ಕನ್ನಡದ ಹೆಮ್ಮೆಯ ಕುಲಪುತ್ರಿ ಸಾಲುಮರದ ತಿಮ್ಮಕ್ಕ

ಅಸಂಖ್ಯಾತ ಮರುಗಳು ಬೆಳಗಿಸಿದ ಮಾಹಾ ಮೂರ್ತಿ, ಮರಗಳನ್ನೆ ದೇವರೆಂದು ಪೂಜಿಸುವ ಮೂಲಕ ದೇಶಕ್ಕೆ ಮಾದರಿ ಈ ಪರಿಸರ ಸ್ನೇಹಿ ಮಾಹಾ ತಾಯಿ ಸಾಲುಮರದ ತಿಮ್ಮಕ್ಕ. ಕರ್ನಾಟಕದ ರಾಜ್ಯದ ಹೆಮ್ಮೆಯ ಸಮಾಜ ಸೇವಕಿ, ಬಡವರ ಕುರುಳಿನ ಕರುಣಾ ಮೂರ್ತಿ, ಬಡತನದಲ್ಲಿಯೇ ಬೆಂದು, ಇನ್ನೊಬ್ಬರ ಸಾಧನೆಗೆ ಸ್ವೋರ್ತಿ ಈ ಸಾಲುಮರದ ತಿಮ್ಮಕ್ಕ.

ತಿಮ್ಮಕ್ಕ ನಿಗೆ  ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಮರಗಳನ್ನು ನೆಟ್ಟು ಅವುಗಳನ್ನೇ ತನ್ನ ಒಡಲ ಬಳ್ಳಿಯ ಮಕ್ಕಳಂತೆ ಭಾವಿಸಿ ಬೆಳೆಸಿದ  - ಬೇಳೆಸುತ್ತೀರುವ ತಿಮ್ಮಕ್ಕ ಅಸಾಮಾನ್ಯ ಧೀರ ಮಹಿಳೆ ಎಂದರೆ ಅಶೊಕ್ತಿಯಲ್ಲಾ ಶರಣ ಬಂಧುಗಳೆ. ಅನಕ್ಷರಸ್ಥೆಯಾಗಿದ್ದುಕೊಂಡು ಪರಿಸರ ಸಂರಕ್ಷಣೆ ಮತ್ತು ಪರಿಸರ ರಕ್ಷಣೆಗಾಗಿ ಹೋರಾಟದ ಕಾರ್ಯ ಮಾಡಿದು ಮತ್ತು ಈ ಇಳಿವಯಸ್ಸಿನಲ್ಲಿ ಮಾಡುತ್ತೀರುವುದು ಹೆಮ್ಮೆಯ ಶ್ರೇಷ್ಠ ಕೆಲಸ ಅಲ್ಲವೇ ? ಇಂದಿನ ಆಧುನಿಕ ಯುಗದಲ್ಲಿ ಪರಿಸರ ಮಾಲಿನ್ಯ ನಾಶ ಮಾಡುತ್ತೀರುವ ನಮ್ಮಂತಹ ಅನೇಕ ಬುದ್ದಿ ಜೀವಿಗಳು ಈ ಮಾಹಾತಾಯಿ ನಿಸ್ವಾರ್ಥ ಸೇವೆಯ ಶ್ರೇಷ್ಠ ತೇಯ  ಪಾಠವನ್ನು ಕಲಿಯಬೇಕಾಗಿದೆ ಸ್ನೇಹಿತರೆ.

ಯಾವುದೇ ರೀತಿಯಲ್ಲೂ ಅಡಂಬರತೆಗೆ ಅವಕಾಶ ನೀಡದೇ, ಅತಿ ಸರಳತೆಯ ಹಾದಿಯಲ್ಲಿ ತಮ್ಮ ಬದುಕಿನ ಜಟಕಾ ಬಂಡಿಯನ್ನು ಸಾಗಿಸಿಕೊಂಡು ಬರುತ್ತೀರುವುದು ನಮ್ಮಗೆಲ್ಲರಿಗೊ ಸ್ವೋರ್ತಿ - ಮಾರ್ಗದರ್ಶನ ಶರಣ ಬಂಧುಗಳೆ. ಕಾಯಕವೇ ಕೈಲಾಸವೆಂದು ಕಾಯಕ ತತ್ತ್ವವನ್ನು ಮಾಡುತ್ತಾ, ಇನ್ನೊಬ್ಬರ ಬಳಿ ಕೈ ಚಾಚದೆ, ಸ್ವಾಭಿಮಾನದ - ಸ್ವಾವಲಂಬನೆ ಜೀವನ ಮತ್ತು ದಾರ್ಶನಿಕರ ಆದರ್ಶ ವಿಚಾರಗಳನ್ನು ಅವರ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶಕ್ಕೆ ಮಾದರಿಯಾಗುವ ಕಾಯಕದ ಗೌರವ ಮಹತ್ವದ ಅರಿವನ್ನು  ಸಾರಿದ ತಿಮ್ಮಕ್ಕ ಈ ಕನ್ನಡ ನಾಡಿನ ಕಣ್ಮಣಿ, ಈ ಪವಿತ್ರ ಪುಣ್ಯ ಭೊಮಿಯ ಸೌರ್ವಭೌಮತ್ವದ - ಸುಗಂಧದ ಕುಲಪುತ್ರಿ ತಿಮ್ಮಕ್ಕ.

ಅಲ್ಲದೆ ತಿಮ್ಮಕ್ಕನವರು ಈ  ಸಮಾಜ - ನಾಡಿಗೆ ತ್ಯಾಗದ ಸೇವೆಯ ಆದರ್ಶತೇಯ ಮೆರೇಯುವ ಮೂಲಕ ಇನ್ನೊಬ್ಬರ ಬಾಳಿಗೆ ಆಶಾಕಿರಣ ವಾಗಿದಾರೆ. ಅಲ್ಲದೆ ಮಕ್ಕಳಿಲ್ಲಾ ವೆಂದು ಕೊರಗುತ್ತಿರುವ ಇಂದಿನ ಅನೇಕ ದಂಪತಿಗಳಿಗೆ ಇವರ ನಡೆ - ನುಡಿ - ವಿಚಾರ - ಆಚಾರ - ನಿಲುವುಗಳೆ ಮಾದರಿ ಯಾಗಬೇಕು ಹಾಗೂ ಇವರಂತೆ ಆದರ್ಶ ಸಮಾಜ ನಿರ್ಮಾಣಕ್ಕೆ ಮುಂದಾಗಲಿ ಎಂಬುವುದೇ ಈ ಮಾಹಾ ತಾಯಿಯ ಕಳಕಳಿಯ ಆಶೆ ಶರಣ ಬಂಧುಗಳೆ ಹಾಗಾಗಿ ಇವರ ಕಾಯಕ ಮೌಲ್ಯಗಳ ಸಿದ್ದಾಂತಗಳನ್ನು ಈ ಜಾಗತಿಕ ಸಮಾಜ ಒಪ್ಪುತ್ತದೆ ಎಂಬ ಬಲವಾದ ಅನಿಸಿಕೆ ನಮ್ಮದು ಮತ್ತು ಜಾರಿಗೆ ತರಲು ಪ್ರಯತ್ನ ಮಾಡುತ್ತೀದೆ ಎಂದರೆ ತಪ್ಪಾಗಲಾರದು. ಮಕ್ಕಳಿಲ್ಲದ ತಿಮ್ಮಕ್ಕ ತನ್ನ ಒಡ ಹುಟ್ಟಿದ ಮಕ್ಕಳಂತೆ ರಸ್ತೆಯ ಬದುಗಳಲ್ಲಿ ಆಲದ ಮರಗಳು ನೆಟ್ಟು - ಜೋಪಾನವಾಗಿ (ಹಾಳಾಗದಂತೆ) ಬೆಳೆಸಿದ ಕೀರ್ತಿ  ಇವರದು ಹಾಗಾಗಿ ಇವರ ಕಠಿಣ ಪರಿಶ್ರಮಕ್ಕೆ ನಾವೆಲ್ಲರೂ ತಲೆ ಬಾಗಲೇಬೇಕು ಹಾಗೂ  ಇವರಿಗೆ ದೇಶದ ನಿಜವಾದ ಗೌರವ ಸಲ್ಲಲೇಬೇಕು.

ತಿಮ್ಮಕ್ಕನ ಜನನ:

ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ  ಹೊಸೊರು ಗ್ರಾಮದ ನಿವಾಸಿಗಳಾದ ಚಿಕ್ಕರಂಗಯ್ಯ ಮತ್ತು  ವಿಜಯಮ್ಮನವರ ದಂಪತಿಗಳ ಮಗಳಾಗಿ ಜನಿಸಿದರು.

ತಿಮ್ಮಕ್ಕನ ಜೀವನ: ಕಡುಬಡನದ ಕುಟಂಬದಲ್ಲಿ ಜನಸಿದ ತಿಮ್ಮಕ್ಕ ನಿಗೆ ಬಾಲ್ಯದ ಜೀವನ ಅತಿ ಕಷ್ಟದಿಂದ ಕೊಡಿತು. ತಂದೆ - ತಾಯಿಯವರು ದಿನನಿತ್ಯ ಕೋಲಿ ಮಾಡಿ ಜೀವನವನ್ನು ಸಾಗಿಸುತ್ತೀದ್ದ ಕಾರಣದಿಂದ ತಿಮ್ಮಕ್ಕ ಶಾಲೆಗೆ ಹೋಗದೆ ಮನೆಯ ಕೆಲಸವನ್ನು ಮಾಡುತ್ತಾ ಬೆಳೆದಳು, ಹೀಗೆ ದಿನ ಕಳೆದಂತೆ ದೊಡ್ಡ ವಳಾದ ತಿಮ್ಮಕ್ಕ ನಿಗೆ ಮದುವೆ ಮಾಡಬೇಕೆಂದು ನಿಶ್ಚಯಿಸುವ ಮೂಲಕ ವಿವಾಹ ಮಾಡಿ ಮುಗಿಸಿದರು. ಆದರೆ ಮದುವೆಯಾದ ಕೆಲ ದಿನಗಳಲ್ಲಿಯೇ  ತಿಮ್ಮಕ್ಕ ಗಂಡ ( ರಾಮ ನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದವರಾದ ಚಿಕ್ಕಯ್ಯನವರನ್ನು ಮದುವೆಯಾಗಿದ್ದರು, ಅವರದ್ದು ಸಹ ಕಡು ಬಡತನದ ಕುಟುಂಬ ವಾಗಿತ್ತು .ಹೀಗಾಗಿ ದಿನ ಕೊಲಿ ಕೆಲಸ ಮಾಡಿ ಬದುಕುತ್ತಿದರು. ಇಂತಹ ಸಂದರ್ಭದಲ್ಲಿಯೇ ಚಿಕ್ಕಯ್ಯನವರ ಆರೋಗ್ಯ ಹದಗೆಟ್ದು ಹೋಗಿದ ಪರಿಣಾಮ  1991 ರಲ್ಲಿ ಲಿಂಗೈಕ್ಯರಾದರು. ಆದ್ದರಿಂದ ಇವರಿಗೆ ಮಕ್ಕಳು ಆಗಲ್ಲಿಲಾ ವೆಂಬ ಕೊರಗು ಇವರನ್ನು ಹಿಂಸಿಸುತ್ತಿತ್ತು ಇಂತಹ ನೋವು -  ಸಂಕೋಲೆಗಳಿಂದ ಮುಕ್ತಿ ಪಡಿಯಲು.  ಅಥವಾ ತಮಗೆ ಮಕ್ಕಳಿಲ್ಲಾ ವೆಂಬ ದುಃಖವನ್ನು ಮರೆಯಲು ಆಲದ ಮರಗಳನ್ನು ನೆಡಲಾರಂಭಿಸಿದರು - ತಿಮ್ಮಕ್ಕ ) ತೀರಿಹೋದರು ಇದರಿಂದ ಅತಿ ದುಖಃದ ಮಡುವಿನಲ್ಲಿ ಬಿದ್ದರು ತಿಮ್ಮಕ್ಕ, ಹೀಗೆ ಕೆಲ ದಿನಗಳು ಕಷ್ಟದಲ್ಲಿಯೇ ಗತಿಸಿ ಹೋದವು ಹಾಗಾಗಿ ತಮ್ಮಷ್ಟಕ್ಕೆ ತಾವೇ ಧೈರ್ಯ ತಂದುಕೋಳ್ಳುವ  ಮೂಲಕ ಸಮಾಜ ಮುಖಿ ಸೇವೆಯಲ್ಲಿ ತಲ್ಲಿನರಾದರು. ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಾಯಕ ಮಾಡಿದರು. ಇಂದು ಆ ಮರಗಳು ಹೆಮ್ಮ ಮರಗಳಾಗಿ ಜನತೆಗೆ ನೆರಳನ್ನು ಮತ್ತು ಪಕ್ಷಿಗಳಿಗೆ ಆಶ್ರಯವನ್ನು ನೀಡುತ್ತೀವೆ ಬಂಧುಗಳೆ.

