಶೀನುಗಳು ಸಣ್ಣ ಕೈಗಾರಿಗಳನ್ನು ಸ್ಥಾಪಿಸುವವರಿಗಂತೂ ಸಾಕಷ್ಟು ಉಪಯೋಗಿ. ಮೆಕ್ಯಾನಿಕಲ್ ವಿಭಾಗದ ವ್ಯಾಪ್ತಿಯ ಒಂದು ಚಿಕ್ಕ ಗುಂಡು ಪಿನ್‍ನಿಂದ ಹಿಡಿದು ದೊಡ್ಡ ದೊಡ್ಡ ಯಂತ್ರಗಳು ಕಾರು, ಲಾರಿ, ಬೈಕು, ಹೆಲಿಕ್ಯಾಫ್ಟರ್ ವಿಮಾನ ಹಡಗು, ರಸಾಯನಿಕ ಸಕ್ಕರೆ ಕಾರ್ಖಾನೆ, ಬಟ್ಟೆಗಳಿಂದ ಹಿಡಿದು ಚಂದ್ರನ ಮೇಲೆ ಆಕಾಶPಕ್ಕೆ ನೆಗೆಯುವ ಉಪಗ್ರಹಗಳ ಉಪಕರಣಗಳೆಲ್ಲವೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಪ್ತಿಗೆ ಬರುತ್ತವೆ.

ಮೆಕ್ಯಾನಿಕಲ್ ಇಂಜಿನಿಯರಿಂಗ್ ಅತ್ಯಂತ ವಿಶಾಲವಾದ ಹಾಗೂ ಹಳೆಯ ಇಂಜಿನಿಯರ್ ಕ್ಷೇತ್ರಗಳಲ್ಲೊಂದಾಗಿದೆ. ಇದನ್ನು ಇನ್ನಿತರ ಎಲ್ಲ ಇಂಜಿನಿಯರಿಂಗ್ ಕ್ಷೇತ್ರಗಳ ತಾಯಿಯೆಂದು ಕರೆಯುವರು. ಏಕೆಂದರೆ ಇತರೇ ಯಾವುದೇ ಇಂಜಿನಿಯರಿಂಗ ಕ್ಷೇತ್ರಗಳು ಉಪಯೋಗಿಸುವ ಪ್ರತಿಯೊಂದು ಉಪಕರಣ ಹಾಗೂ ವಸ್ತುಗಳನ್ನು ತಯಾರಿಸಿದ್ದು ಮೆಕ್ಯಾನಿಲ್ ಇಂಜಿನಿಯರರೇ, ಪ್ರತಿದಿನ ನಾವು ಮೆಕ್ಯಾನಿಕಲ್ ಇಂಜಿನಿಯರರಿಂದ ನಿರ್ಮಿತವಾದ ಅತೀ ಉಪಕರಣ ಹಾಗೂ ವಸ್ತುಗಳನ್ನು ಉಪಯೋಗಿಸುತ್ತವೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಇಲ್ಲದಿದ್ದರೆ ನಾವು ಉಪಯೋಗಿಸುತ್ತಿರುವ ವಾಹನಗಳು, ಜನರೇಟರ್, ರೆಪ್ರೀಜಿರೇಟರ್, ಎರ್ ಕಂಡಿಷನ್, ರೇಲ್ವೆ, ಹೆಲಿಕ್ಯಾಫ್ಟರ್, ವಿಮಾನ ಇತ್ಯಾದಿಗಳಾವವೂ ಇರುತ್ತಿರಲಿಲ್ಲ. ನಾವು ತೊಡುವಂತಹ ಬಟ್ಟೆಗಳು ಉಣ್ಣುವ ಆಹಾರ ಪದಾರ್ಥಗಳು ಮಲಗುವ ಮಂಚಗಳು ಸಹ ಮೆಕ್ಯಾನಿಕಲ್ ಇಂಜನಿಯರರು ತಯಾರಿಸಿದ ಯಂತ್ರ ಸಾಮಗ್ರಿಗಳಿಂದಲೇ ಚಂದ್ರಯಾನ, ಮಂಗಳಯಾನದ ರಾಕೇಟ್ ಹಾಗೂ ಇತರ ಉಪಕರಣಗಳನ್ನು ತಯಾರಿಸಿದವರು ಮೆಕ್ಯಾನಿಕಲ್ ಇಂಜಿನಿಯರರೇ, ಮೆಕ್ಯಾನಿಕಲ್ ಇಂಜಿನಿಯರಿಂಗ್ ತಂತ್ರ ಜ್ಞಾನವು ಇನ್ನಿತರ ಎಲ್ಲಾ ತಂತ್ರ ಜ್ಞಾನಗಳಿಗೆ ತಾಯಿಯಾಗಿ ಅವುಗಳಿಗೆ ಅವಶ್ಯಕವಾದ ಉಪಕರಣ ಸಾಮಗ್ರಿಗಳನ್ನು ತಯಾರಿಸಿ ಕೊಟ್ಟು ಅವುಗಳ ಅಭಿವೃದ್ಧಿಗಾಗಿ ಕೈ ಜೋಡಿಸುತ್ತವೆ.

ಡಿಪ್ಲೋಮಾ ಮೆಕ್ಯಾನಿಕಲ್ ಕಲಿತ ವಿದ್ಯಾರ್ಥಿಗಳು ಮೇಲ್ವಿಚಾರಕ (ಸುಪರ್‍ವ್ಹೇಜರ್) ಪ್ರೋಡಕ್ಷನ್ ಇಂಜಿನಿಯರ್, ಮೆಂಟೆಸಿನ್ಸ ಇಂಜಿನಿಯರ ಡಿಸೈನ್ ಇಂಜಿನಿಯರ್, ಪ್ರಾಬ್ರಿಕೇಶನ್ ವಿಭಾಗ ಮಾರ್ಕೇಟಿಂಗ್ ಮ್ಯಾನೇಜರ್, ಸೇಲ್ಸ್ ಮ್ಯಾನೇಜರ್ ಇತ್ಯಾದಿ ಹುದ್ದೆಗಳಲ್ಲೆಲ್ಲಾ ಕೆಲಸ ಮಾಡಲು ಅವಕಾಶಗಳಿವೆ. ಅದು ಅಲ್ಲದೆ ಹಲವು ವರ್ಷಗಳ ಅನುಭವ ಪಡೆದು ಮೆಕ್ ಇನ್ ಇಂಡಿಯಾ ಸ್ಕೀಮ್‍ನಲ್ಲಿ ಸರ್ಕಾರದಿಂದ ಧನ ಸಹಾಯ ಪಡೆದು ಸ್ವಂತ ಉದ್ಯೋಗದೊಂದಿಗೆ ಹಲವು ಕುಟುಂಬಗಳಿಗೆ ದಾರಿದೀಪವಾಗಬಹುದು.

 

 

ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್

ನಮ್ಮ ಜೀವನದ ಪ್ರತಿಯೊಂದು ಕ್ಷೇತ್ರಗಳಲ್ಲಿ ಇಲೆಕ್ಟ್ರಾನಿಕ್ಸ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ಪಾತ್ರವು ತುಂಬಾ ಮಹತ್ವ ಪೂರ್ಣವುಳ್ಳದ್ದಾಗಿದೆ. ಇನ್ನೀತರ ಇಂಜಿನಿಯರಿಂಗ್ ಕ್ಷೇತ್ರಗಳು ಒಂದಲ್ಲಾ ಒಂದು ರೀತಿಯಲ್ಲಿ ಈ ಕ್ಷೇತ್ರದ ಮೇಲೆ ಅವಲಂಬಿತವಾಗಿವೆ. ಈ ಕ್ಷೇತ್ರಗಳಷ್ಟೆ ಅಲ್ಲಾ ನಾವು ಸಹಿತ ಯಾವುದೇ ಇಲೆಕ್ಟ್ರಾನಿಕ್ ಗ್ಯಾಜಟ್ ಉಪಕರಣಗಳನ್ನು ಉಪಯೋಗಿಸದೇ ನಮ್ಮ ದಿನನಿತ್ಯದ ಜೀವನವನ್ನು ಸರಾಗವಾಗಿ ಹಾಗೂ ಅಚ್ಚುಕಟ್ಟಾಗಿ ಸಾಗಿಸುವುದು. ಮೊಬೈಲ ಮತ್ತು ಟಿ.ವಿ. ಮುಖವನ್ನೇ ಮಲಗುವಾಗ ಸಹ ನಾವು ನೋಡುವುದು ಅವುಗಳನ್ನು ಅವುಗಳಲ್ಲ ಇಲೆಕ್ಟ್ರಾನಿಕ್ಸ ಹಾಗೂ ಕಮ್ಯುನಿಕೇಶನ್ ಇಂಜಿನಿಯವರ ಕೊಡುಗೆಗಳೇ ಕಂಪ್ಯೂಟರ್, ಟೆಲಿವಿಜನ್, ಮೊಬೈಲ್ ಪೋನ್, ಸ್ಯಾಟ್‍ಲೈಟ್, ಮೈಕೋ ಪ್ರೊಸೆಸರ್‍ಗಳಂತಹ ವಿಎಲ್‍ಎಸ್‍ಐ ಉಪಕರಣಗಳು ಟ್ರಾನ್ಸಿಸ್ಟರಗಳಂತಹ ಸೆಮಿ ಕಂಡಕ್ಟರ್ ಉಪಕರಣಗಳು ಇತ್ಯಾದಿಗಳೆಲ್ಲಾ ಈ ಇಂಜಿನಿಯರಿಂಗ್ ಕ್ಷೇತ್ರದ ಉತ್ಪನ್ನಗಳೇ ಈ ಕ್ಷೇತ್ರವು ನಮ್ಮ ದೈನಂದಿನ ಅಧುನಿಕ ಅವಶ್ಯಕತೆಗಳನ್ನು ಪೂರೈಸಿ ಜೀವನವನ್ನು ಸುಗಮವಾಗಿ ಸುಸೂತ್ರವಾಗಿ ಸಾಗಿಸಲು ನೆರವಾಗಿದೆ.

ವಿಧವಿಧದ ವಿನೂತನ ಇಲೆಕ್ಟ್ರಾನಿಕ್ ಉಪಕರಣ ಹಾಗೂ ಸಂಪರ್ಕ ಸಾಧನಗಳ ಸಂಶೋಧತಿ ವಿನ್ಯಾಸ ಅಭಿವೃದ್ದಿ ಹಾಗೂ ನಿರ್ಮಾಣಗಳಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರರು ಸದರ ನಿರಂತರಾಗಿರುತ್ತಾರೆ. ಟ್ರ್ಯಾನ್ಸಿಸ್ಟರ್, ಸರ್ಕಿಟ್, ಸೆನ್ಸಾರ್, ಐ ಪೋನ್, ಐಪ್ಯಾಡ, ಕಂಪ್ಯೂಟರ ಸಿಟಿ ಲೈಟ್ ಇತ್ಯಾದಿಗಳ ಒಳವಿನ್ಯಾಸ ಹಾಗೂ ಕಾರ್ಯನಿರ್ವಹಣೆಗಳಲ್ಲಿ ಅಭಿರುಚಿಯುಳ್ಳವರಿಗೆ ಇದು ಅತ್ಯಂತ ಸೂಕ್ತ ಕ್ಷೇತ್ರ. ಇದು ನಿರಂತರವಾಗಿ ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ಹರಿತ್ ಕ್ಷೇತ್ರವಾಗಿದ್ದು, ಎಲ್ಲ ಉದ್ಯಮಗಳಲ್ಲಿ ತನ್ನ ವರ್ಚಸ್ಸನ್ನು ಹೊಂದಿದೆ. ಈ ಕ್ಷೇತ್ರವು ಶಿಕ್ಷಣ ಆರೋಗ್ಯ ಉದ್ದಿಮೆಗಳು ರಾಷ್ಟ್ರೀಯ ಭದ್ರತೆ ಹಾಗೂ ರಕ್ಷಣೆ ಇನ್‍ಸ್ಟ್ರಾಮೆಂಟೇಶನ್ ಇತ್ಯಾದಿ ಕ್ಷೇತ್ರಗಳಲ್ಲಿ ವಿನಿಯೋಗಿಸಲ್ಪಟ್ಟಿದ್ದು ಅವುಗಳಲ್ಲಿ ತನ್ನ ಮಹತ್ವ ಹಾಗೂ ಪ್ರಭಾವವನ್ನು ಮರೆದಿದೆ. ಈ ಕ್ಷೇತ್ರದಲ್ಲಿ ಕಲಿತ ವಿದ್ಯಾರ್ಥೀಗಳಿಗೆ, ಸೋನಿ, ಇಂಟೆಲ್, ಬಿ.ಇ.ಎಲ್.,ಡಿ.ಆರ್.ಡಿವೋ, ಬಿಎಸ್‍ಎನ್‍ಎಲ್ ಇತ್ಯಾದಿ ಪ್ರತಿಷ್ಠಿತ ಕಂಪನಿಗಳಲ್ಲಿ ವಿಪುಲ ಉದ್ಯೋಗಾವಕಾಶಗಳಿವೆ. ಇದರಲ್ಲಿ ಸ್ಮಾಟ ಸಿಟಿ, ಡಿಜಿಟಲ್ ಇಂಡಿಯಾದಂತಹ ಪ್ರಯೋಜನಗಳಲ್ಲಿ ನಮ್ಮ ದೇಶದ ಅಭಿವೃದ್ದಿಯಲ್ಲಿ ತಮ್ಮನ್ನು ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಬಹುದಾಗಿದೆ.

ಕಂಪ್ಯೂಟರ್ ಸೈನ್ಸ್ ವಿಭಾಗ :

ಇಂದಿನ ಸಮಾಜದಲ್ಲಿ ಮನುಷ್ಯನ ಪ್ರತಿಯೊಂದು ಕಾರ್ಯಕ್ಷೇತ್ರಗಳಲ್ಲಿ ಕಂಪ್ಯೂಟರ್ ಹಾಸು ಹೊಕ್ಕಾಗಿದೆ. ಹಾಗಾಗಿ ಕಂಪ್ಯೂಟರ್ ಶಿಕ್ಷಣ ಇವತ್ತಿನ ಮೂಲಭೂತ ಅಗತ್ಯಗಳಲ್ಲಿ ಒಂದಾಗಿರುತ್ತದೆ. ಕಂಪ್ಯೂಟರ್ ಜ್ಞಾನವಿಲ್ಲದ ವ್ಯಕ್ತಿ ಈ ದಿನಗಳಲ್ಲಿ ಅಶಿಕ್ಷಿಣ ಎಂದು ಪರಿಗಣಿಸಲಾಗುತ್ತದೆ.

ಕಂಪ್ಯೂಟರ್ (ಗಣಕಯಂತ್ರ) ಎಂಬುವುದು ಕಂಪ್ಯೂಟರ್ ಡೇಟಾ ಸಂಸ್ಕರಣೆ ಹಾಗೂ ಸಂಗ್ರಹಣೆಯನ್ನು ಸುಲಭವಾಗಿಸುವ ವಿದ್ಯುನ್ಮಾನ ಸಾಧನ. ಗಣಿತದ ಲೆಕ್ಕಾಚಾರಗಳು ಹಾಗೂ ತರ್ಕಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಡೇಟಾ ಸಂಸ್ಕರಿಸುವುದು ಆ ಮೂಲಕ ಮಾಹಿತಿಯನ್ನು ನಂತರದ ಬಳಕೆಗಾಗಿ ಬಳಸಿಡಲು ಸಾಧ್ಯವಾಗುವುದು. ಕಂಪ್ಯೂಟರ್‍ನ ವೈಶಿಷ್ಟ್ಯ.

ಕಂಪ್ಯೂಟರ್ ವಿವಿಧ ಕೆಲಸಗಳನ್ನು ಮಾನವ ಜೀವಿಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಪೂರ್ಣಗೊಳಿಸುತ್ತದೆ. ಕಂಪ್ಯೂಟರ್ ಡಿಜಿಟಲ್ ರೂಪದಲ್ಲಿ ಲಕ್ಷಾಂತರ ಪುಟಗಳೆ ಮಾಹಿತಿಯನ್ನು ಸಂಗ್ರಹಿಸುವುದು. ಇಂದಿನ ಹಾರ್ಡ ಡಿಸ್ಕುಗಳು ಸಾವಿರಾರು ಗೀಗಂಬೈಟ್ ಮಾಹಿತಿಯನ್ನು ಸಂಗ್ರಹಿಸುವುದು ಕಂಪ್ಯೂಟರ್ ಹವಾಮಾನಗಳ ಮುನ್ಸೂಚನೆ ಯಂತ್ರಗಳ ಕಾರ್ಯಾಚರಣೆ ಬಾಹ್ಯಕಾಶ ವೈದ್ಯಕೀಯ ವಲಯದಲ್ಲಿ ಬ್ಯಾಂಕುಗಳ ಯಾಂತ್ರೀಕೃತಗಳಲ್ಲಿ ತಾಂತ್ರಿಕ ಶಿಕ್ಷಣ ದಲ್ಲಿ ಬಳಸಬಹುದು ಈಎಲ್ಲಾ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆಯಾಗುತ್ತಿರುವುದು ಇದರಲ್ಲಿ ಅಡಕವಾಗಿರುವ ತಂತ್ರಾಂಶದಿಂದ (ಸಾಪ್ಟವೇರ) ಹಾಗೆಯೇ ನಿಗದಿತ ಕೆಲಸಕ್ಕೆ ಬೇಕಾದ ತಂತ್ರಾಂಶ ತಯಾರಿಕೆ ಒಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಇಲ್ಲಿ ಕೆಲಸ ಮಾಡಲು ಕಂಪ್ಯೂಟರ್ ತಂತ್ರಾಂಶ ಬಳಕೆ, ಮತ್ತು ಉಪಯೋಗದ ಬಗ್ಗೆ ಪೂರ್ಣ ಆಳವಾದ ಜ್ಞಾನ ಬೇಕಾಗುತ್ತದೆ. ಈ ಜ್ಞಾನವನ್ನು ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ನಾವು ಆದ್ಯಶಿಸಬಹುದು.

ಇತ್ತಿತ್ತಲಾಗಿ ಕಾರ್ಖಾನೆಗಳಲ್ಲಿ ಅನುಭವಿಕ ಕೆಲಸಗಾರರ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಕೆಲಸಗಾರರ ಕೊರತೆ ನೀಗಿಸಲು ಕೂಡ ಕಂಪ್ಯೂಟರ್ ಬಹು ಉಪಯೋಗಿಯಾಗಿವೆ. ಉದಾ : ಕಾರ್ಖಾನೆಗಳಲ್ಲಿ ಉತ್ಪಾದನೆಗೆ ಉಪಯೋಗಿವಾಗುವ ಮಶೀನ್‍ಗಳಾದ ಲೆಟ್‍ಡ್ರಿಲ್, ಮಿಲ್ಲಿಂಗ್ ನಂತರ ಮಶೀನ್‍ಗಳನ್ನು ಕಂಪ್ಯೂಟರ್‍ಗಳ ಮೂಲಕ ಕಾರ್ಯ ಮಾಡಿಸುತ್ತಾರೆ. ಉದಾ: ಸಿಎನ್‍ಸಿ, ಲೆಟ್‍ಡ್ರಿಲ್ ಇತ್ಯಾದಿ.
ಬಹುತೇಕ ಕ್ಷೇತ್ರಗಳಲ್ಲಿ ಗಣಕೀಕರಣವು ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಆದ ಕಾರಣ ಕಂಪ್ಯೂಟರ್ ಜ್ಞಾನ ತನ್ನದಾಗಿಸಿಕೊಳ್ಳಲು ಶಾಲಾ ಮಟ್ಟದಲ್ಲಿ ವಿದ್ಯಾರ್ಥೀಗಳಿಗೆ ಪರಿಚಯಿಸಲಾಗಿದೆ. ಹಾಗೂ ಆಳವಾಗಿ ಕಂಪ್ಯೂಟರ್ ಮತ್ತು ತಂತ್ರಾಂಶ (ಸಾಪ್ಟವೇರ್) ತಯಾರಿಕೆ ಮತ್ತು ಬಳಕೆ ಜ್ಞಾನವನ್ನು ಡಿಪ್ಲೋಮಾ ಹಾಗೂ ಇಂಜಿನಿಯರಿಂಗ್ (ಬಿ.ಇ) ಕ್ಷೇತ್ರ ಕಂಪ್ಯೂಟರ್ ಸಾಯನ್ಸ ವಿಭಾಗದಲ್ಲಿ ಪಡೆದು ಕೊಳ್ಳಬಹುದು.

ಕಂಪ್ಯೂಟರ್ ಸೈನ್ಸ್ ವಿಭಾಗದಿಂದ, ಡಿಪ್ಲೋಮಾ ಅಥವಾ ತಾಂತ್ರಿಕ ಶಿಕ್ಷಣ ಮುಗಿಸಿದ ನಂತರ ವಿದ್ಯಾರ್ಥೀಗಳಿಗೆ ಈ ಕೆಳಗಿನ ಕ್ಷೇತ್ರಗಳಲ್ಲಿ ಉದ್ಯೊಗಾವಕಾಶಗಳಿರುತ್ತವೆ.
* ಸಾಫ್ಟವೇರ್ ಕಂಪನಿಗಳು.
* ದೂರ ಸಂಪರ್ಕ ಕಂಪನಿಗಳು
* ಅಂತರಿಕ್ಷಯಾನ ಮತ್ತು ರಕ್ಷಣಾ ವಲಯ
* ಆರೋಗ್ಯ ರಕ್ಷಣೆ ವಲಯ
* ಶೈಕ್ಷಣಿಕ ಸಂಸ್ಥೆಗಳು
* ಸರಕು ತಯಾರಿಕಾ ಕಂಪನಿಗಳು.
* ಹಣಕಾಸು ವಿಭಾಗದ ಕೆಲಸಗಳು ಇತ್ಯಾದಿ.

ಇಲೆಕ್ಟ್ರೀಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್
ಇಲೆಕ್ಟ್ರೀಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಇದು ಒಂದು ಮಹತ್ವ ಪೂರ್ಣ ಕೋರ್ಸಾಗಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಸ್ಥಾನವನ್ನು ಪಡೆದಿದೆ. ಇದಕ್ಕೆ ಮುಖ್ಯ ಕಾರಣವೆನೆಂದರೆ ವಿದ್ಯುಚ್ಚಕ್ತಿ ಇಲ್ಲದೇ ನಾವು ಯಾವುದೇ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ. ಈಗಿನ ಅಧುನಿಕ ಜಗತ್ತಿನಲ್ಲಿ ಪ್ರತಿಯೊಂದು ವ್ಯಕ್ತಿಯು ವಿದ್ಯುಚ್ಚಕ್ತಿಯ ಮೇಲೆ ಅವಲಂಬಿತನಾಗಿರುತ್ತಾನೆ. ವಿದ್ಯುತ್ ಇಲ್ಲದಿದ್ದರೆ ಜಗತ್ತು ಕತ್ತಲೆಯಲ್ಲಿ ಇರಬೇಕಾಗಿತ್ತು. ಹೀಗಾಗಿ ಈ ಒಂದು ಕೋರ್ಸ ತುಂಬಾ ಮಹತ್ವ ಪಡೆದಿದೆ.

ಇಲೆಕ್ಟ್ರಾನಿಕ್ಸ್ ವ್ಯಾಪಕ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಶೈಕ್ಷಣಿಕ ಕ್ಷೇತ್ರದೊಳಗೆ ಒಂದು ಉಪಕ್ಷೇತ್ರವಾಗಿದೆ. ಅದರಲ್ಲಿ ಏನ್‍ಲಾಗ್ ಹಾಗೂ ಡಿಜಿಟಲ್ ಇಲೆಕ್ಟ್ರಾನಿಕ್ಸ್ ಎಂಬೆಡೆಡ್ ಸಿಸೈಗಳು ಮತ್ತು ವಿದ್ಯುತ್ ಇಲೆಕ್ಟ್ರಾನಿಕ್ಸಗಳಂತ ಉಪಕ್ಷೇತ್ರಗಳನ್ನು ಒಳಗೊಳ್ಳುವ ವಿಶಾಲವಾದ ಇಂಜಿನೀಯರಿಂಗ್ ಕ್ಷೇತ್ರವನ್ನು ಸೂಚಿಸುತ್ತದೆ. ಇದಲ್ಲದೆ ಇತರ ಅನೇಕ ವಿಭಾಗಗಳನ್ನು ಒಳಗೊಂಡಿದೆ.
ಉದಾ: ದೂರಸಂಪರ್ಕ ನಿಯಂತ್ರಣ ವ್ಯವಸ್ತೆಗಳು ಸಿಗ್ನಲ್ ಪ್ರಕ್ರಿಯೆಗಳು ಎಲೆಕ್ಟ್ರಿಕಲ್ ಪಾವರ್ ಕಂಟ್ರೋಲ್ ರೋಬೊಟಿಕ್ಸ್ ಹಾಗೂ ಮುಂತಾದವುಗಳು ಇದರ ಜೊತೆಗೆ ಈ ಕೋರ್ಸ ಇನ್ನುಳಿದ ಎಲ್ಲ ಕೋರ್ಸಗಳಿಗೂ ಸಂಪರ್ಕ ಹೊಂದಿದೆ.

ಎಲೆಕ್ಟ್ರಿಕ್ ಇಂಜಿನಿಯರರು ವಿದ್ಯುಚ್ಛಕ್ತಿಯನ್ನು ಬೇರೆ ಬೇರೆ ಕೆಲಸಗಳಿಗೆ ಬೇರೆ ಬೇರೆ ರೀತಿಯಲ್ಲಿ ಉಪಯೋಗಿಸುತ್ತಾರೆ. ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳ ಮುಂಚೂಣಿಯಲ್ಲಿದ್ದು ಪ್ರಗತಿಯುತ್ತ ನಡೆಯುತ್ತಿದೆ. ಮತ್ತು ನಮ್ಮ ದಿನ ನಿತ್ಯದ ಜೀವನ ನಡೆಸಲು ವಿದ್ಯುಚ್ಛಕ್ತಿಯು ಪ್ರಮುಖ ಪಾತ್ರ ವಹಿಸುತ್ತದೆ. ಹಾಗೆ ಈಗಿನ ಈ ಅಧುನಿಕ ಯುಗವು ವಿದ್ಯುಚ್ಛಕ್ತಿಯ ಮೇಲೆ ಅವಲಂಬಿತವಾಗಿದೆ.
ಉದಾ: ನಮ್ಮ ದಿನನಿತ್ಯದ ಬಳಕೆಯ ವಸ್ತುಗಳಾದ ಮೊಬೈಲ ಗಣಕಯಂತ್ರ, ದೂರದರ್ಶನ ವಿದ್ಯುತ್ ಯಂತ್ರಗಳು ಮತ್ತು ಇನ್ನಿತರ ದಿನಚರಿ ವಸ್ತುಗಳು ವಿದ್ಯುತ್ ಮೇಲೆ ಅವಲಂಬನೆಯಾಗಿದೆ.

ಅದಲ್ಲದೆ ಈ ಕೋರ್ಸಿನಿಂದ ಯಾವ ರೀತಿಯಾಗಿ ಮತ್ತು ಯಾವ ಮೂಲಗಳಿಂದ ವಿದ್ಯುತ್ ಉತ್ಪತ್ತಿ ಮಾಡಬಹುದು ಹೇಗೆ ವಿದ್ಯುತ್ ಪ್ರಸರಣ ಮತ್ತು ವಿತರಣೆ ಆಗುವುದು ವಿದ್ಯುತ್ ಸ್ಥಾವರಗಳು ಹಾಗೂ ಸ್ಥಾವರಗಳಿಂದ ವಿದ್ಯುತ್ ಉತ್ಪತ್ತಿ ಪ್ರಕ್ರಿಯೆ ಹೀಗೆ ಮುಂತಾದ ವಿಷಯಗಳು ಮಾಹಿತಿಯನ್ನು ಕಲಿಯ ಬಹುದು. ಹಿಂದಿನ ದಿನಗಳಲ್ಲಿ ವಿದ್ಯುತ್ ಶಕ್ತಿಯನ್ನು ಪಡೆಯಲು ನೀರನ್ನು ಮಾತ್ರ ಅವಲಂಬಿಸಬೇಕಾಗಿತ್ತು. ಆದರೆ ಮಾನವನ ಅವಿಷ್ಕಾರಗಳು ಹೆಚ್ಚಾದಂತೆಲ್ಲಾ ಈ ಕೆಳಗಿನ ಎಲ್ಲ ಮೂಲಗಳಿಂದ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಬಹುದಾಗಿದೆ.

 1. ಸೌರಶಕ್ತಿ : ಸೂರ್ಯನ ಕಿರಣಗಳನ್ನು ಉಪಯೋಗಿಸಿಕೊಂಡು ಪಡೆಯಬಹುದಾದ ಶಕ್ತಿಯೇ ಸೌರಶಕ್ತಿ ಈ ಕಿರಣಗಳಿಂದ ಯಾವ ರೀತಿಯಾಗಿ ವಿದ್ಯುತ್ ಶಕ್ತಿಯನ್ನು ಪಡೆಯುತ್ತೇವೆ ಎಂಬುದನ್ನುಯ ತಿಳಿಯಬಹುದಾಗಿದೆ.
  2. ಉಷ್ಣಶಕ್ತಿ : ಕಲ್ಲಿದ್ದಲ್ಲಿನ ಸುಡುವಿಕೆಯಿಂದ ಪಡೆಯುವ ಶಕ್ತಿಯೇ ಉಷ್ಣಶಕ್ತಿ, ಉಷ್ಣಶಕ್ತಿ ಕೇಂದ್ರವು ವಿದ್ಯುತ್ ಶಕ್ತಿಗೆ ಹೆಚ್ಚು ಸಾಂಪ್ರದಾಯಿಕ ಮೂಲವಾಗಿದೆ. ಕಲ್ಲಿದ್ದಲ್ಲಿನ ಸುಡುವ ಪ್ರಕ್ರಿಯೆಯಿಂದ ವಿದ್ಯುತ್ ಶಕ್ತಿಯನ್ನು ಹೇಗೆ
  ಪಡೆಯಬಹುದು ಎಂಬುದರ ಬಗ್ಗೆ ಮಾಹಿತಿ ಪಡೆಯಬಹುದು.
  3.ಜಲಶಕ್ತಿ : ನೀರಿನಿಂದ ವಿದ್ಯುತ್ ಉತ್ಪತ್ತಿ ಕ್ರಿಯೆಯನ್ನು ಜಲಶಕ್ತಿ ಎನ್ನುವರು ಶೇಖರಿಸಿದ ನೀರನ್ನು ಡ್ಯಾಂಗಳಿಂದ ಬಳಸಿಕೊಂಡು ಅಥವಾ ಬೀಳುವ ನೀರು ಇಲ್ಲವೇ ವೇಗವಾಗಿ ಚಾಲನೆಯಲ್ಲಿರುವ ನೀರಿನ ಶಕ್ತಿಯಿಂದ ಪಡೆಯಲ್ಪಟ್ಟ ಶಕ್ತಿಯಾಗಿದೆ. ಇದು ಉಪಯುಕ್ತ ಉದ್ದೇಶಗಳಿಗಾಗಿ ಬಳಸಲ್ಪಡುತ್ತದೆ.
  4. ಪವನ ಶಕ್ತಿ : ಪವನ ಶಕ್ತಿ ಪಯಾಯವಾಗಿ ಗಾಳಿ ಶಕ್ತಿ ಪರಿವರ್ತಕವೆಂದು ಕರೆಯಲ್ಪಡುತ್ತದೆ. ಇದು ಗಾಳಿಯ ಚಲನ ಶಕ್ತಿಗಳನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಸಾಧನವಾಗಿದೆ.
  5. ಪರಮಾಣು ಶಕ್ತಿ : ಪರಮಾಣು ವಿದ್ಯುತ್ ಸ್ಥಾವರವು ಶಾಖದ ಮೂಲ ಹಾಗೂ ಪರಮಾಣು ರಿಯಕ್ಟರ್ ಆಗಿರುವ ಉಷ್ಣ ವಿದ್ಯುತ್ ಕೇಂದ್ರವಾಗಿದೆ. ಇದು ವಿದ್ಯುತ್ ಉತ್ಪಾದಿಸುವ ಜನೇಟರಿಗೆ ಸಂಪರ್ಕಿಸಲಾದ ಉಗಿ ಟರ್ಬೈನನ್ನು ಚಾಲನೆ ಮಾಡುವ ಉಗಿ ಉತ್ಪಾದಿಸಲು ಶಾಖವನ್ನು ಬಳಸಲಾಗುತ್ತದೆ.
  6. ಇಂಧನ ಶಕ್ತಿ: ಇಂಧನ ವಿದ್ಯುತ್ ಸ್ಥಾವರದಲ್ಲಿ ನೈಸರ್ಗಿಕವಾಗಿ ಸಿಗುವ ಡಿಸೈಲ್ ಅಥವಾ ಇನ್ನಿತರ ಇಂಧನಗಳನ್ನು ಬಳಸಿಕೊಂಡು ವಿದ್ಯುತಶಕ್ತಿಯನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.
 • ಎಸ್.ಪಿ.ಹಿರೇಮಠ
  ಪ್ರಾಚಾರ್ಯರು
  ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್
  ಬೆಳಗಾವಿ.