Thursday, October 21, 2021

ಕೋರೋನಾ ಹೆಡೆಮುರಿಕಟ್ಟಲು ನಿರಂತರ ಹೋರಾಟ ಮಾಡುತ್ತಿರುವ ಘಟಪ್ರಭಾ ಪೊಲೀಸ್ ಇಲಾಖೆ ಪುರಸಭೆ ಅಧಿಕಾರಿಗಳು ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಜನರ ಜೀವರಕ್ಷಕ ಸೈನಿಕರು ಅವರಿಗೊಂದು ಸಲಾಂ..

Must Read
- Advertisement -

ವರದಿ,: ಶಿವಪುತ್ರ ಕೋಗನೂರ

ಘಟಪ್ರಭಾ : ಜನಪ್ರಿಯ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಯುವ ಮುಖಂಡರಾದ ಅಂಬಿರಾವ್ ಪಾಟೀಲ್ ಇವರ ವಿಶೇಷ ಕಾಳಜಿ ಕಟ್ಟುನಿಟ್ಟಿನ ಆದೇಶ ದೃಢ ನಿರ್ಧಾರದಿಂದ ಮತ್ತು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ್ ಗೋಕಾಕ್ ತಹಶೀಲ್ದಾರ್ ಪ್ರಕಾಶ್ ಹೊಳೆಪ್ಪನವರ ಕ್ರಿಯಾಶೀಲತೆ ಮತ್ತು ಜನಪರ ಕಾಳಜಿಯಿಂದ ಜಿಲ್ಲೆ ಅತ್ಯಂತ ಕಟ್ಟುನಿಟ್ಟಿನ ಲಾಕ್ ಡೌನ್ ಮಾಡಿರುವುದರಿಂದ ಕೊರೊನಾ ಸೋಂಕು ಕ್ರಮೇಣ ಕಡಿಮೆಯಾಗುತ್ತಿದೆ ಸಾವಿನ ಸಂಖ್ಯೆ ಇಳಿಮುಖವಾಗಲು ಪ್ರಮುಖ ಪಾತ್ರ ವಹಿಸಿದ್ದಾರೆ.

- Advertisement -

ಹೀಗೆ ಇರುವಂತಹ ಪರಿಸ್ಥಿತಿ ನಮ್ಮ ಘಟಪ್ರಭ ಹೆಮ್ಮೆ ಪೊಲೀಸ್ ಇಲಾಖೆಯ C.P.I ಶ್ರೀಶೈಲ ಬ್ಯಾಕೋಡ. ಇವರ ಮಾರ್ಗದರ್ಶನದಲ್ಲಿ P.S.I ಎಂ. ಸಿ. ಹಿರೇಮಠ. A.S.I . ಬಿ.ಪಿ. ಮಗದುಮ .P C. ಬಿ.ಯಸ್ ನಾಯಕ್ . P.C ಹನುಮಂತ್ ಮಲ್ಲಾಡದವರ . ಈ ಎಲ್ಲ ಸಿಬ್ಬಂದಿ ಮತ್ತು ನಮ್ಮ ಘಟಪ್ರಭಾ ಪುರಸಭೆ ಮುಖ್ಯದಿಕಾರಿ ಕೆ. ಬೀ. ಪಾಟೀಲ್ .ರಾಜು ಸದಲಗಿ. ರಮೇಶ್ ತಂಗೆವ್ ಗೋಳ. ಆನಂದ್ ಬಡಾಯಿ. ಮತ್ತು ಎಲ್ಲ ಸಿಬ್ಬಂದಿ ವರ್ಗ ಆಶಾ ಕಾರ್ಯಕರ್ತರಾದ ಶ್ರೀಮತಿ ಗೀತಾ ಕರೇಪಗೊಳ್, ಶ್ರೀಮತಿ ಬಿಸ್ಮಿಲಾ ಸೌದಾಗರ್, ಶ್ರೀಮತಿ ಸವಿತಾ ಕಂಬಾರ, ಶ್ರೀಮತಿ ಶಿವಲೀಲಾ ಅಕ್ಕಿವಾಟ್, ಶ್ರೀಮತಿ ಬಸವ್ವಾ ಕೆಂಚನ್ನವರ್, ಅಂಗನವಾಡಿ ಕಾರ್ಯಕರ್ತರಾದ ಶ್ರೀಮತಿ ಶಂಕುತಲಾ ಬೆಂಚಿನ್ಮರಡಿ, ಶ್ರೀಮತಿ ಉಷಾ ಕುಲಕರ್ಣಿ ಮುಂತಾದ ಅಂಗನವಾಡಿ ಕಾರ್ಯಕರ್ತರು ಸಾಕಷ್ಟು ಶ್ರಮವಹಿಸಿ ದಿನದ 24 ಗಂಟೆಯೂ ಭಯವನ್ನು ಬದಿಗೊತ್ತಿ ಅತ್ಯಂತ ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

- Advertisement -

ಈ ಕೋರೋನಾ ಮಹಾಮಾರಿ ಕಳೆದ ವರ್ಷ ಪ್ರಾರಂಭವಾಗಿದ್ದು ಕಟ್ಟುನಿಟ್ಟಿನ ಕ್ರಮ ದಿಂದ ಎಲ್ಲರೂ ಮನೆಯಲ್ಲಿ ಸುರಕ್ಷಿತ ಇರುವುದರಿಂದ ಕೋರೋನಾ ಪ್ರಮಾಣ ಬಹಳಷ್ಟು ಕಡಿಮೆ ಇತ್ತು ವಿಶೇಷವಾಗಿ ಎಲ್ಲಾ ಜನರು ಆರೋಗ್ಯವಾಗಿ ಇದ್ದರೂ ದವಾಖಾನೆ ಗಳು ಖಾಲಿ ಖಾಲಿ ಇದ್ದವು ಸಾವಿನ ಪ್ರಮಾಣ ಕಡಿಮೆ ಇತ್ತು ಆದರೆ ಈ ಸಲ ಭಯಾನಕ ಕರೋನಾ ಜನರಲ್ಲಿ ಭಯಭೀತರಾಗುವಂತೆ ಮಾಡಿದೆ. ಬಾಳಷ್ಟು ಸಂಖ್ಯೆ ಸಾವು ನೋವು ಸಂಭವಿಸಿದೆ ಎಲ್ಲಾ ಆಸ್ಪತ್ರೆಗಳು ಹೌಸ್ ಫುಲ್ ಎಲ್ಲಿ ನೋಡಿದರೆ ಅಲ್ಲಿ ಆಸ್ಪತ್ರೆ ಮುಂದೆ ಜನವೋ ಜನ ತುಂಬುತ್ತಿರುವುದು ನೀವೆಲ್ಲಾ ನೋಡಿದ್ದೀರಿ ಆದರೂ ಸಹ ಸಾರ್ವಜನಿಕರು ಅದರ ಬಗ್ಗೆ ಕಾಳಜಿ ಇಲ್ಲ ಸುಮಾರು 50% ಜನರು ಮಾಸ್ಕ್ ದರಿಸುವುದಿಲ್ಲ ಬೇಕಾ ಬಿಟ್ಟಿ ತಿರುಗಾಡುತ್ತಾರೆ. ಮಾಧ್ಯಮಗಳಲ್ಲಿ. ದಿನಪತ್ರಿಕೆಯಲ್ಲಿ. ವಾಟ್ಸಪ್ ಹಾಗೂ ಫೇಸ್ಬುಕ್ನಲ್ಲಿ ಪ್ರತಿದಿನ ನೋಡುತ್ತಿದ್ದರು ಜನ ಮೈ ಮರೆಯುತ್ತಿದ್ದಾರೆ ಅಸಡ್ಡೆ ತೋರುತ್ತಿದ್ದಾರೆ ಅಲಕ್ಷೆ ಮಾಡುತ್ತಿದ್ದಾರೆ ನಾವು ಕೆಲವರಿಗೆ ಹೇಳಿದ್ದೆ ಮಾಸ್ಕ್ ಹಾಕೋರಿ ಸುಮ್ಮನೆ ಹೊರಗಡೆ ತಿರುಗಾಡ ಬೇಡಿ ಅಂತ ಹೇಳಿದರೆ ಕೋರೋನಾ ನಮಗೆ ಬರಲಪ್ಪ ನಮ್ಮ ಕಡೆ ಏನ ಐತ್ತಿ ಮಣ್ಣ ಸಾಹುಕಾರರಿಗೆ ಬರುತ್ತದೆ ಎಂದು ಅಸಡ್ಡೆಯಾಗಿ ಮಾತಾಡುತ್ತಾರೆ ಜನ. ಇಂಥ ಜನರಿಗೆ ಏನು ಹೇಳಬೇಕು ಈ ರೋಗಕ್ಕೆ ಶ್ರೀಮಂತರಿಲ್ಲ ಬಡವರಿಲ್ಲ ಹೆಣ್ಣು ಗಂಡು ಇಲ್ಲ ಜಾತಿ ಭೇದ ಇಲ್ಲ ವಯಸ್ಸು ಇಲ್ಲ ಯಾವ ರೀತಿ ಜನ ಜೀವ ಕಳೆದುಕೊಳ್ಳುತ್ತಿದ್ದಾರೆ ನಾವು ನೀವು ಎಲ್ಲ ಪ್ರತಿದಿನ ನೋಡುತ್ತೇವೆ.

ನಮ್ಮ ಹಿರಿಯರೊಬ್ಬರು ಒಂದು ಮಾತು ಹೇಳಿದ್ದಾರೆ ರೋಗ ರೂಜನ, ಕಷ್ಟ-ಸುಖ ಸಾವು ನೋವು ಯಾವುದೇ ಭೇದಭಾವ ಇಲ್ಲದೆ ಬರುತ್ತದೆ ಎಂದು ಹೇಳಿದ್ದಾರೆ ಸತ್ಯವಾದ ಮಾತು. ನಮ್ಮ ಘನ ಸರ್ಕಾರಗಳ ಕಟ್ಟುನಿಟ್ಟಿನ ಆದೇಶದಿಂದ ರಾಜ್ಯದ ಜನರು ಸುಭಿಕ್ಷೆ ಯಿಂದ ಇರಬೇಕು ಆರಾಮ್ ಮತ್ತು ಆರೋಗ್ಯದಿಂದ ಇರಬೇಕು ಎಂದು ಸರ್ಕಾರಗಳ ವಿಶೇಷ ಕಾಳಜಿ ಜನರ ಸಾವು ಸಂಭವಿಸಬಾರದು ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಮಾಡಿದೆ ಅದರ ಅನ್ವಯ ನಮ್ಮ ಘಟಪ್ರಭಾ ಪೊಲೀಸ್ ಇಲಾಖೆಯ ಎಲ್ಲಾ ಹಿರಿಯ ಕಿರಿಯ ಅಧಿಕಾರಿಗಳು ಘಟಪ್ರಭಾ ಪುರಸಭೆ ಹಿರಿಯ ಕಿರಿಯ ಅಧಿಕಾರಿಗಳು ಸಿಬ್ಬಂದಿ ವರ್ಗ ಆಶಾ ಹಿರಿಯ ಕಿರಿಯ ಕಾರ್ಯಕರ್ತರು ಅಂಗನವಾಡಿ ಹಿರಿಯ-ಕಿರಿಯ ಕಾರ್ಯಕರ್ತರು ಜನರೂ ಮನೆಯಲ್ಲಿ ಸುರಕ್ಷಿತವಾಗಿರಬೇಕು ಯಾರು ಅನವಶ್ಯಕವಾಗಿ ತಿರುಗಾಡ ಬಾರದು ಎಲ್ಲರೂ ಮನೆಯಲ್ಲಿ ಇರುವುದರಿಂದ ಕೂರೂನಾ ಹೆಡೆಮುರಿ ಕಟ್ಟಿ ಕೂರೂನಾ ರೋಗವನ್ನು ಇಳಿಮುಖ ಗೊಳಿಸಲು ಎಲ್ಲ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ವರ್ಗ ನಮ್ಮ ನಿಮ್ಮ ಎಲ್ಲರ ಜೀವ ರಕ್ಷಣೆಗಾಗಿ ಮತ್ತು ನಮ್ಮ ಸುರಕ್ಷತೆಗಾಗಿ ತಮ್ಮ ಕುಟುಂಬವನ್ನು ಮನೆಯಲ್ಲೇ ಬಿಟ್ಟು ದಿನದ 24 ಗಂಟೆ ಹಗಲು ರಾತ್ರಿ ಊಟ ನೀರಡಿಕೆ ಎನ್ನದೆ ಕೊರೊನಾ ವಿರುದ್ಧ ಹೋರಾಡುವ ಸೈನಿಕರಾಗಿ ದಕ್ಷ ಅವಿಸ್ಮರಣೀಯ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅವರ ಕಾರ್ಯ ವೈಖರಿಗೆ ಜನರು ಸಹಕಾರ ಕೊಡಬೇಕು ಜನರು ಸಹಕಾರ ಕೊಟ್ಟರೆ ಮಾತ್ರ ಕೊರೊನಾ ವಿರುದ್ಧ ಹೊರಡುತ್ತಿರುವ ಕಾರ್ಯ ಯಶಸ್ವಿಯಾಗುವದು ದಯಮಾಡಿ ಸಾರ್ವಜನಿಕರು ಸಹಕಾರ ನಮ್ಮ ನಮ್ಮ ಕೈಯಲ್ಲಿದೆ ಹುಟ್ಟು-ಸಾವು ನಮ್ಮ ಕೈಯಲ್ಲಿಲ್ಲ ಆದರೆ ನಾವು ಯಾವ ರೀತಿ ಬದುಕಬೇಕೆಂಬುದು ನಮ್ಮ ಕೈಯಲ್ಲಿದೆ. ‘ಒಳಿತು ಮಾಡು ಮನುಜ ನೀ ಇರುವುದು ಮೂರೇ ದಿನ’. ಮಾನವ ಜನುಮ ದೊಡ್ಡದು ಇದು ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ ಎಂದು ಹಿರಿಯರು ಹೇಳಿದ್ದಾರೆ ಇದು 100% ಸತ್ಯವಾದ ಮಾತು ಮಾನವ ಜನ್ಮವನ್ನು ನಾವು ನೀವು ಎಲ್ಲ ಸಹಕಾರ ನೀಡಿ ಕರೋನಾ ಬೇಗ ಹೋಗಿ ಮಾನವ ಜನ್ಮ ಅರ್ಥಪೂರ್ಣವಾಗಿ ಬದುಕುವಂತೆ ಎಲ್ಲರೂ ಶ್ರಮಿಸೋಣ ಸಹಕರಿಸೋಣ ಸಾರ್ವಜನಿಕರೂ ಎಲ್ಲರೂ ಸುರಕ್ಷಿತವಾಗಿ ಮನೆಯಲ್ಲಿ ಇದ್ದರೆ ಎಲ್ಲರೂ ಆರಾಮಾಗಿ ಇರುತ್ತೀರಿ ಸುರಕ್ಷಿತವಾಗಿ ಇರ್ತೀರಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಿ ಅಂತರ ಕಾಯ್ದುಕೊಳ್ಳಿ ಕೈಗೆ sanitizer ಹಚ್ಚಿರಿ ನೀವು ನಿಮ್ಮ ಕುಟುಂಬ ನಿಮ್ಮ ಸುತ್ತಮುತ್ತಲಿನ ಪರಿಸರ ಗ್ರಾಮವನ್ನು ಕೋರೋನಾ ಮುಕ್ತವಾಗಿಸಲು ಎಲ್ಲರೊಂದಿಗೆ ಸಹಕರಿಸಿ ಕೈಜೋಡಿಸಿ ನಿಮಗಾಗಿ ಶ್ರಮವಹಿಸಿ ತಮ್ಮ ಜೀವನದ ಹಂಗು ತೊರೆದು ವೃತ್ತಿ ಜೊತೆಗೆ

ಮಾನವಿಯತೆಯ ಪ್ರವರ್ತಿ ಯನ್ನು ಎತ್ತಿ ಹಿಡಿದು ದುಡಿಯುತ್ತಿದ್ದಾರೆ ಧೈರ್ಯದಿಂದ ಇರಿ ಮನೆಯಲ್ಲಿ ಇರಿ ಕೋರೋನಾ ಮುಕ್ತವಾಗಲು ಸಹಕರಿಸೋಣ ಕೋರೋನಾ ನಿಯಂತ್ರಣ ತರಲು ಸಾರ್ವಜನಿಕ ಪ್ರಾಣ ರಕ್ಷಣೆಗಾಗಿ ಹಗಲು ರಾತ್ರಿ ಶ್ರಮಿಸುತ್ತಿರುವ ಮಾನವೀಯ ಅವಿಸ್ಮರಣೀಯ ಸೇವೆ ಸಲ್ಲಿಸುತ್ತಿರುವ ಎಲ್ಲ ಅಧಿಕಾರಿಗಳಿಗೆ ಎಲ್ಲರ ಪರವಾಗಿ ಕೋಟಿ ಕೋಟಿ ವಂದನೆಗಳು ಎಲ್ಲರ ಕುಟುಂಬಗಳಿಗೆ ದೇವರು ಆಯುಷ್ಯ ಆರೋಗ್ಯ ಸಂಪತ್ತು ಸಿರಿ ಕೊಟ್ಟು ಕಾಪಾಡಲಿ.

ಸರ್ಕಾರಕ್ಕೆ ಕಳಕಳಿಯ ಮನವಿ: ಇಂತಹ ಭಯಾನಕ ಕೊರೊನಾ ರೋಗದ ಭಯದೊಂದಿಗೆ ತಮ್ಮ ಜೀವದ ಹಂಗು ತೊರೆದು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಸರ್ಕಾರ ಪ್ರತಿ ತಿಂಗಳು ಸಂಬಳ ಕೊಡಬೇಕು ಮತ್ತು ಪ್ರತಿ ತಿಂಗಳ 10000 ರೂ. ಸಂಬಳ ಕೊಡುವುದರೊಂದಿಗೆ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಸರೆಯಾಗಬೇಕು.

ಕೊನೆಯ ಮಾತು: ಕೇಂದ್ರ ಮತ್ತು ರಾಜ್ಯ ಸರ್ಕಾರ ಮತ್ತು ಶಾಸಕರುಗಳು ಅಧಿಕಾರಿಗಳು ಕೋರೋನಾ ನಿಗ್ರಹಿಸಲು ಸಾಕಷ್ಟು ಪ್ರಮಾಣದಲ್ಲಿ ಕಾರ್ಯೋನ್ಮುಖವಾಗಿದು ಆದರೂ ಬಹಳಷ್ಟು ಸಾವು-ನೋವು ಸಂಭವಿಸುತ್ತಿದ್ದು ಈ ಸಾವು-ನೋವುಗಳ ಬಗ್ಗೆ ಪ್ರಧಾನಮಂತ್ರಿ ಮುಖ್ಯಮಂತ್ರಿ ಮತ್ತು ಶಾಸಕರುಗಳು ನಾವೆಲ್ಲರೂ ಭಾವುಕರಾಗಿ ಕಂಬನಿ ಮಿಡಿದಿದ್ದು ಧೈರ್ಯದಿಂದ ಇರಲು ವಿನಂತಿ….

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -
Latest News

ಖ್ಯಾತ ಹಿರಿಯ ನಟ ದಿಲೀಪ ಕುಮಾರ ನಿಧನ

ಮುಂಬೈ ಜು., 07- ಭಾರತದ ಚಿತ್ರರಂಗದ ದಿಗ್ಗಜ ದಿಲೀಪ್‍ಕುಮಾರ ಇಂದು ಮುಂಜಾನೆ 7.30 ಕ್ಕೆ ವಿಧಿವಶರಾಗಿದ್ದಾರೆ. 94 ವರ್ಷ ವಯಸ್ಸಿನ ಹಿರಿಯ, ಜನಪ್ರೀಯ ನಡ ದಿಲೀಪ ಕುಮಾರ...
- Advertisement -
- Advertisement -