ಇಸ್ರೋಗೆ ಸಮರ್ಥ ಹೊಣೆಗಾರಿಕೆ  

ಮಾನವ ಗಗನನೌಕೆ ನಿರ್ಮಾಣದ ಮಾನದಂಡಗಳು ಬೇರೆಯ ವಿಧವಾಗಿವೆ. ಫೆಡರೇಷನ್ ಏರೊನಾಟಿಕ್ ಇಂಟನ್ರ್ಯಾಷನಲ್ (ಎಫ್‍ಎಐ) ಗಗನಯಾತ್ರಿಗಳ ನಿಯಮಾವಳಿಗಳು ಒಂದು ಎತ್ತರವನ್ನು ಮೀರಬಲ್ಲ ನೌಕೆಯನ್ನು ಮಾತ್ರ ಮಾನ್ಯಮಾಡುತ್ತದೆ.100 ಕಿಮೀ ಯುನೈಟೆಡ್ ಸ್ಟೇಟ್ಸ್‍ನಲ್ಲಿ ಒಂದು ಎತ್ತರ50 miಟes (80 ಕಿಮೀ)ದ ಮೇಲೆ ಪ್ರಯಾಣಿಸುವ ವೃತ್ತಿಪರ, ಮಿಲಿಟರಿ ಮತ್ತು ವಾಣಿಜ್ಯ ಗಗನಯಾತ್ರಿಗಳಿಗೆ ಗಗನ ಯಾತ್ರಿಗಳ ತಂಡ ಸೇರುವ ಅವಕಾಶವನ್ನು ನೀಡಲಾಗುತ್ತದೆ.

ಸೆಪ್ಟೆಂಬರ್ 19, 2009ರ ವರೆಗೆ 38 ದೇಶಗಳಿಂದ ಒಟ್ಟು 505 ಜನ ತಲುಪಿದ್ದರು100 ಕಿಮೀ (62 ಮೈಲಿಗಳು) ಅಥವಾ ಇನ್ನೂ ಹೆಚ್ಚು ಎತ್ತರಕ್ಕೆ, 502 ಜನರು ಕೆಳಗಿನ ಭೂ ಕಕ್ಷೆ ಅಥವಾ ಅದರಾಚೆಗೆ ತಲುಪಿದ್ದರು. ಇವುಗಳಲ್ಲಿ, ಚಂದ್ರನ ಅಥವಾ ಟ್ರಾನ್ಸ್-ಲೂನಾರ್ ಕಕ್ಷೆಗೆ ಅಥವಾ ಚಂದ್ರನ ಮೇಲ್ಮೈಗೆ 24 ಜನರು ಕೆಳಗಿನ ಭೂ ಕಕ್ಷೆಗಿಂದಾಚೆಗೆ ಪ್ರಯಾಣಿಸಿದ್ದಾರೆ; 24ರಲ್ಲಿ ಮೂವರು ಎರಡು ಬಾರಿ ಪ್ರಯಾಣಿಸಿದ್ದಾರೆ: ಜಿಮ್ ಲೊವೆಲ್, ಜಾನ್ ಯಂಗ್ ಮತ್ತು ಯುಜಿನ್ ಸೆರ್ನನ್.

ಮಾನವಸಹಿತ ಗಗನಯಾನ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವು ನಿಜಕ್ಕೂ ಸ್ವಾಗತಾರ್ಹ. 2022ಕ್ಕೆ ಕಠಿಣ ಗುರಿ ತಲುಪಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಡಾ. ಕೆ.ಶಿವನ್ ವಿಶ್ವಾಸ ವ್ಯಕ್ತಪಡಿಸಿರುವುದನ್ನು ಸಹ ನಾವಿಲ್ಲಿ ಗಮನಿಸಬಹುದಾಗಿದೆ.

ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಮಾನವ ಸಹಿತ ಗಗನಯಾನದ ಘೋಷಣೆ ಮಾಡಿದ್ದಾರೆ. ಇಸ್ರೋ ಮೇಲೆ ಇಷ್ಟೊಂದು ವಿಶ್ವಾಸವಿಟ್ಟು ಘೋಷಣೆ ಮಾಡಿದ್ದಕ್ಕೆ ಪ್ರಧಾನಿಗಳಿಗೆ ಧನ್ಯವಾದ ಅರ್ಪಿಸಿರುವ ಶಿವನ್ ಅವರು ಜೊತೆಗೆ ಯೋಜನೆಯನ್ನು ಸ್ವಾಗತಿಸಿರುವುದು ಇಲ್ಲಿ ಉಲ್ಲೇಖಾರ್ಹ ಸಂಗತಿ.

2022 ಕ್ಕೆ ಮಾನವಸಹಿತ ಗಗನಯಾನ ಮಾಡುವ ಯೋಜನೆ ರೂಪಿಸಬೇಕಿದೆ. ನಮ್ಮ ಮುಂದೆ ಕೇವಲ 4 ವರ್ಷ ಮಾತ್ರ ಬಾಕಿ ಇದೆ. ಅಷ್ಟರಲ್ಲಿ  ಈ ಗುರಿ ತಲುಪುವುದು ಬಹಳ ಕಠಿಣ. ಅಂತಹ ತಂತ್ರಜ್ಞಾನವನ್ನು ನಾವು ಅಭಿವೃದ್ಧಿಪಡಿಸಬೇಕಿದೆ. ಇದು ನಿಜಕ್ಕೂ ನಮಗೆ ಸವಾಲಾಗಿದೆ. ನಮ್ಮ ಬಳಿ ಸದ್ಯ ಮಾನವರಹಿತ ಗಗನಯಾನ ಮಾಡುವ ತಂತ್ರಜ್ಞಾನ ಮಾತ್ರ ಇದೆ. ಈಗ ಮಾನವ ಸಹಿತ ತಂತ್ರಜ್ಞಾನ ಅಭಿವೃದ್ಧಿ ಪಡಿಸಬೇಕಿದೆ. ಎರಡು ಮೂರು ಉಡಾವಣೆಗಳನ್ನು ನಡೆಸಿ ನಂತರವೇ ಮಾನವ ಸಹಿತ ಗಗನಯಾನಕ್ಕೆ ಮುಂದಾಗಬೇಕಿದೆ. ಆದರೂ ಈ ಕಠಿಣ ಗುರಿ ತಲುಪಲು ಎಲ್ಲ ರೀತಿಯ ಪ್ರಯತ್ನ ನಡೆಸುವ ಭರವಸೆ ಇದೆ. ಆಪ್ತ ರಾಷ್ಟ್ರಗಳ ಸಹಕಾರ ಪಡೆದುಕೊಂಡು  ಮಾನವ ಸಹಿತ ಗಗನಯಾನ ಯೋಜನೆಯನ್ನು ಯಶಸ್ವಿಯಾಗಿ ಮಾಡುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದು ದೇಶದ ವೈಜ್ಞಾನಿಕ ಸಾಮಥ್ರ್ಯಕ್ಕೆ ಸಾಕ್ಷಿಯಾಗಿದೆ.

ಮಾನವ ಸಹಿತ ಬಾಹ್ಯಾಕಾಶ ನೌಕೆ ಉಡಾವಣೆ ಸಾಧ್ಯವಿದೆ. ಇದು ಇಸ್ರೋಗೆ ಸವಾಲು ಕೂಡ. ಜೊತೆಗೆ ಘನತೆ ಕೂಡ ಹೌದು. ಇದೊಂದು ದೊಡ್ಡ ಯೋಜನೆ ಎಂಬುದಂತೂ ನಿಜನನ.ತುಂಬಾ ಕೆಲಸ ಇದೆ. ಈಗಾಗಲೆ ಬೇಕಾದ ತಂತ್ರಜ್ಞಾನಗಳ ಅಭಿವೃದ್ಧಿ ಕಾರ್ಯ ನಡೀತಿದೆ. ಇನ್ನು ಪ್ರಧಾನಿಯವರು ಹೇಳಿದ ಗುರಿ ತಲುಪುವುಯೊಂದೆ ಬಾಕಿ. ಈ ಕೆಲಸ ಇಸ್ರೋದಿಂದ ಖಂಡಿತ ಸಾಧ್ಯ. ಈಗಾಗಲೇ ಅಂತರಿಕ್ಷ ಯಾನಿಗಳಿಗೆ ಬೇಕಾದ ಜೀವರಕ್ಷಕ ಸ್ಯೂಟ್ ಅನ್ನು ಇಸ್ರೋ ಅಭಿವೃದ್ಧಿ ಪಡಿಸಿದೆ. 2022ರ ಒಳಗೆ ಮಾನವ ಸಹಿತ ಅಂತರಿಕ್ಷ ಯಾತ್ರೆ ಮಾಡುವ ದೇಶವಾಗಿ ಭಾರತ ಹೊರಹೊಮ್ಮಲಿದೆ ಎಂಬ ಶಿವನ್ ಮಾತು ನಿಜಕ್ಕೂ ಗರ್ವ ಪಡಬೇಕಾದ ವಿಷಯ

2022ರ ಒಳಗೆ ಮಾನವ ಸಹಿತ ಅಂತರಿಕ್ಷ ಯಾತ್ರೆ ಮಾಡುವ ದೇಶವಾಗಿ ಭಾರತ ಹೊರಹೊಮ್ಮಲಿದೆ. ನೌಕೆಯಲ್ಲಿ ನಮ್ಮವರೇ ಯಾರಾದ್ರೂ ಒಬ್ಬರು ಹೋಗ್ತಾರೆ. ಆದರೆ ಯಾರು ಹೋಗ್ತಾರೆ ಅನ್ನೋದನ್ನ ಈಗಲೇ ಹೇಳಲಾಗುವುದಿಲ್ಲ ಅನ್ನೋದೂ ನಿಜ. 10 ಸಾವಿರ ಕೋಟಿಗಿಂತ ಕಡಿಮೆ ವೆಚ್ಚದಲ್ಲಿ ಈ ಪ್ರಾಜೆಕ್ಟ್ ತಯಾರಾಗಲಿದೆ ಎಂಬುದು ಮಹತ್ವದ ವಿಷಯ. ಕೇವಲ ದೇಶದ ಹೆಮ್ಮೆಯ ವಿಚಾರಕ್ಕಾಗಿ ಮಾತ್ರ ಮಾನವ ಸಹಿತ ಬಾಹ್ಯಾಕಾಶ ನೌಕೆ ಉಡಾವಣೆ ಮಾಡುತ್ತಿಲ್ಲ. ಈ ಉಡಾವಣೆಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತಷ್ಟು ಉನ್ನತ ದರ್ಜೆಗೆ ಹೋಗಲಿಲಿದೆ.

ಮಾನವಸಹಿತ ಗಗನಯಾನ ಯೋಜನೆಗೆ 10 ಸಾವಿರ ಕೋಟಿ ರೂ.ಗಳ ಅಗತ್ಯವಿದೆ. ತಂತ್ರಜ್ಞಾನ ಅಭಿವೃದ್ಧಿಗೆ 200 ಕೋಟಿಗೂ ಹೆಚ್ಚಿನ ಹಣ ಬೇಕಾಗಲಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಗಾಗಿಯೇ ಕೇಂದ್ರದ ಪ್ರತ್ಯೇಕ ಬಜೆಟ್ ಇದ್ದು, ಅಗತ್ಯ ಹಣಕಾಸು ನೆರವು ಸಿಗಲಿರುವುದು ಸ್ವಾಗತಾರ್ಹ. ಒಂದೆರಡು ತಿಂಗಳಲ್ಲಿ ಸಿದ್ಧತಾ ಕಾರ್ಯ ಆರಂಭ ಎಂಬ ಭರವಸೆ ಶಿವನ್ ಅವರಿಂದ ಸಿಕ್ಕಿದೆ. ಇಸ್ರೋ ಸೊನ್ನೆಯಿಂದ ಯೋಜನೆಯನ್ನ ಆರಂಭಿಸಬೇಕಿಲ್ಲ. ಯಾಕಂದರೆ ಈಗಾಗಲೇ ಇಸ್ರೋ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದೆ. ಅದನ್ನು ಮುಂದುವರೆಸಬೇಕಷ್ಟೆ ಎಂದು ಮೋದಿ ನೀಡಿದ ಗುರಿ ತಲುಪಲು ಸಾಧ್ಯ ಎನ್ನುವ ವಿಶ್ವಾಸ ವ್ಯಕ್ತಪಡಿಸಿರುವುದು ದೇಶಕ್ಕೇ ಹೆಮ್ಮೆಯ ವಿಷಯ.

ಗಗನಯಾನಕ್ಕೆ ಮಾನವರ ಬಳಕೆಗೆ ಅಂತಾರಾಷ್ಟ್ರೀಯ ಅಂತರಿಕ್ಷ ಸಂಸ್ಥೆಯಿಂದ ಅನುಮತಿ ಬೇಕು. ಅದನ್ನು ಪಡೆದುಕೊಳ್ಳಲಾಗುತ್ತದೆ ಇಸ್ರೋಗೆ ಸರಳ ಪ್ರಕ್ರಿಯೆ ಅಷ್ಟೇ. ಪ್ರಧಾನಿ ನರೇಂದ್ರ ಮೋದಿ ಕನಸು ನನಸಾಗಿಸುವ ಹೊಣೆ ಇಸ್ರೋ ಮೇಲಿದೆ. ಈ ಹೊಣೆಗಾರಿಯನ್ನು  ಇಸ್ರೋ ಸಮರ್ಥವಾಗಿ ನಿರ್ವಹಿಸುವ ಭರವಸೆ ಖಂಡಿತ ಇದೆ.