Monday, October 18, 2021

ಕೆ.ಎಸ್.ಆರ್.ಟಿ.ಸಿ ಮಾಸಿಕ ಬಸ್ ಪಾಸ್ ಬಗ್ಗೆ ಇಲಾಖೆಯಿಂದ ಮಹತ್ವದ ಘೋಷಣೆ

Must Read
- Advertisement -

ಬೆಂಗಳೂರು ಜೂ., 21- ರಾಜ್ಯದಲ್ಲಿ ಇಂದಿನಿಂದ ಅಂದರೆ ಸೋಮವಾರದಿಂದ ಅನ್‍ಲಾಕ್ ಆಗಿದ್ದು, ವಿವಿಧ ಜಿಲ್ಲೆಗಳಲ್ಲಿ ಬಸ್ ಸಂಚಾರ ಆರಂಭವಾಗಿವೆ. ಈಗ ಸಾರಿಗೆ ಇಲಾಖೆ ಮಾಸಿಕ ಬಸ್ ಪಾಸ್ ಪಡೆದವರಿಗೆ ಅನಕೂಲವಾಗುವಂತಹ ವಿಶೇಷ ಘೋಷಣೆಯೊಂದನ್ನು ಮಾಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇಂದು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ದಿನಾಂಕ 07-04-2021 ರಿಂದ ಸಿಬ್ಬಂದಿಗಳ ಧರಣಿ ಹಾಗೂ ದಿನಾಂಕ 28-04-2021 ರಿಂದ ರಾಜ್ಯ ಸರಕಾರ ರಾಜ್ಯದಲ್ಲಿ ಕೊರೊನಾ ಲಾಕಡೌನ್ ಘೋಷಿಸಿದ್ದರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಬಸ್ ಸಂಚಾರವಾಗಿರಲಿಲ್ಲ. ಇದರಿಂದ ಮಾಸಿಕ ಪಾಸದಾರರಿಗೆ ಅನಾನುಕೂಲವಾಗಿತ್ತು. ಮಾಸಿಕ ಪಾಸ ಚಾಲ್ತಿಯಲ್ಲಿದ್ದವರಿಗೆ ನಷ್ಟವಾಗಿತ್ತು. ಹೀಗಾಗಿ ಮಾಸಿಕ ಪಾಸುಗಳ ಮಾನ್ಯತಾ ಅವಧಿಯನ್ನು ವಿಸ್ತರಣೆ ಮಾಡಿ ಸಾರಿಗೆ ಇಲಾಖೆ ಆದೇಶ ಹೋರಡಿಸಿದೆ.
ಮಾಸಿಕ ಪಾಸ ಚಾಲ್ತಿಯಲ್ಲಿದ್ದವರು ಉಳಿದ ಅವಧಿಗೆ, ಗರಿಷ್ಠ 18 ದಿನಗಳ ತನಕ ವಿಸ್ತರಣೆ ಮಾಡಲಾಗಿದ್ದು, ಅಂದರೆ 8-07-2021 ವರೆಗೆ ಆ ಮಾಸಿಕ ಪಾಸನ್ನು ಸಾರ್ವಜನಿಕರು ಬಳಸಬಹುದಾಗಿದೆ.


08-04-2021 ರಿಂದ 27-04-2021ರ ಅವಧಿಗೆ ಮಾಸಿಕ ಪಾಸುಗಳನ್ನು ಪಡೆದಿದ್ದಲ್ಲಿ ಅಂತಹ ಪ್ರಯಾಣಿಕರಿಗೆ, ದಾಖಲೆಗಳನ್ನು ಸೂಕ್ತವಾಗಿ ಪರಿಶೀಲಿಸಿ, ಅಷ್ಟು ದಿನಗಳಿಗೆ ವಿಸ್ತರಿಸಲು ಅವಕಾಶ ನೀಡಲಾಗಿದೆ. ಪಾಸು ಹೊಂದಿರುವ ಪ್ರಯಾಣಿಕರು ಪಾಸ ವಿತರಣೆ ಕೌಂಟರ್‍ಗಳಲ್ಲಿ ಚಾಲ್ತಿ ಅವಧಿಯ ದಿನಗಳಿಗೆ ವಿಸ್ತರಣೆಯಾಗಿರುವ ಬಗ್ಗೆ ದಿನಾಂಕ, ಸಹಿ ಮತ್ತು ಮೊಹರನ್ನು ಹಾಕಿಸಿಕೊಂಡು ಪ್ರಯಾಣಿಸಬೇಕು.

- Advertisement -
- Advertisement -
- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -