Monday, October 18, 2021

ಕೃಷ್ಣಾನದಿ ದುರಂತದ ಬನಸೋಡೆ ಕುಟುಂಬಕ್ಕೆ ಜಿಲ್ಲಾಧಿಕಾರಿ  ಎಂ ಜಿ ಹಿರೇಮಠ್ ಭೇಟಿ, ಪರಿಹಾರದ ಭರವಸೆ

Must Read
ಅಥಣಿ: ತಾಲೂಕಿನ ಹಲ್ಯಾಳ ಗ್ರಾಮದ ಬನಸೋಡೆ ಕುಟುಂಬಕ್ಕೆ ಜಿಲ್ಲಾಧಿಕಾರಿ ಎಮ್. ಜಿ ಹಿರೇಮಠ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಕೃಷ್ಣಾ ನದಿಯ ಈ ದುರ್ಘಟನೆ ವಿಪತ್ತು ಪರಿಹಾರ ನಿಧಿಯ ವ್ಯಾಪ್ತಿಗೆ ಬರುವುದಿಲ್ಲ, ಆದರೆ ನಮ್ಮ ಸರಕಾರದ ಯಾವುದಾದರೊಂದು ಯೋಜನೆಯಡಿ ಖಂಡಿತವಾಗಿ ಬನಸೋಡೆ ಕುಟುಂಬಕ್ಕೆ ಪರಿಹಾರ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು.
ಬನಸೊಡೆ ಕುಟುಂಬಕ್ಕೆ ಖಂಡಿತವಾಗಿ ಪರಿಹಾರ ಕೊಡಿಸ್ತಿವಿ ಜೊತೆಗೆ ಅವರ ಮಕ್ಕಳ ವಿದ್ಯಾಭ್ಯಾಸವನ್ನು ಸರಕಾರಿ ವಸತಿ ಶಾಲೆಯಲ್ಲಿ ಉನ್ನತ ಶಿಕ್ಷಣದವರೆಗೆ ಶಿಕ್ಷಣ ಕೊಡಿಸುವ ಜವಾಬ್ದಾರಿ ನಮ್ಮದು, ಮೇಲಾಗಿ ಈ ಕುಟುಂಬದ ಹಿನ್ನೆಲೆ ಕೇಳಿ ಬಹಳ ದುಖಃವಾಗಿದೆ ಹಾಗೂ ಈ ಘಟನೆ ಸಂಭವಿಸಿದ ಕ್ಷಣದಿಂದ ಜಿಲ್ಲಾ ಆಡಳಿತ ಹಾಗೂ ತಾಲೂಕು ಆಡಳಿತದ ಜೊತೆಗೆ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಅಥಣಿ  ಶಾಸಕರಾದ ಮಹೇಶ ಕುಮಠಳ್ಳಿ  ಅವರು ನಿರಂತರ ಸಂಪರ್ಕದಲ್ಲಿದ್ದರು, ಈ ವಿಷಯ ತಿಳಿಸುತ್ತಿದ್ದಂತೆ ನಾವು ಮಹಾರಾಷ್ಟ್ರದ ಕೊಲ್ಲಾಪುರ್ ಜಿಲ್ಲಾಧಿಕಾರಿ ಜೊತೆಯಲ್ಲಿ ಮಾತನಾಡಿ ಸ್ಥಳಕ್ಕೆ ನುರಿತ ಈಜುಗಾರರನ್ನು ಕಳಿಸಿದೆವು. ಬನಸೋಡೆ ಕುಟುಂಬ ಸದಸ್ಯರ ನೋವು ನಮಗೆ ಅರ್ಥವಾಗುತ್ತದೆ ಸಾಧ್ಯವಾದಷ್ಟು ಸಹಾಯವನ್ನು ಜಿಲ್ಲಾಡಳಿತ ಮತ್ತು ಸರ್ಕಾರ ಮಾಡಲಿದೆ ಎಂದರು.
ಈ ವೇಳೆ ತಾಲೂಕು ದಂಡಾಧಿಕಾರಿ ದುಂಡಪ್ಪ ಕೋಮಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರಪ್ಪನವರ, ಉಪತಹಶಿಲ್ದಾರ ಮಹಾದೇವ  ಬಿರಾದಾರ್, ಡಿವೈಎಸ್ಪಿ ಎಸ್. ವಿ ಗಿರೀಶ್, ಪಿಎಸ್ಐ ಕುಮಾರ ಹಾಡಕಾರ, ಗ್ರಾಮ ಪಂಚಾಯತ್ ಅಧ್ಯಕ್ಷ ಮುದುಕಣ್ಣ ಶೇಗುಣಸಿ, ಯಲ್ಲಾಲಿಂಗ್ ಪಾಟೀಲ್, ರಮೇಶ್ ಮಾಂಗ್, ಅಪ್ಪಣ್ಣ ಸನದಿ, ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ಜಾಯಗೋಣಿ, ಸಂತೋಷ ಪಾರ್ಥನಳ್ಳಿ, ವಿಠ್ಠಲ ಕಾಂಬಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -