Thursday, October 21, 2021

ನಿವೃತ್ತಿ  ದಿನವೇ ಬದುಕಿಗೆ ನಿವೃತ್ತಿ ಪಡೆದ ಪಿಎಸ್ಐ ಕದ್ರಳ್ಳಿ

Must Read
ಹೊಸಪೇಟೆ:  ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಎಲ್ಲರಂತೆ ಗೌರವದಿಂದ ನಿವೃತ್ತರಾಗಿ ಕುಟುಂಬದ ಜೊತೆ ಉಳಿದ ನೆಮ್ಮದಿಯ ದಿನಗಳನ್ನು ಕಳೆಯೋಣ ಎಂದು ಕನಸು ಹೊತ್ತ ಠಾಣೆ ಅಪರಾದ ವಿಭಾಗದ ಪಿಎಸ್ಐ ” ಯಲ್ಲಪ್ಪಕದರಳ್ಳಿ ನಿವೃತ್ತಿ  ದಿನವೇ ಬದುಕಿಗೆ ನಿವೃತ್ತಿ ಪಡೆದಿದ್ದು ಇಡೀ ಇಲಾಖೆಯ ವೃತ್ತಿ ಭಾಂದವರ ಕಣ್ಣಾಲಿಗಳು ತುಂಬುವಂತಾಗಿದೆ..
ಚಿತ್ವಾಡ್ಗಿ ಠಾಣೆಯಿಂದ ಬಡ್ತಿಯಾಗಿ ಪಟ್ಟಣ ಠಾಣೆ ಯಲ್ಲಿ ಸೇವೆ ಮಾಡುತ್ತಿದ್ದರು. ಕಳೆದ 15 ದಿನಗಳಿಂದ ಕರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ  ಯಲ್ಲಪ್ಪ ಪೋಲೀಸ್ ಇಲಾಖೆಯಲ್ಲಿ  38 ವರ್ಷಗಳಿಂದ  ಸೇವೆ ಸಲ್ಲಿಸಿ ಜನ ಮಾನಸದಲ್ಲಿದ್ದು.ಸಾರ್ವಜನಿಕವಾಗಿ ಠಾಣೆಗೆ ಬಂದವರೆಲ್ಲರಿಗೂ ಆತ್ಮೀಯರಾಗಿದ್ದ ಯಲ್ಲಪ್ಪ ಕದ್ರಳ್ಳಿ(60)  ಸೋಂಕಿಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆ ಗೆ ದಾಖಲಾಗಿದ್ದರು.
ಕೊಪ್ಪಳದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವು  ಸಂಭವಿಸಿದೆ.ಅವರು ಬಹಳಾ ಕಾಲದಿಂದ ಮದುಮೇಹಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ,ಅದು ನಿಯಂತ್ರಣ ದಲ್ಲಿದೆ ಎಂದು ಅಗಾಗ ಹೇಳುತ್ತಿದ್ದರು. ಮೃತಪಟ್ಟ ಪಿಎಸ್ಐ ಇಂದು ಸೇವೆಯಿಂದ ನಿವೃತ್ತಿ ಹೊಂದಬೇಕಿದ್ದು ಅವರ ಇಲಾಖೆ ಇಂದು ಬೀಳ್ಕೊಡುವ ಸಮಾರಂಭಕ್ಕೆ‌ ವ್ಯವಸ್ಥೆ ಮಾಡಿಕೊಳ್ಳೋ ದಿನದಂದೇ ಅವರ ಅಂತ್ಯಕ್ರಿಯೆ ನೆರವೇರಿಸುವ ದುರ್ದೈವ ಒದಗಿ ಬಂದಿದೆ.
ಅವರು ಎರಡು ಗಂಡು ಹಾಗು ಪತ್ನಿಯನ್ನು ಬಿಟ್ಟು ಅಗಲಿದ್ದಾರೆ.ಇಂದು ಇಡೀ ಠಾಣೆಯ ಸಿಬ್ಬಂದಿ ಶೋಕಸಾಗರದಲ್ಲಿ‌ ಮುಳುಗಿತ್ತು.
- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -