Monday, October 18, 2021

ಆರ್.ಎಸ್.ಎಸ್. ಮುಖಂಡ ಅರವಿಂದರಾವ್ ದೇಶಪಾಂಡೆ ಮನೆಗೆ ರಮೇಶ ಭೇಟಿ

Must Read
- Advertisement -

ಅಥಣಿ: ಮಹಾರಾಷ್ಟçದ ಮುಂಬೈಯಲ್ಲಿ ಫಡ್ನವಿಸ್ ಅವರನ್ನು ಭೇಟಿ ಮಾಡಿದ ಬಳಿಕ, ಮೈಸೂರಿನ ಸುತ್ತೂರುಮಠದ ಭೇಟಿ ಮಾಡಿ ನಂತರ ಅಥಣಿ ಪಟ್ಟಣದ ವಿಕ್ರಮಪೂರ ಬಡಾವಣೆಯಲ್ಲಿರುವ ಆರ್ ಎಸ್ ಎಸ್ ಸಂಚಾಲಕ ಮತ್ತು ಉತ್ತರಪ್ರಾಂತ ಮುಖಂಡ ಅರವಿಂದರಾವ್ ದೇಶಪಾಂಡೆ ಅವರ ಮನೆಗೆ ಭೇಟಿ ನೀಡಿದ ಮಾಜಿ ಸಚಿವ ರಮೇಶ ಜಾರಕಿಹೋಳಿ ಅವರು ಅರ್ಧಗಂಟೆಗೂ ಹೆಚ್ಚು ಕಾಲ ಗುಪ್ತ ಸಭೆ ನಡೆಸಿದರು. ಯಾರಿಗೂ ತಿಳಿಯದಂತೆ ಆರ್ ಎಸ್ ಎಸ್ ಮುಖಂಡ ಅರವಿಂದ ದೇಶಪಾಂಡೆಯವರನ್ನು ಬೇಟಿ ಮಾಡಿದ್ದು ತೀವ್ರ ಕೂತುಹಲ ಮೂಡಿಸಿದೆ.

ನಿನ್ನೆಯಷ್ಟೆ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ರಾಜಿನಾಮೆ ವಿಚಾರ ಪುನರುಚ್ಚಾರ ಮಾಡಿದ್ದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಜೊತೆಗು ಮಾತನಾಡಿದ ರಮೇಶ ಜಾರಕಿಹೋಳಿ ಅವರ ನಡೆ ಸದ್ಯ ರಾಜಿನಾಮೆ ವಿಚಾರಕ್ಕೆ ಪುಷ್ಟಿ ಕೊಟ್ಟಂತಾಗಿದೆ. ಬಿಜೆಪಿ ಪಕ್ಷದಲ್ಲಿ ಉಳಿಯುವ ಮತ್ತು ೨೦೨೩ ರ ಚುನಾವಣೆಯಲ್ಲಿ ಯಡ್ಯೂರಪ್ಪ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವದಾಗಿ ಹೇಳಿದ್ದರು. ಆದರೆ ಸದ್ಯ ಜಾರಕಿಹೋಳಿ ಮತ್ತು ಅರವಿಂದರಾವ್ ದೇಶಪಾಂಡೆ ಅವರ ಭೇಟಿ ಅಥಣಿ ರಾಜಕೀಯ ನಡೆಗಳಿಗೆ ಕೇಂದ್ರ ಬಿಂದುವಾಗಿದ್ದು ಮಾತ್ರ ಸತ್ಯ.

- Advertisement -

ಅರವಿಂದ ದೇಶಪಾಂಡೆಯವನ್ನು ಬೇಟಿ ಮಾಡಿದ ಬಳಿಕ ಅಥಣಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ ಮಾಜಿ ನೀರಾವರಿ ಸಚಿವ ರಮೇಶ ಜಾರಕಿಹೋಳಿ ಮಾತನಾಡಿ ಕೊವಿಡ್ ನಿಂದ ಸಾವಿಗಿಡಾಗಿದ್ದ ಪಕ್ಷದ ಮುಖಂಡ ರವಿಗಾಣಿಗೇರ ಮತ್ತು ಮುದಕಣ್ಣವರ ಅವರ ಪತ್ನಿ ತಿರಿ ಹೋಗಿದ್ದು ಅವರ ಮನೆ ಬೇಟಿ ನೀಡಿ ಸಾಂತ್ವನ ಹೇಳಲು ಬಂದಿದ್ದೆ ಅಷ್ಟೆ, ಪಕ್ಷದ ಹಿರಿಯ ಮುಖಂಡರು ಬಹಳಷ್ಟು ಖಾರವಾಗಿಯೇ ನನಗೆ ಸಲಹೆಗಳನ್ನು ನೀಡಿದ್ದಾರೆ. ಇನ್ನು ೮ ರಿಂದ ೧೦ ದಿನಗಳಲ್ಲಿ ರಾಜಕೀಯವಗಿರುವ ಮಹತ್ವದ ನಿರ್ಧಾರವನ್ನ ಪ್ರಕಟ ಮಾಡುತ್ತೇನೆ. ಇನ್ನು ಒಂದು ವಾರದ ಒಳಗಾಗಿ ನನ್ನ ರಾಜಿನಾಮೆ ನಿರ್ಧಾರ ಎನೂ ಅನ್ನುವದನ್ನು ಹೇಳುತ್ತೇನೆ.ಆರ್ ಎಸ್ ಎಸ್ ಮುಖಂಡ ಅರವಿಂದ ದೇಶಪಾಂಡೆ ಅವರ ಜೊತೆಯಲ್ಲಿ ಕೆಲವು ಸೂಕ್ಷö?ಮ ವಿಚಾರಗಳನ್ನು ಮಾತನಾಡಿದ್ದು, ಅದನ್ನು ಬಹಿರಂಗ ಪಡಿಸಲು ಅಗುವದಿಲ್ಲ ಎಂದರು.

- Advertisement -

ಈ ವೇಳೆ ಅಥಣಿ ಶಾಸಕ ಮಹೇಶ ಕುಮಟಳ್ಳಿ, ಮುಖಂಡರಾದ ಕಿರಣ ಪಾಟೀಲ, ದೀಪಕ ಪಾಟೀಲ ರಮೇಶಗೌಡರ, ಮುತ್ತಣ್ಣ ಹಂಚಿನಾಳ ಸೇರಿ ಹಲವು ಮುಂಡರು ಉಪಸ್ಥಿತರಿದ್ದರು.

 

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -