Saturday, October 23, 2021

ನಾಳೆ ಸಂಜೆಯಿಂದ 15 ದಿನ ಕರ್ನಾಟಕ ಲಾಕ್

Must Read
- Advertisement -

ಬೆಂಗಳೂರು ಏ., 26- ಮಹಾರಾಷ್ಟ್ರವನ್ನು ಮೀರಿ ಹೆಚ್ಚುತ್ತಿರುವ ಕೊರೊನಾದಿಂದಾಗಿ ನಾಳೆ ರಾತ್ರಿಯಿಂದ 14 ದಿನ ರಾಜ್ಯಾದ್ಯಂತ ಬೀಗಿ ಕ್ರಮ ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು ಘೋಷಣೆ ಮಾಡಿದರು.

ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೃಷಿ, ಕಟ್ಟಡ, ಉತ್ಪಾದನಾ ಕ್ಷೇತ್ರ, ಅಗತ್ಯ ಸೇವೆಗಳು ಹೊರತು ಪಡಿಸಿ ಎಲ್ಲವೂ ಬಂದ ಅಗಿರಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು. ರೈತರು ಬೆಳಿಗ್ಗೆ 10 ಗಂಟೆಯ ವರೆಗೆ ವ್ಯವಹರಿಸಲು ಅವಕಾಶ ನೀಡಲಾಗಿದೆ. ಅಷೇ ಅಲ್ಲದೇ ಜನರು ಸಹ ತಮ್ಮ ಅಗತ್ಯ ವಸ್ತುಗಳನ್ನು ಈ ಸಮಯದಲ್ಲಿ ಖರಿದಿಗೆ ಹೊರಬರಬಹುದಾಗಿದೆ ಎಂದು ತಿಳಿಸಿದರು.

- Advertisement -

- Advertisement -

ಈ 14 ದಿನದಲ್ಲಿ ಕೊರೊನಾ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ. ಒಂದು ವೇಳೆ ಈ 14 ದಿನದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರದಿದ್ದರೆ ಮುಂದೆಯೂ ಕಠಿಣ ಕ್ರಮ ಮುಂದುವರೆಸಬೇಕಾಗುತ್ತದೆ ಎಂದು ಹೇಳಿದರು. ಜನರ ಓಡಾಟದ ಮೇಲೆ ನಿರ್ಭಂಧ ಇರುವುದರಿಂದ ಈ 14 ದಿನ ಬಸ ಸಂಚಾರ, ಕ್ಯಾಬ್, ಅಟೋ, ಟ್ಯಾಕ್ಸಿ, ಕೂಡ ಬಂದ ಆಗಿರಲಿದೆ, ಗೂಡ್ಸ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ, ಅಂತರ ರಾಜ್ಯ ಸಂಚಾರ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ ಎಂದು ಅವರು ತಿಳಿಸಿದರು.

 

ಈ ಕಠಿಣ ಕ್ರಮದ ಬಗ್ಗೆ ಶೀಘ್ರದಲ್ಲಿಯೇ ಸರ್ಕಾರದ ಕಾರ್ಯದರ್ಶಿ ಮಾರ್ಗಸೂಚಿಯನ್ನು ಬಿಡುಗಡೆಮಾಡಲಿದ್ದಾರೆ ಎಂದು ಹೇಳಿದರು.
ಅಷ್ಟೇ ಅಲ್ಲದೆ ರಾಜ್ಯದಲ್ಲಿ 18 ರಿಮದ 45 ವರ್ಷದ ಜನರಿಗೆ ಉಚಿತ ಲಸಿಕೆ ನೀಡಲಾಗುವುದು ಎಂದು ಘೋಷಿಸಿದರು. ಇದಕ್ಕೆ ಆರೋಗ್ಯ ಇಲಾಖೆ ಸ್ಪಷ್ಟ ಮಾರ್ಗಸೂಚಿಯನ್ನು ಬಿಡುಗಡೆಮಾಡಲಿದೆ ಎಂದರು.

ರಾಜ್ಯಕ್ಕೆ ಅಗತ್ಯವಿರುವ ಆಕ್ಸಿಜನತ ಪೂರೈಸಲು ಕೇಂದ್ರ ಭರವಸೆ ನೀಡಿದೆ. ಹೀಗಾಗಿ ಇನ್ನೂ ಮುಂದೆ ಆಕ್ಸಿಜನ್ ಕೊರತೆ ಉಂಟಾಗುವುದಿಲ್ಲ ಎಂದು ತಿಳಿಸಿದರು.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -