ಕನ್ನಡಿಗರ ಹೆಮ್ಮೆಯ ಕರ್ನಾಟಕ ರಾಜ್ಯೋತ್ಸವ

ಪ್ರತಿವರ್ಷ ನವ್ಹಂಬರ 1, ಕರ್ನಾಟಕ ರಾಜ್ಯೋತ್ಸವ ಇದಕ್ಕೆ ಕನ್ನಡಿಗರೆಲ್ಲರೂ ಸಂತಸ ಸಂಭ್ರಮ ಹಾಗೂ ವಿಜಯೋತ್ಸಾಹದೊಂದಿಗೆ ಸಿದ್ದರಾಗುತ್ತಿದ್ದಾರೆ. ಈ ಹಬ್ಬ ಕರ್ನಾಟಕದಲ್ಲಿರುವ ಕನ್ನಡಿಗರೆಲ್ಲರ ಹಬ್ಬ ಕನ್ನಡಿಗರ ನಾಡ ದೇವಿ ಶ್ರೀ ಭುವನೇಶ್ವರಿಯ ರಥವನ್ನು ಎಳೆಯಲು ಪಂಚಕೋಟಿ ಕನ್ನಡಿಗರು ಈ ನಾಡ ಹಬ್ಬಕ್ಕೆ ಸನ್ನದ್ಧರಾಗುತ್ತಿದ್ದಾರೆ. ಕನ್ನಡ ಸಾಹಿತ್ಯ ಬಹಳ ಪ್ರಾಚೀನವಾದುದು. ಅಷ್ಟೇ ಅಲ್ಲದೆ ಕನ್ನಡದ ಹಿರಿಮೆಯನ್ನು ಹೆಚ್ಚಿಸಲೋ ಎಂಬಂತ 2010-11 ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಮನ್ನಣೆ ಜೊತೆಗೆ ವೇಣುಗ್ರಾಮ-ಕುಂದಾನಗರಿ ಎಂಬೆಲ್ಲ ಹೆಸರುಗಳಿಂದ ಬಿರುದಾಂಕಿತಗೊಂಡ ಕನ್ನಡದ ಗಂಡು ಮೆಟ್ಟಿನ ನೆಲ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ ಕನ್ನಡದ ಹಿರಿಮೆಯನ್ನು ಹೆಚ್ಚಿಸಿದೆ.

ಅದರಂತೆ ಕನ್ನಡ ಸಾಹಿತ್ಯದ ಹಿರಿಮೆಯೂ ಅಪಾರವಾಗಿದೆ. ಕನ್ನಡ ಸಾಹಿತ್ಯಕ್ಕೆ ಇದುವರೆಗೂ ಯಾವ ಭಾಷೆಗೂ ದೊರೆಯದಷ್ಟು ಅತ್ಯುನ್ನತ 8 ಜ್ಞಾನಪೀಠ ಪ್ರಶಸ್ತಿಗಳು ದೊರೆತಿರುವುದು ಕನ್ನಡಿಗರ ಹೆಮ್ಮೆ ಈ ಪ್ರಶಸ್ತಿಗಳು ಭುವನೇಶ್ವರಿಗೆ ಕನ್ನಡಿಗರು ತಮ್ಮ ಉದಾರ ಗುಣದಿಂದ ಅರ್ಪಿಸಿದ ಸುವರ್ಣ ಮುಕುಟವೇ ಎನ್ನಬೇಕು ಅಂದು ನಾಡಿನೆಲ್ಲೆಡೆ ಕನ್ನಡ ಕಂಪಿನ ರಿಂಗಣ ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈಯ ಕಲ್ಪವೃಕ್ಷವಾಗುತ್ತದೆ. ಎಂಬೆಲ್ಲ ಸಂದೇಶಗಳು ಕರುನಾಡಿನ ವಿವಿಧ ಸಂದೇಶವನ್ನು ಸಾರುವ ಸ್ತಬ್ದಚಿತ್ರಗಳ ದರ್ಶನ, 8 ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳ ದರ್ಶನ ಹೀಗೆ ಒಂದೇ ಎರಡೇ ಕನ್ನಡ ನಾಡಿನ ಇಡೀ ಪ್ರಪಂಚವೇ ಅನಾವರಣಗೊಳ್ಳುವ ಹಬ್ಬವದು. ಈ ಸಂದರ್ಭದಲ್ಲಿ ನಾವು ತೆಲುಗು, ತಮಿಳು ಮಲೆಯಾಳಿಗಳಂತೆ ನಾವು ನಮ್ಮ ಭಾಷೆಯನ್ನು ಗೌರವಿಸಬೇಕು. ಆದರಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆ ಸಮೃದ್ದಿ ಭಾಷೆ, ಅಷ್ಟೇ ಪ್ರಾಚೀನ ಭಾಷೆಯೂ ಹೌದು. ಈ ಭಾಷೆಗೆ ಅದರದೇ ಆದ ವೈಶಿಷ್ಟ್ಯವಿದೆ. ‘ಕರ್ನಾಟಕ’ ಎಂಬ ಹೆಸರು ಪ್ರಾಚೀನವಾದುದೆಂದು ನಮಗೆ ಮೊದಲೇ ತಿಳಿದಿದೆ. “ಮಹಾಭಾರತ” ದಲ್ಲಿಯೂ ಅದರ ಉಲ್ಲೇಖವಿದೆ. “ಕುಂತಲದೇವಿ“, ಬನವಾಸಿ ನಾಡು” ಎಂದೂ ಕರ್ನಾಟಕವನ್ನು ಪ್ರಾಚೀನ ಕಾಲದಲ್ಲಿ ಕರೆದಿದೆ. ಆದರೆ “ಕರ್ನಾಟಕ” ಎಂಬುದು ಪ್ರಾಚೀನವಾದ ಜನಪ್ರಿಯ ಹೆಸರು ಅಧುನಿಕಕಾಲದಲ್ಲಿ ಇಂದು “ಮೈಸೂರ ರಾಜ್ಯ” ವಾಗಿ ಮೆರೆಯಿತು. 1973 ರಲ್ಲಿ ನಮ್ಮ ರಾಜ್ಯ ‘ಕರ್ನಾಟಕ’ ವೆಂದು ನಾಮಕರಣಗೊಂಡಿತು. ಬಹಳ ಹಿಂದಿನ ಕಾಲದಿಂದಲೂ ಆಡು ಭಾಷೆಯಾಗಿ ಕನ್ನಡ ಬಳಕೆಯಲ್ಲಿತ್ತು. ಹಲ್ಮಿಡಿ ಶಾಸನವೇ ಸದ್ಯಕ್ಕೆ ಕನ್ನಡದ ಮೊದಲನೇ ಲಿಖಿತದಾಖಲೆಯಾಗಿದೆ. ಇದು 1950 ವರ್ಷಗಳಷ್ಟು ಹಿಂದಿನದು ನಮಗೆ ದೊರೆತಿರುವ ಕನ್ನಡದ ಗ್ರಂಥಗಳಲ್ಲಿ “ಕವಿರಾಜ್ಯಮಾರ್ಗವೇ ಮೊದಲನೆಯದಾಗಿದೆ.

ಇದನ್ನು ನಾವು ಕೇವಲ ನವ್ಹಂಬರ 1 ರಂದು ಆಚರಿಸಿದರೆ ಅಷ್ಟೇ ಸಾಲದು ವರ್ಷದುದ್ದಕ್ಕೂ ಇದರ ಆಚರಣೆ ಆಗಬೇಕು. ಎಲ್ಲಾ ಆಡಳಿತದಲ್ಲೂ ಕನ್ನಡದ ಅನುಷ್ಠಾನನೂ ರಕ್ಕ ನೂರು ಆಗಬೇಕಾಗಿರುವುದು ಸದ್ಯದ ಅವಶ್ಯಕತೆ ಅಗಿದೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕನ್ನಡದ ಬಳಿಕ ಆದರೆ ಕನ್ನಡಿಗರಿಗೆ ಅದರಂಥ ಸಂತೋಷ ಬೇರೊಂದಿಲ್ಲ. ಭಾರತದ ಸ್ವಾತಂತ್ರ್ಯೋತ್ಸವಕ್ಕೆ ಸುವರ್ಣ ವರ್ಷಚರಣೆ ಹೇಗೆ ಆಗಿದೆಯೋ ಹಾಗೆ ಕರ್ನಾಟಕ ರಾಜ್ಯೋತ್ಸವವು ತನ್ನ ಸುವರ್ಣ ವರ್ಷಚರಣೆಯನ್ನು ಆಚರಿಸಿಕೊಂಡಿದೆ. ಈ ಅವಧಿಯಲ್ಲಿ ರಾಜ್ಯೋತ್ಸವವು ಕ್ರಮಿಸಿದ ದಾರಿಯು ಬಹಳ ದೂರವಾದುದಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರನ್ನು ನಾವು ಇಂದು ಸ್ಮರಿಸಿಕೊಳ್ಳಲೇಬೇಕು. ನಗರಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿನ ಅಂಗ್ಲ ಭಾಷೆಯ ನಾಮಫಲಕಗಳೆಲ್ಲವೂ ಆಂಗ್ಲ ಭಾಷೆಯಿಂದ ಕನ್ನಡ ಭಾಷೆಗೆ ಭಾಷಾಂತರಗೊಳ್ಳಬೇಕು. ನಾಡು ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾಡಿಗಾಗಿ ನಾನೇನು ಮಾಡಬೇಕು ಎಂಬುದನ್ನು ಪ್ರತಿಯೊಬ್ಬ ಕನ್ನಡಿಗನೂ ಅರಿತಿರಬೇಕಾದುದು ಇಂದು ಅತ್ಯಗತ್ಯವಾಗಿದೆ. ಇದರ ಅಂಗವಾಗಿಯೇ ರಾಜ್ಯೋತ್ಸವದ ದಿನ ಎತ್ತ ನೋಡಿದರೂ ಕನ್ನಡ ನಾಮಫಲಕಗಳ ಸಂಖ್ಯೆಗಳ ಫಲಕಗಳು ಕಾಣುತ್ತಿರುತ್ತವೆ. ಕನ್ನಡಿಗರ ಈ ಹಬ್ಬದಲ್ಲಿ ಕನ್ನಡಗಾನ ಮಾಧುರ್ಯ, ನಾಲ್ಕು ದಿಕ್ಕುಗಳಿಂದ ಮೊಳಗುತ್ತಿರುತ್ತದೆ. ಇಷ್ಟೆಲ್ಲಾ ನಾವು ಮಾಡಿದರೂ ನಮ್ಮ ತನು-ಮನ ಧನವೆಲ್ಲವೂ ಕನ್ನಡಕ್ಕಾಗಿ ಮಿಡಿಯುತ್ತಿರಬೇಕು, ಕನ್ನಡದ ಈ ಅಂದ ಚಂದ ಸ್ವಾರಸ್ಯವನ್ನು ನೋಡಿ ಅನೇಕ ಕವಿಗಳು ಸಾಹಿತಿಗಲು, ವಿದ್ವಾಂಸರು ಹಾಡಿ ಹೊಗಳಿದ್ದಾರೆ. ನಮ್ಮ ಕನ್ನಡ ಚಲನಚಿತ್ರಗಳಲ್ಲಯೂ ಕನ್ನಡ ನಾಡಿನ ವರ್ಣನೆ ಅತ್ಯಂತ ಸುಂದರ ಹಾಗೂಮಾರ್ಮಿಕವಾಗಿ ವಿವರಿಸಿ ಹಾಡಿದ್ದನ್ನು ಇಲ್ಲಿ ಉದಾಹರಿಸಬಹುದು.

ಪ್ರಪಂಚದಲ್ಲಿನ ಎಲ್ಲಾ ಭಾಷೆಗಳನ್ನು ಪ್ರೀತಿಸಬೇಕು ನಿಜ. ಆದರೆ ಜೇನಿನಂಥ ಕನ್ನಡ ಭಾಷೆಗೆ ಮೊದಲ ಆದ್ಯತೆಯನ್ನು ಕೊಡಬೇಕು. ವಿಶ್ವದಲ್ಲಿಯೇ ಕನ್ನಡ ಶ್ರೇಷ್ಠ ಭಾಷೆಯಾಗಿದ್ದು ಅದಕ್ಕೆ ಮೊದಲು ನಮ್ಮ ಮನ್ನಣೆ ನಮ್ಮ ಭಾಷೆಯ ಬಗ್ಗೆ ನಮಗೆ ಪ್ರೀತಿ ಅಭಿಮಾನವಿರಬೇಕು. ಅದರೆ ಅದು ರಾಷ್ಟ್ರಾಭಿಮಾನಕ್ಕೆ ಭಂಗ ತರಬಾರದು. ಈ ರೀತಿ ಪ್ರತಿ ರಾಜ್ಯದವರು ಚಿಂತನೆ ಮಾಡಿದರೆ ಭಾಷಾವಾರು ಪ್ರಾಂತ್ಯದ ರಚನೆಗೆ ದೇಶದ ಸಮಗ್ರತೆಗೆ ತೊಡಕಾಗುವುದಿಲ್ಲ. ತಾಯಿ ಭಾಷೆಗೆ ಸಮಾನವಾದ ಕನ್ನಡಕ್ಕೆ ಇಂದಿನ ಯುವಕರು ಅದರ ಋಣ ತೀರಿಸಬೇಕು. ಅದರಂತೆ ನಾಡಿನ ನೆಲ, ಜಲ, ಶಕ್ತಿಯನ್ನು ಸಂರಕ್ಷಿಸಬೇಕು. ಕನ್ನಡ ಭಾಷೆಯ ಋಣಶ್ರೇಷ್ಠವಾದದ್ದು ಪ್ರತಿಯೊಬ್ಬರೂ ಪ್ರತಿದಿನ ಕನ್ನಡ ಪತ್ರಿಕೆಯನ್ನು ಕೊಂಡು ಓದಿದರೆ ಕನ್ನಡದ ಸೇವೆ ಮಾಡಿದಂತಾಗುತ್ತದೆ. ಕನ್ನಡ ನಾಡು- ನುಡಿಯ ಸೇವೆ ದೊಡ್ಡದು ದಾರ್ಶನಿಕರು ಕವಿಗಳು ಸಾಹಿತಿಗಳು ನುಡಿ ಚಿಂತಕರು ತಮ್ಮ ಅಮೂಲ್ಯ ಸಾಹಿತ್ಯ ಸೇವೆಯಿಂದ ನಾಡಿನ ಹಿರಮೆ ಹೆಚ್ಚಿದೆ. ಅಂಥ ಅಂದವಾದ ಕನ್ನಡ ಭಾಷೆಗೆ ಅನ್ಯ ಭಾಷಿಕರ ದರ್ಬಾರಿನಿಂದ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು.
1826 ರಲ್ಲಿ ಬ್ರಿಟಿಷ್ ಅಧಿಕಾರಿಯಗಿದ್ದ ಥಾಮಸ್ ಮನ್ರೋನ ನಿಲುವೆ ಪರೋಕ್ಷವಾಗಿ ಏಕೀಕರಣದ ಯತ್ನವಾಯಿತು. ಈ ಏಕಿಕರಣದ ಕಾರ್ಯದಲ್ಲಿ ಪರಂಗಿಗಳ ಪಾತ್ರ ಕುರಿತ ವಿವರಣೆಯಿದೆ. ಕರ್ನಾಟಕದ ಬ್ರಿಟಿಷರ ಆಡಳಿತ ಪ್ರಾರಂಭವಾದದ್ದು 1799 ರಲ್ಲಿ ಆಮೇಲೆ ಮೈಸೂರು, ಹೈದರಾಬಾದ ರಾಜ್ಯಗಳು ಮುಂಬೈ ಪ್ರಾಂತ್ಯಗಳು ಹಗೂ ಕೊಡುಗು ಇವುಗಳಲ್ಲಿ ಕನ್ನಡ ಮಾತನಾಡುವ ಜನ ಹರಿದು ಹಂಚಿ ಹೋದರು. ಕೊನೆಗೂ ಏಕೀಕರಣ ಸಾಧ್ಯವಾದ್ದು 140 ವರ್ಷಗಳ ಅನೇಕ ಮುಂಬೈ ಪ್ರಾಂತ್ಯದಲ್ಲಿ ಸೇರಿಹೋಗಿದ್ದ ಧಾರವಾಡ, ಬೆಳಗಾವಿ ಹಾಗೂ ಬಿಜಾಪೂರ ಜಿಲ್ಲೆಗಳಲ್ಲಿ ಸ್ತಳೀಯ ಪಾಳೇಗಾರಿಕೆಯಿಂದ ಜನ ರೋಸಿ ಹೋಗಿದ್ದರು ಅಲ್ಲೆಲ್ಲಾ ಬಂಡಾಯದ ಸೊಲ್ಲೆದಿತ್ತು. ಅದನ್ನು 1818 ರಲ್ಲೇ ಸುಲಭವಾಗಿ ಪರಿಹರಿಸಿದವರು. ಇದೇ ಥಾಮಸ್ ಮನ್ರೋ ಮುಂಬೈ ಪ್ರಾಂತ್ಯಕ್ಕೆ ಸೇರಿದ ಈ ಜಿಲ್ಲೆಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸೇನ ತುಕಡಿಗಳನ್ನು ಕಳುಹಿಸಲು ಸಾಕಷ್ಟು ಸುಭದ್ರವಾಗಿದ್ದ ಮದ್ರಾಸ ಸರ್ಕಾರ ಮುಂದಾಯಿತು. ಆ ದಕ್ಷಿಣ ಪ್ರಾಂತ್ಯದ ಸೇನಾ ತುಕಡಿಗಳನ್ನು ಕಳುಹಿಸಲು ಸಾಕಷ್ಟು ಸುಭದ್ರವಾಗಿದ್ದ ಮದ್ರಾಸ ಸರ್ಕಾರ ಮುಂದಾಯಿತು.

ಆಗ ದಕ್ಷಿಣ ಪ್ರಾಂತ್ಯದ ಆಯುಕ್ತರಾಗಿದ್ದ ಚಾಪ್ಲಿನ್ ಎಂಬುವರು ಮುಂಬೈ ಗವರ್ನರ ಎಲ್ಪಿನ್ಸ್‍ನ್ ಅವರಿಗೆ 1896 ರಲ್ಲಿ ಒಂದು ಸಲಹೆ ಕೊಟ್ಟರು. ಮುಂಬೈ ಪ್ರಾಂತ್ಯದಲ್ಲಿರುವ ಕನ್ನಡ ಭಾಷಿಕರನ್ನು ಮದ್ರಾಸ್ ಪ್ರಾಂತ್ಯಕ್ಕೆ ಸೇರಿಸಿದರೆ ಒಳ್ಳೆಯದು ಎಂಬುದೇ ಆ ಸಲಹೆ ಪೌರ ಸಂಸ್ತೆಗಳಿಗೆ ಒಂದು ಆಡಳಿತ ವಿಭಾಗ. ಮಿಲಿಟರಿ ಸಮಸ್ಯೆಗಳಿಗೆ ಇನ್ನೊಂದು ಆಡಳಿತ ವ್ಯವಸ್ಥೆಯನ್ನು ಹೊಂದುವುದು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅವರು ಈ ಸಲಹೆ ಕೊಟ್ಟರು. ಬ್ರಿಟಿಷರ ಆಳ್ವಿಕೆಯಿಂದ ಪ್ರಾಂತ್ಯಗಳಲ್ಲಿ ಆಗ ಆಡಳಿತ ಸಮಿತಿಯೊಂದು ಅಸ್ತಿತ್ವದಲ್ಲಿ ಇದ್ದಿತು. ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಆ ಸಮಿತಿ ಸದಸ್ಯರ ಅನುಮತಿ ಬೇಕಿತ್ತು. ವಾರ್ಡನ್ ಎಂಬ ಸದಸ್ಯರೊಬ್ಬರು ಮುಂಬೈ ಪ್ರಾಂತ್ಯದ ಕನ್ನಡಿಗರನ್ನು ಮದ್ರಾಸ್ ಪ್ರಾಂತ್ಯಕ್ಕೆ ಸೇರಿಸಬೇಕೆಂಬ ಮನ್ರೋ ಸಲಹೆಯನ್ನು ಒಪ್ಪುಲಿಲ್ಲ. ಆ ಜಿಲ್ಲೆಗಳಲ್ಲಿ ಮರಾಠಿ ಮಾತನಾಡುವವರೇ ಹೆಚ್ಚಾಗಿರುವುದರಿಂದ ಆ ಸಲಹೆ ಸರಿಯಲ್ಲ ಎಂಬುದು ಅವರ ವಾದವಾಗಿತ್ತು. ಎಲ್ಪಿನ್ ಸ್ಟನ್ ಮಾತ್ರ ಈ ವಾದಕ್ಕೆ ಸೊಪ್ಪು ಹಾಕಲಿಲ್ಲ. ಕೊನೆಗೆ ಈ ಪ್ರಾಸ್ತಾವವು ಆಗ ಮದ್ರಾಸ್‍ನ ಹಂಗಾಮಿ ಗವರ್ನರ್ ಆಗಿ ಮುಂದುವರಿದ ಥಾಮಸ್ ಮನ್ರೋ ಅವರನ್ನು ತಲುಪಿತು. 1826 ಮೇ 5 ರಂದು ಮನ್ರೋ ಎಲ್ಫಿನ್ ಸ್ಟನ್ ಸಲಹೆಯನ್ನು ಒಪ್ಪಿ ಅದಕ್ಕೆ ಈ ಕೆಳಗಿನಂತೆ ವಿವರವಾದ ಪ್ರತಿಕ್ರಿಯೆ
ನೀಡಿದರು. ಮೂರು ಜಿಲ್ಲಿಗಳಲ್ಲಿರುವ ಕನ್ನಡ ಮಾತನಾಡುವವರು ನೆರೆಯ ಬಳ್ಳಾರಿ ಹಾಗು ಕರಾವಳಿಯ ಅದರಲ್ಲೂ ವಿಶೇಷವಾಗಿ ಶಿರಸಿ ಹಾಗು ಹೊಸಪೇಟೆಯ ಜತೆ ನಿರಂತರ ವಾಣಿಜ್ಯ ಹಾಗೂ ಸಾಮಾಜಿಕ ಸಂಬಂಧ ಇಟ್ಟುಕೊಂಡಿದ್ದಾರೆ. ಸಹಜ ಸಂಬಂಧ ಇಲ್ಲದ ಮರಾಠಿ ಭಾಷಿಕರ ಜೊತೆ ಇರುವುದಕ್ಕಿಂತ ಹೆಚ್ಚು ತೃಪ್ತಿ ಕನ್ನಡಿಗರಿಗೆ ತಮ್ಮದೇ ಭಾಷಿಕರ ಜೊತೆ ಇದ್ದಾಗ ಸಿಗುತ್ತದೆ ಎಂದಿದ್ದಾರೆ.

ಈಗ ನಮ್ಮೆಲ್ಲರಲ್ಲಿ ಕನ್ನಡ ಬಗ್ಗೆ ಅಭಿಮಾನ ಮೂಡಿ ಬರಬೇಕು. ಕನ್ನಡಕ್ಕಾಗಿ ನಾವು ಎಂಥ ತ್ಯಾಗಕ್ಕೂ ಸಿದ್ದರಾಗಬೇಕು ಕನ್ನಡ ನಮ್ಮ ದೇಹದ ನರನಾಡಿಗಳಲ್ಲಿ ಹರಿದಾಡುವಂತಾಗಬೇಕು. ನಾಡ ಧ್ವಜಕ್ಕೆ ಗೌರವ ದೊರೆಯುವಂತಾಗಬೇಕು. 12ನೇ ಶತಮಾನದಲ್ಲಿ ನಮ್ಮ ಜಗಜ್ಯೋತಿ ಬಸವೇಶ್ವರರು ಮೊಟ್ಟ ಮೊದಲಿಗೆ ವಿಶ್ವ ಭಾಷೆಯ ಸ್ಥಾನಮಾನವನ್ನು ಕನ್ನಡಕ್ಕೆ ನೀಡಿದ್ದಾರೆ. ಅದಕ್ಕಾಗಿ ನಮ್ಮ ಸುಧೀರ್ಘ ಇತಿಹಾಸ ಇರುವ ಕನ್ನಡವು ವಿದೇಶದವರೆಗೂ ಹರಡಬೇಕು. ವಿದೇಶದಲ್ಲಿ ಆಂಗ್ಲ ಭಾಷೆಗೆ ಯಾವ ಸ್ಥಾನಮಾನ ಗೌರವ ಇದೆಯೋ ಹಾಗೆಯೇ ಕನ್ನಡಕ್ಕೂ ಮೊದಲ ಸ್ಥಾನಮಾನ ಗೌರವ ಸಿಗುವ ದೃಷ್ಟಿಯಿಂದ 2011 ಮಾರ್ಷ 11,12,13 ರಂದು ನಡೆದ ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನ ಅದಕ್ಕೆ ಮುನ್ನುಡಿ ಬರೆಯಿತು. ಅಲ್ಲಿಯೂ ಕನ್ನಡದ ಬಗೆಗೆ ಪ್ರೀತಿ ಅಭಿಮಾನ ಮೂಡಲಿ ಕನ್ನಡದ ಕೆಂಪು ಹಳದಿ ಬಾವುಟ ಹಾರಾಡಲಿ ಎಲ್ಲೆಲ್ಲೂ ಕನ್ನಡದ ಅಕ್ಷರಗಳು ರಾರಾಜಿಸಲಿ, ನಾಡುನುಡಿ ಗಡಿಭಾಷೆಯ ಕನ್ನಡದ ವಿಜಯ ಘೋಷಣೆ ವಾಕ್ಯಗಳು ದಶದಿಕ್ಕುಗಳಲಿ ಮಾರ್ದನಿಗೊಳ್ಳಲಿ ಬಾಳು ಭೂಮಿ ಇವರು ತನಕ ನಗುತಲಿರಲಿ ಕನ್ನಡ ಕನ್ನಡ ಎಂದೆಂದಿಗೂ ನಮ್ಮ ಉಸಿರಾಗಲಿ ಕನ್ನಡಿಗರು ನಾವೆಂದೂ ನಮ್ಮ ಭಾಷೆಗೆ ಮೊದಲು ಆದ್ಯತೆ ನಡೋಣ.

ಕನ್ನಡದ ರವಿ ಮೂಡಿ ಬಂದ
ಮುನ್ನಡೆವ ಬೆಳಕನ್ನು ತಂದ
ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ
ಬಾರಿಸು ಕನ್ನಡ ಡಿಂಡಿಮನ ಓ ಕರ್ನಾಟಕ ಹೃದಯ ಶಿವಾ
ಕರುನಾಡ ತಾಯಿ ಸದಾ ಚಿನ್ಮಯಿ ಈ ಪುಣ್ಯ ಭೂಮಿ
ನಮ್ಮ ದೇವಾಲಯ ಪ್ರೇಮಾಲಯ ಈ ದೇವಾಲಯಾ
ತಾಯಿ ಬಾರ ಮೊಗದ ತೊರ
ಕನ್ನಡಿಗರ ಮಾತೆಯೇ ಹರಸು ತಾಯಿ
ಸುತರ ತಾಯಿ ನಮ್ಮ ಜನ್ಮದಾತಯೇ
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣು ಮಟ್ಟಬೇಕು
ಬದುಕಿದು ಜಟಕಾ ಬಂಡಿ ಇದು ವಿಧಿಯೊಡಿಸುವ ಬಂಡಿ

ಇಂಥ ಆತ್ಮ ಅಮೂಲ್ಯ ನಾಡಿನ ಗತ ಇತಿಹಾಸವನ್ನು ಸಾರುವ ಗೀತೆಗಳೊಂದಿಗೆ ಕನ್ನಡಿಗರ ಕನ್ನಡತನವನ್ನು ಜಾಗೃತಗೊಳಿಸುತ್ತವೆ, ನಮ್ಮ ನಾಡಿನಲ್ಲಿ ಅನೇಕ ವಿಧದ ಜಾತಿ-ಜನಾಂಗದವರೂ ಇದ್ದಾರೆ. ಅವರಲ್ಲಿಯೂ ಸ್ವಲ್ಪ ಕನ್ನಡವು ಉಳಿದಿದೆ ಎಂಬುದರಲ್ಲಿ ಎರಡು ಮಾತಿಲ್ಲ ಉದಾಹರಣೆಗೆ ನಮ್ಮ ಕನ್ನಡದ ಗಾನ ಗಾರುಡಿಗ ಕನ್ನಡದ ಅತ್ಯುನ್ನತ ಜ್ಞಾನಪೀಠ ಸಾಹಿತ್ಯದ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡದಲ್ಲಿಯೇ ಕವಿತೆಗಳನ್ನು ರಚನೆ ಮಾಡಿ ಜ್ಞಾನಪೀಠಪ್ರಶಸ್ತಿಯನ್ನು ತಮ್ಮ ಮೂಡಿಗೇರಿಸಿಕೊಂಡರು. ಮೂಲತಃ ಬೇಂದ್ರೆಯವರು ಮರಾಠಿ ಭಾಷಿಕ ಮನೆತನದಿಂದ ಬಂದಿದ್ದರೂ ಅವರ ಕನ್ನಡ ಸಾಹಿತ್ಯ ಕೃಷಿ ಅವರನ್ನು ಉನ್ನತ ಜ್ಞಾನಪೀಠ ಪ್ರಶಸ್ತಿಗೆ ಕರೆ ತಂದದ್ದನ್ನು ಕನ್ನಡಿಗರೆಲ್ಲರೂ ಮೆಚ್ಚಬೇಕಾದ ವಿಷಯವೇ ಸರಿ ಇಂಥ ಸಂದರ್ಭದಲ್ಲಿ ಅವರನ್ನು ಇಲ್ಲಿ ನೆನೆಯುವದು ಹೆಚ್ಚು ಸೂಕ್ತವೆನಿಸುತ್ತದೆ. ಹೀಗೆ ಕನ್ನಡ ನಾಡಿನ ಇತಿಹಾಸ ಬಹಳ ದೀರ್ಘವಾಗಿದೆ.

