ಜಮ್ಮು ಕಾಶ್ಮೀರ ಕ್ಕೆ ದೊರೆಯಿತು ಮುಕ್ತಿ...

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಅಂದಿನ ಪ್ರಧಾನ ಮಂತ್ರಿಗಳಾದ ಜವಾಹರಲಾಲ್ ನೆಹರೂ ಅವರು ಆರ್ಟಿಕಲ್ 370, 35(ಎ) ವಿಧಿಯನ್ನು ಜಾರಿ ಮಾಡಿ ಭಾರತದಲ್ಲಿ ಕಾಶ್ಮೀರವನ್ನು ಒಂದು ಪ್ರತ್ಯೇಕ ರಾಜ್ಯ ಅದಕ್ಕೆ ಬೇರೆ ಸಂವಿದಾನದ ಅಡಿಯಲ್ಲಿ ಕೆಲಸ ಮಾಡಲು ಅವಕಾಶ ನೀಡುವ ಮೂಲಕ ದೇಶದಲ್ಲಿ ಎರಡು ಕಾನೂನುಗಳು ಜಾರಿಗೆ ತಂದರು ಎಂದು ಅನೇಕ ಬುದ್ಧಿ ಜೀವಿಗಳು ಇಂದು ಸಹ ನೆನಪು ಮಾಡಿಕೊಳ್ಳುತ್ತಾರೆ.

ಹಾಗಾದರೆ 35(ಎ) ವಿಧಿಯಲ್ಲಿರುವ ಸವಲತ್ತುಗಳೇನು? ಅಂದರೆ ರಾಜ್ಯದ ಶಾಶ್ವತ ನಿವಾಸಿಗಳು ಮತ್ತು ಅವರ ಹಕ್ಕುಗಳ ಬಗ್ಗೆ ಸ್ವತಂತ್ರ್ಯ ನಿರ್ಧಾರ ಕೈಗೊಳ್ಳುವ ನಿರ್ಧಾರವನ್ನು ಈ ವಿಧಿ ಜಮ್ಮು-ಕಾಶ್ಮೀರ ಸರ್ಕಾರಕ್ಕೆ ನೀಡುತ್ತದೆ. ಅಲ್ಪಸಂಖ್ಯಾತರ ಪರ, ಧೋರಣೆ ಹೊಂದಿದ್ದ ಅಂದಿನ ಸರ್ಕಾರದ ಸಲಹೆ ಮೇರೆಗೆ ಆಗಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಸಾಂವಿಧಾನಿಕ ಆದೇಶದ ಮೂಲಕ ಈ ವಿಧಿಯನ್ನು ಸಂವಿಧಾನಕ್ಕೆ ಸೇರಿಸಿ ತನ್ಮೂಲಕ ಜಾರಿಗೆ ತಂದರು ಆದರೆ ಸಂವಿಧಾನಕ್ಕೆ ವಿರೋಧವಾಗಿ ಮತ್ತು ದೇಶದ ಐಕ್ಯತೆಗೆ ಧಕ್ಕೆಯಾಗುವ ಈ ಚಿಡಿಣiಛಿಟe 370 ನೇ ವಿಧಿಯನ್ನ ಕಾಶ್ಮೀರಕ್ಕೆ ದಯಪಾಲಿಸುವ ನಿರ್ಣಯವನ್ನು ಜಾರಿಗೊಳಿಸಿದರು.

ನಿಜವಾಗಿ ಇದು ಸಂವಿಧಾನದ ವಿರೋಧಿ ನೀತಿಯಾಗಿತ್ತು. ಅಂದು ಮಾಡಿದ ಅನಾಹುತಗಳನ್ನ ದೇಶ ಮತ್ತು ನಮ್ಮ ಹೆಮ್ಮೆಯ ಸೈನಿಕರು ಕಳೆದ ಎಪ್ಪತ್ತು ವರ್ಷಗಳಿಂದ ಅತ್ಯಂತ ನೋವು - ಕಷ್ಟ - ಸಾವುಗಳು ಕಂಡಿದ್ದಾರೆ ಎಂಬುದನ್ನು ಭಾರತೀಯರಾದ ನಾವೆಲ್ಲರೂ ಮರೆಯಲು ಹೇಗೆ ಸಾಧ್ಯ.ಸರಿ ಅದು ಎನೇ ಇರಲಿ ಬಿಡಿ ಈಗ ಕೆಲ ದಿನಗಳಿಂದ ಜಮ್ಮು ಕಾಶ್ಮೀರದ ವಿಷಯದಲ್ಲಿ ಕಾಡುತ್ತಿದ್ದ ಅನಿಶ್ಚಿತತೆಗೆ ಇಂದು ಕೇಂದ್ರ ಸರ್ಕಾರದಿಂದ ಉತ್ತರ ಸಿಕ್ಕಿದೆ. ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ ಆರ್ಟಿಕಲ್ 370, 35ಎ ರದ್ದುಗೊಳಿಸುವ ಐತಿಹಾಸಿಕ ಪ್ರಯತ್ನಕ್ಕೆ ಕೇಂದ್ರ ಕೈ ಹಾಕಿದ್ದು ಸಂತೋಷದ ವಿಚಾರ ಹಾಗೂ ರಾಷ್ಟ್ರದ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಮಾಡಿದ ಐತಿಹಾಸಿಕ ಭಾಷಣ ರಾಷ್ಟ್ರದ ಜನರ ಕುತೂಹಲಕ್ಕೆ ತೆರೆ ಬೀಳುವಂತೆ ಮಾಡಿದೆ. ಭಾರತ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕಾಶ್ಮೀರದ ವಿಚಾರದಲ್ಲಿ ದಿಟ್ಟ ಹೆಜ್ಜೆ ಯೊಂದನ್ನು ತೆಗೆದು ಕೊಂಡಿದ್ದು ಮತ್ತು ಕಾಶ್ಮೀರಕ್ಕೆ ನೀಡಿದ್ದಂತಹ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವುದಾಗಿ ರಾಜ್ಯಸಭೆಯಲ್ಲಿ ಐತಿಹಾಸಿಕ ಘೋಷಣೆಯನ್ನು ಮಾಡಿದ್ದಲ್ಲದೆ ಜಮ್ಮು ಕಾಶ್ಮೀರಕ್ಕೆ ನೀಡಿರುವ ವಿಶೇಷ ಮೀಸಲಾತಿ ಯನ್ನು ಕೂಡ ಸಹ ರದ್ದು ಮಾಡುವುದಾಗಿ ಘೋಷಣೆ ಮಾಡಿದ್ದಾರೆ ಜೊತೆಗೆ ಕಾಶ್ಮೀರವನ್ನು ಮೂರು ಭಾಗವಾಗಿ ವಿಂಗಡಿಸುವುದಾಗಿ ತಿಳಿಸಿದ್ದಾರೆ. ಆ ಮೂಲಕ ಕಾಶ್ಮೀರದ ವಿಶೇಷ ಸ್ಥಾನಮಾನ ಹಾಗೂ ವಿಶೇಷ ಅಧಿಕಾರ ಎರಡೂ ರದ್ದಾಗಿದೆ. ಆರ್ಟಿಕಲ್ 35ಂ ಹಾಗೂ ಆರ್ಟಿಕಲ್ 370 ಅನ್ನು ಕೇಂದ್ರ ಸರ್ಕಾರ ರದ್ದು ಮಾಡುವ ಈ ಐತಿಹಾಸಿಕ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ.ಆದ್ದರಿಂದ ಇದರ ಸಂಪೂರ್ಣ ಶ್ರೇಯಸ್ಸು ಮತ್ತು ಕೀರ್ತಿ ಈಗಿನ ಸರಕಾರಕ್ಕೆ ಸಲ್ಲುತ್ತದೆ ಬಂಧುಗಳೆ.

ನರೇಂದ್ರ ಮೋದಿಯವರು ಈ ಹಿಂದೆಯೇ ತಮ್ಮ ಪ್ರಣಾಳಿಕೆಯಲ್ಲಿ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿದರು,ಅದು ಇದೀಗ ಐತಿಹಾಸಿಕ ನಿರ್ಧಾರ ಅಧಿಕೃತವಾಗಿ ಪ್ರಕಟಣೆಗೊಂಡಿದೆ. ಆದ್ದರಿಂದ ಈಗ ಮಸೂದೆ ಸಂಸತ್ತಿನಲ್ಲಿ ಪಾಸ್ ಆಗಬೇಕಿದೆ.ಲಡಾಖ್ ಮತ್ತು ಜಮ್ಮು ಕಾಶ್ಮೀರವನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡುವ ಮತ್ತೊಂದು ಪ್ರಸ್ತಾವನೆಯನ್ನೂ ಅಮಿತ್ ಶಾ ರಾಜ್ಯಸಭೆಯಲ್ಲಿ ಮಂಡಿಸಿದಾರೆ ಆ ವಿಧೇಯಕ ಸಹ ಮಂಡನೆಯಾಗಿದೆ ಹೀಗಾಗಿ ಇದಕ್ಕೂ ಒಂದು ಅಂತಿಮ ನಿರ್ಧಾರ ಹೊರಬೀಳಲಿದೆ ಎಂಬ ಆಶಾಭಾವನೆ ನಮ್ಮದು.

ಕಾಶ್ಮೀರ ಭಾರತದ ಅವಿಭಾಜ್ಯ:
ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂಬುದನ್ನ ಜಗತ್ತಿನೆದುರು ಮೋದಿ ಸರ್ಕಾರ ಸಾರಿ ಹೇಳಿದೆ.ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ ನಾಲ್ಕು ಮಸೂದೆಗಳ ಕುರಿತು ಚರ್ಚೆಯಾಗಬೇಕೆಂದು ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿರೋಧ ಪಕ್ಷಗಳ ಗದ್ದಲದ ನಡುವೆ 370 ವಿಧಿಯನ್ನು ರದ್ದುಗೊಳಿಸುವ ವಿಧೇಯಕವನ್ನು ದಿ:05-08-2019ರಂದು ರಾಜ್ಯಸಭೆಯಲ್ಲಿ ಮಂಡಿಸಿದ್ದಾರೆ ಹಾಗೆ ಇದರ ಜೊತೆಗೆ ಜಮ್ಮು ಕಾಶ್ಮೀರ ಮೀಸಲಾತಿ ತಿದ್ದುಪಡಿ ಕಾಯ್ದೆ ಮಸೂದೆಯನ್ನೂ ಸಹ ಮಂಡಿಸಿದಾರೆ. ಮತ್ತೊಂದು ಕಡೆ 35ಎ ವಿಧಿಯನ್ನು ರದ್ದುಗೊಳಿಸುವ ತೀರ್ಮಾನಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.

ಆರ್ಟಿಕಲ್ 370 ಜಮ್ಮು ಕಾಶ್ಮೀರಕ್ಕೆ ಸ್ವಾಯತ್ತ ಸ್ಥಾನಮಾನ ನೀಡಿದರೆ, 35ಎ ರಾಜ್ಯದ ನಾಗರಿಕರಿಗೆ ವಿಶೇಷ ಹಕ್ಕು ಮತ್ತು ಸವಲತ್ತುಗಳನ್ನು ನೀಡಲು ಅವಕಾಶ ಮಾಡಿಕೊಡುತ್ತದೆ. ಈ ವಿಶೇಷಾಧಿಕಾರದ ಕಾರಣದಿಂದಾಗಿ ರಕ್ಷಣೆ, ವಿದೇಶಾಂಗ ವ್ಯವಹಾರ, ಹಣಕಾಸು, ಸಂವಹನ ಕ್ಷೇತ್ರಗಳನ್ನು ಹೊರತುಪಡಿಸಿ ಭಾರತದ ಸಂಸತ್ತಿಗೆ ಬೇರೆ ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕೆಂದರೂ ಜಮ್ಮು ಕಾಶ್ಮೀರ ಸರ್ಕಾರ ಒಪ್ಪಿಗೆ ಇರಲೇಬೇಕಿತ್ತು. ಇದೀಗ ಕೇಂದ್ರದ ನಿರ್ಧಾರದಿಂದ ರಾಜ್ಯದ ಸ್ಥಾನಮಾನವನ್ನೇ ಜಮ್ಮು ಕಾಶ್ಮೀರ ಕಳೆದುಕೊಂಡತಾಗಿದೆ ಹಾಗೂ ಇನ್ನೂ ಮುಂದೆ ಜಮ್ಮು ಮತ್ತು ಕಾಶ್ಮೀರ ಆಗಲಿದೆ ಭಾರತದ 8ನೇ ಕೇಂದ್ರಾಡಳಿತ ಪ್ರದೇಶವೆಂದು ಅದಲ್ಲದೆ ಜಮ್ಮು ಕಾಶ್ಮೀರದ ಪ್ರತಿ ಹಳ್ಳಿಗಳಲ್ಲಿ ಭಾರತದ ತ್ರಿವರ್ಣ ಧ್ವಜ ಸ್ವತಂತ್ರವಾಗಿ ಹಾರಾಡಲಿದೆ ಹೀಗಾಗಿ ಇಂದು ಪ್ರತಿ ಭಾರತೀಯರು ಸ್ವತಂತ್ರವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಆತಂಕವಿಲ್ಲದೆ ಸ್ವಚಂದವಾಗಿ ಓಡಾಡಬಹುದಾಗಿದೆ.

ಭಯೋತ್ಪಾದಕರ ಎದೆ ಸೀಳಲಿದೆ:
ವಿಧಿ 370ನ್ನು ಮುಟ್ಟಿದರೆ ಸುಟ್ಟು ಹೋಗುತ್ತೀರಿ ಎಂದು ದೇಶದ ಪ್ರಧಾನಿಯವರಿಗೆ ಧಮಕಿ ಹಾಕುವ ನಾಯಕರು ಕಾಶ್ಮೀರದಲ್ಲಿ ಇರುವಾಗ ದೇಶದ ಸ್ಥಿತಿ ಯಾವ ಕಡೆ ಸಾಗುತ್ತಿದೆ ಎಂಬುದನ್ನು ನಾವೆಲ್ಲರೂ ವಿಚಾರ ಮಾಡುವ ಬಹು ದೊಡ್ಡ ಸಂಗತಿಯಲ್ಲವೇ? ಈ ರೀತಿ ಧಮಕಿ ಹಾಕುವ ಸ್ವಾರ್ಥಿಗಳಿಗೆ ಮೂದಲು ಬುದ್ಧಿ ಕಲಿಸುವ ಸಮಯ ಒದಗಿ ಬಂದಿದೆಯಲ್ಲವೇ ? ಇಂತಹ ಡೊಂಗಿ ರಾಜಕೀಯ ನಾಯಕರಿಗೆ ಸರಿಯಾದ ಪಾಠವನ್ನು ಕಲಿಸುವ ಕೆಲಸವನ್ನು ಈಗಿನ ಕೇಂದ್ರ ಸರ್ಕಾರ ಮಾಡುವ ವಿಶ್ವಾಸ ಪ್ರತಿಯೊಬ್ಬ ದೇಶಾಭಿಮಾನಿಗಳಿಗೆ ಇದೆ ಎಂದು ತಿಳಿಸಲು ಬಯಸುತ್ತೇನೆ.ಕೇವಲ ಓಟ್ ಬ್ಯಾಂಕ್ ಗಾಗಿ ಕಳೆದ 70 ವರ್ಷಗಳಲ್ಲಿ ಯಾವ ಪ್ರಧಾನಿಯೂ ಕಾಶ್ಮೀರದ ಕಡೆಗೆ ತಿರುಗಿಯೂ ನೋಡಿರಲಿಲ್ಲ. ಇಂದು ನರೇಂದ್ರ ಮೋದಿ ತಮ್ಮ ಪ್ರಧಾನಿ ಹುದ್ದೆಗೆ ಘನತೆ ತಂದಿದ್ದಾರೆ ಎಂದು ಹೆಮ್ಮೆಯಿಂದ ಹೇಳಬಹುದಾಗಿದೆ. ಕಾಶ್ಮೀರ ದ ಜನಕ್ಕೆ ಪೂರ್ಣ ಸ್ವಾತಂತ್ರ್ಯ ಒದಗಿಸಿದ್ದಾರೆ. ವಿಧಿ 370 ಯನ್ನು ರದ್ದುಗೊಳಿಸಿ ಕಾಶ್ಮೀರಿ ಪಂಡಿತರ ಮತ್ತು ಬಡ ಮುಸ್ಲಿಂ ಯುವಕರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.ಕಲ್ಲು ಎಸೆಯುವವರೆಲ್ಲ ಬಿಲ ಸೇರಿಕೊಂಡಾಗಿದೆ, ಪ್ರತ್ಯೇಕತಾವಾದಿಗಳ ಬಾಯಿಗೆ ಬಡಿದು ಒಳಗಟ್ಟಿದ್ದಾರೆ. ಹೊರದೇಶದ ಒಳನುಸುಳಿಕೆಗಳೆಲ್ಲ ಬಂದಾಗಿವೆ. ಇದೇ ಸಮಯ ಉಪಯೋಗಿಸಿಕೊಂಡು ಕಾಶ್ಮೀರವನ್ನು ಕಂಪ್ಲೀಟ್ ಬದಲಾವಣೆ ಮಾಡಲು ಮೋದಿ ಆಢಳಿತ ತಯಾರಾಗುವದರೊಂದಿಗೆ ಈ ಐತಿಹಾಸಿಕ ನಿರ್ಧಾರಕ್ಕೆ ಸಾಕ್ಷಿಯಾಗಿದೆ ಹಾಗಾಗಿ ಈಗಾಗಲೇ ಸಾಕಷ್ಟು ಜನ ಸೈನಿಕರನ್ನು ಅಲ್ಲಿ ನಿಯೋಜಿಸಲಾಗಿದೆ. ಅಮರನಾಥ ಯಾತ್ರಿಕರ ರಕ್ಷಣೆಗೆ ಹೋಗಿದ್ದ ಸೈನಿಕರು, ನಂತರ ಹೋದ 10 ಸಾವಿರ ಸೈನಿಕರು, ತದನಂತರ ಮೊನ್ನೆ ಅಗಷ್ಟ್ ಎರಡರಂದು 28 ಸಾವಿರ ಸೈನಿಕರನ್ನು ಕಳಿಸಲಾಗಿತ್ತು. ಖಚಿತ ಮೂಲಗಳ ಪ್ರಕಾರ 281 ಅಂPಈ ಕಂಪನಿಗಳು ಜಮ್ಮು – ಕಾಶ್ಮೀರ ತಲುಪಿವೆ. ಅದರಲ್ಲೂ ಅಂPಈ (ಸೆಂಟ್ರಲ್ ಆಮ್ರ್ಡ ಪೆÇಲೀಸ್ ಫೆÇೀರ್ಸ) ಸೈನಿಕರ ದೊಡ್ಡಮಟ್ಟದ ನಿಯೋಜನೆಯ ಸಹಾಯದಿಂದ ಕಾಶ್ಮೀರವನ್ನು ಭೊಮಿಯ ಮೇಲಿನ ಸ್ವರ್ಗ ಮಾಡಲು ಕೇಂದ್ರ ಸರ್ಕಾರ ಪಣ ತೋಟ್ಟಿದು ಶ್ರೇಷ್ಠ ಕಾರ್ಯ ಹಾಗಾಗಿ ಇನ್ನು ಮುಂದೆ ಯಾವ ಭಯೋತ್ಪಾದಕನಾಗಲಿ, ಪ್ರತ್ಯೇಕತಾವಾದಿಯಾಗಲಿ ಕೆಮ್ಮಿದರೆ ಸಾಕು ಭಾರತೀಯ ಸೈನಿಕರ ಗುಂಡು ಅವರ ಎದೆ ಸೀಳುತ್ತದೆ ಹಾಗೂ ಯಾವಾಗಲೂ ಸೈನಿಕರನ್ನು ಟೀಕಿಸುವ, ಸೈನಿಕರ ಮೇಲೆ ದಾಳಿ, ಕಲ್ಲು ತೂರಾಟ ಮಾಡುವ ಪುಂಡ ಕಾಶ್ಮೀರ ಭಯೋತ್ಪಾಕರ ಎದೆ ಸಿಳಲಿದೆ
ಎಂಬುದು ದೇಶ ದ್ರೋಹಿಗಳು ಮರೆಯಬಾರದು ಎಚ್ಚರವಿರಲಿ.

ಐತಿಹಾಸಿಕ ನಿರ್ಧಾರ:
ಅಂತೂ ಭಾರತದ ಪಾಲಿಗೆ ಐತಿಹಾಸಿಕ ಕ್ಷಣ ಬಂದಿದೆ. ದಶಕಗಳ ಕನಸಾಗಿದ್ದ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ಪರಿಚ್ಛೇದವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರದ ಗೃಹ ಸಚಿವ ಅಮಿತ್ ಶಾ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದು, ರಾಜ್ಯಸಭೆಯಲ್ಲಿ ಘೋಷಣೆಯಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡ ಮಸೂದೆಗೆ ಅಂಕಿತವನ್ನು ಹಾಕಿದ್ದು, ಇಂದಿನಿಂದಲೇ ರಾಷ್ಟ್ರದ ಎಲ್ಲಾ ರಾಜ್ಯಗಳಂತೆ ಕಾಶ್ಮೀರವೂ ಭಾರತದ ಅವಿಭಾಜ್ಯ ಅಂಗವಾಗಲಿದೆ.ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಎನ್‍ಡಿಎ ಮಿತ್ರಕೂಟದ ಹಲವು ಪಕ್ಷಗಳು ಕೂಡಾ ಮೋದಿಯವರಿಗೆ ಜೈ ಎಂದಿವೆ. ಅಮಿತ್ ಶಾ ರಾಜ್ಯಸಭೆಯಲ್ಲಿ ಮಂಡಿಸಿದ ಮಸೂದೆಯ ಮೇಲೆ ಪ್ರತಿಭಟನೆಯ ನಡುವೆಯೇ ಭರ್ಜರಿ ಚರ್ಚೆ ನಡೆಯಿತು. ಇದೇ ವೇಳೆ ಬಹುತೇಕ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ನಾಯಕರುಗಳು ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.ಇದೇ ವೇಳೆ ಎನ್‍ಡಿಎ ಯ ಬಹು ದೀರ್ಘ ಕಾಲದ ಮಿತ್ರ ಪಕ್ಷ ಶಿವಸೇನೆ ಮೋದಿಯವರ ಐತಿಹಾಸಿಕ ನಿರ್ಧಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿತು. ಇಂದು ನಾವು ಕಾಶ್ಮೀರವನ್ನು ವಾಪಸ್ಸು ಪಡೆದಿದ್ದೇವೆ. ನಾಳೆ ಬಲೂಚಿಸ್ತಾನ ಹಾಗೂ ಪಿಒಕೆಯನ್ನು ಪಡೆದುಕೊಳ್ಳುತ್ತೇವೆ ಎಂಬ ಮಾತುಗಳು ಆ ಪಕ್ಷದ ನಾಯಕರಿಂದ ಕೇಳಿ ಬಂದಿದು ಇನ್ನೂ ವಿಶೇಷವಾದದ್ದು ಹೀಗಾಗಿ ಈ ಐತಿಹಾಸಿಕ ನಿರ್ಧಾರಕ್ಕೆ ಪ್ರತಿಯೊಬ್ಬ ಭಾರತೀಯರು ಸಾಕ್ಷಿಯಾಗಿದಾರೆ.

ಕೃತಜ್ಞತೆ ನುಡಿ: ಇಂತಹ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳುವ ಮೂದಲು ಹಲವಾರು ಬಾರಿ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾಹಿತಿ ಹಾಗೂ ಇದಲ್ಲದೆ ದಶಕಗಳಿಂದ ಬೆಂಕಿಕೆಂಡವಾಗಿರುವ ಜಮ್ಮುಕಾಶ್ಮೀರ, ಮೋದಿಜೀಯವರ ಆಢಳಿತಾವಧಿಯಲ್ಲಿ, ಅದರಲ್ಲೂ 2 ಅವಧಿಯಲ್ಲಿ ಬಹುತೇಕ ಶಾಂತಿಯುತವಾಗಿರುವುದು ವಿಶ್ವದ ಎಲ್ಲಾ ಜನತೆಗೆ ತಿಳಿದಿರುವ ಮತ್ತು ಗೊತ್ತಿರುವ ವಿಷಯವಾದರಿಂದ ಇದಕ್ಕೆ ಅಮಿತ್ ಶಾ ಹಾಗೂ ಅಜಿತ್ ದೋವಲ್ ಪ್ರಮುಖ ಕಾರಣ ಎನ್ನುವ ಪ್ರಬಲ ಮಾತುಗಳು ಇವೆ ಅಲ್ಲದೆ ಇವರಿಬ್ಬರೂ ಅಧಿಕಾರ ವಹಿಸಿಕೊಂಡಾಗಿಂದ ಪದೇ - ಪದೇ ಕಣಿವೆ ರಾಜ್ಯಕ್ಕೆ ಭೇಟಿ ನೀಡಿ ಕಾಶ್ಮೀರದೊಳಗಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ ( ನಡೆಸಿ)ಮತ್ತು ಆ ದಿಸೆಯಲ್ಲಿ ಶಾಂತಿ ನೆಲೆಸಲು ಸೊಕ್ತವಾದ ಕ್ರಮಗಳನ್ನು ಕೈಗೊಂಡಿರದಲ್ಲದೆ ಆ ರಾಜ್ಯದ ಅಭಿವೃದ್ಧಿ ದಿಕ್ಕಿನಲ್ಲಿ ಕೊಂಡ್ಯಯಲು ಹಗಲಿರುಳು ದುಡಿಯುತ್ತೀದಾರೆ ಬಂಧುಗಳೆ, ಹೀಗಾಗಿ ಇವರಿಬ್ಬರ ಅವಿರತ್ನ ಸತತ ಪ್ರಯತ್ನದ ಫಲದಿಂದ ಇವತ್ತಿನ ಐತಿಹಾಸಿಕ ನಿರ್ಧಾರ ನಮ್ಮಲ್ಲರ ಮುಂದೆ ಬಂದು ನಿಂತಿದೆ ಬಂಧುಗಳೆ ಅದಕ್ಕಾಗಿ ದುಡಿದ ಮಹನೀಯರಿಗೆ ದೇಶದ ಜನತೆಯ ಪರವಾಗಿ ಅನಂತ ಅನಂತ ಕೃತಜ್ಞತೆಗಳನ್ನು ಆರ್ಪಿಸುತ್ತೇನೆ ಅಲ್ಲದೆ ಅಖಂಡ ಭಾರತದ ಕನಸನ್ನು ನನಸು ಮಾಡಿರುವ ತ್ರಿಮೂರ್ತಿಗಳಿಗೆ ವಿಶೇಷ ಕೃತಜ್ಞತೆಗಳ ಅಭಿನಂದನೆಗಳು.