ಸಂದ ಗೌರವ ಪ್ರಶಸ್ತಿಗಳು:

ರಾಷ್ಟ್ರೀಯ ಪೌರ ಪ್ರಶಸ್ತಿ - 1995, ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ - 1997, ರಾಜ್ಯೋತ್ಸವ ಪ್ರಶಸ್ತಿ, ’ನಾಡೋಜ’ ಪ್ರಶಸ್ತಿ , 2019 ರ ಪದ್ಮಶ್ರೀ ಪ್ರಶಸ್ತಿ, ವೀರ ಚಕ್ರ ಪ್ರಶಸ್ತಿ - 1997, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ - 2000, ಗಾಡ್‍ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ - 2006, ಪಂಪಾಪತಿ ಪರಿಸರ ಪ್ರಶಸ್ತಿ, ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿ, ವನಮಾತೆ ಪ್ರಶಸ್ತಿ, ಮಾಗಡಿ ವ್ಯಕ್ತಿ ಪ್ರಶಸ್ತಿ, ಶ್ರೀಮಾತಾ ಪ್ರಶಸ್ತಿ, ಎಚ್. ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ, ಕರ್ನಾಟಕ ಪರಿಸರ ಪ್ರಶಸ್ತಿ, ಮಹಿಳಾರತ್ನ ಪ್ರಶಸ್ತಿ, ನ್ಯಾಷನಲ್ ಸಿಟಿಜನ್ ಪ್ರಶಸ್ತಿ, ಹೂವಿನ ಹೊಳೆ ಪ್ರತಿಷ್ಠಾನದ ವಿಶ್ವಾತ್ಮ ಪುರಸ್ಕಾರ 2015, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ. 2010ರ ಸಾಲಿನ ಪ್ರತಿಷ್ಠಿತ ’ನಾಡೋಜ’ ಪ್ರಶಸ್ತಿ ಲಭಿಸಿದೆ. 2019 ಸಾಲಿನ ಪದ್ಮಶ್ರೀ ಪ್ರಶಸ್ತಿ. ಇನ್ನು ಹತ್ತು ಹಲವಾರು ಪ್ರಶಸ್ತಿ ,ಸನ್ಮಾನ ಗೌರವಗಳು ಇವರ ಸೇವೆಯ ಕಾಯಕಕ್ಕೇ ಸಲ್ಲವೆ.

ಅಂತಿಮ ಆಶಯ ನುಡಿ:

ತಿಮ್ಮಕ್ಕ  ಒಟ್ಟಾರೆ 284 ಅಂದಾಜು ಮರಗಳನ್ನು ಬೆಳೆಸಿದ ಮಾಹಿತಿ ಇದೆ. ಇದರ ಪ್ರಯುಕ್ತ , ಇಂದಿಗೆ ಅವುಗಳ ಮೌಲ್ಯ - ಬೆಲೆ ಸರಿ ಸುಮಾರು 30 - 40 ಲಕ್ಷ ರೂಪಾಯಿಗಳೆಂದು ಅಂದಾಜು ಮಾಡಲಾಗಿದೆ.ಈ ಮರಗಳ ನಿರ್ವಹಣೆಯನ್ನು ಈಗ ಕರ್ನಾಟಕ ಸರ್ಕಾರವು ವಹಿಸಿಕೊಂಡಿದೆ. ಹೀಗಾಗಿ ತಿಮ್ಮಕ್ಕ ನ ನಿಸ್ವಾರ್ಥ ತೇಯ ಗುಣಗಳನ್ನು ಅರಿತು ಕೊಂಡು ನಾವೆಲ್ಲರೂ ಅರಣ್ಯ - ಮರಗಳನ್ನು (ಕಡಿಯದೇ) ನಾಶ ಮಾಡದೇ ಪ್ರತಿಯೊಬ್ಬರು ಮರಗಳನ್ನು ಬೆಳೆಸುವ ದಿಕ್ಷೆಯನ್ನು ಪಡೆಯಬೇಕು. ಪಡೇದಾಗಲೇ ನಮ್ಮಗೊಂದು ಸಂಕಲ್ಪ - ಗುರಿ ಕಾಣುತ್ತದೆ ಮತ್ತು ಗುರಿ ಸಾಧಿಸುವ ಮನೊಧರ್ಮ ನಮ್ಮಲ್ಲಿ ಮೂಡುತ್ತದೆ. ಆದ್ದರಿಂದ ಬಂಧುಗಳೆ ಪರಿಸರ ಮಾಲಿನ್ಯ ನಿಯಂತ್ರಣವಾದರೆ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ವಿದೆ. ಇಲ್ಲವಾದಲ್ಲಿ ದಿನನಿತ್ಯ ಆರೋಗ್ಯ ಕ್ಕೆ ತುತ್ತಾಗಿ ಬಹು ಬೇಗ ಅಂತ್ಯರಾಗುವ ಸಮಯ ಬರುತ್ತದೆ. ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ವೆಂಬ ವಿವೇಕಾನಂದರ ವಾಣಿಯಂತೆ ಮುನ್ನುಗ್ಗಿ ಹೋದಾಗ ಅಂದರೆ ಮರಗಳನ್ನು ಬೆಳೆಸಿದಾಗ ಮಾತ್ರ ನಮ್ಮ ಬದುಕು ಹಸನಾಗುತ್ತದೆ. ಹಾಗಾಗಿ ಕಷ್ಟ ಕಾಲ ಬರುವಕ್ಕಿಂತ ಮುಂಚೆ ಎಚ್ಚರಿಕೆಯಿಂದ ಹಜ್ಜೆ ಇಟ್ಟರೆ ಉತ್ತಮ ಭವಿಷ್ಯ ನಮ್ಮದು ಹಾಗೆ ನಮ್ಮ ಬರುವ ಪೀಳಿಗೆದಾಗುತ್ತದೆ ಎಂಬ ಭಾವನೆ ನಮ್ಮದಾಗಿದೆ ಶರಣರೆ, ತಿಮ್ಮಕ್ಕ ನ ನಿಜವಾದ ಆಶೆಯಕ್ಕೆ ಆಸರೆಯಾಗಿ ನಾವೆಲ್ಲರೂ ನಿಲ್ಲೊಣ್ಣ ಮತ್ತು ಅವರ ಪರಿಸರ ಪರ ಕಾಳಜಿಗೆ ನಾವೆಲ್ಲರೂ ಗೌರವ ಕೊಟ್ಟು, ನಡಿಯೊಣ್ಣ ಸ್ನೇಹಿತರೆ.

ಸಾಲು ಮರದ ತಿಮ್ಮಕ್ಕಗೆ ಇರುವ ಪರಿಸರ ಕಾಳಜಿ ನಮ್ಮ ರಾಜಕೀಯ ಮುಖಂಡರಿಗೆ, ಅಧಿಕಾರಿಗಳಿಗೆ, ನಗರದ ಪ್ರಜ್ಞಾವಂತ ಜೀವಿಗಳಿಗೆ ಏಕಿಲ್ಲ. ಆಧುನಿಕರಣದ ಹೆಸರಿನಲ್ಲಿ ನಗರಗಳಲ್ಲಿ ಮರಗಳ ಮಾರಣ ಹೋಮವೇ ನಡೆದಿದೆ. ಇದರಿಂದ ಬಿಸಿಲಿನ ತಾಪ ಏರುತ್ತಲೇ ಸಾಗಿದೆ. ಪ್ರವಾಹ, ಬರದಂತಹ ಪ್ರಕೃತಿ ವಿಕೋಪಗಳು ಹೆಚ್ಚುತ್ತಲೇ ಇವೇ. ಈಗ ಕೊಡಗು, ಕೇರಳ, ಜಾರಖಂಡನಲ್ಲಿ ಸಂಬವಿಸಿರುವ ಪ್ರಕೃತಿ ವಿಕೋಪಗಳೆ ಸಾಕ್ಷಿ. ಮಾನವ ಎಷ್ಟು ಪೃಕೃತಿಯನ್ನು ಹಾಳು ಮಾಡುತ್ತಾನೋ ಅಷ್ಟೇ ಉಗ್ರವಾಗಿ ಪ್ರಕೃತಿ ತನ್ನ ಪ್ರತಿರೋಧವನ್ನು ವ್ಯಕ್ತಪಡಿಸುತ್ತದೆ. ಪ್ರಕೃತಿಗೆ ಸಮತೋಲ ಕಾಯ್ದುಕೊಳ್ಳುವುದು ಗೊತ್ತು. ಪೃಕೃತಿ ಉಗ್ರವಾಗುವ ಮುನ್ನ ನಾವೇ ಸೌಮ್ಯರಾಗಬೇಕು.

- ಸಂಗಮೇಶ ಎನ್ ಜವಾದಿ,

ಬೀದರ.