ವಿಶಾಲವಾಗಿದೆ. ಇದಕ್ಕೆ ಅನೇಕ ಸಾಹಿತಿಗಳು ಇತಿಹಾಸಕಾರರು, ವಿದ್ವಾಂಸರ ಶ್ರಮ ಅಪಾರವಾಗಿದೆ, ಅನಂತವಾಗಿದೆ. ಇದಕ್ಕಾಗಿ ಕನ್ನಡಿಗರ ತಮ್ಮ ನಾಡು ನುಡಿ ಜಲದ ರಕ್ಷಣೆಗಾಗಿ ಸದಾ ಸಿದ್ದರಾಗಿರುತ್ತಾರೆ ಎಂಬುದೇ ಈ ವರ್ಷದ ರಾಜ್ಯೋತ್ಸವದ ಸಂದೇಶ.

 

  • ಆರ್.ಎಫ್.ಚೋಬಾರಿ
    ಬೆಳಗಾವಿ.

ಹಾರಿಸು ಕನ್ನಡ ಧ್ವಜವನ್ನು
ಹಾರಿಸು ಕನ್ನಡ ಧ್ವಜವನ್ನು
ಎತ್ತರಕೆ ಮುಗಿಲೆತ್ತರಕೆ ಬಾನೆತ್ತರಕೆ
ಹಬ್ಬಿಸು ಕನ್ನಡ ಕೀರ್ತಿಯನು
ನಾಡಾಚೆ ಹೊರನಾಡಾಚೆ ಆ ಕಡಲಾಚೆ !!

ಕನ್ನಡ ನಾಡಿನ ಮುದ್ದಿನ ಮಗನೇ
ಬೆಳೆಸು ಬೆಳೆಸು ನೀ ಕನ್ನಡವಾ
ಕನ್ನಡ ಕೀರ್ತಿ ಪತಾಕೆಯ ಹಿಡಿದು
ಹಾರಿಸು ಹಾರಿಸು ಈ ಧ್ವಜವಾ !!

ಕೆಂಪು ಹಳದಿ ಕನ್ನಡ ಬಾವುಟ
ಹಾರಾಡಲಿ ಕರುನಾಡಲ್ಲಿ
ಕನ್ನಡ ನೆಲದಾ ವೀರ ಪುತ್ರರೇ
ಹಾರಿಸಿ ಧ್ವಜ ಎಲ್ಲೆಡೆಯಲ್ಲಿ !!

ಕನ್ನಡಿಗರ ಈ ಚಿನ್ನದ ನುಡಿಯು
ಪ್ರತಿಯೊಬ್ಬರ ಜೀವದ ಉಸಿರು
ಸೂರ್ಯಚಂದ್ರರು ಇರೊವರೆಗೂ
ಈ ನೆಲದಲ್ಲಿ ಕನ್ನಡ ಹಸಿರು !!

ಕರುನಾಡಲ್ಲಿ ಕನ್ನಡ ರಿಂಗಣ
ಕನ್ನಡ ಮನದಲಿ ಕನ್ನಡ ಢಣಢಣ
ಕನ್ನಡ ಸರಸ್ವತಿ ನಾಲಿಗೆ ಮೇಲೆ
ಕನ್ನಡ ಕೀರ್ತಿ ಮುಗಿಲಿಗು ಮೇಲೆ !!

ಕನ್ನಡ ಧ್ವನಿಯು ಘರ್ಜಿಸಲಿ
ಕನ್ನಡ ಜನಗಳು ಸಾಧಿಸಲಿ
ಕನ್ನಡ ಕಂಪು ಪಸರಿಸಲಿ
ಕನ್ನಡತನ ರಾರಾಜಿಸಲಿ !!