Monday, October 18, 2021

ಸಂತರ ಬದುಕು ಸಮಾಜದ ಕಲ್ಯಾಣಕ್ಕೆ

Must Read
- Advertisement -

ಅಕ್ಷರ, ಆಶ್ರಯ, ದಾಸೋಹದ ಮುಖಾಂತರ ನಾಡಿನ ಸೇವೆ ಮಾಡಿದ ಮಠಗಳು ಇಂದು ಕೋವಿಡ 19 ಸಂಕಷ್ಟದಲ್ಲಿ ಮಠಗಳನ್ನು ಕೋವಿಡ ಸೆಂಟರ್ ಗಳನ್ನಾಗಿ ಮಾಡಿ ಜನರನ್ನು ಪೋಷಿಸುತ್ತಿವೆ. ಹುಕ್ಕೇರಿಯ ಹಿರೇಮಠವು ಸಹ ಕೋವಿಡ ವಿರುದ್ದದ ಹೋರಾಟಕ್ಕೆ ಸರ್ಕಾರದೊಂದಿಗೆ ಕೈ ಜೋಡಿಸಿದೆ.
ಸಾಮಾನ್ಯರಲ್ಲಿ ಅಸಾಮಾನ್ಯವಾಗಿ ಬೆಳೆದುನಿಂತು ಹೆಸರುವಾಸಿಯಾದ ಹುಕೇರಿಯ ಶ್ರೀ ಗುರುಶಾಂತೇಶ್ವರ ಹಿರೇಮಠ ತನ್ನ ಕರ್ತೃತ್ವ ಶಕ್ತಿ, ಆಲೋಚನೆ, ವಿಚಾರ, ಯೋಜನೆಗಳ ಮೂಲಕ ರಾಜ್ಯಮಟ್ಟದಲ್ಲಿ ಹೆಸರುವಾಸಿಯಾಗಿದೆ.

ಹುಕ್ಕೇರಿಯ ಶ್ರೀ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಮಠದ ಅಭಿವೃದ್ಧಿಯಲ್ಲಿ ಜನಪರ ಕಾಳಜಿ ಇಟ್ಟುಕೊಂಡು ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಪ್ರೋತ್ಸಾಹ ನೀಡುತ್ತ ಎಷ್ಟೋ ಸಾಹಿತಿಗಳಿಗೆ, ಸಮಾಜಸೇವಕರಿಗೆ, ಪತ್ರಕರ್ತರಿಗೆ, ಯುವಕರಿಗೆ ಗುರುತಿಸಿ ಬೆಳೆಸಿದ್ದಾರೆ. ಇವರೆಲ್ಲರಿಗೂ ಶ್ರೀಗಳು ಅಭಿನಂದನಾರ್ಹರು.

- Advertisement -

- Advertisement -

ಹುಕ್ಕೇರಿಯ ಶ್ರೀ ಚಂದ್ರಶೇಖರ್ ಶಿವಾಚಾರ್ಯ ಮಹಾ ಸ್ವಾಮಿಗಳು ತಮ್ಮದೇ ಆದ ರೀತಿಯಲ್ಲಿ ಇತಿಮಿತಿಗಳಲ್ಲಿ ಪರಿಸರ ಕಾಳಜಿ, ಭ್ರಷ್ಟಾಚಾರ ವಿರುದ್ಧ ಹೋರಾಟ, ಮೂಢನಂಬಿಕೆಗಳ ವಿರುದ್ಧ ಹೋರಾಟ, ಜನರಲ್ಲಿ ಧಾರ್ಮಿಕ ಆಚಾರ-ವಿಚಾರಗಳ ಬಿತ್ತನೆ ಮಾಡಿಕೊಂಡು ಬಂದಿದ್ದಾರೆ.

ಸಮಾಜದ ಸಂಕಷ್ಟ ಕಾಲದಲ್ಲಿ ಶ್ರೀಗಳು ಯಾವಾಗಲೂ ತಮ್ಮಿಂದಾದ ಸಹಾಯವನ್ನು ಮಾಡುತ್ತಲೇ ಬಂದಿದ್ದಾರೆ ಉದಾಹರಣೆಗೆ ಜಿಲ್ಲೆಯಲ್ಲಿ ಅತಿವೃಷ್ಟಿ ಅನಾವೃಷ್ಟಿ ಯಾಗಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ ಅನೇಕ ಉದಾಹರಣೆಗಳಿವೆ. ಶ್ರೀಗಳು ಸಾಮಾಜೀಕ ಕಾರ್ಯಕ್ಕಾಗಿಯೇ ಶ್ರೀ ಗುರುಶಾಂತೇಶ್ವರ ಜನ ಕಲ್ಯಾಣ ಪ್ರತಿಷ್ಠಾನವನ್ನು ಹುಟ್ಟು ಹಾಕಿ ಸುಮಾರು 16 ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ.

ಇಂದಿನ ಕೊರೋನಾ ಸಂಕಷ್ಟ ಕಾಲದಲ್ಲಿ ಬಹಳಷ್ಟು ಮಠ ಮಂದಿರಗಳು ತಮ್ಮ ತಮ್ಮನ್ನು ಜೋಪಾನ ಮಾಡಿಕೊಳ್ಳುವುದೇ ದೊಡ್ಡದಾಗಿದೆ. ಇಂತಹ ಸಂದರ್ಭದಲ್ಲಿ ಹುಕ್ಕೇರಿ ಶ್ರೀಗಳು ಕೈಕಟ್ಟಿ ಕುಳಿತುಕೊಳ್ಳದೆ ಜಿಲ್ಲಾಡಳಿತಕ್ಕೆ 2 ಆಂಬುಲೆನ್ಸಗಳನ್ನು ದೇಣಿಗೆ ನೀಡಿ ಕೊರೋನಾ ವಿರುದ್ಧ ಸರ್ಕಾರದ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಇವರ ಈ ಹೆಜ್ಜೆ ಎಲ್ಲರಿಗೂ ಮಾದರಿಯಾಗಿದೆ. ಇತರ ಮಠಗಳು ನಾಯಕರುಗಳು ಕೊರೋನಾ ವಿರುದ್ದದ ಹೋರಾಟಕ್ಕೆ ಕೈ ಜೋಡಿಸಬೇಕು.

ಕೊರೋನಾ ಸೋಂಕಿತರ ಆರೈಕೆಗೆ ಜೆ.ಎಸ್.ಎಸ್ ಸಂಸ್ಥೆ ಎಲ್ಲಾ ವಿದ್ಯಾರ್ಥಿ ನಿಲಯಗಳು, ಸಮುದಾಯ ಭವನಗಳನ್ನು ಜಿಲ್ಲಾಡಿಳಿತಕ್ಕೆ ನೀಡಲು ಸುತ್ತೂರು ಮಠ ನಿರ್ಧಾರ
ಮೈಸೂರಿನಲ್ಲಿ : ಕೊರೋನಾ ಸೋಂಕಿತರ ಆರೈಕೆಗೆ ಜೆ.ಎಸ್.ಎಸ್ ಸಂಸ್ಥೆ ಎಲ್ಲಾ ವಿದ್ಯಾರ್ಥಿ ನಿಲಯಗಳು, ಸಮುದಾಯ ಭವನಗಳನ್ನು ಜಿಲ್ಲಾಡಿಳಿತಕ್ಕೆ ನೀಡಲು ಸುತ್ತೂರು ಮಠ ನಿರ್ಧಾರ ಕೈಗೊಂಡಿದೆ.

ಒಟ್ಟು ಆರು ಸಾವಿರ ಜನರಿಗೆ ವ್ಯವಸ್ಥೆ ಮಾಡ ಬಹುದು. ಇದಕ್ಕೆ ಊಟ ವಸತಿ ಎಲ್ಲಾ ವ್ಯವಸ್ಥೆ ಮಠದಿಂದಲೆ ಮಾಡಲಾಗುತ್ತೆ. ಅದೇ ರೀತಿ ಕೊರೊನಾಕ್ಕೆ ಪೋಷಕರು ಮೃತಮಟ್ಟು ಅನಾಥವಾದ ಮಕ್ಕಳು ಹಾಗೂ ಆರ್ಥಿಕ ಸಂಕಷ್ಟಕ್ಕೊಳಗಾದ ಕುಟುಂಬದ ಮಕ್ಕಳಿಗೆ ನೆರವು ನೀಡಲಾಗುವುದು ಎಂದರು ಸುತ್ತೂರು ಶ್ರೀಗಳು ಹೇಳಿದ್ದಾರೆ.

ಒಂದರಿಂದ ಹತ್ತನೇ ತರಗತಿ ವರೆಗೆ ಉಚಿತ ಶಿಕ್ಷಣ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲು ಮಠ ನಿರ್ಧರಿಸಿದ್ದು, ಇದರ ಲಾಭವನ್ನು ರಾಜ್ಯದ ಹಾಗೂ ಹೊರ ರಾಜ್ಯ ಮಕ್ಕಳು ಪಡೆಯಬಹುದಾಗಿದೆ. ಸುತ್ತೂರಿನ ಶಾಲೆಯಲ್ಲಿ ಶಿಕ್ಷಣದ ವ್ಯವಸ್ಥೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಮೈಸೂರಿನಲ್ಲಿ ಸುತ್ತೂರು ಶ್ರೀಗಳು ಹೇಳಿದ್ದಾರೆ.

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -