Monday, October 25, 2021

ಅರವಿಂದ ಬೆಲ್ಲದ ಸ್ಪೋಟಕ ಹೇಳಿಕೆ

Must Read
- Advertisement -

ಬೆಂಗಳೂರು ಜೂ., ೧೭- ಬಿ.ಎಸ್.ಯಡಿಯೂರಪ್ಪ ಅವರ ವಿರೋಧಿ ಬಣದಲ್ಲಿ ಕಾಣಿಸಿಕೊಂಡಿರುವ ಅರವಿಂದ ಬೆಲ್ಲದ ಅವರು ಇಂದು ತಮ್ಮ ಪೋನ್ ಟ್ಯಾಪ್ ಮಾಡಿಲಾಗಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಮಾದ್ಯಮಗಳಿಗೆ ಹೇಳಿಕೆ ನೀಡಿರುವ ಅರವಿಂದ ಬೆಲ್ಲ ಅವರು ತಮಗೆ ಸ್ವಾಮಿಜಿಯವರ ಹೆಸರಿನಲ್ಲಿ ಕರೆ ಬರುತ್ತಿದೆ. ಹೆಸರು ಕೇಳಿದರೆ ಯುವರಾಜ ಸ್ವಾಮಿಜಿ ಎಂದು ಹೇಳಿದ್ದಾರೆ. ಆ ಸ್ವಾಮಿಜಿ ಅವರು ಅವರನ್ನು ಅನಾವಶ್ಯಕವಾಗಿ ಜೈಲಿನಲ್ಲಿ ಹಾಕಲಾಗಿದೆ ಎಂದು ಹೇಳುತ್ತಿದ್ದಾರೆ. ಇದೊಂದು ನನ್ನು ಯಾವುದೋ ಕುತಂತ್ರದಲ್ಲಿ ಸಿಲುಕಿಸುವ ಪ್ರಯತ್ನ, ದೊಡ್ಡ ಷ್ಯಡ್ಯಂತ್ರ ನಡೆದಿದೆ. ನನ್ನ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಆದ್ದರಿಂದ ತನ್ನ ಚಾರಿತ್ರೆ ವಧೆಗೆ ಪ್ರಯತ್ನ ನಡೆದಿದೆ ಎಂದರು.
ಸುಮಾರು ಒಂದು ತಿಂಗಳಿನಿAದ ನನ್ನ ಪೋನ್‌ಅನ್ನು ಕದ್ದಾಲಿಕೆ ಮಾಡಲಾಗುತ್ತಿಎ. ಈ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ, ಡಿಜಿ ಐಜಿಪಿ ಮತ್ತು ಸ್ಪೀಕರ ಅವರಿಗೆ ದೂರು ಸಲ್ಲಿಸಿದ್ದೆನೆ ಎಂದು ಅವರು ದೂರಿನ ಪ್ರತಿಯನ್ನು ಮಾಧ್ಯಮಕ್ಕೆ ತೋರಿಸಿದರು.
ರಾಜ್ಯಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ ಅವರು ಬಂದು ಸಚಿವರ, ಶಾಸಕರ ಅಹ್ವಾಲನ್ನು ಆಲಿಸುತ್ತಿರುವ ಸಂದರ್ಭದಲ್ಲಿ ಈ ಹೇಳಿಕೆ ನೀಡುರುವುದು ಗಂಭೀರ ಚರ್ಚೆಗೆ ಕಾರಣವಾಗಿದೆ.
ಇದಕ್ಕೆ ಟಾಂಗ ನೀಡಿರುವ ರೇಣುಕಾಚಾರ್ಯ ಅವರು ಸೂಟು, ಬೂಟು ಹೊಲಿಸಿಕೊಂಡು ಸಿ.ಎಂ. ಆಗುವ ಕನಸು ಕಾಣುತ್ತಿದ್ದಾರೆ. ಇದೊಂದು ಕೀಳುಮಟ್ಟದ ಪ್ರಚಾರದ ಹೇಳಿಕೆಯಾಗಿದೆ ಎಂದು ಹೇಳಿದರು.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -